International DL: ಕೇವಲ 800ರೂ.ಗೆ ಸಿಗುತ್ತೆ ಇಂಟರ್​ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್​- ಹೀಗೆ ಪಡೆಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ಸಾಮಾನ್ಯ ಚಾಲನಾ ಪರವಾನಗಿಯನ್ನು ಪಡೆಯುವ ರೀತಿಯಲ್ಲಿಯೇ ಅಂತಾರಾಷ್ಟ್ರೀಯ ಚಾಲನಾ ಪರವಾನಗಿಯನ್ನು ಪಡೆಯಬಹುದು. ಇದಕ್ಕಾಗಿ ಸ್ಥಳೀಯ ಆರ್‌ಟಿಒ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ.

  • Trending Desk
  • 5-MIN READ
  • Last Updated :
  • Share this:

2022 ಇನ್ನೇನು ಮುಗಿಯುತ್ತಿದೆ. ಇಯರ್‌ ಎಂಡ್(Yearend)‌ ಹತ್ತಿರದಲ್ಲಿದೆ. ಅದರಲ್ಲೂ ಕ್ರಿಸ್‌ ಮಸ್(Christmas)‌ ಹಿನ್ನೆಲೆಯಲ್ಲಿ ಸ್ಕೂಲ್‌ ಮಕ್ಕಳಿಗಂತೂ(School Children) ರಜೆ ಇದ್ದೇ ಇರುತ್ತದೆ. ಇನ್ನು ಕ್ರಿಸ್‌ ಮಸ್‌ ಹಾಗೂ ನ್ಯೂ ಇಯರ್‌ ಹಿನ್ನೆಲೆಯಲ್ಲಿ ಅನೇಕ ಕಂಪನಿಗಳೂ(Companies) ಉದ್ಯೋಗಿಗಳಿಗೆ ರಜೆ ನೀಡಿರುತ್ತವೆ. ಹೀಗಾಗಿ ರಜೆಯನ್ನು(Holiday) ಎಂಜಾಯ್‌ ಮಾಡೋದಿಕ್ಕೆ ನೀವು ಒಂದಿಷ್ಟು ಪ್ಲಾನ್‌ ಗಳನ್ನು ಹಾಕಿಕೊಂಡಿರಬೇಕು ಅಲ್ವಾ?


ಅಂದಹಾಗೆ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಕ್ಕೆ ನೀವು ವಿದೇಶಗಳಿಗೆ ಹೋಗಬೇಕೆಂದು ಅಂದುಕೊಂಡಿದ್ದರೆ, ವಿದೇಶಿ ರಸ್ತೆಗಳಲ್ಲಿ ನೀವೇ ವಾಹನ ಓಡಿಸಬೇಕು ಅನ್ನೋ ಆಸೆ ಹೊಂದಿದ್ದರೆ ನಿಮ್ಮ ಕನಸು ಸುಲಭದಲ್ಲಿ ನನಸಾಗುತ್ತಿದೆ. ಹೌದು, ನೀವು ಅತ್ಯಂತ ಸುಲಭವಾಗಿ ಇಂಟರ್ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಳ್ಳಬಹುದಾಗಿದೆ.


ಹೌದು, ಅಂತಾರಾಷ್ಟ್ರೀಯ ಚಾಲನಾ ಪರವಾನಗಿಯನ್ನು ಪಡೆಯುವುದು ನಿಮ್ಮ ಕನಸಾಗಿದ್ದರೆ ಸರಳವಾದ ವಿಧಾನದ ಮೂಲಕ ಅದನ್ನು ಪಡೆಯಬಹುದಾಗಿದೆ.


ಆ ಮೂಲಕ ನೀವು ಪ್ರಪಂಚದ ಯಾವುದೇ ಮೂಲೆಯಲ್ಲಿ ವೈಯಕ್ತಿಕ ಬಳಕೆಗೆ ಕಾರು, ಬೈಕು ಓಡಿಸಬಹುದಾಗಿದೆ. ಅಲ್ಲದೇ ಸರಳ ವಿಧಾನಗಳ ಮೂಲಕ ಪಡೆಯಬಹುದಾದ ಈ ಅಂತಾರಾಷ್ಟ್ರೀಯ ಚಾಲನಾ ಪರವಾನಗಿಗೆ ನೀವು ನೀಡಬೇಕಿರುವ ಶುಲ್ಕ ಬರೀ 800 ರೂ. ಮಾತ್ರ.


ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್‌‌ 150 ದೇಶಗಳಲ್ಲಿ ಮಾನ್ಯವಾಗಿದೆ


ಅಂತಾರಾಷ್ಟ್ರೀಯ ಚಾಲನಾ ಪರವಾನಗಿ ವಿದೇಶಿ ಪ್ರಯಾಣಿಕರಿಗೆ ಮಾತ್ರ ಉಪಯುಕ್ತವಲ್ಲ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜಾದಿನಗಳಲ್ಲಿ ಸಾಂದರ್ಭಿಕವಾಗಿ ವಿದೇಶಕ್ಕೆ ಹೋಗುವವರು ಸಹ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ.


ಇದರಿಂದಾಗಿ ಅವರು ತಮ್ಮ ಸ್ವಂತ ಕಾರಿನಲ್ಲಿ ಚಾಲನೆಯಲ್ಲಿ ಆನಂದಿಸಬಹುದು. ಭಾರತ ನಿರ್ಮಿತ ಅಂತಾರಾಷ್ಟ್ರೀಯ ಚಾಲನಾ ಪರವಾನಗಿ ಸುಮಾರು 150 ದೇಶಗಳಲ್ಲಿ ಮಾನ್ಯವಾಗಿದೆ ಎಂಬುದು ಗಮನಾರ್ಹ.


ಇದನ್ನೂ ಓದಿ: Electric Cycle: ಸೈಕಲ್​ನಂತೆ ಕಾಣಿಸೋ ಎಲೆಕ್ಟ್ರೆಕ್​ ಬೈಕ್​, ಹೇಗೆ ಬೇಕಾದರೂ ಬಳಸಬಹುದು!


ಅರ್ಜಿ ಸಲ್ಲಿಸುವುದು ಹೇಗೆ?


ನೀವು ಸಾಮಾನ್ಯ ಚಾಲನಾ ಪರವಾನಗಿಯನ್ನು ಪಡೆಯುವ ರೀತಿಯಲ್ಲಿಯೇ ಅಂತಾರಾಷ್ಟ್ರೀಯ ಚಾಲನಾ ಪರವಾನಗಿಯನ್ನು ಪಡೆಯಬಹುದು. ಇದಕ್ಕಾಗಿ ಸ್ಥಳೀಯ ಆರ್‌ಟಿಒ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ.


ಯಾವ್ಯಾವ ಡಾಕ್ಯುಮೆಂಟ್ ಅಗತ್ಯವಿದೆ?


ಅಂತಾರಾಷ್ಟ್ರೀಯ ಚಾಲನಾ ಪರವಾನಗಿ ಪಡೆಯಲು ಕೆಲವಷ್ಟು ಮುಖ್ಯ ದಾಖಲೆಗಳು ಅಗತ್ಯವಿದೆ. ಅಂತಾರಾಷ್ಟ್ರೀಯ ಚಾಲನಾ ಪರವಾನಗಿಯನ್ನು ಪಡೆಯುವಾಗ ನೀವು ಈ ದಾಖಲೆಗಳ ಮೂಲವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು.


1. ನಮೂನೆ 4A (ಅಂತಾರಾಷ್ಟ್ರೀಯ ಚಾಲನಾ ಪರವಾನಗಿಗಾಗಿ ಅರ್ಜಿ ನಮೂನೆ), ಸಾರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.


2. ಮಾನ್ಯವಾದ ಚಾಲನಾ ಪರವಾನಗಿಯ ದೃಢೀಕೃತ ಪ್ರತಿ


3. ವಿಳಾಸ ಪುರಾವೆಯ ದೃಢೀಕರಿಸಿದ ಪ್ರತಿ


4. ಮಾನ್ಯವಾದ ಪಾಸ್‌ಪೋರ್ಟ್‌ನ ದೃಢೀಕೃತ ಪ್ರತಿ


5. ವೀಸಾದ ದೃಢೀಕೃತ ಪ್ರತಿ


6. ವಿಮಾನ ಟಿಕೆಟ್‌ನ ಪ್ರತಿ


7. ಐದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು


8. ವೈದ್ಯಕೀಯ ನಮೂನೆ 1-ಎ


9. ಗುರುತಿನ ಪುರಾವೆ


10. ವಯಸ್ಸಿನ ಪುರಾವೆಯ ದೃಢೀಕರಿಸಿದ ಪ್ರತಿ


ಪಾವತಿಸಬೇಕಾದ ಶುಲ್ಕ


ಅಂತಾರಾಷ್ಟ್ರೀಯ ಚಾಲನಾ ಪರವಾನಗಿ ಪಡೆಯಲು ನೀವು 800 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಪ್ರದೇಶದ ಸ್ಥಳೀಯ ಸಾರಿಗೆ ಕಚೇರಿಗೆ ನೀವು ಇದನ್ನು ನಗದು ರೂಪದಲ್ಲಿ ಸಲ್ಲಿಸಬೇಕು.


ಇದನ್ನೂ ಓದಿ:Infosys ಶುರು ಮಾಡೋಕೆ ಪತಿಗೆ ಸಾಲ ಕೊಟ್ಟಿದ್ರಂತೆ ಸುಧಾ ಮೂರ್ತಿ! ಈ ಬಗ್ಗೆ ಅವರೇ ಹೇಳಿದ್ದಾರೆ ನೋಡಿ


ಅಂದಹಾಗೆ ಅಂತಾರಾಷ್ಟ್ರೀಯ ಚಾಲನಾ ಪರವಾನಗಿಯನ್ನು ಒಂದು ವರ್ಷದ ಅವಧಿಗೆ ನೀಡಲಾಗುತ್ತದೆ. ನೀವು ಅದನ್ನು ಒಂದು ವರ್ಷದ ಅವಧಿಯಲ್ಲಿ ಬಳಸಬೇಕು.


ಇನ್ನೊಂದು ಮುಖ್ಯವಾದ ವಿಷಯವೆಂದರೆ, ಅಂತಾರಾಷ್ಟ್ರೀಯ ಚಾಲನಾ ಪರವಾನಗಿಯನ್ನು ನವೀಕರಿಸಲಾಗುವುದಿಲ್ಲ. ವ್ಯಾಲಿಡಿಟಿ ಮುಗಿದ ನಂತರ, ನೀವು ಮತ್ತೊಮ್ಮೆ ಇಂಟರ್ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.


ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಡ್ರೈವಿಂಗ್‌ ಲೈಸೆನ್ಸ್‌ ಪಡೆದುಕೊಳ್ಳುವುದು ಅನೇಕರ ಕನಸು. ಅದು ಕೇವಲ 800 ರೂ ಗಳಲ್ಲಿ ಅತ್ಯಂತ ಸರಳವಾಗಿ ಈಡೇರುತ್ತದೆ ಎಂದರೆ ಯಾರಿಗೆ ತಾನೇ ಖುಷಿಯಾಗೋದಿಲ್ಲ ಹೇಳಿ.


  

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು