ಭಾರತದಲ್ಲಿ ಚಿನ್ನ ಖರೀದಿಸುವುದು (Gold Purchase) ಎಂದರೆ ಅದೊಂದು ಹೂಡಿಕೆ (Investment) ಇದ್ದಂತೆ. ಹೆಚ್ಚಾಗಿ ಚಿನ್ನವನ್ನು ಆಭರಣ ಅಥವಾ ನಾಣ್ಯದ ರೂಪದಲ್ಲಿ ಖರೀದಿಸುವುದು ವಾಡಿಕೆ. ಆದರೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳ (Gold Jewellery) ನಿಯಮಗಳು ಏಪ್ರಿಲ್ 1, 2023 ರಿಂದ ಬದಲಾಗಲಿವೆ ಅದೇನು ನಿಯಮಗಳು ಹಾಗೂ ಹೇಗೆ ಅನ್ವಯವಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ. ಗ್ರಾಹಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ, ಕೇವಲ ಆರು-ಅಂಕಿಯ ಆಲ್ಫಾನ್ಯೂಮರಿಕ್ HUID (ಹಾಲ್‌ಮಾರ್ಕ್ ವಿಶಿಷ್ಟ ಗುರುತು) - ಯೂನಿಯನ್ ಗುರುತಿನ ಸಂಖ್ಯೆ - ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳು ಮತ್ತು ಚಿನ್ನದ ಕಲಾಕೃತಿಗಳ ಮಾರಾಟವನ್ನು ಏಪ್ರಿಲ್ 1 ರಿಂದ ಅನುಮತಿಸಲಾಗುತ್ತದೆ.
ಅಂದರೆ ಮಾರ್ಚ್ 31 ರ ನಂತರ ಬಿಐಸ್ ಎಂದರೆ ಬ್ಯೂರೋ ಆಫ್ ಇಂಡಿಯಾ ಸ್ಟ್ಯಾಂಡರ್ಡ್ಸ್ನಿಂದ HUID ಸಂಖ್ಯೆ ಇಲ್ಲದೆ ನಾಲ್ಕು ಲೋಗೋಗಳೊಂದಿಗೆ ಹಳೆಯ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳ ಮಾರಾಟವನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
HUID ಸಂಖ್ಯೆ ಎಂಬುದು ಸಂಖ್ಯೆಗಳು ಹಾಗೂ ಅಕ್ಷರಗಳನ್ನೊಳಗೊಂಡ ಆರು-ಅಂಕಿಯ ಆಲ್ಫಾನ್ಯೂಮರಿಕ್ ಕೋಡ್ ಆಗಿದೆ. ಆಭರಣದ ಪ್ರತಿಯೊಂದು ಐಟಂ ಹಾಲ್‌ಮಾರ್ಕಿಂಗ್ ಸಮಯದಲ್ಲಿ HUID ಅನ್ನು ಪಡೆಯುತ್ತದೆ ಹಾಗೂ ಇದು ವಿಭಿನ್ನವಾಗಿರುತ್ತದೆ
ವಂಚನೆ ತಡೆಗಟ್ಟಲು ಈ ಕ್ರಮ
ಚಿನ್ನದ ಆಭರಣ ಅಥವಾ ನಾಣ್ಯಗಳ ಖರೀದಿಯನ್ನು ಭಾರತೀಯರು ಹೆಚ್ಚಾಗಿ ಮಾಡುತ್ತಾರೆ ಹಾಗೂ ಹೂಡಿಕೆಯ ಒಂದು ವಿಧವಾಗಿ ಪ್ರಸಿದ್ಧವಾಗಿವೆ.
ಚಿನ್ನದ ಆಭರಣಗಳನ್ನು ತಪ್ಪಾಗಿ ಮಾರಾಟಮಾಡುವುದು ಹಾಗೂ ಆಭರಣಗಳ ವಿಚಾರದಲ್ಲಿ ವಂಚನೆಗಳು ಹೆಚ್ಚಾಗಿ ನಡೆಯುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಆರು ಅಂಕಿಗಳ ಹಾಲ್‌ಮಾರ್ಕ್ ವಿಶಿಷ್ಟ ಗುರುತಿನ ಸಂಖ್ಯೆಯು ಗ್ರಾಹಕರಿಗೆ ಸಹಕಾರಿಯಾಗಲಿದ್ದು, ಇದು ಚಿನ್ನದ ಆಭರಣಗಳನ್ನು ಅದರ ಅಸಲಿ ಆಭರಣಕಾರರಿಗೆ ಹಿಂತಿರುಗಿಸಲು ಅನುವು ಮಾಡಿಕೊಡುತ್ತದೆ ಅಂತೆಯೇ ಅಸಲಿ ನಕಲಿಗಳ ಅರಿವನ್ನು ಮೂಡಿಸುತ್ತದೆ ಎಂದು ಆಲ್ಫಾ ಕ್ಯಾಪಿಟಲ್‌ನ ಸಹ ಸಂಸ್ಥಾಪಕ ಡಾ ಮುಖೇಶ್ ಜಿಂದಾಲ್ ತಿಳಿಸಿದ್ದಾರೆ.
ಜನರಿಗೆ ತಿಳುವಳಿಕೆಯನ್ನು ನೀಡುತ್ತದೆ
ಹೊಸ ಚಿನ್ನದ ಆಭರಣ ಹಾಲ್‌ಮಾರ್ಕಿಂಗ್ ವ್ಯವಸ್ಥೆಯು ಜನರಿಗೆ ಡಿಜಿಟಲ್ ತಂತ್ರಜ್ಞಾನವನ್ನು ಹೇಗೆ ಬಳಸುತ್ತಿದೆ ಎಂಬ ತಿಳುವಳಿಕೆಯನ್ನು ಮತ್ತು ಅವರಿಗೆ ಹೆಚ್ಚು ಪಾರದರ್ಶಕತೆ ಮತ್ತು ಅನುಕೂಲತೆಯನ್ನು ಒದಗಿಸಲು ಪ್ರಯತ್ನಿಸುತ್ತಿದೆ ಎಂದು ಜಿಂದಾಲ್ ತಿಳಿಸಿದ್ದಾರೆ.
ಭಾರತದ ಚಿನ್ನದ ಬೇಡಿಕೆ
ಚೀನಾದ ನಂತರ ಚಿನ್ನದ ಬೇಡಿಕೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನವಿದೆ ಎಂದು ತಿಳಿಸಿರುವ ಜಿಂದಾಲ್, ಗಗನಕ್ಕೇರುತ್ತಿರುವ ಹಣದುಬ್ಬರ ಹಾಗೂ ಚಿನ್ನದ ಬೆಲೆಗಳಲ್ಲಿನ ಹೆಚ್ಚಳದ ನಡುವೆಯೂ ಚಿನ್ನದ ಬೇಡಿಕೆ ಹಾಗೆಯೇ ಇದೆ.
ಸೆಪ್ಟೆಂಬರ್'22 ರ ಹಬ್ಬದ ಋತುವಿನ ಆರಂಭದಿಂದ, ಚಿನ್ನವು 23% ಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸಿದೆ. ಹೀಗಾಗಿ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವುದು ಮುಖ್ಯವಾಗಿದೆ ಎಂದು ವೆಲ್ತ್ ಡಿಸ್ಕವರಿ/ಇಜೆಡ್ ವೆಲ್ತ್ ನಿರ್ದೇಶಕ ರಾಹುಲ್ ಅಗರ್ವಾಲ್ ತಿಳಿಸಿದ್ದಾರೆ.
6 ಹಾಗೂ 4 ಅಂಕಿಯ HUID ನಡುವಿನ ಗೊಂದಲವನ್ನು ಹೊಸ ಪದ್ಧತಿ ಹೋಗಲಾಡಿಸುತ್ತದೆ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಗುಣಮಟ್ಟದ ಬಗ್ಗೆ ಚಿನ್ನದ ಖರೀದಿದಾರರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ ಎಂದು ರಾಹುಲ್ ತಿಳಿಸಿದ್ದಾರೆ.
ಗೋಲ್ಡ್ ಹಾಲ್‌ಮಾರ್ಕಿಂಗ್
ಚಿನ್ನದ ಹಾಲ್‌ಮಾರ್ಕಿಂಗ್ ಅಮೂಲ್ಯವಾದ ಲೋಹದ ಶುದ್ಧತೆಯ ಪ್ರಮಾಣೀಕರಣವಾಗಿದೆ. ಆರು-ಅಂಕಿಯ HUID ಸಂಖ್ಯೆಯನ್ನು ಅಳವಡಿಸುವ ಮೊದಲು, ಚಿನ್ನದ ಆಭರಣಗಳ ಹಾಲ್‌ಮಾರ್ಕಿಂಗ್ ನಾಲ್ಕು ಗುರುತುಗಳಾದ BIS ಲೋಗೋ, ವಸ್ತುವಿನ ಶುದ್ಧತೆ, ಆಭರಣದ ಲೋಗೋ ಹಾಗೂ ಲೋಹಪರೀಕ್ಷೆ ಮತ್ತು ಹಾಲ್‌ಮಾರ್ಕಿಂಗ್ ಸೆಂಟರ್ ಒಳಗೊಂಡಿತ್ತು. ಆರು-ಅಂಕಿಯ HUID ಸಂಖ್ಯೆಯನ್ನು 1 ಜುಲೈ, 2021 ರಿಂದ ಪರಿಚಯಿಸಲಾಗಿದೆ.
ಹಳೆಯ ಯೋಜನೆಗಳ ಪ್ರಕಾರ ಗ್ರಾಹಕರ ಬಳಿ ಇರುವ ಹಾಲ್‌ಮಾರ್ಕ್ ಆಭರಣಗಳು ಮಾನ್ಯವಾಗಿರುತ್ತವೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ