Exclusive: ಇನ್ಮುಂದೆ ಆಧಾರ್ ಇಲ್ಲದೆ ಸಬ್ಸಿಡಿಯೂ ಸಿಗಲ್ಲ, ಸದ್ದಿಲ್ಲದೆ ಸುತ್ತೋಲೆ ಹೊರಡಿಸಿದ UIDAI!

Aadhar for government services:ಸರ್ಕಾರ ಆಧಾರ್ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ. ಇನ್ನು ಮುಂದೆ, ನಿಮ್ಮ ಬಳಿ ಆಧಾರ್ ಸಂಖ್ಯೆ ಇಲ್ಲದಿದ್ದರೆ, ಎಲ್ಲಾ ಸರ್ಕಾರಿ ಸಬ್ಸಿಡಿ ಮತ್ತು ಪ್ರಯೋಜನಗಳನ್ನು ಮುಂದೂಡಲಾಗುತ್ತದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಕಳೆದ ವಾರ ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.

  • Share this:
ನವದೆಹಲಿ(ಆ.16): ಈವರೆಗೆ ನೀವು ಆಧಾರ್ ಸಂಖ್ಯೆ (Aadhaar Number) ಹೊಂದಿರದಿದ್ದರೆ ಅಥವಾ ಇನ್ನೂ ಆಧಾರ್‌ಗಾಗಿ ನೋಂದಾಯಿಸದಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ ನಿಮ್ಮ ಬಳಿ ಆಧಾರ್ ಇಲ್ಲದಿದ್ದರೆ ಬಹುದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಹೌದು ನ್ಯೂಸ್ 18 ಪಡೆದ ವಿಶೇಷ ಮಾಹಿತಿಯ ಪ್ರಕಾರ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಎಲ್ಲಾ ಸರ್ಕಾರಿ ಸಬ್ಸಿಡಿ (Govt Subsidies) ಮತ್ತು ಸೌಲಭ್ಯಗಳಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಸಚಿವಾಲಯಗಳಿಗೆ ಸುತ್ತೋಲೆ ಹೊರಡಿಸಿದೆ.

ಆಗಸ್ಟ್ 11 ರಂದು ಯುಐಡಿಎಐ ಹೊರಡಿಸಿದ ಸುತ್ತೋಲೆ ಪ್ರತಿ ನ್ಯೂಸ್ 18ಗೆ ಲಭ್ಯವಾಗಿದ್ದು, ಅದರ ಪ್ರಕಾರ ಆಧಾರ್ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಆಧಾರ್ ಕಾಯ್ದೆಯ ಸೆಕ್ಷನ್ 7ರ ಅನ್ವಯ ಆಧಾರ್ ಇಲ್ಲದ ವ್ಯಕ್ತಿಗೆ ಸೌಲಭ್ಯಗಳ ಒದಗಿಸಲು ಅಸ್ತಿತ್ವದಲ್ಲಿರುವ ನಿಯಮ ಅವಕಾಶ ಕೊಡುತ್ತದೆ. ಅಂತಹ ವ್ಯಕ್ತಿಗೆ ಪರ್ಯಾಯ ಮತ್ತು ಕಾರ್ಯಸಾಧ್ಯವಾದ ಗುರುತಿನ ವಿಧಾನಗಳ ಮೂಲಕ ಸರ್ಕಾರದ ಪ್ರಯೋಜನಗಳು, ಸಬ್ಸಿಡಿಗಳು ಮತ್ತು ಸೇವೆಗಳನ್ನು ಪಡೆಯಲು ಅವಕಾಶವಿದೆ. ಆದರೆ, ದೇಶದ 90 ಪ್ರತಿಶತ ವಯಸ್ಕರು ಆಧಾರ್ ಸಂಖ್ಯೆಯನ್ನು ಹೊಂದಿದ್ದಾರೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ:  PAN ಮತ್ತು Aadhaar Card ಲಿಂಕ್ ಮಾಡಲು ಸಮಸ್ಯೆ ಆಗ್ತಿದೆಯಾ? ಕಾರಣ ತಿಳಿದುಕೊಳ್ಳಿ

ಮೇಲ್ಕಂಡ ಹಿನ್ನಲೆಯಲ್ಲಿ ಆಧಾರ್ ಕಾಯಿದೆಯ ಸೆಕ್ಷನ್ 7 ರ ಪ್ರಕಾರ, ಒಬ್ಬ ವ್ಯಕ್ತಿಯು ಇನ್ನೂ ಆಧಾರ್ ಸಂಖ್ಯೆಯನ್ನು ಹೊಂದಿಲ್ಲದಿದ್ದರೆ, ಅವನು ಅದಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅಂತಹ ವ್ಯಕ್ತಿಗೆ ಆಧಾರ್ ಸಂಖ್ಯೆಯನ್ನು ನಿಗದಿಪಡಿಸುವವರೆಗೆ, ಅವನು/ಅವಳು ಆಧಾರ್ ನೋಂದಣಿ ಗುರುತಿನ (EID) ಸಂಖ್ಯೆ/ಸ್ಲಿಪ್‌ನೊಂದಿಗೆ ಪರ್ಯಾಯ ಮತ್ತು ಕಾರ್ಯಸಾಧ್ಯವಾದ ಗುರುತಿನ ವಿಧಾನಗಳ ಮೂಲಕ ಸರ್ಕಾರದ ಪ್ರಯೋಜನಗಳು, ಸಬ್ಸಿಡಿಗಳು ಮತ್ತು ಸೇವೆಗಳನ್ನು ಪಡೆಯಬಹುದು. ಇದರರ್ಥ ಯಾರಾದರೂ ಇನ್ನೂ ಆಧಾರ್ ಸಂಖ್ಯೆಯನ್ನು ಹೊಂದಿಲ್ಲದಿದ್ದರೆ, ಅವರು ಸರ್ಕಾರಿ ಸೇವೆ, ಪ್ರಯೋಜನ ಅಥವಾ ಸಬ್ಸಿಡಿಗಾಗಿ ತಕ್ಷಣವೇ ಆಧಾರ್ ಅನ್ನು ನೋಂದಾಯಿಸಬೇಕಾಗುತ್ತದೆ. ಆಧಾರ್ ಸಂಖ್ಯೆ ಬರುವವರೆಗೆ ನೋಂದಣಿ ಸ್ಲಿಪ್ ತೋರಿಸಿ ಸರ್ಕಾರಿ ಸೇವೆಗಳನ್ನು ಪಡೆಯಬಹುದು.

ಇದನ್ನೂ ಓದಿ:  Voter ID-Aadhaar card link online: ವೋಟರ್ ಐಡಿ-ಆಧಾರ್ ಲಿಂಕ್ ಮಾಡ್ಲೇಬೇಕು; ಸುಲಭ ವಿಧಾನ ಇಲ್ಲಿದೆ

ದೇಶದ 99 ಪ್ರತಿಶತ ವಯಸ್ಕರು ಆಧಾರ್ ಗುರುತನ್ನು ಹೊಂದಿದ್ದಾರೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ, ಇದರಿಂದಾಗಿ ಅನೇಕ ರೀತಿಯ ಸೇವೆಗಳು ಮತ್ತು ಪ್ರಯೋಜನಗಳನ್ನು ನೇರವಾಗಿ ಅವರಿಗೆ ವರ್ಗಾಯಿಸಲಾಗುತ್ತದೆ. ಕಲ್ಯಾಣ ಸೇವೆಗಳನ್ನು ಪಡೆಯುವಲ್ಲಿ ದೇಶದ ನಾಗರಿಕರ ಅನುಭವದ ಗುಣಮಟ್ಟವನ್ನು ಆಧಾರ್ ಹೆಚ್ಚಿಸಿದೆ. ಸರ್ಕಾರದ ಯೋಜನೆಗಳು ಮತ್ತು ಹಗರಣಗಳಲ್ಲಿ ಅಕ್ರಮ ಹಾಗೂ ಸೋರಿಕೆ ತಡೆಗಟ್ಟುವಲ್ಲಿ ಆಧಾರ್ ಸಹಾಯ ಮಾಡಿದೆ.
Published by:Precilla Olivia Dias
First published: