ನವದೆಹಲಿ(ಫೆ.03): ಕೊರೊನಾದಂತಹ ಜಾಗತಿಕ ಅನಿಶ್ಚಿತತೆಯ ಹೊರತಾಗಿಯೂ ನಾವು ಆರ್ಥಿಕ ಸುಧಾರಣೆಗಳನ್ನು ಮುಂದುವರೆಸಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಶುಕ್ರವಾರ ಹೇಳಿದ್ದಾರೆ. ಅಲ್ಲದೇ ದೇಶದ ಆರ್ಥಿಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ (Prime Minister Narendra Modi) ನಿರಂತರ ಚರ್ಚೆ ನಡೆಸಲಾಗುತ್ತಿದೆ ಎಂದೂ ಅವರು ಉಲ್ಲೇಖಿಸಿದ್ದಾರೆ. ನ್ಯೂಸ್ 18 ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 'ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ನನ್ನ ಮುಂದೆ ಯಾವುದೇ ಪೂರ್ವನಿದರ್ಶನ ಇರಲಿಲ್ಲ. ಹಿಂದೆ ಕೈಗೊಂಡ ಅಂತಹ ಯೋಜನಗೆಗಳ ಯಾವುದೇ ಉದಾಹರಣೆ ಇರಲಿಲ್ಲ. ಸಾಂಕ್ರಾಮಿಕ ರೋಗದ ನಂತರ, ನಾವು ಎಲ್ಲಾ ಹಿತಚಿಂತಕರ ಜೊತೆ ಮಾತುಕತೆ ನಡೆಸಿದೆವು. ಪ್ರಧಾನಿ ಮೋದಿಯೇ ಈ ಮಾತುಕತೆಯ ನೇತೃತ್ವ ವಹಿಸಿದ್ದರು. ಈ ನಡುವೆ ಅವರು ನಮ್ಮೊಂದಿಗೆಯೂ ಈ ಬಗ್ಗೆ ಚರ್ಚಿಸುತ್ತಿದ್ದರು ಎಂದಿದ್ದಾರೆ.
ಇದನ್ನೂ ಓದಿ: Budget 2023: ಸರ್ಕಾರಕ್ಕೆ ಹಣ ಎಲ್ಲಿಂದ ಬರುತ್ತದೆ, ಎಲ್ಲೆಲ್ಲಿ ಖರ್ಚು ಮಾಡುತ್ತದೆ? ಇಲ್ಲಿದೆ ಒಂದೊಂದು ಪೈಸೆಯ ಲೆಕ್ಕಾಚಾರ!
2023 ರ ಬಜೆಟ್‌ನಿಂದ ನಿರೀಕ್ಷಿತ ಪ್ರಮುಖ ಫಲಿತಾಂಶಗಳ ಸಿಎನ್‌ಎನ್-ನ್ಯೂಸ್ 18 ಜೊತೆ ಪ್ರತ್ಯೇಕವಾಗಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ , 'ವಿದೇಶದಿಂದ ಬರುವ ಜನರೊಂದಿಗೆ ಪ್ರವಾಸೋದ್ಯಮದಲ್ಲಿ ಗಮನಾರ್ಹ ಬದಲಾವಣೆಯನ್ನು ನಾನು ನಿರೀಕ್ಷಿಸುತ್ತೇನೆ. ಆರ್ಥಿಕತೆಯನ್ನು ಸಕ್ರಿಯವಾಗಿಡಲು ಇದು ಉತ್ತಮ ಮಾರ್ಗವಾಗಿದೆ ಎಂದಿದ್ದಾರೆ. ಅಲ್ಲದೇ, ಪಿಎಂ-ವಿಕಾಸ್ ಯೋಜನೆ ಮೇಲೆ ನನಗೆ ಬಹಳಷ್ಟು ಭರವಸೆ ಇದೆ. ಯಾಕೆಂದರೆ ಅದು ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಇದನ್ನು ಪ್ರಾರಂಭಿಸುವ ಮೂಲಕ, ನಾವು ಹೆಚ್ಚಿನ ಸಂಖ್ಯೆಯ ಜನರನ್ನು ತಲುಪಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: Budget 2023: ಬಡವರಿಗೆ ಸರ್ಕಾರದ ಗಿಫ್ಟ್, ಉಚಿತ ಆಹಾರ ಧಾನ್ಯಕ್ಕೆ 2 ಲಕ್ಷ ಕೋಟಿ ಮೀಸಲು, ಸಂಪೂರ್ಣ ವೆಚ್ಚ ಇನ್ನು ಕೇಂದ್ರದ್ದೇ!
ಇದೇ ವೇಳೆ 'ಬಜೆಟ್‌ಗೂ ಮುನ್ನ ಎಲ್ಲರ ಅಭಿಪ್ರಾಯ ತೆಗೆದುಕೊಳ್ಳಲಾಗಿದೆ. ಆರ್ಥಿಕ ನಷ್ಟದ ಕುರಿತು ರಾಜ್ಯಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಬಜೆಟ್‌ನಲ್ಲಿ ಎಲ್ಲರ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದೂ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. 2025-26ನೇ ಹಣಕಾಸು ವರ್ಷದ ವೇಳೆಗೆ ವಿತ್ತೀಯ ಕೊರತೆಯನ್ನು ಶೇ.4.5ಕ್ಕಿಂತ ಕೆಳಕ್ಕೆ ಇಳಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಹೇಳಿದ್ದರು. ಬಜೆಟ್‌ನಲ್ಲಿ ಮುಂದಿನ ಹಣಕಾಸು ವರ್ಷದ ತೆರಿಗೆ ಸ್ವೀಕೃತಿಯನ್ನು 23.3 ಲಕ್ಷ ಕೋಟಿ ರೂ.ಗಳಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದರು. ಇದರ ಹೊರತಾಗಿ, ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 3.5 ಪ್ರತಿಶತದಷ್ಟು ವಿತ್ತೀಯ ಕೊರತೆ ರಾಜ್ಯಗಳಿಗೆ ತಗುಲುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ