• Home
  • »
  • News
  • »
  • business
  • »
  • Money Tips: ವಿಭಿನ್ನ ಹೂಡಿಕೆ ತಂತ್ರಜ್ಞಾನಗಳಿಂದ ಹೆಚ್ಚಿನ ಲಾಭ, ದುಡ್ಡು ಮಾಡೋ ಟಿಪ್ಸ್ ಕೊಟ್ಟ ​ಸಚಿನ್​!

Money Tips: ವಿಭಿನ್ನ ಹೂಡಿಕೆ ತಂತ್ರಜ್ಞಾನಗಳಿಂದ ಹೆಚ್ಚಿನ ಲಾಭ, ದುಡ್ಡು ಮಾಡೋ ಟಿಪ್ಸ್ ಕೊಟ್ಟ ​ಸಚಿನ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಂಸ್ಥೆಯ ನಿರ್ವಾಹಕರಾಗಿರುವ ಸಚಿನ್ ಶಾ ಹೂಡಿಕೆ ತಂತ್ರಗಳು ಹಾಗೂ ಮಾರುಕಟ್ಟೆಯಲ್ಲಿ ಈ ತಂತ್ರಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

  • Trending Desk
  • 4-MIN READ
  • Last Updated :
  • Share this:

SEBI-ನೋಂದಾಯಿತ ಪೋರ್ಟ್‌ಫೋಲಿಯೋ ನಿರ್ವಹಣೆ ಮತ್ತು ಹೂಡಿಕೆ ಸಲಹಾ ಕಂಪನಿಯಾಗಿರುವ ಎಮ್‌ಕೇ (Emkay) ಇನ್ವೆಸ್ಟ್‌ಮೆಂಟ್ ಮ್ಯಾನೇಜರ್ಸ್ ಲಿಮಿಟೆಡ್ (EIML) ಹೆಚ್ಚಿನ ಅವಧಿಯಲ್ಲಿ ಉತ್ತಮ ಫಲಿತಾಂಶವನ್ನು ಬಯಸುವ ಗ್ರಾಹಕರಿಗೆ ವಿವಿಧ ಹೂಡಿಕೆ ಅವಕಾಶಗಳನ್ನು ಒದಗಿಸುತ್ತದೆ. ಸಂಸ್ಥೆಯ ನಿರ್ವಾಹಕರಾಗಿರುವ ಸಚಿನ್ ಶಾ ಹೂಡಿಕೆ ತಂತ್ರಗಳು ಹಾಗೂ ಮಾರುಕಟ್ಟೆಯಲ್ಲಿ ಈ ತಂತ್ರಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.


EIML ಸಂಸ್ಥೆ ಹೇಗೆ ಕೆಲಸ ಮಾಡುತ್ತದೆ?


EIML ನಲ್ಲಿ, ಹೆಚ್ಚು ಅನುಭವಿ ಮತ್ತು ಅರ್ಹ ಪೋರ್ಟ್‌ಫೋಲಿಯೋ ಮ್ಯಾನೇಜರ್‌ಗಳು, ಇಕ್ವಿಟಿ ವಿಶ್ಲೇಷಕರು, ಸಂಶೋಧಕರು ಮತ್ತು ಹೂಡಿಕೆ ಸಲಹೆಗಾರರ ತಂಡವು ಬಹು-ಹಂತದ ಹೂಡಿಕೆ ತಂತ್ರಗಳನ್ನು ಬಳಸಿಕೊಳ್ಳುತ್ತದೆ ಎಂಬುದು ಸಚಿನ್ ಹೇಳಿಕೆಯಾಗಿದೆ. ಹೂಡಿಕೆದಾರರಿಗೆ ಸ್ಥಿರವಾದ ದೀರ್ಘಕಾಲದ ಆದಾಯವನ್ನು ಒದಗಿಸಲು ಸಂಸ್ಥೆಯು ಉತ್ತಮ ಸಲಹೆಗಳನ್ನು ಹಾಗೂ ನಿಯಮಗಳನ್ನು ಅನುಸರಿಸುತ್ತದೆ.


ಸಚಿನ್ ಹೇಳುವಂತೆ ಕ್ರೆಡಿಟ್ ಅಭಿವೃದ್ಧಿಗೊಂಡಂತೆ ಠೇವಣಿಯನ್ನು ಸಮಾನವಾಗಿ ಸುಧಾರಿಸುವುದು ಸವಾಲು ಎಂದಾಗಿದೆ. ಹೂಡಿಕೆ ಮಾಡುವುದು ಇಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ ಅದಕ್ಕೆ ತಕ್ಕಂತೆ ಫ್ರಾಂಚೈಸಿಗಳು ರೂಪುಗೊಳ್ಳುತ್ತಿವೆ ಎಂಬುದು ಸಚಿನ್ ಮಾತಾಗಿದೆ.


2023 ರಲ್ಲಿ ನೀವು ಕಲಿಯಬೇಕಿರುವುದು ಏನು?


2022 ಅಸಾಧಾರಣ ಅತ್ಯಂತ ಗಮನಾರ್ಹ ವರ್ಷವಾಗಿದೆ. ಉಕ್ರೇನ್-ರಷ್ಯಾ ಯುದ್ಧದಿಂದ ಪ್ರಾರಂಭವಾದ ಸಮಸ್ಯೆಗಳು ಬೆಳೆಯುತ್ತಾ ಸಾಗಿದೆ ಅತ್ಯಂತ ಹೆಚ್ಚಿನ ಹಣದುಬ್ಬರವನ್ನು ಹೊಂದಿರುವುವೆವು ಮತ್ತು ಸಹಜವಾಗಿಯೇ ಹೆಚ್ಚಿನ ಜಾಗತಿಕ ಮಾರುಕಟ್ಟೆಗಳು ವರ್ಷವನ್ನು ಗಮನಾರ್ಹವಾಗಿ ಕಡಿಮೆಗೊಳಿಸಿದವು, ವಿಶೇಷವಾಗಿ US S&P 500 ಇದು ಅತ್ಯಂತ ವಿಶಾಲ ಆಧಾರಿತ ಸೂಚ್ಯಂಕವಾಗಿದೆ. ಅದೂ ಕೂಡ ಶೇ.20ಕ್ಕಿಂತ ಕಡಿಮೆಯಾಗಿದೆ.


ವ್ಯವಹಾರಗಳ ಮೇಲೆ ಕೇಂದ್ರೀಕರಿಸುವುದು ಮುಖ್ಯವಾಗಿದೆ


2022 ರ ಕ್ಯಾಲೆಂಡರ್ ವರ್ಷದ ಮೊದಲಾರ್ಧದಲ್ಲಿ ನಾವು ದೊಡ್ಡ ಎಫ್‌ಐಐ ಮಾರಾಟವನ್ನು ಹೊಂದಿದ್ದೇವೆ ಮತ್ತು ಈ ಎಲ್ಲದರ ಹೊರತಾಗಿಯೂ, ಭಾರತೀಯ ಇಕ್ವಿಟಿ ಮಾರುಕಟ್ಟೆಯು ಸಕಾರಾತ್ಮಕವಾಗಿ ವರ್ಷವನ್ನು ಕೊನೆಗೊಳಿಸುತ್ತಿದೆ. ಇದು ಬಹುಮುಖ್ಯ ಕಲಿಕೆಗಳಲ್ಲಿ ಒಂದೆನಿಸಿದೆ. ನಾವು ಹೊಂದಿರುವ ವ್ಯವಹಾರಗಳ ಮೇಲೆ ನಾವು ಗಮನ ಹರಿಸಬೇಕಾಗಿರುವುದು ಮುಖ್ಯವಾಗಿದೆ. ಜೊತೆಗೆ ಆರಂಭದಲ್ಲಿಯೇ ವ್ಯವಹಾರಗಳಲ್ಲಿ ಏನು ನಡೆಯುತ್ತಿದೆ ವ್ಯವಹಾರ ಹೇಗೆ ಸಾಗುತ್ತಿದೆ ಎಂಬುದರ ಮೇಲೆ ಕೇಂದ್ರೀಕರಿಸಬೇಕಾಗಿದೆ ಎಂದು ಸಚಿನ್ ತಿಳಿಸಿದ್ದಾರೆ.


ಇದನ್ನೂ ಓದಿ: 6 ರೂಪಾಯಿ ಹೂಡಿಕೆ ಮಾಡಿ, 1 ಲಕ್ಷ ಹಣ ಪಡೆಯಿರಿ!


ಇ-ಕಾಮರ್ಸ್ ಕಂಪನಿಗಳ ಮೌಲ್ಯವನ್ನು ಜನರು ಅರಿತುಕೊಂಡಿದ್ದಾರೆ


ಷೇರುಗಳ ವಿಷಯದಲ್ಲಿ, ಈ ವರ್ಷ ವಿಭಿನ್ನವಾದ ಅಂಶ ಕಂಡುಬಂದಿದ್ದು ಜನರು ಈ ಇ-ಕಾಮರ್ಸ್ ಕಂಪನಿಗಳ ಮೌಲ್ಯವನ್ನು ನಿಜವಾಗಿಯೂ ಅರಿತುಕೊಂಡಿದ್ದಾರೆ. ವ್ಯವಹಾರಗಳ ಜ್ಞಾನವನ್ನು ಬೆಳೆಸಿಕೊಂಡಿದ್ದಾರೆ.


ಉತ್ತಮವಾಗಿ ಕಾರ್ಯನಿರ್ವಹಿಸಿರುವ ದೇಶೀಯ ವ್ಯವಹಾರಗಳು


ದೇಶೀಯ ವ್ಯವಹಾರಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ. ಅದಕ್ಕೆ ತಕ್ಕಂತೆ ಬೇಡಿಕೆಯೂ ಬೆಳವಣಿಗೆಯಾಗುತ್ತಿದೆ. ನಾವು ನಡೆಸುತ್ತಿರುವ ವ್ಯವಹಾರಗಳ ಮೇಲೆ ಕಣ್ಣಿಡುವುದು ಬಹುಮುಖ್ಯ ಹಾಗೂ ವ್ಯವಹಾರಗಳ ವಿಶ್ಲೇಷಣೆ ನಡೆಸುವುದೂ ನಿರ್ಣಾಯಕ ಎಂದು ಸಚಿನ್ ತಿಳಿಸಿದ್ದಾರೆ.ಬ್ಯಾಂಕಿಂಗ್ ಹಣಕಾಸು ಸೇವೆಗಳು 2022 ರಲ್ಲಿ ಉತ್ತಮವಾಗಿದೆ. 12 ರಿಂದ 18 ತಿಂಗಳುಗಳ ಕಾಲ ಉತ್ತಮ ಕ್ರೆಡಿಟ್ ಬೇಡಿಕೆಯನ್ನು ಹೊಂದಿದ್ದೇವೆ.


ಇದನ್ನೂ ಓದಿ: ಕೇಂದ್ರದ ಬಂಪರ್​ ಆಫರ್​, ಉಚಿತ 1 ಲಕ್ಷ ಪಡೆಯೋಕೆ ಇನ್ನೂ ಹತ್ತೇ ದಿನ ಬಾಕಿ!


ಖಾಸಗಿ ಬ್ಯಾಂಕುಗಳು ಈ ವರ್ಷದಲ್ಲಿ ಹೇಗೆ ಕಾರ್ಯನಿರ್ವಹಿಸಿವೆ?


ಖಾಸಗಿ ವಲಯದ ಬ್ಯಾಂಕುಗಳು, ವಿಶೇಷವಾಗಿ ಅವುಗಳಲ್ಲಿ ಮುಖ್ಯವಾದ ಬ್ಯಾಂಕ್‌ಗಳು, ಅತ್ಯಂತ ಹೆಚ್ಚಿನ ಗ್ರಾಹಕ ಫ್ರಾಂಚೈಸಿಗಳನ್ನು ಹೊಂದಿವೆ CASA (ಪ್ರಸ್ತುತ ಖಾತೆ ಸೇವಿಂಗ್ಸ್ ಖಾತೆ) ಹೆಚ್ಚಿನ ಗಮನಾರ್ಹವಾದ ಬೆಳವಣಿಗೆಯನ್ನು ಕಂಡಿವೆ. ಬ್ಯಾಂಕ್‌ಗಳು ಯೋಜಿತವಾದ ಹೂಡಿಕೆಗಳನ್ನು ನಡೆಸಿದ್ದರಿಂದ ಉತ್ತಮ ಮಾರ್ಜಿನ್‌ಗಳನ್ನು ಗಳಿಸಿವೆ. ನಿಧಿಯ ವೆಚ್ಚಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ಪ್ರಯೋಜನವನ್ನು ಪಡೆದುಕೊಂಡಿವೆ. ಮುಂದಿನ ಆರರಿಂದ 12 ತಿಂಗಳಲ್ಲಿ ಖಾಸಗಿ ಬ್ಯಾಂಕ್‌ಗಳು ಇನ್ನಷ್ಟು ಮೇಲುಗೈ ಸಾಧಿಸಬೇಕು ಎಂಬುದು ಆಶಯವಾಗಿದೆ ಎಂದು ಸಚಿನ್ ತಿಳಿಸಿದ್ದಾರೆ.

Published by:ವಾಸುದೇವ್ ಎಂ
First published: