• Home
  • »
  • News
  • »
  • business
  • »
  • Falguni Nair: ಈ ವಿಚಾರದಲ್ಲಿ ಕಿರಣ್ ಮಜುಂದಾರ್ ಶಾರನ್ನೇ ಹಿಂದಿಕ್ಕಿದ ಫಲ್ಗುಣಿ ನಾಯರ್!

Falguni Nair: ಈ ವಿಚಾರದಲ್ಲಿ ಕಿರಣ್ ಮಜುಂದಾರ್ ಶಾರನ್ನೇ ಹಿಂದಿಕ್ಕಿದ ಫಲ್ಗುಣಿ ನಾಯರ್!

ಫಲ್ಗುಣಿ ನಾಯರ್

ಫಲ್ಗುಣಿ ನಾಯರ್

ಹುರುನ್ ಇಂಡಿಯಾ ಶ್ರೀಮಂತ ಪಟ್ಟಿಯ ಪ್ರಕಾರ, 59 ವರ್ಷ ವಯಸ್ಸಿನ ಫಲ್ಗುಣಿ ನಾಯರ್ ಬಯೋಕಾನ್‌ನ ಕಿರಣ್ ಮಜುಂದಾರ್ ಶಾ, ಅವರನ್ನು ಹಿಂದಿಕ್ಕಿ 33 ನೇ ಶ್ರೇಯಾಂಕಕ್ಕೆ ಏರಿದ್ದಾರೆ ಎಂದು ವರದಿಯಾಗಿದೆ. ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ ಹೊಸದಾಗಿ ಆಗಮಿಸಿದವರನ್ನು ಪಟ್ಟಿ ಗುರುತಿಸಿದೆ. 

  • Share this:

ಇಂದು ಬಿಡುಗಡೆಯಾದ IIFL ವೆಲ್ತ್ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿ 2022 ರ (IIFL Wealth Hurun India Rich List 2022) ಪ್ರಕಾರ ಆನ್‌ಲೈನ್ ರಿಟೇಲ್ ಉದ್ಯಮಿ, ನೈಕಾ ಬ್ರ್ಯಾಂಡ್ ಸಂಸ್ಥಾಪಕಿ ಫಲ್ಗುಣಿ ನಾಯರ್ ಸ್ವಪ್ರಯತ್ನದಿಂದಲೇ ಉನ್ನತ ಸ್ಥಾನಕ್ಕೇರಿದ ಭಾರತದ ಶ್ರೀಮಂತ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಹುರುನ್ ಇಂಡಿಯಾ ಶ್ರೀಮಂತ ಪಟ್ಟಿಯ ಪ್ರಕಾರ, 59 ವರ್ಷ ವಯಸ್ಸಿನ ಫಲ್ಗುಣಿ ನಾಯರ್ (Falguni Nair) ಬಯೋಕಾನ್‌ನ ಕಿರಣ್ ಮಜುಂದಾರ್ ಶಾ (Kiran Majumdar Shah), ಅವರನ್ನು ಹಿಂದಿಕ್ಕಿ 33 ನೇ ಶ್ರೇಯಾಂಕಕ್ಕೆ ಏರಿದ್ದಾರೆ ಎಂದು ವರದಿಯಾಗಿದೆ. ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ ಹೊಸದಾಗಿ ಆಗಮಿಸಿದವರನ್ನು ಪಟ್ಟಿ ಗುರುತಿಸಿದೆ. 


ಶ್ರೀಮಂತ ಪಟ್ಟಿಯಲ್ಲಿ 33 ನೇ ಶ್ರೇಯಾಂಕಕ್ಕೆ ಏರಿದ ಫಲ್ಗುಣಿ ನಾಯರ್
ಫಿಸಿಕ್ಸ್ ವಲ್ಲಾಹ್‌ನ ಸಹ-ಸಂಸ್ಥಾಪಕರಾದ ಅಲಖ್ ಪಾಂಡೆ ಮತ್ತು ಪ್ರತೀಕ್ ಬೂಬ್, ಮತ್ತು 19 ನೇ ವಯಸ್ಸಿನಲ್ಲಿ ಪಟ್ಟಿಯಲ್ಲಿ ಹೆಸರು ಪಡೆದುಕೊಂಡ ಅತ್ಯಂತ ಕಿರಿಯ ಉದ್ಯಮಿಯಾದ ಜೆಪ್ಟೊದ ಸಹ-ಸಂಸ್ಥಾಪಕ ಕೈವಲ್ಯ ವೋಹ್ರಾ ಸೇರಿದ್ದಾರೆ. ಎಜ್ಯು ಟೆಕ್ ಸಂಸ್ಥೆಯಾದ ಫಿಸಿಕ್ಸ್ ವಲ್ಲಾಹ್ ಹಾಗೂ ಜೆಪ್ಟೊ ಯುನಿಕಾರ್ನ್ ಕ್ಲಬ್‌ಗೆ ಪ್ರವೇಶಿಸಲು ಮಿಲಿಯನ್‌ಗಟ್ಟಲೆ ಡಾಲರ್‌ಗಳ ಏರಿಕೆಯನ್ನು ಕಂಡಿದೆ.


ಸ್ಟಾರ್ಟಪ್‌ಗಳಿಂದ ಉತ್ತಮ ಆದಾಯ
ಭಾರತದಲ್ಲಿ ಸ್ಟಾರ್ಟಪ್ ಕ್ಷೇತ್ರದ ಪ್ರಗತಿಯಿಂದಾಗಿ ದೊಡ್ಡ ಪ್ರಮಾಣದ ಆದಾಯ ಸೃಷ್ಟಿಯಾಗಿದೆ. ವೆಂಚರ್ ಕ್ಯಾಪಿಟಲ್ ಮತ್ತು ಖಾಸಗಿ ಇಕ್ವಿಟಿ ಫಂಡ್‌ಗಳಂತಹ ಸಾಂಸ್ಥಿಕ ಹೂಡಿಕೆದಾರರಿಂದಾಗಿ ಫಂಡಿಂಗ್ ಲಭ್ಯತೆಯು ಸ್ಟಾರ್ಟಪ್ ವ್ಯವಹಾರಕ್ಕೆ ಉತ್ತಮ ಬೆಂಬಲವನ್ನು ಒದಗಿಸಿದೆ.
ಕಾಲೇಜು ಪದವೀಧರರು ತಮ್ಮದೇ ಸಂಸ್ಥೆಯನ್ನು ಪ್ರಾರಂಭಿಸಲು ಇನ್ನು ಮುಂದೆ ಬ್ಯಾಂಕ್‌ಗಳ ಸಾಲವನ್ನು ಅವಲಂಬಿಸಬೇಕಾಗಿಲ್ಲ ಎಂದು ಐಐಎಫ್‌ಎಲ್ ವೆಲ್ತ್‌ನ ಸಹ-ಸಂಸ್ಥಾಪಕ ಮತ್ತು ಜಂಟಿ ಸಿಇಒ ಯತಿನ್ ಶಾ ಅವರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: Thai Guava: ಉದ್ಯೋಗ ತೊರೆದು ಥಾಯ್ ಪೇರಳೆ ಬೆಳೆಸಿ ಯಶಸ್ಸು ಕಂಡ ಎಂಬಿಎ ಪದವೀಧರ! ಈಗ ಈತನ ಆದಾಯ ಎಷ್ಟು ಕೋಟಿ ಗೊತ್ತಾ?


ಗೌತಮ್ ಅದಾನಿ ಅಗ್ರಸ್ಥಾನದಲ್ಲಿ
ನಿರೀಕ್ಷೆಯಂತೆ ಬಿಲಯನೇರ್ ಗೌತಮ್ ಅದಾನಿ ಮತ್ತು ಕುಟುಂಬವು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿದೆ. ಸೀರಮ್ ಇನ್‌ಸ್ಟಿಟ್ಯೂಟ್‌ನ ಸೈರಸ್ ಪೂನಾವಾಲಾ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ನಂತರದ ಸ್ಥಾನವನ್ನು ಶಿವ ನಾಡರ್, ರಾಧಾಕಿಶನ್ ದಮಾನಿ ಮತ್ತು ವಿನೋದ್ ಶಾಂತಿಲಾಲ್ ಅದಾನಿ ಪಡೆದುಕೊಂಡಿದ್ದಾರೆ.


ಭಾರತದಲ್ಲಿ ಅಭೂತಪೂರ್ವ ಸಂಪತ್ತು ಸೃಷ್ಟಿ
ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಅಭೂತಪೂರ್ವ ಸಂಪತ್ತು ಸೃಷ್ಟಿಯಾಗಿದ್ದು, ಇತರ ದೇಶಗಳು ಆರ್ಥಿಕವಾಗಿ ಹಿಂದುಳಿದಿರುವಾಗ ಭಾರತವನ್ನು ಜಾಗತಿಕ ಆರ್ಥಿಕತೆಯ ಬೆಳವಣಿಗೆಯ ಶಕ್ತಿ ಎಂದು ಗುರುತಿಸಲಾಗಿದೆ. ಪಟ್ಟಿ ಮಾಡಲಾದ ಹಾಗೂ ಖಾಸಗಿಯಾಗಿರುವ ಕಂಪೆನಿಗಳಲ್ಲಿ ಮೌಲ್ಯಮಾಪನಗಳು ಕಡಿಮೆ ಇದ್ದಾಗಲೇ ಪಟ್ಟಿಗೆ ಹೊಸ ಸಂಸ್ಥೆಗಳ ಸೇರ್ಪಡೆಗಳು ಉಂಟಾಗಿವೆ. ಕಳೆದ ಐದು ವರ್ಷಗಳಲ್ಲಿ ಲಿಸ್ಟ್‌ಗೆ ಸೇರ್ಪಡೆಯಾದವರ ಪ್ರಮಾಣ 60% ಕ್ಕಿಂತ ಹೆಚ್ಚಾಗಿದೆ ಎಂಬುದು ಕಂಡುಬಂದಿದೆ.


ಲಾಭದಾಯಕ ಸ್ಟಾರ್ಟಪ್ ಆಗಿ ಖ್ಯಾತಿ ಪಡೆದಿರುವ ನೈಕಾ
ಹೂಡಿಕೆ ಬ್ಯಾಂಕರ್ ಆಗಿದ್ದ ಫಲ್ಗುಣಿಯವರು ಉದ್ಯಮಿಯಾಗಿ ಮಾರ್ಪಟ್ಟು ಯಶಸ್ಸಿನ ಏಣಿಯನ್ನು ಏರಿದ್ದಾರೆ. 2012 ರಲ್ಲಿ ಸೌಂದರ್ಯ ಉತ್ಪನ್ನಗಳನ್ನು ಮಾರಾಟ ಮಾಡಲು ಫಲ್ಗುಣಿಯವರು ಡಿಜಿಟಲ್ ಮಾರ್ಗವನ್ನು ಬಳಸಿದರು. ಇದೀಗ ಸೌಂದರ್ಯ ಸ್ಟಾರ್ಟಪ್‌ ಆಗಿರುವ ನೈಕಾ ರಿಟೇಲ್ ಉದ್ಯಮದಲ್ಲೇ ಅತ್ಯಂತ ಲಾಭದಾಯಕ ಸ್ಟಾರ್ಟಪ್ ಎಂದೆನಿಸಿದೆ. ಕಳೆದ ಎರಡು ವರ್ಷಗಳಲ್ಲಿ ತಮ್ಮ ವ್ಯವರಹಾರವನ್ನು ಸೌಂದರ್ಯದಿಂದ ಫ್ಯಾಷನ್ ನಂತರ ಲೈಫ್‌ಸ್ಟೈಲ್‌ ಕ್ಷೇತ್ರಕ್ಕೂ ವಿಸ್ತರಿಸಿದ್ದಾರೆ. ಇದೀಗ ನೈಕಾ ಒಂದು ಸುಸಜ್ಜಿತವಾದ ಸ್ಥಾಪಿತ ಪೋರ್ಟ್‌ಪೊಲಿಯೊ ಎಂದೆನಿಸಿದ್ದು 2,600 ಕ್ಕಿಂತಲೂ ಹೆಚ್ಚಿನ ಅಂತರಾಷ್ಟ್ರೀಯ ಬ್ರ್ಯಾಂಡ್‌ಗಳು ಹಾಗೂ 100 ಕ್ಕಿಂತ ಹೆಚ್ಚಿನ ಆಫ್‌ಲೈನ್ ಸ್ಟೋರ್‌ಗಳನ್ನು ಹೊಂದಿದೆ.


ಇದನ್ನೂ ಓದಿ:  Business Idea: ಕಾರ್ಪೊರೇಟ್​​ ಕೆಲ್ಸ ಬಿಟ್ಟು, ಲಕ್ಷ ಲಕ್ಷ ದುಡಿಯುತ್ತಿದ್ದಾರೆ ಬೆಂಗಳೂರು ಹುಡುಗಿ!


ಗಮನಾರ್ಹವಾಗಿ, ನೈಕಾದ ಅರ್ಧದಷ್ಟು ಷೇರುಗಳನ್ನು ಹೊಂದಿರುವ ಫಲ್ಗುಣಿ ನಾಯರ್ ಈಗ $ 6.5 ಶತಕೋಟಿ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ, ಏಕೆಂದರೆ ಅವರ ಕಂಪನಿಯ ಷೇರುಗಳು ದಿನದ ವಹಿವಾಟನ್ನು ಪ್ರಾರಂಭಿಸಿದಾಗ 89% ಕ್ಕೆ ಏರಿಕೆ ಕಂಡಿತು. ಫಲ್ಗುಣಿಯವರು ರೇಖಾ ಜುಂಜುನ್ವಾಲಾ ರೇರ್ ಎಂಟರ್‌ಪ್ರೈಸಸ್‌ನ ನಂತರದ ಸ್ಥಾನದಲ್ಲಿದ್ದಾರೆ.

Published by:Ashwini Prabhu
First published: