ಯುಎಸ್ ಕರೆನ್ಸಿ ಡಾಲರ್ಗೆ (US Currency Dollar) ಪ್ರಪಂಚದಾದ್ಯಂತ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಯಾಕೆಂದ್ರೆ ಇತರೇ ರಾಷ್ಟ್ರಗಳ ಕರೆನ್ಸಿಗಿಂತ ಡಾಲರ್ಗೆ ಹೆಚ್ಚಿನ ವ್ಯಾಲ್ಯೂ ಇದೆ. ಭಾರತದ ರೂಪಾಯಿಗೂ (Indian Rupees) ಯುಎಸ್ ಡಾಲರ್ಗೂ ಸಿಕ್ಕಾಪಟ್ಟೆ ಡಿಫ್ರೆಂಟ್ ಇದೆ. ಒಂದು ಡಾಲರ್ಗೆ 82 ರೂಪಾಯಿ ವ್ಯಾಲ್ಯೂ ಇದೆ. ಇವಾಗ ಯಾಕೆ ಈ ಡಾಲರ್, ರೂಪಿಸ್ ಅಂತೀರಾ? ಅದಕ್ಕೂ ಒಂದು ಬಲವಾದ ಕಾರಣವಿದೆ. ಇನ್ಮುಂದೆ ಬಾಂಗ್ಲಾದೇಶದಲ್ಲಿ (Bangladesh) ಭಾರತದ ರೂಪಾಯಿ ಕರೆನ್ಸಿಯಿಂದಲೇ ವ್ಯವಹರಿಸಲು ಅನುಮತಿ ನೀಡಿದೆ. ಬಾಂಗ್ಲಾದೇಶವು ಭಾರತದೊಂದಿಗೆ ಭಾರತೀಯ ರೂಪಾಯಿಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಇತ್ಯರ್ಥಪಡಿಸುವ 19 ನೇ ರಾಷ್ಟ್ರವಾಗಿದೆ.
ಬಾಂಗ್ಲಾದಲ್ಲಿ ರೂಪಯಿ ಮೂಲಕವೇ ವ್ಯವಹರಿಸಿ!
ಹೌದು 18 ದೇಶಗಳಲ್ಲಿ ಭಾರತದ ಕರೆನ್ಸಿ ಮೂಲಕ ವ್ಯವಹರಿಸಲು ಅಸ್ತು ಎಂದಿದ್ದರು. ಇದೀಗ ಈ ಪಟ್ಟಿಗೆ ಬಾಂಗ್ಲಾದೇಶ ಕೂಡ ಸೇಪರ್ಡೆಯಾಗಿದೆ. ತಮ್ಮ ಸ್ಥಳೀಯ ಕರೆನ್ಸಿಗಳನ್ನು ಬಳಸಲು ತಿಂಗಳುಗಳ ಕಾಲ ಎರಡೂ ದೇಶಗಳು ಮಾತುಕತೆ ನಡೆಸುತ್ತಿದ್ದವು.
ಭಾರತದೊಂದಿಗೆ ಗಡಿಯಾಚೆಗಿನ ವ್ಯಾಪಾರವನ್ನು ಇತ್ಯರ್ಥಗೊಳಿಸಲು, ಬಾಂಗ್ಲಾದೇಶದ ಎರಡು ಬ್ಯಾಂಕುಗಳು - ಸೋನಾಲಿ ಬ್ಯಾಂಕ್ ಮತ್ತು ಈಸ್ಟರ್ನ್ ಬ್ಯಾಂಕ್ ಲಿಮಿಟೆಡ್ (EBL) - ಎರಡು ಭಾರತೀಯ ಸಾಲದಾತರು - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ICICI ಬ್ಯಾಂಕ್‌ನಲ್ಲಿ vostro ಖಾತೆಗಳನ್ನು ತೆರೆಯುತ್ತದೆ.
ಬಾಂಗ್ಲಾದೇಶದಲ್ಲಿ ಭಾರತದ ಬ್ಯಾಂಕ್‌ಗಳು!
ಇದೇ ರೀತಿಯ ಖಾತೆಗಳನ್ನು ಈ ಎರಡು ಭಾರತೀಯ ಬ್ಯಾಂಕ್‌ಗಳು ಎರಡು ಬಾಂಗ್ಲಾದೇಶದ ಬ್ಯಾಂಕ್‌ಗಳಲ್ಲಿ ತೆರೆಯುತ್ತವೆ. ಎರಡೂ ದೇಶಗಳ ನಡುವಿನ ವಹಿವಾಟು ಯಾವುದೇ ಮೂರನೇ ಕರೆನ್ಸಿ ಇಲ್ಲದೇ ಟಾಕಾ-ರುಪಾಯಿಗಳಲ್ಲಿ ನಡೆಯುತ್ತದೆ.
ಟಾಕಾ-ರೂಪಾಯಿಗಳಲ್ಲೇ ನಡೆಯುತ್ತೆ ವಹಿವಾಟು!
"ಟಾಕಾ ಮತ್ತು INR ನಲ್ಲಿ ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರವು US ಡಾಲರ್ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಎರಡೂ ದೇಶಗಳು ಪ್ರಯೋಜನ ಪಡೆಯಲಿವೆ” ಎಂದು ಸೋನಾಲಿ ಬ್ಯಾಂಕ್ ಲಿಮಿಟೆಡ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಫ್ಜಲ್ ಕರೀಮ್ ಹೇಳಿದ್ದಾರೆ.
ಈ ಬಗ್ಗೆ ಮಾತುಕತೆ ನಡೆಸಲು ಇಂಡಿಯನ್ ಸೆಂಟ್ರಲ್ ಬ್ಯಾಂಕ್ ಆಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) - ಮತ್ತು SBI ಯ ನಿಯೋಗವು ಏಪ್ರಿಲ್‌ನಲ್ಲಿ ಬಾಂಗ್ಲಾದೇಶದ ರಾಜಧಾನಿ ಢಾಕಾಕ್ಕೆ ಭೇಟಿ ನೀಡಿದೆ. INR ಮತ್ತು ಟಾಕಾದಲ್ಲಿ ವ್ಯಾಪಾರವನ್ನು ಇತ್ಯರ್ಥಪಡಿಸಲು ಚರ್ಚೆ ನಡೆಸಿ ಅಂತಿಮಗೊಳಿಸಿದೆ.
ಇದನ್ನೂ ಓದಿ: ಭಾರತವನ್ನು ಆಳಲಿದ್ಯಾ ಡಿಜಿಟಲ್ ಕರೆನ್ಸಿ? ಯಾಕೆ ಎನ್ನುವುದಕ್ಕೆ ಇಲ್ಲಿದೆ 10 ಕಾರಣಗಳು!
ಎರಡೂ ದೇಶಗಳಿಗೂ ಇದೆ ಒಪ್ಪಿಗೆ!
ಏಪ್ರಿಲ್ 11 ರಂದು, ಆರ್‌ಬಿಐ ಮತ್ತು ಎಸ್‌ಬಿಐನ ಭಾರತೀಯ ನಿಯೋಗವು ಇಬಿಎಲ್ ಮತ್ತು ಸೋನಾಲಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿತ್ತು. ಎರಡು ಕಡೆಯವರು ಟಾಕಾ ಮತ್ತು ರೂಪಾಯಿಗಳಲ್ಲಿ ವಾಣಿಜ್ಯ ವಹಿವಾಟುಗಳಿಗೆ ಪಾವತಿ ವಿಧಾನಗಳನ್ನು ಚರ್ಚಿಸಿದರು ಎಂದು ವರದಿ ತಿಳಿಸಿದೆ.
ಭಾರತ-ಬಾಂಗ್ಲಾದೇಶ ವ್ಯಾಪಾರ
ಕಳೆದ ಆರ್ಥಿಕ ವರ್ಷದಲ್ಲಿ ಭಾರತದಿಂದ ಬಾಂಗ್ಲಾದೇಶದ ಆಮದು ಸುಮಾರು $13.69 ಬಿಲಿಯನ್ ಆಗಿತ್ತು ಎಂದು ವರದಿ ಹೇಳಿದೆ. ಇದರಲ್ಲಿ $2 ಶತಕೋಟಿ INR ನಲ್ಲಿ ವ್ಯಾಪಾರವಾಗುತ್ತದೆ, ಉಳಿದ ಹಣವನ್ನು ಡಾಲರ್ ರೂಪದಲ್ಲಿ ಪಾವತಿಸಲಾಗಿತ್ತು.
INR ನಲ್ಲಿ ವ್ಯಾಪಾರ ಮಾಡುವ ದೇಶಗಳು!
ಬಾಂಗ್ಲಾದೇಶಕ್ಕಿಂತ ಮೊದಲು, 18 ದೇಶಗಳು ಭಾರತದೊಂದಿಗೆ INR ನಲ್ಲಿ ಸಾಗರೋತ್ತರ ವ್ಯಾಪಾರವನ್ನು ಸ್ಥಾಪಿಸಲು ಪ್ರಾರಂಭಿಸಿವೆ. ರಷ್ಯಾ, ಸಿಂಗಾಪುರ್, ಶ್ರೀಲಂಕಾ, ಬೋಟ್ಸ್ವಾನಾ, ಫಿಜಿ, ಜರ್ಮನಿ, ಗಯಾನಾ, ಇಸ್ರೇಲ್, ಕೀನ್ಯಾ, ಮಲೇಷ್ಯಾ, ಮಾರಿಷಸ್, ಮ್ಯಾನ್ಮಾರ್, ನ್ಯೂಜಿಲೆಂಡ್, ಓಮನ್, ಸೆಶೆಲ್ಸ್, ತಾಂಜಾನಿಯಾ, ಉಗಾಂಡಾ ಮತ್ತು ಯುನೈಟೆಡ್ ಕಿಂಗ್‌ಡಮ್ ದೇಶಗಳಲ್ಲಿ ಇಂಡಿಯನ್ ರುಪೀಸ್ ಮೂಲಕ ವಹಿವಾಟು ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ