• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • ONDC: ಈ ಆ್ಯಪ್​ನಲ್ಲಿ ಜೊಮ್ಯಾಟೋ-ಸ್ವಿಗ್ಗಿಗಿಂತ ಅರ್ಧ ಬೆಲೆಗೆ ಸಿಗುತ್ತೆ ಫುಡ್​! ಆರ್ಡರ್ ಮಾಡುವುದು ಹೇಗೆ?

ONDC: ಈ ಆ್ಯಪ್​ನಲ್ಲಿ ಜೊಮ್ಯಾಟೋ-ಸ್ವಿಗ್ಗಿಗಿಂತ ಅರ್ಧ ಬೆಲೆಗೆ ಸಿಗುತ್ತೆ ಫುಡ್​! ಆರ್ಡರ್ ಮಾಡುವುದು ಹೇಗೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ONDC ಅನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸೇವೆ ಆರಂಭಿಸಿತ್ತು. ಇದೀಗ ಕಡಿಮೆ ಅವಧಿಯಲ್ಲಿ, ಬೇರೆ ಫುಡ್ ಆ್ಯಪ್​ಗಳಿಗಿಂತ ಕಡಿಮೆ ವೆಚ್ಚದಲ್ಲಿ ಆನ್‌ಲೈನ್‌ನಲ್ಲಿ ಆಹಾರವನ್ನು ಒದಗಿಸುವುದರಲ್ಲಿ ಇದು ಜನಪ್ರಿಯವಾಗುತ್ತಿದೆ.

  • Share this:

ಬೆಂಗಳೂರು: ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ (Food Oder) ಮಾಡಲು ನೀವು ಹೆಚ್ಚಾಗಿ ಜೊಮ್ಯಾಟೊ ಅಥವಾ ಸ್ವಿಗ್ಗಿ ( Swiggy and Zomato) ಅಪ್ಲಿಕೇಶನ್ ಅನ್ನು ಬಳಸುತ್ತೀರಿ, ಆದರೆ ಈಗ ಒಎನ್​ಡಿಸಿ (ONDC) ಈ ಅಪ್ಲಿಕೇಶನ್‌ಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ. 'ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್' (Open Network for Digital Commerce)ಎಂಬುದು ರೆಸ್ಟೋರೆಂಟ್ ಮಾಲೀಕರಿಗೆ ನೇರವಾಗಿ ಗ್ರಾಹಕರಿಗೆ ಆಹಾರವನ್ನು ಮಾರಾಟ ಮಾಡಲು ಅವಕಾಶ ನೀಡುವ ವೇದಿಕೆಯಾಗಿದೆ. ವಿಶೇಷವೆಂದರೆ ಜೊಮ್ಯಾಟೊ ಮತ್ತು ಸ್ವಿಗ್ಗಿಯಂತಹ ಯಾವುದೇ ಮೂರನೇ ವ್ಯಕ್ತಿ ಅಗತ್ಯವಿರುವುದಿಲ್ಲ. ಈ ಕಾರಣದಿಂದಾಗಿ, ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವವರಿಗೆ ಒಎನ್​ಡಿಸಿ ಉತ್ತಮ ಆಯ್ಕೆಯಾಗಿದೆ. ಅಲ್ಲಿ ಬೇರೆ ಆಪ್​ಗಳಿಗೆ ಹೋಲಿಕೆ ಮಾಡಿದರೆ ತುಂಬಾ ಅಗ್ಗವಾಗಿ ಸಿಗುತ್ತಿದೆ. ONDC ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಜನರು ಈ ಹೊಸ ವೇದಿಕೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


ONDC ಅನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸೇವೆ ಆರಂಭಿಸಿತ್ತು. ಇದೀಗ ಕಡಿಮೆ ಅವಧಿಯಲ್ಲಿ, ಬೇರೆ ಫುಡ್ ಆ್ಯಪ್​ಗಳಿಗಿಂತ ಕಡಿಮೆ ವೆಚ್ಚದಲ್ಲಿ ಆನ್‌ಲೈನ್‌ನಲ್ಲಿ ಆಹಾರವನ್ನು ಒದಗಿಸುವುದರಲ್ಲಿ ಇದು ಜನಪ್ರಿಯವಾಗುತ್ತಿದೆ. ಜೊಮ್ಯಾಟೊಅಥವಾ ಸ್ವಿಗ್ಗಿಗೆ ಹೋಲಿಸಿದರೆ ಒಎನ್​ಡಿಸಿಯಲ್ಲಿ ಆರ್ಡರ್ ಮಾಡಿದ ಆಹಾರದ ಬೆಲೆಯಲ್ಲಿನ ಭಾರೀ ವ್ಯತ್ಯಾಸ ಇದ್ದು, ಸಾಮಾಜಿಕ ಜಾಲತಾಣದಲ್ಲಿ ಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: Online Market: ಆನ್‌ಲೈನ್‌ ಮಾರುಕಟ್ಟೆಯಲ್ಲಿ 2 ತಿಂಗಳಲ್ಲಿ 25 ಪಟ್ಟು ಆರ್ಡರ್ ಪಡೆದ ONDC!


ಕಡಿಮೆ ಅವಧಿಯಲ್ಲೇ ಜನಪ್ರಿಯತೆ


ವಾಸ್ತವವಾಗಿ ONDC ದೇಶದಲ್ಲಿ ಇ-ಕಾಮರ್ಸ್ ವ್ಯವಹಾರಕ್ಕೆ ಉತ್ತಮ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ವೇದಿಕೆಯನ್ನು ಅಧಿಕೃತವಾಗಿ ಏಪ್ರಿಲ್ 2022 ರಲ್ಲಿ ಪ್ರಾರಂಭಿಸಲಾಯಿತು. ಪ್ರಸ್ತುತ ಈ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತಿದಿನ 10,000 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಗ್ರಾಹಕರಿಗೆ ತಲುಪಿಸುತ್ತಿದೆ. ONDC ಯ ಸೇವೆ ಪ್ರಸ್ತುತ ದೇಶದ 240 ನಗರಗಳಲ್ಲಿ ಲಭ್ಯವಿದೆ.


ಅಸ್ತಿತ್ವದಲ್ಲಿರುವ ಆಹಾರ ವಿತರಣಾ ವೇದಿಕೆಗಳಾದ ಸ್ವಿಗ್ಗಿ ಮತ್ತು ಜೊಮ್ಯಾಟೊ ಆ್ಯಪ್​ ಹಾಗೂ ONDC ಎರಡರಲ್ಲೂ ಫುಡ್​ ಆರ್ಡರ್ ಮಾಡುವ ಮೂಲಕ ಬಳಕೆದಾರರು ಬೆಲೆಯನ್ನು ಹೋಲಿಸುತ್ತಿದ್ದಾರೆ. ಬೆಲೆಗಳಲ್ಲಿ 60 ಪ್ರತಿಶತ ವ್ಯತ್ಯಾಸವಿದೆ ಎಂದು ಒಬ್ಬ ಬಳಕೆದಾರ ಹೇಳಿಕೊಂಡಿದ್ದಾನೆ. ಅಂದರೆ ONDC ನಿಂದ ಆರ್ಡರ್ ಮಾಡಿದ ಆಹಾರವು ಇತರ ಆಹಾರ ವಿತರಣಾ ಅಪ್ಲಿಕೇಶನ್‌ಗಳ ಬೆಲೆಗಿಂತ ಅರ್ಧದಷ್ಟಿದೆ.
ONDC ನಿಂದ ಆರ್ಡರ್ ಮಾಡುವುದು ಹೇಗೆ?


ವಿವಿಧ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದೇ ರೆಸ್ಟೋರೆಂಟ್‌ನಿಂದ ಬರ್ಗರ್ ಮತ್ತು ಕೂಲ್ ಡ್ರಿಂಕ್ಸ್​ ಆರ್ಡರ್ ಮಾಡಿದ ನಂತರ ಬಳಕೆದಾರರು ಒಟ್ಟು ಬಿಲ್‌ನ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ. Swiggy ನಲ್ಲಿನ ಬಿಲ್ ₹337 ತೋರಿಸಿದೆ, ಅದೇ ಆಹಾರ ಪದಾರ್ಥವು ONDC ನಲ್ಲಿ ₹185.57 ಕ್ಕೆ ಲಭ್ಯವಿದೆ.


ONDC ಉದ್ದೇಶ?


ಇದು ಮುಕ್ತ ಪ್ರೋಟೋಕಾಲ್ ಅನ್ನು ಆಧರಿಸಿದ ತಂತ್ರಜ್ಞಾನ ನೆಟ್‌ವರ್ಕ್ ಆಗಿದ್ದು, ಮೊಬೈಲ್, ದಿನಸಿ, ಆಹಾರ ಆರ್ಡರ್ ಮತ್ತು ಡೆಲಿವರಿ, ಹೋಟೆಲ್ ಕಾಯ್ದಿರಿಸುವಿಕೆ ಮತ್ತು ಪ್ರಯಾಣದಂತಹ ಡೊಮೇನ್‌ಗಳಾದ್ಯಂತ ಸ್ಥಳೀಯ ವಾಣಿಜ್ಯವನ್ನು ಅನ್ವೇಷಿಸಲು ಮತ್ತು ತೊಡಗಿಸಿಕೊಳ್ಳಲು ಯಾವುದೇ ವೆಬ್ ಅಪ್ಲಿಕೇಶನ್ ಅನ್ನು ಸಕ್ರಿಯಗೊಳಿಸುತ್ತದೆ.


ಇದನ್ನೂ ಓದಿ: Indiaದ ನಾಲ್ಕನೇ ಶ್ರೀಮಂತ ಮಹಿಳೆ ಈಕೆ, ಇವರ ಆಸ್ತಿಯಲ್ಲಿ ಲಕ್ಷಾಂತರ ಜನರು ಜೀವನ ನಡೆಸಬಹುದು!


ಒಎನ್​ಡಿಸಿ ಹೇಗೆ ಕಾರ್ಯನಿರ್ವಹಿಸುವುದು ಹೇಗೆ?


ವಿವಿಧ ಹೋಟೆಲ್​ಗಳು, ಅಂಗಡಿಗಳು ಹಾಗೂ ಉದ್ದಿಮೆಗಳು ಒಎನ್​ಡಿಸಿಗೆ ನೊಂದಾಯಿಸಿಕೊಳ್ಳಬೇಕು. ಈಗಾಗಲೇ ಪೇಟಿಎಂ, ಮೀಶೋ, ಮ್ಯಾಜಿಕ್​ಪಿನ್, ಮೈಸ್ಟೋರ್ ಸೇರಿದಂತೆ ಹಲವು ಇಕಾಮರ್ಸ್ ಸಂಸ್ಥೆಗಳು ಒಎನ್​ಡಿಸಿಗೆ ಪಾರ್ಟ್ನರ್​ ಆಗಿವೆ. ಗ್ರಾಹಕರು ಅದನ್ನು ಆಯ್ದುಕೊಂಡು ಆರ್ಡರ್ ಕೊಡಬಹುದು. ಉದಾಹರಣೆಗೆ ಪೇಟಿಎಂಗೆ ಹೋಗಿ ಅಲ್ಲಿ ಒಎನ್​ಡಿಸಿ ಎಂದು ಸರ್ಚ್ ಮಾಡಿದರೆ ಫುಡ್ ಅಂಡ್ ಗ್ರೋಸರಿ ವಿಭಾಗ ಸಿಗುತ್ತದೆ. ಅದರಲ್ಲಿ ಪಟ್ಟಿಯಾಗಿರುವ ಆಹಾರವಸ್ತುಗಳನ್ನು ಗ್ರಾಹಕರು ಅಲ್ಲಿಯೇ ಆರ್ಡರ್ ಮಾಡಬಹುದು. ಅಲ್ಲದೆ ಪೇಟಿಎಂ ಅಲ್ಪಮೊತ್ತದ ಕಮಿಷನ್ ಪಡೆಯುತ್ತದೆ.

top videos
    First published: