• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Scrappage Policy: ಇನ್ಮುಂದೆ 10 ವರ್ಷ ಹಳೆಯ ವಾಹನಗಳಿದ್ರೆ ಸ್ಕ್ರ್ಯಾಪ್​ಗೆ ಹಾಕ್ಬೇಕಂತೆ, ಸಾರಿಗೆ ಇಲಾಖೆ ಕೊಟ್ಟ ಸ್ಪಷ್ಟನೆ ಇದು!

Scrappage Policy: ಇನ್ಮುಂದೆ 10 ವರ್ಷ ಹಳೆಯ ವಾಹನಗಳಿದ್ರೆ ಸ್ಕ್ರ್ಯಾಪ್​ಗೆ ಹಾಕ್ಬೇಕಂತೆ, ಸಾರಿಗೆ ಇಲಾಖೆ ಕೊಟ್ಟ ಸ್ಪಷ್ಟನೆ ಇದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಸಾರಿಗೆ ಮತ್ತು ಸಾರಿಗೆಯೇತರ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಸ್ವಯಂಪ್ರೇರಿತ ವಾಹನ ಫ್ಲೀಟ್ ಆಧುನೀಕರಣ ಕಾರ್ಯಕ್ರಮ ಅಥವಾ ಸ್ಕ್ರ್ಯಾಪ್‌ಪೇಜ್ ನೀತಿಯನ್ನು ರೂಪಿಸಿದೆ.

  • Share this:

ರಸ್ತೆಗಳಲ್ಲಿ ಹಳೆಯ ವಾಹನಗಳಿಂದಾಗಿ (Old Vehicals) ಅನೇಕ ಅಪಘಾತಗಳು (Accident) ಸಂಭವಿಸುತ್ತಿವೆ. ಅನೇಕ ಘಟನೆಗಳಲ್ಲಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆ ಸುರಕ್ಷತೆಯನ್ನು (Road Safety) ಖಚಿತಪಡಿಸಿಕೊಳ್ಳಲು, ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಆಗಸ್ಟ್ 2021 ರಲ್ಲಿ ವಾಹನ ಸ್ಕ್ರ್ಯಾಪೇಜ್ ನೀತಿಯನ್ನು (Scrappage Policy)  ಘೋಷಿಸಿದ್ದರು. ರಸ್ತೆಗಳಲ್ಲಿ ಫಿಟ್ ವಾಹನಗಳು (Fit Vehicals) ಮಾತ್ರ ಚಲಿಸಬೇಕು ಅನ್ನೋದು ಅವರ ಗುರಿಯಾಗಿತ್ತು. ಆದರೆ ಈ ರೂಲ್ಸ್​ನ ಯಾರೂ ಕೂಡ ಫಾಲೋ ಮಾಡ್ತಿಲ್ಲ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಸಾರಿಗೆ ಮತ್ತು ಸಾರಿಗೆಯೇತರ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಸ್ವಯಂಪ್ರೇರಿತ ವಾಹನ ಫ್ಲೀಟ್ ಆಧುನೀಕರಣ ಕಾರ್ಯಕ್ರಮ ಅಥವಾ ಸ್ಕ್ರ್ಯಾಪ್‌ಪೇಜ್ ನೀತಿಯನ್ನು ರೂಪಿಸಿದೆ.


ವೈರಲ್ ಆಗಿದ್ದ ಸುದ್ದಿಯಲ್ಲಿ ಏನಿದೆ?


ಈ ನಿಟ್ಟಿನಲ್ಲಿ ವಿವಿಧ ವಾಹನಗಳ ನಿಯಮಗಳ ಬಗ್ಗೆ ವದಂತಿಗಳಿವೆ. ಅದರಲ್ಲೂ ಹತ್ತು ವರ್ಷಕ್ಕಿಂತ ಹಳೆಯ ಟ್ರ್ಯಾಕ್ಟರ್ ಗಳಿಗೆ ಪರ್ಮಿಟ್ ರದ್ದಾಗಲಿದೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಆದರೆ ಇದು ನಿಜವಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸ್ಪಷ್ಟಪಡಿಸಿದೆ.


ಟ್ರ್ಯಾಕ್ಟರ್​ ಸ್ರ್ಕ್ಯಾಪ್​ ಮಾಡ್ಬೇಕು ಅನ್ನೋ ಸುದ್ದಿ ವೈರಲ್!


10 ವರ್ಷಗಳ ನಂತರ ಟ್ರ್ಯಾಕ್ಟರ್‌ಗಳನ್ನು ಸ್ಕ್ರ್ಯಾಪ್ ಮಾಡಬೇಕು ಅಂತ ಟ್ವಿಟ್ಟರ್​, ವಾಟ್ಸಪ್​ ಸೇರಿದಂತೆ ಸಾಮಾಜಿಕ ಮಾದ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದರೆ ಈ ಸುದ್ದಿ   ನಿಜವಲ್ಲ. ಇದನ್ನು ನಂಬಬೇಡಿ ಎಂದು  ಸಂಬಂಧಪಟ್ಟ ಸಚಿವಾಲಯ ಸ್ಪಷ್ಟಪಡಿಸಿದೆ. ಸುಳ್ಳು ಮಾಹಿತಿ ಹರಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದೆ.


ವಾಹನ ಫಿಟ್ ಇರೋವರೆಗೂ ಟೆನ್ಶನ್​ ಮಾಡ್ಕೋಬೇಡಿ!


ಸ್ಕ್ರ್ಯಾಪೇಜ್ ನೀತಿಯ ಅಡಿಯಲ್ಲಿ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಯಾವುದೇ ಕಡ್ಡಾಯ ವಯಸ್ಸಿನ ಮಿತಿ ಇಲ್ಲ. ಸ್ವಯಂಚಾಲಿತ ಪರೀಕ್ಷಾ ಕೇಂದ್ರದಿಂದ ಪರೀಕ್ಷೆಯ ನಂತರವಾಹನ ಫಿಟ್ ಆಗುವವರೆಗೆ ರಸ್ತೆಯಲ್ಲಿ ಓಡಿಸಬಹುದು. 15 ವರ್ಷಗಳ ನಂತರ ಕಾರುಗಳ ಫಿಟ್ನೆಸ್ ಪರೀಕ್ಷಿಸಲು ನಿರ್ಧರಿಸಲಾಗಿದೆ. ಟ್ರಾಕ್ಟರ್ ಅಥವಾ ಸಾರಿಗೆಯೇತರ ವಾಹನಗಳ ವಿಷಯದಲ್ಲಿ ಅಂತಹ ಕಾಳಜಿ ಅಗತ್ಯವಿಲ್ಲ.


ಯಾವುದೇ ವಾಹನಕ್ಕೆ ಈ ಸ್ಕ್ರ್ಯಾಪಿಂಗ್ ವಯಸ್ಸನ್ನು ನಿಗದಿಪಡಿಸಿಲ್ಲ.


ಕೃಷಿ ಟ್ರ್ಯಾಕ್ಟರ್ ಸಾರಿಗೆ ರಹಿತ ವಾಹನವಾಗಿದೆ. ಟ್ರಾಕ್ಟರ್ ಖರೀದಿಯ ಸಮಯದಲ್ಲಿ 15 ವರ್ಷಗಳವರೆಗೆ ನೋಂದಾಯಿಸಲಾಗಿದೆ. 15 ವರ್ಷಗಳ ಆರಂಭಿಕ ನೋಂದಣಿ ಅವಧಿಯನ್ನು ಪೂರ್ಣಗೊಳಿಸಿದ ನಂತರ, ಅದರ ನೋಂದಣಿಯನ್ನು ಒಮ್ಮೆಗೆ ಐದು ವರ್ಷಗಳವರೆಗೆ ನವೀಕರಿಸಬಹುದು.


ಇದನ್ನೂ ಓದಿ: 2025 ರವರೆಗೆ ಯಾವುದೇ ಎಲೆಕ್ಟ್ರಿಕ್​ ವಾಹನ ಖರೀದಿಸಿದ್ರೂ ತೆರಿಗೆ ಇಲ್ಲ, ನೋಂದಣಿ ಉಚಿತ! ರಾಜ್ಯ ಸರ್ಕಾರದ ಪ್ರಮುಖ ನಿರ್ಧಾರ


ವಾಸ್ತವವಾಗಿ ಭಾರತ ಸರ್ಕಾರವು 16ನೇ ಜನವರಿ 2023 ರಂದು ಹೊರಡಿಸಲಾದ ಅಧಿಸೂಚನೆ GSR29(E) ನಲ್ಲಿ ಉಲ್ಲೇಖಿಸಲಾದ ಕೆಲವು ಸರ್ಕಾರಿ ವಾಹನಗಳನ್ನು ಹೊರತುಪಡಿಸಿ ಯಾವುದೇ ವಾಹನಕ್ಕೆ ಈ ಸ್ಕ್ರ್ಯಾಪಿಂಗ್ ವಯಸ್ಸನ್ನು ನಿಗದಿಪಡಿಸಿಲ್ಲ.


ಒಂದೊಂದು ರಾಜ್ಯದಲ್ಲಿ ಒಂದೊಂದು ರೂಲ್ಸ್​!


ಕೇಂದ್ರ ಸರ್ಕಾರದಿಂದ ಕಾರುಗಳ ಸ್ಕ್ರ್ಯಾಪೇಜ್ ನೀತಿಯನ್ನು ಹೊರಡಿಸಲಾಗಿದ್ದರೂ, ಮಾಲೀಕರಿಗೆ ಪ್ರಯೋಜನಗಳು ಸ್ಪಷ್ಟವಾಗಿಲ್ಲ. ಆದಾಗ್ಯೂ ಉತ್ತರ ಪ್ರದೇಶ ರಾಜ್ಯ ಸರ್ಕಾರ ತನ್ನದೇ ಆದ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರವು 15 ವರ್ಷ ಹಳೆಯ ವಾಹನಗಳಿಗೆ ತೆರಿಗೆ ಮತ್ತು ದಂಡದಲ್ಲಿ ಶೇ 50 ರಷ್ಟು ರಿಯಾಯಿತಿ ಮತ್ತು 20 ವರ್ಷ ಹಳೆಯ ವಾಹನಗಳಿಗೆ 75 ರಷ್ಟು ರಿಯಾಯಿತಿ ನೀಡುತ್ತಿದೆ.


ಹೀಗಾಗಿ, ಕೆಲವು ರಾಜ್ಯಗಳು ಸ್ಕ್ರ್ಯಾಪೇಜ್ ವ್ಯವಸ್ಥೆಯನ್ನು ಉತ್ತೇಜಿಸಲು ವಿವಿಧ ಪ್ರೋತ್ಸಾಹಕಗಳನ್ನು ಘೋಷಿಸುತ್ತಿವೆ.

Published by:ವಾಸುದೇವ್ ಎಂ
First published: