Indian Economy: 7-8 ವರ್ಷಗಳಲ್ಲಿ ಭಾರತದ ಆರ್ಥಿಕತೆ ದ್ವಿಗುಣ! ಇದು ಓದಲೇಬೇಕಾದ ಒಳ್ಳೇ ಸುದ್ದಿ

ಈ ಹಿಂದೆ 8.5% ಬೆಳವಣಿಗೆ ದರವನ್ನು ದೀರ್ಘಕಾಲ ಕಾಯ್ದುಕೊಂಡಿತ್ತು. ಇದೇ ರೀತಿ ಈಗಲೂ 8 ಪ್ರತಿಶತ ಆರ್ಥಿಕ ಬೆಳವಣಿಗೆಯ ದರವನ್ನು ಕಾಯ್ದುಕೊಂಡರೆ ಒಳಿತು ನೀತಿ ಆಯೋಗದ ಉಪಾಧ್ಯಕ್ಷ  ರಾಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಹಣ

ಹಣ

  • Share this:
    ಭಾರತದ ಆರ್ಥಿಕತೆಯು 8% ರಷ್ಟು ಬೆಳವಣಿಗೆಯಾದರೆ ಮುಂದಿನ 7ರಿಂದ 8 ವರ್ಷಗಳಲ್ಲಿ ದೇಶದ ಆರ್ಥಿಕತೆ ಎರಡು ಪಟ್ಟು ಹೆಚ್ಚಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ನೀತಿ ಆಯೋಗದ ಉಪಾಧ್ಯಕ್ಷ  (NITI Ayog VC Rajiv Kumar) ರಾಜೀವ್ ಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ. ಈಮೂಲಕ ಅವರು ದೇಶದ ಆರ್ಥಿಕತೆಯ ಕುರಿತು ಧನಾತ್ಮಕ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಆರ್ಥಿಕತೆಯು 7-8 ವರ್ಷಗಳಲ್ಲಿ ದ್ವಿಗುಣಗೊಳ್ಳಬಹುದು. ದೇಶದ ಆರ್ಥಿಕತೆಯು (India's Economy) ಈ ಹಿಂದೆ 8.5% ಬೆಳವಣಿಗೆ ದರವನ್ನು ದೀರ್ಘಕಾಲ ಕಾಯ್ದುಕೊಂಡಿತ್ತು. ಇದೇ ರೀತಿ ಈಗಲೂ 8 ಪ್ರತಿಶತ ಆರ್ಥಿಕ ಬೆಳವಣಿಗೆಯ ದರವನ್ನು ಕಾಯ್ದುಕೊಂಡರೆ ಒಳಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಉಕ್ರೇನ್‌ನಲ್ಲಿ ಸಾಂಕ್ರಾಮಿಕ ರೋಗ ಕೋವಿಡ್ 19ರ ನಾಲ್ಕನೇ ಅಲೆ ಬರದಿದ್ದರೆ ಭಾರತವು ಶೇಕಡಾ 8ರಷ್ಟು ವೇಗದಲ್ಲಿ ಆರ್ಥಿಕ ಬೆಳವಣಿಗೆಯನ್ನು ಹೊಂದಬಹುದು. ಅಲ್ಲದೇ ಯಾವುದೇ ಇತರ ವಿಪತ್ತು ಸಹ ಭಾರತಕ್ಕೆ ಎದುರಾಗದಿದ್ದರೆ ಮಾತ್ರ ಈ ಸಾಧನೆ ಮಾಡುವುದು ಸಾಧ್ಯವಾಗಲಿದೆ. ನಾವು ಈಹಿಂದೆಯೂ ಇಂತಹ ಆರ್ಥಿಕ ಬೆಳವಣಿಗೆನ್ನು ದೀರ್ಘಕಾಲ ಮಾಡಿದ್ದೇವೆ. ಹಿಂದೆ 8.5 ಶೇಕಡಾ ಆರ್ಥಿಕ ಬೆಳವಣಿಯನ್ನು ದೀರ್ಘಕಾಲ ಮಾಡಿದ್ದ ನಮಗೆ ಈಗಲೂ ಇದನ್ನು ಸಾಧ್ಯವಾಗಿಸುವ ಶಕ್ತಿ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    USD 5-ಟ್ರಿಲಿಯನ್ ಆರ್ಥಿಕತೆಯ ಗುರಿಯು ಕೇವಲ ಮಾತಿನಲ್ಲಿ ಮಾಡಿ ತೋರಿಸುವ ಸಾಧನೆಯಲ್ಲ. ಅಥವಾ ಬಾಯ್ಮಾತಿನ ಹೇಳಿಕೆಯೂ ಅಲ್ಲ. ದೇಶವು ಈಗಾಗಲೇ USD 2.7 ಟ್ರಿಲಿಯನ್ ಆರ್ಥಿಕತೆಯನ್ನು ಹೊಂದಿದೆ. ಜೊತೆಗೆ ಅದನ್ನು ಆದಷ್ಟು ಬೇಗ ದ್ವಿಗುಣಗೊಳಿಸಬೇಕಾದ ಸವಾಲು ನಮ್ಮ ಮುಂದಿದೆ  ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: PM Kisan: 2 ಸಾವಿರ ನಿಮ್ಮ ಖಾತೆಗೆ ಬರಲಿದೆಯೇ ತಿಳಿಯಲು ಒಂದೇ ಒಂದು ಫೋನ್ ಕಾಲ್ ಮಾಡಿ! ನಂಬರ್ ಇಲ್ಲಿದೆ

    2003 ಮತ್ತು 2011 ರ ನಡುವೆ ಭಾರತವು 8.5 ಪ್ರತಿಶತದಷ್ಟು ಬೆಳವಣಿಗೆಯ ದರವನ್ನು ಕಾಯ್ದುಕೊಂಡಿರುವುದನ್ನು ಸಂದರ್ಭದಲ್ಲಿ 8 ಪ್ರತಿಶತ ಬೆಳವಣಿಗೆಯನ್ನು ಸಾಧಿಸಬೇಕಾದ ಏಕೈಕ ದೇಶ ಭಾರತವಾಗಿದೆ ಎಂಬ ಅಂಶವನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

    QR Code Scan ಮಾಡುವಾಗ ಹುಷಾರ್! ನಿಮ್ಮ ಹಣಕ್ಕೆ ಕನ್ನ ಬೀಳದಿರಲು ಹೀಗೆ ಮಾಡಿ
    ಹಣ ಪಾವತಿ ಮತ್ತು ವರ್ಗಾವಣೆಯಲ್ಲಿ ಡಿಜಿಟಲೀಕರಣ (Online Payment) ಹೆಚ್ಚುತ್ತಿದ್ದಂತೆ ಆನ್‌ಲೈನ್ ವಂಚನೆ (Online Fraud) ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಖಾತೆದಾರರ ಪಿನ್ ಕೋಡ್‌ಗಳನ್ನು ಕೆಲವೊಮ್ಮೆ SMS ಮೂಲಕ ಮತ್ತು ಕೆಲವೊಮ್ಮೆ ಬ್ಯಾಂಕ್‌ನ ಹೆಸರನ್ನು ಬಳಸಿಕೊಂಡು ಕರೆಗಳ ಮೂಲಕ ಪಡೆದು ಮೋಸ ಮಾಡುವ ಹಲವು ಪ್ರಕರಣಗಳು ಈಗಾಗಲೇ ವರದಿಯಾಗಿದೆ.

    ಕಳೆದ ಕೆಲವು ದಿನಗಳಿಂದ ಅಪರಾಧಿಗಳು ಕ್ಯೂಆರ್ ಕೋಡ್ ಬಳಸಿಯೂ ವಂಚನೆ ಎಸಗುತ್ತಿದ್ದಾರೆ ಎಂದು ವರದಿಯಾಗಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ (QR Code scam) ಮಾಡಿದ ನಂತರ ಲಾಟರಿ ಅಥವಾ ಬಹುಮಾನ ಪಡೆಯುವ ಆಮಿಷ ತೋರಿಸಿ ವಂಚನೆ ಮಾಡಲಾಗುತ್ತಿದೆ. QR ಕೋಡ್ ವಂಚನೆಯ ಹಿನ್ನೆಲೆಯಲ್ಲಿ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎಚ್ಚರಿಕೆ ನೀಡಿದೆ.

    ಇದನ್ನೂ ಓದಿ: Moneycontrol ಈಗ ನಂಬರ್ 1 ಹಣಕಾಸು ಸುದ್ದಿ ವೇದಿಕೆ! Economic Times ಹಿಂದಿಕ್ಕಿ ಈ ಸಾಧನೆ

    .ಈಮೂಲಕ ದೇಶದ ಎಲ್ಲಾ ಬ್ಯಾಂಕ್ ಖಾತೆದಾರರನ್ನು ಎಚ್ಚರಿಸಿದೆ. ಗುರುವಾರ (ಮಾರ್ಚ್ 24, 2022), ಎಸ್‌ಬಿಐ ಈ ನಿಟ್ಟಿನಲ್ಲಿ ಟ್ವೀಟ್ ಮಾಡಿದೆ. ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ನಾಗರಿಕರಿಗೆ ಶಿಕ್ಷಣ ನೀಡಲು ಎಸ್‌ಬಿಐ 'ಆಜಾದಿ ಕಾ ಅಮೃತ್ ಮಹೋತ್ಸವ' ಅಡಿಯಲ್ಲಿ ಅಭಿಯಾನವನ್ನು ಪ್ರಾರಂಭಿಸಿದೆ. ಅಭಿಯಾನದ ಭಾಗವಾಗಿ, ಎಸ್‌ಬಿಐ ಗುರುವಾರ ಟ್ವೀಟ್ ಮಾಡಿದೆ.
    Published by:guruganesh bhat
    First published: