• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • FM Nirmala Sitharaman Interview: ಕರ್ನಾಟಕ ಸಂಗೀತ ಕೇಳಿ ಒತ್ತಡ ನಿವಾರಿಸಿಕೊಳ್ಳುವೆ! ನ್ಯೂಸ್18 ಸಂದರ್ಶನದಲ್ಲಿ ನಿರ್ಮಲಾ ಸೀತಾರಾಮನ್ ಮಾತು

FM Nirmala Sitharaman Interview: ಕರ್ನಾಟಕ ಸಂಗೀತ ಕೇಳಿ ಒತ್ತಡ ನಿವಾರಿಸಿಕೊಳ್ಳುವೆ! ನ್ಯೂಸ್18 ಸಂದರ್ಶನದಲ್ಲಿ ನಿರ್ಮಲಾ ಸೀತಾರಾಮನ್ ಮಾತು

ನಿರ್ಮಲಾ ಸೀತಾರಾಮನ್ ಎಕ್ಸ್‌ಕ್ಲೂಸಿವ್ ಸಂದರ್ಶನ

ನಿರ್ಮಲಾ ಸೀತಾರಾಮನ್ ಎಕ್ಸ್‌ಕ್ಲೂಸಿವ್ ಸಂದರ್ಶನ

ನ್ಯೂಸ್ 18ನ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ (News18 Exclusive Interview) ನೆಟ್‌ವರ್ಕ್ 18ನ ಗ್ರೂಪ್ ಎಡಿಟರ್-ಇನ್-ಚೀಫ್ ರಾಹುಲ್ ಜೋಶಿ ಅವರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಬಜೆಟ್ ಕುರಿತಂತೆ ಹಲವು ಮಹತ್ವದ ಮಾಹಿತಿ ಬಚ್ಚಿಟ್ಟಿದ್ದಾರೆ.

  • News18 Kannada
  • 3-MIN READ
  • Last Updated :
  • Mumbai, India
  • Share this:

2023-24ರ ಬಜೆಟ್ ಮಂಡಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Union Finance Minister Nirmala Sitharaman), ಇದೀಗ ಬಜೆಟ್‌ (Budget 2023) ಕುರಿತಂತೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನ್ಯೂಸ್ 18ನ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ (News18 Exclusive Interview) ನೆಟ್‌ವರ್ಕ್ 18ನ ಗ್ರೂಪ್ ಎಡಿಟರ್-ಇನ್-ಚೀಫ್ ರಾಹುಲ್ ಜೋಶಿ ಅವರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಬಜೆಟ್ ಕುರಿತಂತೆ ಹಲವು ಮಹತ್ವದ ಮಾಹಿತಿ ಬಚ್ಚಿಟ್ಟಿದ್ದಾರೆ. “ಬಜೆಟ್‌ನಂತಹ ಮಹತ್ವದ ಕೆಲಸದಲ್ಲಿ ತೊಡಗಿದ್ದು, ಒತ್ತಡಕ್ಕ ಒಳಗಾಗದೇ ಕೆಲಸ ಮಾಡಿದ್ದೇನೆ ಅಂತ ತಿಳಿಸಿರುವ ನಿರ್ಮಲಾ ಸೀತಾರಾಮನ್, ನಾನು ನನ್ನ ಒತ್ತಡ ನಿವಾರಣೆಗಾಗಿ ಕರ್ನಾಟಕ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಕೇಳುತ್ತೇನೆ” ಎಂದಿದ್ದಾರೆ.


“ಒತ್ತಡ ನಿವಾರಣೆಗಾಗಿ ಕರ್ನಾಟಕ ಸಂಗೀತ ಕೇಳುತ್ತೇನೆ”


ನ್ಯೂಸ್‌18ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಕರ್ನಾಟಕ ಸಂಗೀತ, ಶಾಸ್ತ್ರೀಯ ಸಂಗೀತ ಮತ್ತು ಸೌಂಡ್ ಸ್ಲೀಪ್ ಬಗ್ಗೆ ಮಾತನಾಡಿದ್ದಾರೆ. "ನಾನು ಮುಖ್ಯವಾಗಿ ಶಾಸ್ತ್ರೀಯ ಮತ್ತು ಕರ್ನಾಟಕ ಸಂಗೀತವನ್ನು ಕೇಳುತ್ತೇನೆ. ಆ ಮೂಲಕವೇ ಒತ್ತಡದ ಕೆಲಸದ ಮಧ್ಯೆಯೂ ಉತ್ತಮ ನಿದ್ರೆ ಮಾಡಲು ಸಹಾಯವಾಗಿದೆ ಅಂತ ಹೇಳಿದ್ದಾರೆ.




“ಸರ್ಕಾರದ ನಿರ್ಧಾರಕ್ಕೆ ಜನರು ಬೆಂಬಲ ಸೂಚಿಸಿದ್ದಾರೆ”


ಈ ವೇಳೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿದ ನಿರ್ಮಲಾ ಸೀತಾರಾಮನ್, ಸರ್ಕಾರದ ನಿರ್ಧಾರಗಳೊಂದಿಗೆ ನಿಂತಿದ್ದಾರೆ ಅಂತ ಹೇಳಿದ್ದಾರೆ. ಜನರ ಬೆಂಬಲದಿಂದಲೇ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಅಂತ ಹೇಳಿದ್ದಾರೆ.


ಇದನ್ನೂ ಓದಿ: Budget 2023 Highlights: 'ನಿರ್ಮಲ' ಲೆಕ್ಕಾಚಾರದಲ್ಲಿ ಸಿಕ್ಕಿದ್ದೇನು? ಯಾರಿಗೆ ಸಿಹಿ, ಯಾರಿಗೆ ಕಹಿ? ಇಲ್ಲಿವೆ ಬಜೆಟ್ ಹೈಲೈಟ್ಸ್


“ಉತ್ತಮ ದೂರದೃಷ್ಟಿ ಹೊಂದಿರುವ ಪ್ರಧಾನಿ”


ಕೇಂದ್ರ ಸರ್ಕಾರವು ಪ್ರತಿಯೊಂದು ಸುಧಾರಣೆಯನ್ನೂ ತರುವ ಮುನ್ನ ಅದು ನಮ್ಮ ಮನೆಯದ್ದೇ ಕೆಲಸವೇನೋ ಎನ್ನುವ ರೀತಿಯಲ್ಲಿ ಮಾಡುತ್ತಿದೆ. ದೇಶದ ಬಗ್ಗೆ ಉತ್ತಮ ದೃಷ್ಟಿಕೋನ ಹೊಂದಿರುವ ನಮ್ಮ ಪ್ರಧಾನಿಯಿಂದಾಗಿ ನಾವು ಉತ್ತಮವಾಗಿ ಕೆಲಸ ಮಾಡಬಹುದು" ಎಂದು ಅವರು ಹೇಳಿದರು.


“ನನಗೆ ನಾನು ಮಂಡಿಸಿದ ಪ್ರತಿ ಬಜೆಟ್‌ ಕೂಡ ಇಷ್ಟ”


ನೀವು ಈವರೆಗೆ ಮಂಡಿಸಿದ ಬಜೆಟ್‌ಗಳ ಪೈಕಿ ಯಾವ ಬಜೆಟ್‌ ನಿಮಗೆ ಇಷ್ಟ ಎಂಬ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, "ಪ್ರತಿ ಬಜೆಟ್ ಸ್ಮರಣೀಯವಾಗಿದೆ. ಏಕೆಂದೆರ ನಾನು ಮಂಡಿಸಿದ ಐದು ಬಜೆಟ್‌ಗಳಲ್ಲಿ ಯಾವುದನ್ನು ಹೆಚ್ಚು ಸ್ಮರಣೀಯ ಎಂದು ಆಯ್ಕೆ ಮಾಡುವುದು ಕಷ್ಟ" ಅಂತ ಹೇಳಿದ್ರು.


“ಕಾಂಗ್ರೆಸ್ ಅವಧಿಯಲ್ಲೇ ಹೊಸ ಪಿಂಚಣಿ ವ್ಯವಸ್ಥೆ”


ಹೊಸ ಪಿಂಚಣಿ ಯೋಜನೆಯನ್ನು ತಂದ ರಾಜಕೀಯ ಹಂಚಿಕೆಗಳು ಕೇವಲ ಎನ್‌ಡಿಎ ಮಾತ್ರವಲ್ಲ, ಯುಪಿಎ ಸರ್ಕಾರದಲ್ಲೂ ಆಗಿದೆ. ಹೊಸ ಪಿಂಚಣಿ ಯೋಜನೆಯ ಸಂಪೂರ್ಣ ಕಲ್ಪನೆಯನ್ನು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ತರಲಾಯಿತು ಅಂತ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.


“ಬಜೆಟ್‌ನ ಪ್ರತಿಫಲ ಮುಂದೆ ತಿಳಿಯಲಿದೆ”


ಪ್ರಧಾನಿ ಮೋದಿ ಯಾವಾಗಲೂ ವೈಯಕ್ತಿಕ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಲು ಬಯಸುತ್ತಾರೆ ಅಂತ ನಿರ್ಮಲಾ ಸೀತಾರಾಮನ್ ಹೇಳಿದ್ರು.  ಉತ್ತಮ ಬಜೆಟ್ ಎಲ್ಲಾ ಹಂತಗಳನ್ನು ಮುಟ್ಟಬೇಕು. ಬಜೆಟ್‌ನ ಪರಿಣಾಮ ಮುಂದಿನ ದಿನಗಳಲ್ಲಿ ಗೋಚರಿಸಲಿದೆ. ಆದಾಯ ತೆರಿಗೆ ಸ್ಲ್ಯಾಬ್‌ಗಳನ್ನು ತೆರಿಗೆ ಪಾವತಿದಾರರಿಗೆ ಹೆಚ್ಚು ಆಕರ್ಷಕವಾಗಿ ಮತ್ತು ಮಧ್ಯಮ ವರ್ಗದ ಪರವಾಗಿ ಮಾಡಲು ಪರಿಷ್ಕರಿಸಲಾಗಿದೆ ಎಂದು ಅವರು ಉತ್ತರಿಸಿದ್ದಾರೆ.




“ಪ್ರವಾಸೋದ್ಯಮದಲ್ಲಿ ಗಮನಾರ್ಹ ಬೆಳವಣಿಗೆ”


ವಿದೇಶದಿಂದ ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ. ಆರ್ಥಿಕತೆಯನ್ನು ಜೀವಂತವಾಗಿಡಲು ಇದು ಉತ್ತಮ ಮಾರ್ಗವಾಗಿದೆ. ಪ್ರಧಾನಮಂತ್ರಿ-ವಿಕಾಸ್ ಯೋಜನೆ ಕೂಡ ಪ್ರಯೋಜನಕಾರಿಯಾಗಲಿದೆ. ಏಕೆಂದರೆ ಇದು ಅತ್ಯಂತ್ಯ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ ಅಂತ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.

Published by:Annappa Achari
First published: