Savings scheme for Women: ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ; ಬಜೆಟ್‌ನಲ್ಲಿ ಘೋಷಣೆಯಾದ ಹೊಸ ಠೇವಣಿ ಯೋಜನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  2023 ರ ಬಜೆಟ್‌ನಲ್ಲಿ ಮಹಿಳೆಯರಿಗಾಗಿ ಸಣ್ಣ ಉಳಿತಾಯ ಯೋಜನೆಯನ್ನು ಘೋಷಿಸಿದ್ದಾರೆ.

  • Trending Desk
  • 2-MIN READ
  • Last Updated :
  • Share this:

ಈ ಬಾರಿಯ ಬಜೆಟ್‌ನಲ್ಲಿ ಹಣಕಾಸು ಸಚಿವರು ಮಹಿಳೆಯರಿಗಾಗಿ ಕೂಡ ಕೆಲವೊಂದು ಯೋಜನೆಗಳನ್ನು (Plans) ಘೋಷಿಸಿದ್ದು, ಹಣ ಉಳಿತಾಯ ಮಾಡಲು ಅಂತೆಯೇ ಮಹಿಳೆಯರ ಭವಿಷ್ಯವನ್ನು ರೂಪಿಸುವ ಸೌಲಭ್ಯಗಳನ್ನು ಈ ಯೋಜನೆಗಳು ಒದಗಿಸುತ್ತವೆ ಎಂಬುದು ವಿತ್ತ ಸಚಿವರ ಮಾತಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  (Nirmala Sitharaman) 2023 ರ ಬಜೆಟ್‌ನಲ್ಲಿ ಮಹಿಳೆಯರಿಗಾಗಿ ಸಣ್ಣ ಉಳಿತಾಯ ಯೋಜನೆಯನ್ನು ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಘೋಷಣೆಯಾದ ಮಹಿಳಾ (Women) ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಎರಡು ವರ್ಷಗಳ ಅವಧಿಯನ್ನು ಹೊಂದಿರುತ್ತದೆ ಮತ್ತು 7.5% ಬಡ್ಡಿದರವನ್ನು ನೀಡುತ್ತದೆ ಎಂದು ಸಚಿವರು ತಿಳಿಸಿದ್ದಾರೆ.


ಆಜಾದಿ ಕಾ ಅಮೃತ್ ಮಹೋತ್ಸವದ ನೆನಪಿಗಾಗಿ, ಒಂದು ಬಾರಿಯ ಹೊಸ ಸಣ್ಣ ಉಳಿತಾಯ ಯೋಜನೆ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ಮಾರ್ಚ್ 2025 ರವರೆಗೆ ಎರಡು ವರ್ಷಗಳ ಅವಧಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ತಿಳಿಸಿರುವ ನಿರ್ಮಲಾ ಸೀತಾರಾಮನ್, ಈ ಯೋಜನೆಯು ರೂ 2 ಲಕ್ಷದವರೆಗೆ ಮಹಿಳೆಯರು ಅಥವಾ ಹುಡುಗಿಯರಿಗಾಗಿ 7.5% ಸ್ಥಿರ ಬಡ್ಡಿ ದರದಲ್ಲಿ 2 ವರ್ಷಗಳ ಅವಧಿಗೆ ಡಿಪಾಸಿಟ್ ಸೌಲಭ್ಯವನ್ನು ಒದಗಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.


ಹಣ ಉಳಿತಾಯ ಮಾಡುವ ದೀರ್ಘಾವಧಿ ಯೋಜನೆಗಳು


ಸಣ್ಣ ಉಳಿತಾಯ ಯೋಜನೆಗಳು ದೀರ್ಘಾವಧಿಗೆ ಹಣ ಉಳಿಸಲು ಫಲಾನುಭವಿಗಳನ್ನು ಪ್ರೋತ್ಸಾಹಿಸುವ ಯೋಜನೆಗಳಾಗಿದ್ದು ಇದು ಸರಕಾರದಿಂದ ನಿರ್ವಹಿಸಲಾದ ಹೂಡಿಕೆ ಯೋಜನೆಗಳಾಗಿವೆ.


ಜನಪ್ರಿಯ ಹೂಡಿಕೆ ಆಯ್ಕೆಗಳಾವುವು?


ಸಾರ್ವಜನಿಕ ಭವಿಷ್ಯ ನಿಧಿ (PPF), ಹಿರಿಯ ನಾಗರಿಕರ ಸಣ್ಣ ಉಳಿತಾಯ ಯೋಜನೆ (SCSS), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (SSY) ಸಣ್ಣ ಉಳಿತಾಯ ಯೋಜನೆಗಳ ಅಡಿಯಲ್ಲಿ ಕೆಲವು ಜನಪ್ರಿಯ ಹೂಡಿಕೆ ಆಯ್ಕೆಗಳಾಗಿವೆ.


ಇದನ್ನೂ ಓದಿ: ಮದುವೆ ಆಗೋರಿಗೆ ಸಿಗುತ್ತೆ 50 ಲಕ್ಷ ಸಾಲ


ಇವುಗಳು ತೆರಿಗೆ ಪ್ರಯೋಜನಗಳ ಜೊತೆಗೆ ಸ್ಥಿರ ಆದಾಯವನ್ನು ನೀಡುವುದಲ್ಲದೆ ಸರಕಾರದಿಂದ ಬೆಂಬಲವನ್ನು ಪಡೆದುಕೊಂಡಿವೆ ಎಂಬುದು ಈ ಯೋಜನೆಗಳ ವಿಶೇಷತೆಯಾಗಿದೆ.


ಸಣ್ಣ ಉಳಿತಾಯ ಯೋಜನೆಗಳು ಹೇಗೆ ಪ್ರಯೋಜನಕಾರಿಯಾಗಿದೆ?


ವ್ಯಕ್ತಿಗಳ ವಿವಿಧ ಅಗತ್ಯಗಳನ್ನು ಪೂರೈಸುವ ವಿವಿಧ ಸಣ್ಣ ಉಳಿತಾಯ ಅಥವಾ ಪೋಸ್ಟ್ ಆಫೀಸ್ ಯೋಜನೆಗಳನ್ನು ಸರ್ಕಾರವು ಒದಗಿಸುತ್ತದೆ. ಈ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಸರ್ಕಾರವು ಮೂರು ತಿಂಗಳಿಗೊಮ್ಮೆ (ಪ್ರತಿ ತ್ರೈಮಾಸಿಕ) ಘೋಷಿಸುತ್ತದೆ.


ಯೋಜನೆಗಳು ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು


ಇವುಗಳು ಜನಪ್ರಿಯ ಯೋಜನೆಗಳಾಗಿದ್ದು ಅವು ಕೇಂದ್ರ ಸರ್ಕಾರದಿಂದ ಬೆಂಬಲಿತವಾಗಿದೆ ಮತ್ತು ಇಲ್ಲಿ ಆದಾಯವನ್ನು ನಿಗದಿಪಡಿಸಲಾಗುತ್ತದೆ ಮತ್ತು ಖಾತರಿಪಡಿಸಲಾಗುತ್ತದೆ. ಹಾಗಾಗಿ ಯೋಜನೆಯನ್ನು ಬಳಸುವವರು ನಿಶ್ಚಿಂತರಾಗಿ ಹಣ ಉಳಿತಾಯ ಮಾಡಬಹುದು ಹಾಗೂ ಯೋಜನೆಗಳು ಒದಗಿಸುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.


ತೆರಿಗೆ ಉಳಿತಾಯ ಪ್ರಯೋಜನ


ಈ ಕೆಲವು ಯೋಜನೆಗಳಾದ NSC, SCSS, PPF ಇತ್ಯಾದಿಗಳು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ-ಉಳಿತಾಯ ಪ್ರಯೋಜನಗಳನ್ನು ಸಹ ಒದಗಿಸುತ್ತವೆ.


ಜನವರಿ-ಮಾರ್ಚ್ 2023 ತ್ರೈಮಾಸಿಕದಲ್ಲಿ, PPF 7.1% ಬಡ್ಡಿದರಗಳನ್ನು ನೀಡುತ್ತದೆ, 2 ವರ್ಷಗಳ ಸಮಯದಲ್ಲಿ 6.8% (ವಾರ್ಷಿಕ ಬಡ್ಡಿ ರೂ. 697 ರೂ. 10000 ಠೇವಣಿ) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಇದು 7% ಆಗಿದೆ.


ಮಹಿಳಾ ಯೋಜನೆಗೆ ಪ್ರಸ್ತಾವಿತ 7.5% ಬಡ್ಡಿ ದರಕ್ಕೆ ಹೋಲಿಸಿದರೆ, ಎಸ್‌ಬಿಐ ಗರಿಷ್ಠ 7.25% ಬಡ್ಡಿಯನ್ನು ನೀಡುತ್ತದೆ; ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ICICI ಬ್ಯಾಂಕ್‌ಗಳ ಬಡ್ಡಿದರ 7% ಆಗಿದೆ.




ಹಿರಿಯ ನಾಗರಿಕರಿಗೆ ಉಳಿತಾಯ ಯೋಜನೆಗಳ ಗರಿಷ್ಠ ಡಿಪಾಸಿಟ್ ಮಿತಿಯನ್ನು ರೂ 15 ಲಕ್ಷದಿಂದ ರೂ 30 ಲಕ್ಷಕ್ಕೆ ಏರಿಸಲಾಗಿದೆ. ಮಾಸಿಕ ಆದಾಯ ಖಾತೆ ಯೋಜನೆಗಾಗಿ ಒಂದೇ ಖಾತೆಯ ಗರಿಷ್ಠ ಡಿಪಾಸಿಟ್ ಮಿತಿಯನ್ನು ರೂ 4.5 ಲಕ್ಷದಿಂದ ರೂ 9 ಲಕ್ಷಕ್ಕೆ ಹೆಚ್ಚಿಸಲಾಗಿದೆ, ಇನ್ನು ಜಂಟಿ ಖಾತೆಗಾಗಿ ಈ ಮಿತಿಯನ್ನು ರೂ 9 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ.

First published: