ಹಿರಿಯ ನಾಗರಿಕರಿಗೆ(Senior Citizens ) ಇಲ್ಲೊಂದು ಸಿಹಿ ಸುದ್ದಿ ಇದೆ, ಅದೇನಪ್ಪಾ ಅಂದ್ರೆ ನಿಮಗಾಗಿ ಸರ್ಕಾರ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ(Pradhan Mantri Vaya Vandana Yojana) ಅಡಿಯಲ್ಲಿ ಹೊಸ ಪಿಂಚಣಿ ಯೋಜನೆ(New Pension Plan)ಯೊಂದನ್ನು ಜಾರಿಗೆ ತಂದಿದೆ. ಭರ್ಜರಿ ಪಿಂಚಣಿ, ಮೂಲ ಹಣ ಉಳಿತಾಯ, ನಿಯಮಿತ ಮಧ್ಯಂತರಗಳಲ್ಲಿ ಆದಾಯ ಹೀಗೆ ಹಲವಾರು ಲಾಭಗಳನ್ನು ಈ ಯೋಜನೆ ಹೊಂದಿದೆ. ಹಾಗಾದರೆ ಅರ್ಜಿ ಸಲ್ಲಿಸುವ ಬಗೆ ಹೇಗೆ, ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
15 ಲಕ್ಷ ರೂ. ಹೂಡಿಕೆ
60 ವರ್ಷ ವಯಸ್ಸಿನ ನಂತರ ಪತಿ ಮತ್ತು ಪತ್ನಿ ಇಬ್ಬರೂ ಒಟ್ಟಾಗಿ ಪ್ರತಿ ತಿಂಗಳು 18,500 ರೂ ಪಿಂಚಣಿಯ ಖಾತರಿ ಪ್ರಯೋಜನವನ್ನು ಪಡೆಯಬಹುದು.
ಖಾತೆದಾರರಿಗೆ 10 ವರ್ಷಗಳವರೆಗೂ ಪಿಂಚಣಿ ನೀಡಲಾಗುತ್ತದೆ, 10 ವರ್ಷಗಳ ನಂತರ ನಿಮ್ಮ ಸಂಪೂರ್ಣ ಹೂಡಿಕೆಯನ್ನು ಸಹ ಹಿಂತಿರುಗಿಸಲಾಗುತ್ತದೆ.
ಈ ಯೋಜನೆಯಡಿ ಹಿರಿಯ ನಾಗರಿಕರು ಒಂದು ಬಾರಿಗೆ 15 ಲಕ್ಷ ರೂ. ಹೂಡಿಕೆ ಮಾಡಬೇಕು. ಈ ಹೂಡಿಕೆಯಿಂದ ವಯಸ್ಸಾದ ಜೀವಿಗಳು ಪ್ರತಿ ತಿಂಗಳು 18,500 ರೂ ಪಿಂಚಣಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಪಡೆಯಬಹುದು.
ಇದನ್ನೂ ಓದಿ: Investment: ಹೂಡಿಕೆ ಮಾಡುವಾಗ ಈ 8 ತಪ್ಪುಗಳನ್ನು ಮಾತ್ರ ಮಾಡ್ಬೇಡಿ!
ಮಾರ್ಚ್ 31, 2023 ಡೆಡ್ಲೈನ್
60 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಮಾರ್ಚ್ 31, 2023 ರವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. PMVVY ಮಾರಾಟವು ಕೊನೆಗೊಳ್ಳಲು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಅವಧಿ ಮುಕ್ತಾಯವಾಗುವ ಮನ್ನ ಹಿರಿಯ ನಾಗರಿಕರು ಹೂಡಿಕೆ ಮಾಡಿ ಪಿಂಚಣಿ ಪಡೆಯಬಹುದು.
ಪಿಎಂವಿವಿವೈಗೆ ಅರ್ಹತೆ
ಪಿಎಂವಿವಿವೈ ಯೋಜನೆಯನ್ನು ಎಲ್ಐಸಿ ಮೂಲಕ ಸರ್ಕಾರ ಒದಗಿಸಿಕೊಡುತ್ತದೆ. ಎಲ್ಐಸಿ ವೆಬ್ಸೈಟ್ನ ಪ್ರಕಾರ, 60 ವರ್ಷ ವಯಸ್ಸಿನ (ಪೂರ್ಣಗೊಂಡ) ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತದ ಹಿರಿಯ ನಾಗರಿಕರು ಪಿಎಂವಿವಿವೈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯನ್ನು ಖರೀದಿಸಲು ಯಾವುದೇ ಹೆಚ್ಚಿನ ವಯಸ್ಸಿನ ಮಿತಿ ಇಲ್ಲ.
ಪಿಎಂವಿವಿವೈ ಯೋಜನೆಯ ಅವಧಿ ಮತ್ತು ಪಿಂಚಣಿ ಪಾವತಿ
ಹಿರಿಯ ನಾಗರಿಕರಿಗೆ ಈ ಯೋಜನೆಯ ಅವಧಿ 10 ವರ್ಷಗಳು. ಪಿಎಂವಿವಿವೈ ಅಡಿಯಲ್ಲಿ ಪಿಂಚಣಿ ಪಾವತಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಖರೀದಿದಾರರು ಆಯ್ಕೆ ಮಾಡಿದ ವಿಧಾನವನ್ನು ಅವಲಂಬಿಸಿ ಪಡೆಯಬಹುದು.
PMVVY ಅಡಿಯಲ್ಲಿ ಪಿಂಚಣಿಯ ಮೊದಲ ಕಂತು 1 ವರ್ಷ, 6 ತಿಂಗಳು, 3 ತಿಂಗಳು ಅಥವಾ 1 ತಿಂಗಳ ನಂತರ ಯೋಜನೆಯನ್ನು ಖರೀದಿಸಿದ ದಿನಾಂಕದಿಂದ ಪ್ರಾರಂಭವಾಗುತ್ತದೆ. ಉದಾಹರಣೆಗೆ, ನೀವು ಮಾಸಿಕ ಪಿಂಚಣಿ ಪಾವತಿಯ ವಿಧಾನವನ್ನು ಆರಿಸಿಕೊಂಡಿದ್ದರೆ ಮತ್ತು ನೀವು ಈಗ ಯೋಜನೆಯನ್ನು ಖರೀದಿಸಿದರೆ ನಿಮ್ಮ ಪಿಂಚಣಿ 1 ತಿಂಗಳ ನಂತರ ಪ್ರಾರಂಭವಾಗುತ್ತದೆ.
ಪಿಎಂವಿವಿವೈ ಮೇಲಿನ ಬಡ್ಡಿ ದರ
ಬಟ್ಟಿಯ ಮೊತ್ತ ಪಿಂಚಣಿಯಾಗಿ ಸಿಗಲಿದ್ದು, "2022-23ರ ಹಣಕಾಸು ವರ್ಷಕ್ಕೆ, ಈ ಯೋಜನೆಯಡಿ ಮಾಡುವ ಹೂಡಿಕೆಗೆ ಖಚಿತವಾಗಿ 7.40% ಬಡ್ಡಿದರವನ್ನು ನಿಗಗಿಪಡಿಸಲಾಗಿದೆ.
ಮಾರ್ಚ್ 31, 2023 ರವರೆಗೆ ಖರೀದಿಸಿದ ಎಲ್ಲಾ ಪಾಲಿಸಿಗಳಿಗೆ 10 ವರ್ಷಗಳ ಪೂರ್ಣ ಪಾಲಿಸಿ ಅವಧಿಗೆ ಈ ಖಚಿತವಾದ ಪಿಂಚಣಿ ದರವನ್ನು ಪಾವತಿಸಲಾಗುತ್ತದೆ.
ಇದನ್ನೂ ಓದಿ: Savings Tips: 30 ವರ್ಷಕ್ಕೆ ಈ ಯುವತಿ ಹೇಗೆ ಕೋಟ್ಯಧಿಪತಿಯಾಗಿದ್ದಾರೆ ನೋಡಿ, ನೀವೂ ಇವ್ರ ಟಿಪ್ಸ್ ಫಾಲೋ ಮಾಡಿ!
PMVVY ಪಿಂಚಣಿ ಖರೀದಿ ಬೆಲೆ
ಪಿಎಂ ವಯ ವಂದನ ಯೋಜನೆಯ ಹೂಡಿಕೆಯ ಅಡಿಯಲ್ಲಿ ಅನುಮತಿಸಲಾದ ಕನಿಷ್ಠ ಪಿಂಚಣಿ ತಿಂಗಳಿಗೆ ರೂ 1,000 ಆಗಿದ್ದು, ಗರಿಷ್ಠ ಪಿಂಚಣಿ ತಿಂಗಳಿಗೆ ರೂ 9,250 ಆಗಿದೆ.
ಯೋಜನೆಯಡಿ ಲಭ್ಯವಿರುವ ಕನಿಷ್ಠ ಖರೀದಿ ಬೆಲೆ ಮಾಸಿಕ ಪಿಂಚಣಿಗೆ ರೂ.1,62,162, ತ್ರೈಮಾಸಿಕ ಪಿಂಚಣಿಗೆ ರೂ.1,61,074, ಅರ್ಧವಾರ್ಷಿಕ ಪಿಂಚಣಿಗೆ ರೂ.1,59,574 ಮತ್ತು ವಾರ್ಷಿಕ ಪಿಂಚಣಿಗೆ ರೂ.1,56,658 ಆಗಿದ್ದು, ಯೋಜನೆಯಡಿ ಲಭ್ಯವಿರುವ ಗರಿಷ್ಠ ಖರೀದಿ ಬೆಲೆ ಮಾಸಿಕ ಪಿಂಚಣಿಗೆ 15 ಲಕ್ಷ, ತ್ರೈಮಾಸಿಕ ಪಿಂಚಣಿಗೆ 14,89,933, ಅರ್ಧ ವಾರ್ಷಿಕ ಪಿಂಚಣಿಗೆ 14,76,064 ಮತ್ತು ವಾರ್ಷಿಕ ಪಿಂಚಣಿಗೆ 14,49,086 ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ