ಮುಂಬೈ(ಜ.20): ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಮಾಲೀಕ ಮುಖೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ (Nita Ambani) ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮುಕೇಶ್ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani) ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ನಿನ್ನೆ ಅಂದರೆ ಜನವರಿ 19 ರಂದು ಉದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಜೊತೆ ಅನಂತ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರ ನಿಶ್ಚಿತಾರ್ಥದ ಹಲವು ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ. ಸದ್ಯ ಈ ನಿಶ್ಚಿತಾರ್ಥದಲ್ಲಿ ಮುಕೇಶ್ ಅಂಬಾನಿ ತನ್ನ ಪತ್ನಿ ಹಾಗೂ ಕುಟುಂಬ ಸದಸ್ಯರೊಡಗೂಡಿ ಮಾಡಿರುವ ಡಾನ್ಸ್ ವೈರಲ್ ಆಗಿದೆ.
ಅನಂತ್-ರಾಧಿಕಾ ನಿಶ್ಚಿತಾರ್ಥದಲ್ಲಿ ಸ್ಟೆಪ್ಸ್ ಹಾಕಿದ ಅಂಬಾನಿ ಕುಟುಂಬ
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಗುರುವಾರ ಅಂಬಾನಿ ಹೌಸ್ ಆಂಟಿಲಿಯಾದಲ್ಲಿ ಬಹಳ ಸಂಭ್ರಮದಿಂದ ನಿಶ್ಚಿತಾರ್ಥ ಮಾಡಿಕೊಂಡರು. ಇದೀಗ ಎಂಗೇಜ್ ಮೆಂಟ್ ನ ಇನ್ ಸೈಡ್ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಇಡೀ ಅಂಬಾನಿ ಕುಟುಂಬ ತಮ್ಮ ಕಿರಿಯ ಸೊಸೆಯನ್ನು ಸ್ವಾಗತಿಸಿ ನೃತ್ಯ ಮಾಡುವುದನ್ನು ನೋಡಬಹುದು.
ಇದನ್ನೂ ಓದಿ: Anant Ambani-Radhika Merchant: ರಾಧಿಕಾ ಜೊತೆ ಅನಂತ್ ಅಂಬಾನಿ ಎಂಗೇಜ್, ಅದ್ಧೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಗಣ್ಯರು
#WATCH | The Ambani family dances at the ring ceremony of Anant Ambani and Radhika Merchant
The engagement ceremony was held at Mukesh Ambani's Mumbai residence 'Antilla' yesterday pic.twitter.com/mmNsI9fzkc
— ANI (@ANI) January 20, 2023
.
ಇದನ್ನೂ ಓದಿ: Anant Ambani-Radhika Merchant Engagement: ಅನಂತ್ ಅಂಬಾನಿ-ರಾಧಿಕಾ ಎಂಗೇಜ್ಮೆಂಟ್, ಅದ್ದೂರಿ ಸಮಾರಂಭದ ಕಲರ್ಫುಲ್ ಫೋಟೋಸ್
ಅದ್ಧೂರಿಯಾಗಿ ನಡೆದ ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥ
ನಿಶ್ಚಿತಾರ್ಥದ ಮತ್ತೊಂದು ವಿಡಿಯೋ ಹೊರಬಿದ್ದಿದ್ದು, ಈ ವಿಡಿಯೋದಲ್ಲಿ ಅನಂತ್ ಮತ್ತು ರಾಧಿಕಾ ವೇದಿಕೆ ಮೇಲೆ ನಿಂತಿದ್ದು, ಅವರ ಸಾಕುನಾಯಿ ಓಡಿ ಬಂದು ಈ ಜೋಡಿಗೆ ರಿಂಗ್ ನೀಡಿದೆ. ಇದಾದ ನಂತರ, ನವಜೋಡಿಗಳೊಂದಿಗೆ ನಿಶ್ಚಿತಾರ್ಥದಲ್ಲಿ ಹಾಜರಿದ್ದ ಎಲ್ಲಾ ಜನರೂ 'ದೇವ ದೇವ' ಹಾಡಿಗೆ ಹೆಜ್ಜೆ ಹಾಕಿದ್ದಾರೆ.
View this post on Instagram
ಈ ಸರ್ಪ್ರೈಜ್ ಕಂಡು ವೇದಿಕೆಯಲ್ಲಿದ್ದ ಅನಂತ್ ಮತ್ತು ರಾಧಿಕಾ ಮುಖದಲ್ಲಿ ಖುಷಿ ಮನೆ ಮಾಡಿದೆ. ಈ ಎರಡೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಲೈಕ್ ಪಡೆಯುತ್ತಿವೆ. ಎಲ್ಲರೂ ಕಾಮೆಂಟ್ ಮಾಡುವ ಮೂಲಕ ನವ ಜೋಡಿಗೆ ಶುಭ ಕೋರುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ