Falguni Nayar: 50ರ ವಯಸ್ಸಲ್ಲಿ Business ಆರಂಭಿಸಿ ದೇಶ ಶ್ರೀಮಂತೆ ಎನಿಸಿಕೊಂಡ ನೈಕಾ CEO

ಗುಜರಾತಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಫಲ್ಗುಣಿ ನಾಯರ್ ಅವರು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವೀಧರರಾಗಿದ್ದಾರೆ.

ಗುಜರಾತಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಫಲ್ಗುಣಿ ನಾಯರ್ ಅವರು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವೀಧರರಾಗಿದ್ದಾರೆ.

ಗುಜರಾತಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಫಲ್ಗುಣಿ ನಾಯರ್ ಅವರು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವೀಧರರಾಗಿದ್ದಾರೆ.

  • Share this:
ಮಹಿಳಾ ನೇತೃತ್ವದ ಸ್ಮಾರ್ಟಪ್‌ನ ಮುಖ್ಯಸ್ಥರಾದ ಫಾಲ್ಗುಣಿ ನಾಯರ್ (Falguni Nayar) 6.5 ಬಿಲಿಯನ್ ಡಾಲರ್‌ (4,84,35,72,50,000 ರೂ.) ನಿವ್ವಳ ಮೌಲ್ಯದೊಂದಿಗೆ ದೇಶದ ಅತ್ಯಂತ ಶ್ರೀಮಂತ (Richest Women in India) ಸ್ವಯಂ-ನಿರ್ಮಿತ ಮಹಿಳಾ ಬಿಲಿಯನೇರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೌಂದರ್ಯ ಹಾಗೂ ಆರೋಗ್ಯ ಉತ್ಪನ್ನಗಳ ನೈಕಾ (Nykaa) ಬ್ರ್ಯಾಂಡ್‌ನ ಆನ್‌ಲೈನ್ ಮಾರುಕಟ್ಟೆ ನಡೆಸುತ್ತಿರುವ FSN E- ಕಾಮರ್ಸ್ ಸಂಸ್ಥೆಗಳ ಷೇರುಗಳನ್ನು ನವೆಂಬರ್ 10 ರಂದು 1,125 ರೂ ಸಂಚಿಕೆ ಬೆಲೆಯ (issue price) ವಿರುದ್ಧ 79%ನಷ್ಟು ಅಧಿಕ ಪ್ರಮಾಣದ ಲಾಭಾಂಶದೊಂದಿಗೆ ಪಟ್ಟಿಗೊಂಡಿದೆ.

ಮಜುಂದಾರ್-ಷಾ ಹಿಂದಿಕ್ಕಿದ ನಾಯರ್​

ಬಯೋಕಾನ್ ಸಂಸ್ಥಾಪಕರಾದ ಕಿರಣ್ ಮಜುಂದಾರ್-ಷಾ ಅವರನ್ನು ಸ್ವತ್ತುಗಳ ವಿಷಯದಲ್ಲಿ ಹಿಂದಿಕ್ಕಿರುವ ನಾಯರ್, ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ವರದಿ ಮಾಡಿರುವಂತೆ 12.9 ಬಿಲಿಯನ್ ಡಾಲರ್‌ ನಿವ್ವಳ ಮೌಲ್ಯ ಹೊಂದಿರುವ OP ಜಿಂದಾಲ್ ಗುಂಪಿನ ಅಧ್ಯಕ್ಷೆ ಸಾವಿತ್ರಿ ಜಿಂದಾಲ್ ನಂತರ ಈಗ ಭಾರತದ ಎರಡನೇ ಶ್ರೀಮಂತ ಮಹಿಳೆಯಾಗಿದ್ದಾರೆ. ಫೋರ್ಬ್ಸ್ ಇಂಡಿಯಾ ರಿಚ್ ಲಿಸ್ಟ್ ಉಲ್ಲೇಖಿಸಿರುವಂತೆ ನಾಯರ್ ಇದೀಗ ಮುತ್ತೂಟ್ ಫೈನಾನ್ಸ್‌ನ ಮುತ್ತೂಟ್ ಕುಟುಂಬ, ಮಾರಿಕೋ ಸಂಸ್ಥಾಪಕ ಮತ್ತು ಅಧ್ಯಕ್ಷ ಹರ್ಷ್ ಮಾರಿವಾಲಾ, ಏಷ್ಯನ್ ಪೇಂಟ್ಸ್‌ನ ಅಭಯ್ ವಕೀಲ್ ಅವರಿಗಿಂತ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ.

ಶ್ರೀಮಂತ ಪಟ್ಟಿಯಲ್ಲಿ ನಾಯರ್

ಕ್ಯಾಡಿಲಾ ಹೆಲ್ತ್‌ಕೇರ್‌ನ ಅಧ್ಯಕ್ಷ ಪಂಕಜ್ ಪಟೇಲ್, ಇಂಟರ್‌ಗ್ಲೋಬ್ ಏವಿಯೇಷನ್‌ನ ಭಾಟಿಯಾ ಕುಟುಂಬ ಮತ್ತು ಅಲ್ಕೆಮ್ ಲ್ಯಾಬೋರೇಟರೀಸ್‌ನ ಸಿಂಗ್ ಕುಟುಂಬವು ಶ್ರೀಮಂತ ಪಟ್ಟಿಯಲ್ಲಿ ನಾಯರ್ ನಂತರದ ಸ್ಥಾನ ಪಡೆದುಕೊಂಡಿದ್ದಾರೆ.

Nykaa ಸ್ಟಾಕ್ 2,001ರೂ. ಗೆ ಪ್ರಾರಂಭಗೊಂಡಿತು ಹಾಗೂ BSEಯಲ್ಲಿ 77.86% ಏರಿಕೆಯನ್ನು ಪ್ರತಿಬಿಂಬಿಸಿತು. 2,219 ರೂ ಗೆ 89.24% ವೇಗವನ್ನು ಪಡೆದುಕೊಂಡಿತು. NSEನಲ್ಲಿ 79.37% ಲಾಭಾಂಶದೊಂದಿಗೆ 2,018 ರೂ.ಗೆ ಪಟ್ಟಿಗೊಂಡಿದೆ.

FSNನ ಮೌಲ್ಯಮಾಪನವು ಬುಧವಾರದ ಮೊದಲ 5 ನಿಮಿಷಗಳ ವಹಿವಾಟಿನಲ್ಲಿ 1 ಟ್ರಿಲಿಯನ್ ($ 13.5 ಶತಕೋಟಿ) ತಲುಪಿದೆ. FSN ಇ-ಕಾಮರ್ಸ್ ಸಂಸ್ಥೆಯ ಆರಂಭಿಕ ಷೇರು-ಮಾರಾಟವು ಈ ತಿಂಗಳ ಆರಂಭದಲ್ಲಿ 81.78 ಬಾರಿ ಸಬ್‌ಸ್ಕ್ರಿಪ್ಶನ್ ಪಡೆದುಕೊಂಡಿದೆ. 5,352 ಕೋಟಿ ರೂಗಳ Nykaa IPO ಪ್ರತಿ ಷೇರಿಗೆ 1,085-1,125 ರೂ ಬೆಲೆ ಶ್ರೇಣಿ ಪಡೆದುಕೊಂಡಿದೆ.

ಗುಜರಾತಿ ಮಹಿಳೆ 

ಗುಜರಾತಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಫಲ್ಗುಣಿ ನಾಯರ್ ಅವರು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವೀಧರರಾಗಿದ್ದಾರೆ. ಆಕೆಯ ತಂದೆ ಸಣ್ಣ ಬೇರಿಂಗ್ಸ್ ಕಂಪನಿಯನ್ನು ನಡೆಸುತ್ತಿದ್ದರು. ನೈಕಾವನ್ನು ಪ್ರಾರಂಭಿಸುವ ಮೊದಲು, ನಾಯರ್ ಕೋಟಕ್ ಮಹೀಂದ್ರಾ ಕ್ಯಾಪಿಟಲ್‌ನೊಂದಿಗೆ ಕೆಲಸ ಮಾಡಿದರು, ಅಲ್ಲಿ ಅವರು ಅದರ ಸಾಂಸ್ಥಿಕ ಇಕ್ವಿಟಿ ವ್ಯವಹಾರದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು ಮತ್ತು ಮುಖ್ಯಸ್ಥರಾಗಿದ್ದರು.

ಇದನ್ನು ಓದಿ: Junio RuPay Card: ಮಕ್ಕಳಿಗೆ ಹೊಸ 'Debit card' ಪ್ರಾರಂಭಿಸಿದ ರುಪೇ ಪ್ಲಾಟ್‌ಫಾರ್ಮ್‌: ವೈಶಿಷ್ಟ್ಯಗಳು ಹೀಗಿವೆ..

ಮಾಜಿ ಬ್ಯಾಂಕ್ ಅಧಿಕಾರಿಯಾಗಿದ್ದ ಫಾಲ್ಗಣಿ ನಾಯರ್, ತಮ್ಮ 50ರ ಹರೆಯಕ್ಕೆ ಕಾಲಿಡುವ ಮೊದಲೇ ಉದ್ಯಮಿಯಾಗಿ ಮಾರ್ಪಟ್ಟರು. 2012ರಲ್ಲಿ ಇ-ಕಾಮರ್ಸ್ ಉದ್ಯಮ ಆರಂಭಿಸಿದ ನಾಯರ್ ಮೊಬೈಲ್ ಆ್ಯಪ್ ಹಾಗೂ ವೆಬ್‌ಸೈಟ್‌ನ ಮೂಲಕ ಸೌಂದರ್ಯ ಹಾಗೂ ವೈಯಕ್ತಿಕ ಆರೈಕೆ ಉತ್ಪನ್ನಗಳ ಮಾರಾಟ ನಡೆಸಿದರು.

ಇದನ್ನು ಓದಿ: Post Officeನ ಈ ಉಳಿತಾಯ ಯೋಜನೆಗಳು ನಿಮ್ಮ ಹಣವನ್ನು ದ್ವಿಗುಣಗೊಳಿಸುತ್ತದೆ!

ಉದ್ಯಮಿಗಳಿಗೆ ಪ್ರೇರಣೆ ಈ ನಾಯರ್​

ಭಾರತದಲ್ಲೇ ಹುಟ್ಟಿದ, ಭಾರತೀಯ ಮಾಲೀಕತ್ವದ ಭಾರತೀಯ-ನಿರ್ವಹಣೆಯ ಕನಸು-ನನಸಾಗುವ ನೈಕಾ (Nykaa) ಉದ್ಯಮ ಪ್ರಯಾಣವು ನಿಮ್ಮಲ್ಲಿ ಪ್ರತಿಯೊಬ್ಬರನ್ನೂ ಪ್ರೇರೇಪಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಲಿಸ್ಟಿಂಗ್ ಕಾರ್ಯಕ್ರಮದಲ್ಲಿ ನಾಯರ್ ತಿಳಿಸಿದ್ದಾರೆ.

ಸಂಸ್ಥೆಯ ಸ್ವಯಂ ನಿರ್ಮಾಣದ ಬ್ರ್ಯಾಂಡ್ ಉತ್ಪನ್ನಗಳನ್ನು ಒಳಗೊಂಡಂತೆ ತನ್ನೆರಡು ಬ್ಯುಸಿನೆಸ್‌ ವಿಭಾಗಗಳಾದ Nykaa ಹಾಗೂ Nykaa Fashion ಅಡಿಯಲ್ಲಿ ಸೌಂದರ್ಯ, ವೈಯಕ್ತಿಕ ಆರೈಕೆ ಮತ್ತು ಫ್ಯಾಷನ್ ಉತ್ಪನ್ನಗಳ ವೈವಿಧ್ಯಮಯ ಪೋರ್ಟ್‌ಫೋಲಿಯೋ ಹೊಂದಿದೆ. ಭಾರತದ ಸೌಂದರ್ಯ ಹಾಗೂ ವೈಯಕ್ತಿಕ ಕಾಳಜಿ ಮಾರುಕಟ್ಟೆಯು 2020 ಹಾಗೂ 2025ರ ನಡುವೆ 2 ಟ್ರಿಲಿಯನ್ ರೂ. ಅಂದಾಜು ಗಳಿಕೆಯೊಂದಿಗೆ ತನ್ನ ಗಾತ್ರ ದುಪ್ಪಟ್ಟುಗೊಳಿಸಲಿದೆ ಎಂದು ಅಂದಾಜಿಸಲಾಗಿದೆ.
First published: