ಬಜೆಟ್‌ನಲ್ಲಿ ಘೋಷಿಸಿರುವ ತೆರಿಗೆ ವಿನಾಯಿತಿ ಕುರಿತಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖ ವಿಚಾರ ಹಂಚಿಕೊಂಡಿದ್ದಾರೆ. ನ್ಯೂಸ್ 18ನ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ (News18 Exclusive Interview) ನೆಟ್‌ವರ್ಕ್ 18ನ ಗ್ರೂಪ್ ಎಡಿಟರ್-ಇನ್-ಚೀಫ್ ರಾಹುಲ್ ಜೋಶಿ ಅವರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಬಜೆಟ್ ಕುರಿತಂತೆ ಹಲವು ಮಹತ್ವದ ಮಾಹಿತಿ ಬಚ್ಚಿಟ್ಟಿದ್ದಾರೆ. ಇದರಲ್ಲೂ ಪ್ರಮುಖವಾಗಿ ತೆರಿಗೆ ಕುರಿತಂತೆ ಮಾತನಾಡಿದ್ದಾರೆ. ಒಬ್ಬ ತೆರಿಗೆದಾರನಿಗೆ (taxpayer) ಹೆಚ್ಚಿನ ಹಣ (Money) ಉಳಿದಿದ್ದರೆ, ಅವನು ಅಥವಾ ಅವಳು ತಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು, ಎಲ್ಲಿ ಇಡಬೇಕು ಅಂತ ನಿರ್ಧರಿಸಬಹುದು ಅಂತ ಹೇಳಿದ್ರು. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಯಾವಾಗಲೂ ವೈಯಕ್ತಿಕ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಲು ಬಯಸುತ್ತಾರೆ ಅಂತ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.
“ತನ್ನ ಹಣದ ಬಗ್ಗೆ ತೆರಿಗೆದಾರನಿಗೆ ಗೊತ್ತಿರಬೇಕು”
ನ್ಯೂಸ್18ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಕಡಿಮೆ ತೆರಿಗೆ ದರವು ಉತ್ತಮವಾಗಿದೆ ಎಂದು ನಾನು ಹೇಳುತ್ತೇನೆ. ಇದು ಉತ್ತಮ ವ್ಯವಸ್ಥೆಯಾಗಿದೆ. ತೆರಿಗೆ ಬಗ್ಗೆ ಜನರಿಗೆ ಗೊಂದಲ ಎನಿಸಿದರೂ ಇದು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ ಅಂತ ಹೇಳಿದ್ದಾರೆ. ಒಬ್ಬ ತೆರಿಗೆದಾರನಿಗೆ (taxpayer) ಹೆಚ್ಚಿನ ಹಣ (Money) ಉಳಿದಿದ್ದರೆ, ಅವನು ಅಥವಾ ಅವಳು ತಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು, ಎಲ್ಲಿ ಇಡಬೇಕು ಅಂತ ನಿರ್ಧರಿಸಬಹುದು ಅಂತ ಅವರು ಅಭಿಪ್ರಾಯಪಟ್ಟಿದ್ದಾರೆ.
“ಮೋದಿ ಆಶಯದಂತೆ ತೆರಿಗೆ ವ್ಯವಸ್ಥೆ ಸರಳೀಕರಣ”
ತೆರಿಗೆದಾರರು ತಾವು ಏನು ಪಾವತಿಸುತ್ತಿದ್ದಾರೆಂದು ಅವರಿಗೆ ಸ್ಪಷ್ಟವಾಗಿ ತಿಳಿದಿರಬೇಕು, ಆದ್ದರಿಂದ ಅದನ್ನು ಸರಳಗೊಳಿಸಿ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅವರ ಆಶಯದಂತೆ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಲಾಗಿದೆ ಅಂತ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಂತಿಮವಾಗಿ ತೆರಿಗೆ ದರಗಳು ಕಡಿಮೆಯಾಗಿರಬೇಕು. ಅದರಂತೆ ಈ ಬಾರಿಯ ತೆರಿಗೆ ದೇಶದ ಯಾವುದೇ ನಾಗರಿಕರಿಗೆ ಹೊರೆಯಾಗುವುದಿಲ್ಲ, ಆದರೆ ಅದಕ್ಕಾಗಿ ತೆರಿಗೆ ಮೂಲವು ವಿಶಾಲವಾಗಿರಬೇಕು ಎಂದಿದ್ದಾರೆ.
“7 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ”
2023-24ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವಂತೆ 7 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯ ಹೊಂದಿರುವ ತೆರಿಗೆದಾರರು ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಈ ಹಿಂದೆ, ವಾರ್ಷಿಕವಾಗಿ ರೂ. 5 ಲಕ್ಷದವರೆಗೆ ಗಳಿಸಿದವರು ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳಲ್ಲಿ ಆದಾಯ ತೆರಿಗೆಯನ್ನು ಪಾವತಿಸಲು ಬಾಧ್ಯರಾಗಿರಲಿಲ್ಲ. ರಿಯಾಯಿತಿ ಮಿತಿಯನ್ನು ಈಗ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ, ಆದರೆ ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ ಮಾತ್ರ ಇದು ಅನ್ವಯವಾಗಲಿದೆ. ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿನ ತೆರಿಗೆ ಸ್ಲ್ಯಾಬ್‌ಗಳನ್ನು ಸಹ 2023 ರ ಬಜೆಟ್‌ನಲ್ಲಿ ಮರುನಿರ್ಮಾಣ ಮಾಡಲಾಗಿದೆ. ತೆರಿಗೆ ವಿನಾಯಿತಿ ಮಿತಿಯನ್ನು 50,000 ರೂ.ಗಳಿಂದ 3 ಲಕ್ಷಕ್ಕೆ ಹೆಚ್ಚಿಸಿದ್ದಾರೆ ಮತ್ತು ಸ್ಲ್ಯಾಬ್‌ಗಳ ಸಂಖ್ಯೆಯನ್ನು ಐದಕ್ಕೆ ಇಳಿಸಲಾಗಿದೆ ಅಂತ ನಿರ್ಮಲಾ ಸೀತಾರಾಮನ್ ಹೇಳಿದ್ರು.
ಹೊಸ ತೆರಿಗೆ ಪದ್ಧತಿಯಲ್ಲಿ ಏನಿದೆ?
ಈಗ, ಹೊಸ ತೆರಿಗೆ ಪದ್ಧತಿಯಲ್ಲಿ, 0 ರಿಂದ 3 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ. ಈ ಹಿಂದೆ 2.5 ಲಕ್ಷದವರೆಗಿನ ಆದಾಯವು ಯಾವುದೇ ತೆರಿಗೆಗೆ ಒಳಪಡುತ್ತಿರಲಿಲ್ಲ. ರೂ.3 ಲಕ್ಷದಿಂದ ರೂ.6 ಲಕ್ಷದವರೆಗಿನ ಆದಾಯಕ್ಕೆ ಶೇ.5ರಷ್ಟು, ರೂ.9 ಲಕ್ಷದಿಂದ ರೂ.12 ಲಕ್ಷದವರೆಗಿನ ಆದಾಯಕ್ಕೆ ಶೇ.15ರಷ್ಟು ತೆರಿಗೆ ವಿಧಿಸಲಾಗುವುದು ಮತ್ತು ರೂ.12ರಿಂದ ರೂ.15ರ ನಡುವಿನ ಆದಾಯಕ್ಕೆ ಶೇ.20ರಷ್ಟು ತೆರಿಗೆ ವಿಧಿಸಲಾಗುವುದು. 15 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ 30% ತೆರಿಗೆ ವಿಧಿಸಲಾಗುವುದಿಲ್ಲ. ಈಗ, 7 ಲಕ್ಷ ವಾರ್ಷಿಕ ಆದಾಯ ಹೊಂದಿರುವ ತೆರಿಗೆದಾರರು ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಂಡರೆ, ಅವರು 25,000 ರೂಪಾಯಿಗಳ ರಿಯಾಯಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅಂದರೆ ಅಂತಹ ತೆರಿಗೆದಾರರು ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.
“ನನಗೆ ನಾನು ಮಂಡಿಸಿದ ಪ್ರತಿ ಬಜೆಟ್ ಕೂಡ ಇಷ್ಟ”
ನೀವು ಈವರೆಗೆ ಮಂಡಿಸಿದ ಬಜೆಟ್‌ಗಳ ಪೈಕಿ ಯಾವ ಬಜೆಟ್ ನಿಮಗೆ ಇಷ್ಟ ಎಂಬ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, "ಪ್ರತಿ ಬಜೆಟ್ ಸ್ಮರಣೀಯವಾಗಿದೆ. ಏಕೆಂದೆರ ನಾನು ಮಂಡಿಸಿದ ಐದು ಬಜೆಟ್‌ಗಳಲ್ಲಿ ಯಾವುದನ್ನು ಹೆಚ್ಚು ಸ್ಮರಣೀಯ ಎಂದು ಆಯ್ಕೆ ಮಾಡುವುದು ಕಷ್ಟ" ಅಂತ ಹೇಳಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ