• Home
  • »
  • News
  • »
  • business
  • »
  • Demonetisation: ನೋಟ್​ ಬ್ಯಾನ್​ ಮಾಡಿದ್ದೇಕೆ ಕೇಂದ್ರ ಸರ್ಕಾರ? 6 ವರ್ಷದ ಬಳಿಕ ಬಯಲಾಯ್ತು ನೈಜ ಕಾರಣ

Demonetisation: ನೋಟ್​ ಬ್ಯಾನ್​ ಮಾಡಿದ್ದೇಕೆ ಕೇಂದ್ರ ಸರ್ಕಾರ? 6 ವರ್ಷದ ಬಳಿಕ ಬಯಲಾಯ್ತು ನೈಜ ಕಾರಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ನಲ್ಲಿ, "2016 ರ ನೋಟು ಅಮಾನ್ಯೀಕರಣದ ನಿರ್ಧಾರವು ಚೆನ್ನಾಗಿ ಯೋಚಿಶೀ ತೆಗೆದುಕೊಂಡ ನಿರ್ಧಾರವಾಗಿತ್ತು. ಇದಕ್ಕಾಗಿ ಆರ್‌ಬಿಐ ಜೊತೆ ವ್ಯಾಪಕ ಸಮಾಲೋಚನೆ ಮತ್ತು ಪೂರ್ವ ಸಿದ್ಧತೆಗಳನ್ನು ನಡೆಸಲಾಯಿತು. ಸರ್ಕಾರ ಮತ್ತು ಆರ್‌ಬಿಐ ನಡುವೆ ಮಾತುಕತೆ ಪ್ರಾರಂಭವಾಯಿತು ಎಂದು ತಿಳಿಸಿದೆ.

ಮುಂದೆ ಓದಿ ...
  • Share this:

ನವೆಂಬರ್ 8, 2016 ರಂದು ರಾತ್ರಿ 8 ಗಂಟೆಗೆ ಭಾರತದಲ್ಲಿ ಏಕಾಏಕಿ ನಡೆದ ನೋಟು ಅಮಾನ್ಯೀಕರಣದ (Note Ban) ಘೋಷಣೆ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಆದರೆ ಈ ನಿರ್ಧಾರವನ್ನು ಏಕಾಏಕಿ ತೆಗೆದುಕೊಂಡದ್ದಲ್ಲ, ಅದರ ಹಿಂದೆ ಹಲವು ಕಾರಣಗಳಿದ್ದವು. ಹೀಗಾಗಿಯೇ ಸುದೀರ್ಘ ಚರ್ಚೆಯ ನಂತರ ಅದನ್ನು ಜಾರಿಗೊಳಿಸಲಾಗಿತ್ತು. ನೋಟು ಅಮಾನ್ಯೀಕರಣದ (Demonetisation) ನಿರ್ಧಾರದ ಕುರಿತು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ವಿವರವಾದ ವರದಿ ನೀಡಿದೆ. 2016 ರಲ್ಲಿ ನೋಟು ಅಮಾನ್ಯೀಕರಣಕ್ಕೂ ಎಂಟು ತಿಂಗಳ ಮೊದಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ (Reserve Bank Of India) ಈ ವಿಷಯದ ಬಗ್ಗೆ ತಾವು ಚರ್ಚೆಯನ್ನು ಪ್ರಾರಂಭಿಸಿದ್ದೆವು ಎಂದು ಕೇಂದ್ರ ಸರ್ಕಾರ ತಿಳಿಸಿದೆ.


ಆಗಿನ ಹಣಕಾಸು ಸಚಿವರು ಸಂಸತ್ತಿನಲ್ಲಿ ಮಾತನಾಡುತ್ತಾ “ಇದು ಆರ್‌ಬಿಐನೊಂದಿಗೆ ವ್ಯಾಪಕವಾದ ಸಮಾಲೋಚನೆ ಮತ್ತು ಮುಂಗಡ ಸಿದ್ಧತೆಯ ನಂತರ ತೆಗೆದುಕೊಂಡ ನಿರ್ಧಾರ. ಅಲ್ಲದೇ ಆರ್‌ಬಿಐ ಜೊತೆಗಿನ ಸರ್ಕಾರದ ಸಮಾಲೋಚನೆಗಳು ಫೆಬ್ರವರಿ 2016 ರಲ್ಲಿ ಪ್ರಾರಂಭವಾದವು ಎಂದು ಅಫಿಡವಿಟ್ ಎತ್ತಿ ತೋರಿಸಿದೆ. ಈ ಸಂದರ್ಭದಲ್ಲಿ ಸಮಾಲೋಚನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಗೌಪ್ಯವಾಗಿಡಲಾಗಿತ್ತು ಎಂದಿದ್ದಾರೆ.


ಇದನ್ನೂ ಓದಿ: LIC ಪಾಲಿಸಿದಾರರೇ ಎಚ್ಚರ.. ಇವುಗಳನ್ನು ಮಾಡದಿದ್ದರೆ ಎಲ್ಲಾ ಹಣವನ್ನು ಕಳೆದುಕೊಳ್ಳಬಹುದು ಜೋಕೆ!


ಚೆನ್ನಾಗಿ ಯೋಚಿಸಿ ನೋಟ್​ ಬ್ಯಾನ್ ನಿರ್ಧಾರ ತೆಗೆದುಕೊಳ್ಳಲಾಗಿತ್ತು


‘ಒಟ್ಟು ಕರೆನ್ಸಿ ಮೌಲ್ಯದ ಗಮನಾರ್ಹ ಭಾಗವನ್ನು ಹಿಂಪಡೆಯುವುದು ಪ್ರಜ್ಞಾಪೂರ್ವಕ ನಿರ್ಧಾರ’ ಎಂದು ಕೇಂದ್ರ ಸರ್ಕಾರ ಈ ಅಫಿಡವಿಟ್‌ನಲ್ಲಿ ಹೇಳಿದೆ. ಇದಕ್ಕಾಗಿ 2016ರ ಡಿಸೆಂಬರ್ 1ರಂದು ಸಲ್ಲಿಸಿರುವ ಎರಡು ಅಫಿಡವಿಟ್ ಗಳನ್ನು ಓದಬೇಕು ಎಂದು ಕೇಂದ್ರ ಹೇಳಿದೆ.


ನೋಟು ಅಮಾನ್ಯೀಕರಣದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, 500 ಮತ್ತು 1000 ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವ ಆರ್‌ಬಿಐ ಶಿಫಾರಸು ಮತ್ತು ಅನುಷ್ಠಾನದ ಉದ್ದೇಶಿತ ಕರಡು ಯೋಜನೆಯನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಪ್ರಸ್ತುತ ಇರುವ 500 ಮತ್ತು 1000 ರೂಪಾಯಿ ನೋಟುಗಳ ಕಾನೂನು ಬದ್ಧತೆಯನ್ನು ಹಿಂಪಡೆಯಲು ಆರ್‌ಬಿಐ ಕೇಂದ್ರೀಯ ಮಂಡಳಿಯು ಕೇಂದ್ರ ಸರ್ಕಾರಕ್ಕೆ ನಿರ್ದಿಷ್ಟ ಶಿಫಾರಸು ಮಾಡಿದೆ. ಆರ್‌ಬಿಐ ಶಿಫಾರಸನ್ನು ಜಾರಿಗೆ ತರಲು ಕರಡು ಯೋಜನೆಯನ್ನು ಸಹ ಪ್ರಸ್ತಾಪಿಸಿದೆ. ಇದನ್ನು ಕೇಂದ್ರ ಸರ್ಕಾರ ಸರಿಯಾಗಿ ಪರಿಗಣಿಸಿದೆ ಎನ್ನಲಾಗಿದೆ.


ಸಾಂದರ್ಭಿಕ ಚಿತ್ರ


ಈ ಪ್ರಮುಖ ಸವಾಲುಗಳನ್ನು ಎದುರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ


ಈ ಸಂದರ್ಭದಲ್ಲಿ, ಆರ್ಥ ವ್ಯವಸ್ಥೆಯಲ್ಲಿ ಹಣವನ್ನು ಪೂರೈಸಲು ಪರಿಚಯಿಸಲಾದ ಹೊಸ ಬ್ಯಾಂಕ್ ನೋಟುಗಳ ವಿನ್ಯಾಸ ಮತ್ತು ವಿಶೇಷಣಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಆದ್ದರಿಂದ ಸಿದ್ಧತೆಗಳು ಹೊಸ ವಿನ್ಯಾಸಗಳ ಅಂತಿಮಗೊಳಿಸುವಿಕೆ, ಹೊಸ ವಿನ್ಯಾಸಗಳಿಗೆ ಭದ್ರತಾ ಶಾಯಿ ಮತ್ತು ಮುದ್ರಣ ಫಲಕಗಳ ಅಭಿವೃದ್ಧಿ, ಮುದ್ರಣ ಯಂತ್ರಗಳ ವಿಶೇಷಣಗಳಲ್ಲಿ ಬದಲಾವಣೆ ಮತ್ತು ದೇಶದ ವಿವಿಧ ಭಾಗಗಳಲ್ಲಿ RBI ಶಾಖೆಗಳೊಂದಿಗೆ ಸ್ಟಾಕ್ ಅನ್ನು ಒದಗಿಸುವುದು ಸೇರಿವೆ ಎಂದೂ ಉಲ್ಲೇಖಿಸಲಾಗಿದೆ.

ಐದು ವರ್ಷಗಳಲ್ಲಿ 500 ಮತ್ತು 100 ರೂಪಾಯಿಗಳ ನೋಟುಗಳ ಚಲಾವಣೆಯಲ್ಲಿ ಭಾರಿ ಹೆಚ್ಚಳ


ಆರ್‌ಬಿಐ ಅಂಕಿಅಂಶಗಳನ್ನು ಉಲ್ಲೇಖಿಸಿ, ಕಳೆದ ಐದು ವರ್ಷಗಳಲ್ಲಿ 500 ಮತ್ತು 100 ರೂಪಾಯಿಗಳ ನೋಟುಗಳ ಚಲಾವಣೆಯಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ಸರ್ಕಾರ ಅಫಿಡವಿಟ್‌ನಲ್ಲಿ ತಿಳಿಸಿದೆ. "ಎರಡು ಅತ್ಯಧಿಕ ಮುಖಬೆಲೆಗಳು, ಅಂದರೆ ರೂ 500 ಗೆ 76.4% ಮತ್ತು ರೂ 1,000 ಗೆ 109%, 2010-11 ರಿಂದ 2015-1 ರವರೆಗೆ ಭಾರಿ ಏರಿಕೆ ಕಂಡಿದೆ." 500 ಮತ್ತು 1,000 ರೂಪಾಯಿ ನೋಟುಗಳನ್ನು ಕಾನೂನು ಬದ್ಧವಾಗಿ ಹಿಂತೆಗೆದುಕೊಳ್ಳುವ ಮೂಲಕ ಕಪ್ಪು ಹಣ, ನಕಲಿ ಮತ್ತು ಅಕ್ರಮ ಹಣಕಾಸನ್ನು ಎದುರಿಸಲು ಹೊಸ ಸರಣಿಯ ನೋಟುಗಳನ್ನು ಪರಿಚಯಿಸಲು ಸರ್ಕಾರ ಮತ್ತು ಆರ್‌ಬಿಐ ಏಕಕಾಲದಲ್ಲಿ ಯೋಚಿಸಿದೆ ಎಂದಿದೆ.

Published by:Precilla Olivia Dias
First published: