ಹೊಸ ತಿಂಗಳು (New Month) ಬರುತ್ತಿದ್ದಂತೆ ಕೆಲ ಹೊಸ ನಿಯಮಗಳು (New Rules) ಜಾರಿಗೆ ಬರುತ್ತವೆ. ಹೊಸ ಮಾರ್ಚ್ ತಿಂಗಳಿಗೆ (March Month) ಇನ್ನೊಂದೇ ದಿನ ಬಾಕಿ ಇದೆ. ಇದಾದ ನಂತರ ಮಾರ್ಚ್ ತಿಂಗಳು ಬರುತ್ತಿದ್ದು, ಪ್ರತಿ ತಿಂಗಳ ಆರಂಭದಲ್ಲಿ ಸರ್ಕಾರದಿಂದ ಕೆಲವು ನಿಯಮಗಳನ್ನು ಬದಲಾಯಿಸಲಾಗುತ್ತದೆ. ಅದು ನೇರವಾಗಿ ಜನಸಾಮಾನ್ಯರ ಜೇಬಿನ ಮೇಲೆ ಪರಿಣಾಮ ಬೀರುತ್ತದೆ. ಈ ಬಾರಿಯೂ 2000 ರೂಪಾಯಿ ನೋಟು (2000 Currency Note) , ಎಲ್‌ಪಿಜಿ ಬೆಲೆ (LPG Price)ಮತ್ತು ರೈಲು ವೇಳಾಪಟ್ಟಿಯಲ್ಲಿ (Train) ಪ್ರಮುಖ ಬದಲಾವಣೆಯಾಗಲಿದೆ. ಇಂದು ನಾವು ಈ ಬದಲಾವಣೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದೇವೆ ನೋಡಿ.
1) 2000 ರೂಪಾಯಿ ನೋಟು
ಮಾರ್ಚ್ 1ರಿಂದ ಇಂಡಿಯನ್ ಬ್ಯಾಂಕ್ ಎಟಿಎಂಗಳಿಂದ ಗ್ರಾಹಕರು 2000 ರೂಪಾಯಿ ನೋಟುಗಳನ್ನು ತೆಗೆಯುವಂತಿಲ್ಲ. ಇದಕ್ಕಾಗಿ ಗ್ರಾಹಕರು ಬ್ಯಾಂಕ್ ಶಾಖೆಗೆ ಹೋಗಬೇಕು. ಈ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದ ಬ್ಯಾಂಕ್, ಎಟಿಎಂನಿಂದ 2000 ರೂ ನೋಟನ್ನು ಹಿಂಪಡೆದ ನಂತರ, ಗ್ರಾಹಕರು ಶಾಖೆಗೆ ಬಂದು ಅದರ ಭತ್ಯೆಯನ್ನು ಪಡೆಯುತ್ತಾರೆ ಎಂದು ಹೇಳಿದರು. ಇದನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ.
2) ಎಲ್‌ಪಿಜಿ ಬೆಲೆಯಲ್ಲಿ ಏರಿಕೆ ಸಾಧ್ಯತೆ!
ತೈಲ ವಿತರಣಾ ಕಂಪನಿಗಳು ತಿಂಗಳ ಆರಂಭದಲ್ಲಿ ಎಲ್‌ಪಿಜಿ ಬೆಲೆಯನ್ನು ಬದಲಾಯಿಸುತ್ತವೆ. ಆದರೆ, ಕಳೆದ ಬಾರಿ ಇದರಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಪ್ರಸ್ತುತ, ಬೆಂಗಳೂರಿನಲ್ಲಿ 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1053 ರೂಪಾಯಿ. ಕೋಲ್ಕತ್ತಾದಲ್ಲಿ 1079 ರೂ, ಮುಂಬೈನಲ್ಲಿ 1052.50 ರೂ ಮತ್ತು ಚೆನ್ನೈನಲ್ಲಿ 1068.50 ರೂ. ಆದರೆ ಈ ವರ್ಷ ಈ ಬೆಲೆಗಳು ಬದಲಾಗಬಹುದು ಎಂದು ಅಂದಾಜಿಸಲಾಗಿದೆ.
3) ಅನೇಕ ವಿಶೇಷ ರೈಲುಗಳು
ಮಾರ್ಚ್‌ನಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೇ ಮಾರ್ಚ್ 1 ರಿಂದ ಅನೇಕ ವಿಶೇಷ ರೈಲುಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಹೀಗಾಗಿ ಮಹಾನಗರಗಳಲ್ಲಿ ಕೆಲಸ ಮಾಡುವವರಿಗೆ ತಮ್ಮ ಮನೆಗಳಿಗೆ ಹೋಗಲು ಅನುಕೂಲವಾಗಲಿದೆ.
ಇದನ್ನೂ ಓದಿ: ಮಾರ್ಚ್‌ನಲ್ಲಿ ಇಷ್ಟು ದಿನ ಬ್ಯಾಂಕ್ ರಜೆ, ಈ ದಿನಾಂಕಗಳ ಮೇಲೆ ಕಣ್ಣಿಟ್ಟಿರಿ!
ವಿವಿಧ ಮಾರ್ಗಗಳಲ್ಲಿ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ನಿರ್ಧರಿಸಿದೆ. ಈ ರೈಲುಗಳು ದೆಹಲಿ, ಮಧ್ಯಪ್ರದೇಶ, ಮುಂಬೈ ಸೇರಿದಂತೆ ಹಲವು ಮಾರ್ಗಗಳ ನಡುವೆ ಸಂಚರಿಸಲಿವೆ. ಇದರಲ್ಲಿ ಕೆಲವು ರೈಲುಗಳು ಪ್ರಾರಂಭವಾಗಿವೆ. ಅದೇ ಸಮಯದಲ್ಲಿ, ಕೆಲವು ರೈಲುಗಳು ಮಾರ್ಚ್ 1, 2023 ರಿಂದ ಪ್ರಾರಂಭವಾಗುತ್ತವೆ.
4) 12ಕ್ಕಿಂತ ಹೆಚ್ಚು ದಿನ ಬ್ಯಾಂಕ್ ರಜೆ!
ಹೋಳಿ, ನವರಾತ್ರಿಯಂತಹ ಅನೇಕ ದೊಡ್ಡ ಹಬ್ಬಗಳು ಮಾರ್ಚ್ ತಿಂಗಳಲ್ಲಿ ಬರುತ್ತವೆ. ಆದ್ದರಿಂದ, ಮಾರ್ಚ್‌ನಲ್ಲಿ 12 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ದೀರ್ಘಕಾಲದವರೆಗೆ ಯಾವುದೇ ಬ್ಯಾಂಕ್ ಸಂಬಂಧಿತ ಕೆಲಸವನ್ನು ಮುಂದೂಡುತ್ತಿದ್ದರೆ, ತಕ್ಷಣ ಅದನ್ನು ಮಾಡಿ.
ಮಾರ್ಚ್ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕ್ ರಜೆ?
ಮಾರ್ಚ್ 3, 2023 : ಅಮಲಕಿ ಏಕಾದಶಿ ಅಥವಾ ರಂಗಭರಣಿ ಏಕಾದಶಿ ( ಕೆಲವೊಂದು ಬ್ಯಾಂಕ್ಗಳು ಮಾತ್ರ ಕ್ಲೋಸ್ ಆಗಿರುತ್ತದೆ)
ಮಾರ್ಚ್ 5, 2023: ಭಾನುವಾರ
ಮಾರ್ಚ್ 7, 2023 : ಹೋಳಿ ದಹನ
ಮಾರ್ಚ್ 8, 2023 : ಹೋಳಿ
ಮಾರ್ಚ್ 9, 2023: ಹೋಳಿ
ಮಾರ್ಚ್ 11, 2023 : ತಿಂಗಳ ಎರಡನೇ ಶನಿವಾರ
ಮಾರ್ಚ್ 12, 2023: ಭಾನುವಾರ
ಮಾರ್ಚ್ 19, 2023: ಭಾನುವಾರ
ಮಾರ್ಚ್ 22, 2023 : ಯುಗಾದಿ
ಮಾರ್ಚ್ 25, 2023: ಶನಿವಾರ
ಮಾರ್ಚ್ 26, 2023: ಭಾನುವಾರ
ಮಾರ್ಚ್ 30, 2023: ಶ್ರೀ ರಾಮ ನವಮಿ
ಬ್ಯಾಂಕ್ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ!
ಬ್ಯಾಂಕ್ ರಜಾದಿನಗಳ ಪಟ್ಟಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ಎಲ್ಲಾ ರಾಜ್ಯಗಳು ರಜಾದಿನಗಳ ವಿಭಿನ್ನ ಪಟ್ಟಿಯನ್ನು ಹೊಂದಿವೆ. ಈ ರಜಾದಿನಗಳ ಸಂಪೂರ್ಣ ಪಟ್ಟಿಯನ್ನು RBI ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ