• Home
  • »
  • News
  • »
  • business
  • »
  • Nandan Nilekani: ಬೆಂಗಳೂರಿನ ಬಿಲಿಯನೇರ್‌ ಸ್ಟ್ರೀಟ್‌ ನಲ್ಲಿ ನಂದನ್‌ ನಿಲೇಕಣಿ ಬಹುಕೋಟಿ ಆಸ್ತಿ ಖರೀದಿ!

Nandan Nilekani: ಬೆಂಗಳೂರಿನ ಬಿಲಿಯನೇರ್‌ ಸ್ಟ್ರೀಟ್‌ ನಲ್ಲಿ ನಂದನ್‌ ನಿಲೇಕಣಿ ಬಹುಕೋಟಿ ಆಸ್ತಿ ಖರೀದಿ!

ನಂದನ್ ನಿಲೇಕಣಿ

ನಂದನ್ ನಿಲೇಕಣಿ

Nilekani Family Trust Buys Property: ಬೆಂಗಳೂರು ಮೂಲದ ಕ್ವೆಸ್ ಕಾರ್ಪ್ ನ ಪ್ರೊಮೊಟರ್‌ ಕೋರಮಂಗಲದಲ್ಲಿ 9,507 ಚದರ ಅಡಿ ವಿಸ್ತೀರ್ಣದ ಬಂಗಲೆಯನ್ನು ಕಳೆದ ವರ್ಷ 52 ಕೋಟಿ ರೂ.ಗೆ ಖರೀದಿಸಿದ್ದರು. ಅಜಿತ್ ಅಬ್ರಹಾಂ ಐಸಾಕ್ ಅವರು ಸಿಂಗಾಪುರ ಮೂಲದ ಎನ್‌ಆರ್‌ಐ ಬ್ರಿಜೇಶ್ ಆರ್ ವಾಹಿ ಅವರಿಂದ ಆಸ್ತಿಯನ್ನು ಖರೀದಿಸಿದ್ದಾರೆ.

ಮುಂದೆ ಓದಿ ...
  • Trending Desk
  • Last Updated :
  • New Delhi, India
  • Share this:

ಇನ್ಫೋಸಿಸ್‌ನ (Infosys,) ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷರಾದ ನಂದನ್ ನಿಲೇಕಣಿ ( Nandan M Nilekani,) ಸ್ಥಾಪಿಸಿದ ಎನ್‌ಆರ್‌ಜೆಎನ್ ಫ್ಯಾಮಿಲಿ ಟ್ರಸ್ಟ್, ಬೆಂಗಳೂರಿನ ಬಿಲಿಯನೇರ್ ಸ್ಟ್ರೀಟ್ ನಲ್ಲಿ (Bengaluru’s Billionaire Street Koramangala) ಬಹುಕೋಟಿ ಆಸ್ತಿ ಖರೀದಿಸಿದೆ. ಕೋರಮಂಗಲದಲ್ಲಿರುವ ಬಿಲಿಯನೇರ್‌ ಸ್ಟ್ರೀಟ್‌ ನಲ್ಲಿ ಸುಮಾರು 59 ಕೋಟಿ ಮೌಲ್ಯದ ಆಸ್ತಿ ಖರೀದಿಸಿದ್ದಾರೆ ಎನ್ನಲಾಗಿದೆ. ಕೋರಮಂಗಲದ 3 ನೇ ಬ್ಲಾಕ್‌ ನಲ್ಲಿರುವ ಈ ಆಸ್ತಿಯು ಒಟ್ಟು 4,200 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಹಾಗೂ ಪ್ಲಾಟ್ ವಿಸ್ತೀರ್ಣ ಸುಮಾರು 9,600 ಚದರ ಅಡಿ ಎಂದು ಮಾರಾಟ ಪತ್ರದಲ್ಲಿ ತೋರಿಸಲಾಗಿದೆ.


NRJN ಫ್ಯಾಮಿಲಿ ಟ್ರಸ್ಟ್ ಅನ್ನು ಅದರ ಕಾರ್ಪೊರೇಟ್ ಟ್ರಸ್ಟಿ ಎಂಟ್ರಸ್ಟ್ ಫ್ಯಾಮಿಲಿ ಆಫೀಸ್ ಲೀಗಲ್ ಮತ್ತು ಟ್ರಸ್ಟಿಶಿಪ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಪ್ರತಿನಿಧಿಸಿದೆ. ಈ ಒಪ್ಪಂದವನ್ನು ಸೆಪ್ಟೆಂಬರ್ 26, 2022 ರಂದು ನೋಂದಾಯಿಸಲಾಗಿದೆ ಎನ್ನಲಾಗಿದೆ. ಇನ್ನು ಟ್ರಸ್ಟ್, ನಿಲೇಕಣಿ ಮತ್ತು ಅವರ ಕುಟುಂಬದ ಒಡೆತನದಲ್ಲಿದೆ. ನಿಲೇಕಣಿ ಅವರು 3 ಬಿಲಿಯನ್ ಡಾಲರ್ ನಿವ್ವಳ ಸಂಪತ್ತು ಹೊಂದಿದ್ದಾರೆ ಎಂದು ಫೋರ್ಬ್ಸ್ ಅಂದಾಜಿಸಿದೆ.


ಅತ್ಯಂತ ದುಬಾರಿ ವ್ಯವಹಾರ


ಇನ್ನು ರಿಯಲ್ ಎಸ್ಟೇಟ್ ತಜ್ಞರ ಪ್ರಕಾರ, ಇದು ಬಹುಶಃ ಈ ಪ್ರದೇಶದಲ್ಲಿನ ಅತ್ಯಂತ ದುಬಾರಿ ವ್ಯವಹಾರವಾಗಿದೆ. ಅಲ್ಲದೇ ಈ ಪ್ರಮುಖ ಸ್ಥಳದಲ್ಲಿ ವಾಸಿಸುವ ಶ್ರೀಮಂತರನ್ನು ಇದು ಇನ್ನಷ್ಟು ಜನಪ್ರಿಯವಾಗಿಸುತ್ತೆ.


ಕೋರಮಂಗಲದ ಈ ಬ್ಲಾಕ್‌ನಲ್ಲಿ ಪ್ಲಾಟ್‌ಗಳು ಮತ್ತು ಸ್ವತಂತ್ರ ಮನೆಗಳ ಸೀಮಿತ ಪೂರೈಕೆಯನ್ನು ಗಮನಿಸಿದರೆ, ಇದು ಅತಿ ಹೆಚ್ಚು ನಿವ್ವಳ ಮೌಲ್ಯದ ವ್ಯಕ್ತಿಗಳಿಂದ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಹೇಳಿದ್ದಾರೆ.


ಇದನ್ನೂ ಓದಿ: 8 ಶಸ್ತ್ರಚಿಕಿತ್ಸೆಯ ನಂತರ ಸಹ IAS ಪಾಸ್​ ಮಾಡಿದ ಉಮ್ಮುಲ್ ಖೇರ್, ಇವರ ಕಥೆ ನಿಜಕ್ಕೂ ಸ್ಫೂರ್ತಿ


ಶ್ರೀಮಂತ ಎನ್‌ ಕ್ಲೇವ್‌ ಗಳಲ್ಲೊಂದು ಕೋರಮಂಗಲ 3 ನೇ ಬ್ಲಾಕ್‌!


ಅಂದಹಾಗೆ ಕೋರಮಂಗಲದ 3 ನೇ ಬ್ಲಾಕ್ ಅನ್ನು ಭಾರತದ ಐಟಿ ರಾಜಧಾನಿಯಲ್ಲಿ ಶ್ರೀಮಂತ ಎನ್‌ಕ್ಲೇವ್‌ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು ಸ್ಟಾರ್ಟ್‌ಅಪ್‌ಗಳ ಹೊರತಾಗಿ ಇನ್ಫೋಸಿಸ್ ಮತ್ತು ವಿಪ್ರೊದಂತಹ ಟೆಕ್ ದೈತ್ಯರಿಗೆ ನೆಲೆಯಾಗಿದೆ.


ಇನ್ನು ಇಲ್ಲಿನ ಸ್ಥಳೀಯ ರಿಯಲ್‌ ಎಸ್ಟೇಟ್‌ ತಜ್ಞರ ಪ್ರಕಾರ, ದೇಶದ ಕೆಲವು ಯಶಸ್ವಿ ಉದ್ಯಮಿಗಳು ಕೋರಮಂಗಲ 3ನೇ ಬ್ಲಾಕ್‌ನಲ್ಲಿ ಮನೆಗಳನ್ನು ಹೊಂದಿದ್ದಾರೆ. ಅವರಲ್ಲಿ ನಾರಾಯಣ ಹೆಲ್ತ್‌ನ ದೇವಿ ಪ್ರಸಾದ್ ಶೆಟ್ಟಿ ಮತ್ತು ಫ್ಲಿಪ್‌ಕಾರ್ಟ್ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಕೂಡ ಸೇರಿದ್ದಾರೆ.


ಈ ಪ್ರದೇಶದಲ್ಲಿರುವ ಆರು ಬ್ಲಾಕ್‌ಗಳ ಪೈಕಿ 3ನೇ ಬ್ಲಾಕ್ ಅತ್ಯಂತ ದುಬಾರಿಯಾಗಿದೆ ಏಕೆಂದರೆ ದೊಡ್ಡ ಗಾತ್ರದ ಪ್ಲಾಟ್‌ಗಳು ಮತ್ತು ಬಿಲಿಯನೇರ್‌ಗಳು ವಾಸಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಡ್ತಾರೆ.


ಈ ವರ್ಷದ ಮೇ ತಿಂಗಳಲ್ಲಿ, ಶಂಕರ ಬಿಲ್ಡಿಂಗ್ ಪ್ರಾಡಕ್ಟ್ಸ್ ಲಿಮಿಟೆಡ್ ಮಾಲೀಕ ಸುಕುಮಾರ್ ಶ್ರೀನಿವಾಸ್ ಅವರು ಬೆಂಗಳೂರಿನ ಐಷಾರಾಮಿ ಕೋರಮಂಗಲ ಪ್ರದೇಶದಲ್ಲಿ 44.60 ಕೋಟಿ ರೂ.ಗೆ ಎರಡು ಆಸ್ತಿಯನ್ನು ಖರೀದಿಸಿದ್ದಾರೆ.


ಶ್ರೀನಿವಾಸ್ ಅವರು ಮಾರ್ಚ್ 21, 2022 ರಂದು ಕಂಪನಿಯ 10 ಲಕ್ಷ ಷೇರುಗಳನ್ನು ಮುಕ್ತ ಮಾರುಕಟ್ಟೆ ವಹಿವಾಟಿನ ಮೂಲಕ 75 ಕೋಟಿ ರೂ ಪಡೆದರು. ಎನ್‌ಎಸ್‌ಇಯಲ್ಲಿನ ಬ್ಲಾಕ್ ಡೀಲ್ ಡೇಟಾ ಪ್ರಕಾರ, ಅವರು 10 ಲಕ್ಷ ಷೇರುಗಳನ್ನು ಸರಾಸರಿ 755 ರೂ.ಗೆ ಮಾರಾಟ ಮಾಡಿದ್ದಾರೆ. ಇದು ಒಟ್ಟು ಡೀಲ್ ಮೌಲ್ಯ 75.50 ಕೋಟಿ ರೂ.ಎನ್ನಲಾಗಿದೆ.


ಇನ್ನು ಜನವರಿಯಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಎಸ್.ರಾಘವನ್ ಅವರ ಪುತ್ರ ಶ್ರೀರಾಮ್ ನಡತ್ತೂರ್ ಅವರು ಕೋರಮಂಗಲ 3ನೇ ಬ್ಲಾಕ್‌ನಲ್ಲಿರುವ ವಸತಿ ಆಸ್ತಿಯನ್ನು 11.6 ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಈ ಪ್ರದೇಶದಲ್ಲಿ 76 ಕೋಟಿ ರೂಪಾಯಿ ಮೌಲ್ಯದ ಎರಡು ಆಸ್ತಿಯನ್ನು ಖರೀದಿಸಿದ್ದರು.


ಇದನ್ನೂ ಓದಿ: ಮಲಗಿದ್ದ ಅಮ್ಮನಿಗೆ ಕಾಟ ಕೊಟ್ಟು ಎಬ್ಬಿಸಿದ ಪುಟಾಣಿ, ಫುಲ್ ವೈರಲ್ ಆಗ್ತಿದೆ ವಿಡಿಯೋ


ಬೆಂಗಳೂರು ಮೂಲದ ಕ್ವೆಸ್ ಕಾರ್ಪ್ ನ ಪ್ರೊಮೊಟರ್‌ ಕೋರಮಂಗಲದಲ್ಲಿ 9,507 ಚದರ ಅಡಿ ವಿಸ್ತೀರ್ಣದ ಬಂಗಲೆಯನ್ನು ಕಳೆದ ವರ್ಷ 52 ಕೋಟಿ ರೂ.ಗೆ ಖರೀದಿಸಿದ್ದರು. ಅಜಿತ್ ಅಬ್ರಹಾಂ ಐಸಾಕ್ ಅವರು ಸಿಂಗಾಪುರ ಮೂಲದ ಎನ್‌ಆರ್‌ಐ ಬ್ರಿಜೇಶ್ ಆರ್ ವಾಹಿ ಅವರಿಂದ ಆಸ್ತಿಯನ್ನು ಖರೀದಿಸಿದ್ದಾರೆ.


ಕೋರಮಂಗಲದಲ್ಲಿರುವ ಆಸ್ತಿಯ ವೆಚ್ಚವು ಪ್ರತಿ ಚದರ ಅಡಿಗೆ ಸುಮಾರು 58,000 ರೂ.ಆಗಿದೆ.ನಾರಾಯಣ ಹೆಲ್ತ್ ಅಧ್ಯಕ್ಷ ಶೆಟ್ಟಿ ಅವರ ಪುತ್ರ ಅನೇಶ್ ಶೆಟ್ಟಿ ಅವರು ಕಳೆದ ವರ್ಷ ಜನವರಿಯಲ್ಲಿ ಕೋರಮಂಗಲದಲ್ಲಿ 18.57 ಕೋಟಿ ರೂಪಾಯಿ ಮೌಲ್ಯದ ಸ್ವತಂತ್ರ ಮನೆಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ.

Published by:Sandhya M
First published: