• Home
  • »
  • News
  • »
  • business
  • »
  • Alcohol: ಇನ್ಮುಂದೆ ಕುಡಿದು ಡ್ರೈವರ್​ ಸೀಟ್​ನಲ್ಲಿ ಕೂತ್ರೆ ಕಾರ್​​ ಕೊಡುತ್ತೆ ಸಿಗ್ನಲ್​, ಕಡಿಮೆಯಾಗುತ್ತಾ ಅಪಘಾತಗಳ ಸಂಖ್ಯೆ?

Alcohol: ಇನ್ಮುಂದೆ ಕುಡಿದು ಡ್ರೈವರ್​ ಸೀಟ್​ನಲ್ಲಿ ಕೂತ್ರೆ ಕಾರ್​​ ಕೊಡುತ್ತೆ ಸಿಗ್ನಲ್​, ಕಡಿಮೆಯಾಗುತ್ತಾ ಅಪಘಾತಗಳ ಸಂಖ್ಯೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿನಿತ್ಯ ಅಪಘಾತದಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಪತ್ರಿಕೆ ಹಾಗೂ ಟಿವಿ ಎಲ್ಲಿ ನೋಡಿದರೂ ಆ್ಯಕ್ಸಿಡೆಂಟ್​ ಸುದ್ದಿಗಳೇ ಬರುತ್ತಿರುತ್ತವೆ. ಜೊತೆಗೆ ಕುಡಿದು ವಾಹನ ಚಲಾಯಿಸಿ ಅಪಘಾತ ಮಾಡುವವರ ಸಂಖ್ಯೆ ಅಂತೂ ಹೆಚ್ಚುತ್ತಲೇ ಇದೆ.

  • Share this:

ಪ್ರತಿನಿತ್ಯ ಅಪಘಾತ (Accident) ದಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಪತ್ರಿಕೆ (News Paper) ಹಾಗೂ ಟಿವಿ (TV) ಎಲ್ಲಿ ನೋಡಿದರೂ ಆ್ಯಕ್ಸಿಡೆಂಟ್​ ಸುದ್ದಿಗಳೇ ಬರುತ್ತಿರುತ್ತವೆ. ಜೊತೆಗೆ ಕುಡಿದು ವಾಹನ ಚಲಾಯಿಸಿ (Drink and Drive) ಅಪಘಾತ ಮಾಡುವವರ ಸಂಖ್ಯೆ ಅಂತೂ ಹೆಚ್ಚುತ್ತಲೇ ಇದೆ. ಇವರ ಪ್ರಾಣವಷ್ಟೇ ಅಲ್ಲದೇ, ರಸ್ತೆಯಲ್ಲಿ ತಮ್ಮ ಪಾಡಿಗೆ ಹೋಗುತ್ತಿರುವವರ ಪ್ರಾಣವನ್ನು ಕಸಿದುಕೊಳ್ಳುತ್ತಾರೆ. ಇದೆಕ್ಕೆಲ್ಲಾ ಕೊನೆನೇ ಇಲ್ವಾ? ಕುಡಿದು ವಾಹನ ಓಡಿಸುವವರನ್ನು ತಡೆಯಲು ಸಾಧ್ಯವಿಲ್ವಾ? ಪೊಲೀಸರು (Police) ಎಷ್ಟೇ ಕ್ರಮ ಕೈಗೊಂಡರು ನಮ್ಮ ಜನ ಮಾತ್ರ ಬುದ್ಧಿ ಕಲಿಯುತ್ತಿಲ್ಲ. ಕುಡಿದು ಕಾರು (Car Drive) ಓಡಿಸುವುದನ್ನು ಟ್ರೆಂಡ್ (Trend) ಮಾಡಿಕೊಂಡು ಬಿಟ್ಟಿದ್ದಾರೆ.


ಕುಡಿದು ವಾಹನ ಚಲಾಯಿಸುವವರಿಗೆ ಶಾಕ್​!


ಹೆಚ್ಚಿನ ದೇಶಗಳಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಕಾನೂನು ಬಾಹಿರವಾಗಿದೆ. ಪರಿಣಾಮವಾಗಿ, ಆ ದೇಶಗಳಲ್ಲಿ ಈ ಅಪರಾಧಕ್ಕೆ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ. ಆದರೆ, ಇಷ್ಟೆಲ್ಲ ಆದ ನಂತರವೂ ಕುಡಿದು ವಾಹನ ಚಲಾಯಿಸುವವರ ಸಂಖ್ಯೆ ಕಡಿಮೆಯಾಗುವುದಿಲ್ಲ. ಹಾಗಾದರೆ ಅಪಘಾತಗಳನ್ನು ತಪ್ಪಿಸುವ ಮಾರ್ಗವೇನು? ಈ ಮಾರ್ಗವನ್ನು ಕಂಡುಕೊಳ್ಳಲು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್​​ನಲ್ಲಿ ತಂತ್ರಜ್ಞಾನದ ಕೆಲಸ ಮಾಡಲಾಗುತ್ತಿದೆ.


ಕುಡಿದು ಡ್ರೈವಿಂಗ್​ ಸೀಟ್​ನಲ್ಲಿ ಕೂರುವಂತಿಲ್ಲ!


ಆ ತಂತ್ರಜ್ಞಾನದ ಮೂಲಕ ಚಾಲಕ ಮದ್ಯಪಾನ ಮಾಡಿದ್ದಾನೋ ಇಲ್ಲವೋ ಎಂಬುದನ್ನು ಕಾರಿನಿಂದಲೇ ಗುರುತಿಸಬಹುದಾಗಿದೆ. ಮತ್ತು ಈ ತಂತ್ರಜ್ಞಾನಕ್ಕೆ 'ಆಲ್ಕೋಹಾಲ್ ಇಂಪೇರ್ಮೆಂಟ್ ಡಿಟೆಕ್ಷನ್ ಸಿಸ್ಟಮ್' ಎಂದು ಹೆಸರಿಸಲಾಗಿದ್ದು, ಇದನ್ನು ನೇರವಾಗಿ ಕಾರಿನಲ್ಲಿ ಅಳವಡಿಸಲಾಗುವುದು. ಚಾಲಕ ಆಲ್ಕೋಹಾಲ್ ಸೇವಿಸಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಗುರುತಿಸಲು ಸಿಸ್ಟಮ್ ಹಲವಾರು ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.


ಈ ತಂತ್ರಜ್ಞಾನದ ಮೂಲಕ, ಚಾಲಕನ ನೋಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬಹುದು. ಡ್ರೈವರ್ ಡಿಟೆಕ್ಷನ್ ಸಿಸ್ಟಮ್ ಡ್ರೈವರ್ ಅಲರ್ಟ್ ಆಗಿ ಕಾರ್ಯನಿರ್ವಹಿಸುವ ರೀತಿಯಲ್ಲಿಯೇ ಈ ಸಿಸ್ಟಮ್ ಕೂಡ ಕೆಲಸ ಮಾಡುತ್ತದೆ.


ಇದನ್ನೂ ಓದಿ: ರಾಣಿ ಎಲಿಜಬೆತ್ ಅಚ್ಚುಮೆಚ್ಚಿನ ಕೊರ್ಗಿಸ್‌ ನಾಯಿಗಳಿಗೆ ಮಾರುಕಟ್ಟೆಯಲ್ಲಿ ಫುಲ್‌ ಡಿಮ್ಯಾಂಡ್‌, ದುಪ್ಪಾಟ್ಟಾದ ಬೆಲೆ


ಡ್ರೈವಿಂಗ್​ ಸೀಟ್​ನಲ್ಲಿ ಕೂತ್ರೆ ಹೊಡೆಯುತ್ತೆ ಅಲಾರಂ!


ಚಾಲಕನು ಡ್ರೈವಿಂಗ್ ಸೀಟ್‌ನಲ್ಲಿ ಮದ್ಯ ಸೇವಿಸಿ ಕುಳಿತರೆ, ತಕ್ಷಣವೇ ಅಲಾರಾಂ ಮೊಳಗುತ್ತದೆ. ಆದಾಗ್ಯೂ, ಈ ವ್ಯವಸ್ಥೆಯು ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿಗೊಂಡಿಲ್ಲ. ಆದರೂ ಆದಷ್ಟು ಬೇಗ ಬಳಕೆ ಆಗುವಂತೆ ಇನ್ನೂ ಕೆಲಸ ಮಾಡಲಾಗುತ್ತಿದೆ. ಎಲ್ಲಾ ವಾಹನಗಳು ಈ ಸುರಕ್ಷತಾ ವೈಶಿಷ್ಟ್ಯವನ್ನು ಪ್ರಮಾಣಿತವಾಗಿ ಬರುತ್ತವೆ. ಮತ್ತು US ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಕಾರು ಉತ್ಪಾದನಾ ಕಂಪನಿಗಳಿಗೆ ಇಂತಹ ಸೂಚನೆಗಳನ್ನು ನೀಡಿದೆ. NTSB ಪ್ರಕಾರ, ಅಂತಹ ಸುಧಾರಿತ ತಂತ್ರಜ್ಞಾನದಿಂದ ಅನೇಕ ಅಪಘಾತಗಳನ್ನು ತಡೆಗಟ್ಟಬಹುದು ಮತ್ತು ಅನೇಕ ಜೀವಗಳನ್ನು ಉಳಿಸಬಹುದು.


ಇದನ್ನೂ ಓದಿ: ತಿಂಗಳಿಗೆ ಜಸ್ಟ್​​ 2,000 ಉಳಿಸಿ, ಒಟ್ಟು 48 ಲಕ್ಷ ರಿಟರ್ನ್ಸ್!


ಭಾರತಕ್ಕೂ ಬರುತ್ತಾ ಈ ಟೆಕ್ನಾಲಜಿ!


ವರದಿಯ ಪ್ರಕಾರ, 2020 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ 11,000 ಕ್ಕೂ ಹೆಚ್ಚು ಜನರು ಡ್ರಿಂಕ್ ಅಂಡ್ ಡ್ರೈವ್‌ನಿಂದ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ, ಭಾರತದಲ್ಲಿ ಪ್ರತಿ ವರ್ಷ ಸುಮಾರು 8,300 ಜನರು ಕುಡಿದು ವಾಹನ ಚಲಾಯಿಸುವ ಅಪಘಾತಗಳಲ್ಲಿ ಸಾಯುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಆಲ್ಕೊಹಾಲ್ ಮಾದಕತೆಯಿಂದಾಗಿ ಚಾಲಕ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ.


ಕೆಲವೊಮ್ಮೆ ಚಾಲಕ ಅತಿಯಾದ ವೇಗ ಅಥವಾ ಇತರ ವಾಹನಗಳಿಗೆ ಡಿಕ್ಕಿ ಹೊಡೆದು ಪ್ರಾಣ ಕಳೆದುಕೊಂಡಿದ್ದಾನೆ. ಅಷ್ಟೇ ಅಲ್ಲ, ಚಾಲಕನ ಜೊತೆಗೆ ಅನೇಕ ಸಂದರ್ಭಗಳಲ್ಲಿ ಸಾಮಾನ್ಯ ಜನರು ಸಹ ಅತಿವೇಗದ ಅಪಘಾತಗಳಿಗೆ ಬಲಿಯಾಗುತ್ತಾರೆ. ಈ ಟೆಕ್ನಾಲಜಿ ಒಂದು ವೇಳೆ ಭಾರತಕ್ಕೆ ಬಂದರೆ ಹೆಚ್ಚಿನ ಅಪಘಾತವಾಗುವುದನ್ನು ತಡೆಯಬಹುದು ಎನ್ನುತ್ತಾರೆ ತಜ್ಞರು.

Published by:ವಾಸುದೇವ್ ಎಂ
First published: