Personal Loan: ಈ ಕಾರಣಗಳಿಗೋಸ್ಕರ ಮಾತ್ರ ಲೋನ್​ ತಗೋಬೇಡಿ, ಆಮೇಲೆ ತಲೆ ಮೇಲೆ ಕೈ ಹೊತ್ತು ಕೂರಬೇಕಾಗುತ್ತೆ!

ನಿಜವಾಗಲೂ ನಿಮಗೆ ಕಷ್ಟ ಇದೆ ಅಂದರೆ ಮಾತ್ರ ನೀವು ಬ್ಯಾಂಕ್​ನಿಂದ ವೈಯಕ್ತಿಕ ಸಾಲ ಪಡೆದುಕೊಳ್ಳಿ. ಅದರಲ್ಲೂ ಇಂದು ನಾವು ಹೇಳುತ್ತಿರುವ ಕಾರಣಗಳಿಗೆ ಸಾಲವನ್ನು ತೆಗೆದುಕೊಳ್ಳಬೇಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೊದಲೆಲ್ಲಾ ಸಾಲ (Loan) ಬೇಕು ಅಂದರೆ, ಕೈಸಾಲ (Hand Loan) ಮಾತ್ರ ಪಡೆಯಬೇಕಿತ್ತು. ನಿಮ್ಮ ಬಳಿ ಬೆಲೆ ಬಾಳುವ ವಸ್ತು ಅಥವಾ ಮನೆ (Home) , ಆಸ್ತಿ ಪತ್ರ (Property Deed) ಗಳನ್ನು ಅಡವಿಟ್ಟು ಸಾಲ ತೆಗೆದುಕೊಳ್ಳಬೇಕಿತ್ತು. ಈಗ ಕಾಲ ಬದಲಾಗಿದೆ. ಸಾಲವೇ ನಿಮ್ಮ ಬಳಿ ಹುಡುಕಿಕೊಂಡು ಬರುವಂತೆ ಆಗಿದೆ. ಪ್ರತಿ ದಿನ ಬ್ಯಾಂಕ್​ (Bank) ಗಳಿಂದ ಸಾಲ ಬೇಕಾ ಎಂದು ಕರೆ ಮಾಡುತ್ತಿರುತ್ತಾರೆ. ಹೀಗಾಗಿ ಎಲ್ಲರೂ ಒಂದು ಸಲ ಟ್ರೈ ಮಾಡಿ ನೋಡೋಣ ಅಂತ ಸಣ್ಣ ಪುಟ್ಟ ಖರ್ಚುಗಳಿಗೆಲ್ಲಾ ಬ್ಯಾಂಕ್​ನಿಂದ ಸಾಲ ಪಡೆದು ಇಎಂಐ (EMI) ಎಂಬ ಜಾಲದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಒಂದು ಬಾರಿ ಇಎಂಐ ಜಾಲದಲ್ಲಿ ಸಿಲಿಕಿದರೆ ಅದರಿಂದ ಆಚೆ ಬರುವುದು ಬಹಳ ಕಷ್ಟ. ನಿಜವಾಗಲೂ ನಿಮಗೆ ಕಷ್ಟ ಇದೆ ಅಂದರೆ ಮಾತ್ರ ನೀವು ಬ್ಯಾಂಕ್​ನಿಂದ ವೈಯಕ್ತಿಕ ಸಾಲ ಪಡೆದುಕೊಳ್ಳಿ. ಅದರಲ್ಲೂ ಇಂದು ನಾವು ಹೇಳುತ್ತಿರುವ ಕಾರಣಗಳಿಗೆ ಸಾಲವನ್ನು ತೆಗೆದುಕೊಳ್ಳಬೇಡಿ.

ಸಾಲ ತೆಗೆದುಕೊಳ್ಳುವ ಮೊದಲು ಹುಷಾರ್​!

ಸಾಲ ತೆಗೆದುಕೊಳ್ಳುವವರು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವ ಉದ್ದೇಶಕ್ಕಾಗಿ ಸಾಲ ತೆಗೆದುಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಬೇಕು. ಈಗ ನೀವು ಯಾವ ವಸ್ತುಗಳಿಗೆ ಸಾಲ ತೆಗೆದುಕೊಳ್ಳಬಾರದು ಎಂದು ತಿಳಿಯೋಣ ಕೆಲವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸಾಲ ತೆಗೆದುಕೊಳ್ಳುತ್ತಾರೆ. ಏಕೆಂದರೆ ಮಾರುಕಟ್ಟೆಯಲ್ಲಿ ಭಾರೀ ಲಾಭ ಗಳಿಸುವ ಭರವಸೆ. ಆದರೆ ಈ ತಪ್ಪನ್ನು ಮಾಡಬೇಡಿ. ವೈಯಕ್ತಿಕ ಸಾಲ ತೆಗೆದುಕೊಳ್ಳದ ಷೇರುಗಳಲ್ಲಿ ಹೂಡಿಕೆ ಮಾಡಬೇಡಿ.

ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಸಾಲ ಮಾಡ್ಬೇಡಿ!

ನೀವು ತುಂಬಾ ಆತ್ಮವಿಶ್ವಾಸದಿಂದ ಇದನ್ನು ಮಾಡಿದರೆ, ನೀವು ಭಾರೀ ಪ್ರಮಾಣದಲ್ಲಿ ಕಳೆದುಕೊಳ್ಳಬೇಕಾಗಬಹುದು. ಷೇರು ಮಾರುಕಟ್ಟೆಯಲ್ಲಿ ಅಪಾಯ ಹೆಚ್ಚು. ಹಾಗಾಗಿ ಪರ್ಸನಲ್ ಲೋನ್ ತೆಗೆದುಕೊಳ್ಳುವ ಮೂಲಕ ದೊಡ್ಡ ತಪ್ಪು ಮಾಡಬೇಡಿ. ಷೇರು ಮಾರುಕಟ್ಟೆಯಲ್ಲಿ ನಷ್ಟವಾದರೆ, ಆಗ ಸಾಲದ ಇಎಂಐ ಕಟ್ಟಲಾಗದೆ ಸಮಸ್ಯೆ ಎದುರಿಸಬೇಕಾಗುತ್ತದೆ.

ಇದನ್ನೂ ಓದಿ : ಭಾರತದಲ್ಲಿ ಸದ್ಯ ಟ್ರೆಂಡಿಂಗ್​ನಲ್ಲಿರೋ ಕೃಷಿ ಇದು, ಎಕರೆಗೆ ಅರ್ಧ ಕೋಟಿ ಗ್ಯಾರಂಟಿ ಬಾಸ್​!

ಅಲ್ಲದೆ ಈಗಾಗಲೇ ಸಾಲ ಪಡೆದು ಮರುಪಾವತಿಸಲು ಮತ್ತೆ ಸಾಲ ಪಡೆಯುವುದು ಸರಿಯಲ್ಲ. ಹೀಗೆ ಮಾಡುವುದರಿಂದ ಒಂದೆಡೆ ಸಾಲ ಮುಚ್ಚಿದರೂ ಮತ್ತೊಂದರಲ್ಲಿ ಸಾಲದ ಖಾತೆ ಸೃಷ್ಟಿಯಾಗುತ್ತದೆ. ಈ ಸಂದರ್ಭದಲ್ಲಿ ನೀವು ಮಾಸಿಕ EMI ಅನ್ನು ಪಾವತಿಸುತ್ತಲೇ ಇರಬೇಕಾಗುತ್ತದೆ. ಅಂದರೆ ನೀವು ವೈಯಕ್ತಿಕ ಸಾಲದ ಚಕ್ರದಲ್ಲಿ ಸಿಲುಕಿಕೊಳ್ಳುತ್ತೀರಿ. ಅಂತಹ ಸಂದರ್ಭದಲ್ಲಿ ನೀವು ಪಶ್ಚಾತ್ತಾಪ ಪಡುವುದನ್ನು ಬಿಟ್ಟು ಬೇರೆ ಆಯ್ಕೆ ಇರುವುದಿಲ್ಲ.

ಗೋಲ್ಡ್​, ಫೋನ್​ ಖರೀದಿಸಲು ಸಾಲ ಬೇಡ!

ಅಲ್ಲದೆ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವ ಮೂಲಕ ಅನಗತ್ಯ ವೆಚ್ಚಗಳನ್ನು ಮಾಡಬೇಡಿ. ಉದಾಹರಣೆಗೆ, ನೀವು ವಜ್ರದ ನೆಕ್ಲೇಸ್ ಅಥವಾ ಉಂಗುರವನ್ನು ಖರೀದಿಸಲು ಬಯಸುತ್ತೀರಿ. ಇಲ್ಲದಿದ್ದರೆ ದುಬಾರಿ ಮೊಬೈಲ್  ಅನ್ನು ವೈಯಕ್ತಿಕ ಸಾಲ ತೆಗೆದುಕೊಂಡು  ಖರೀದಿಸಬೇಡಿ. ನಿಮ್ಮ ಭಾವೋದ್ರೇಕಗಳನ್ನು ಪೂರೈಸಲು ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವುದು ನಂತರ ತೊಂದರೆಗೆ ಕಾರಣವಾಗಬಹುದು. ಅದಕ್ಕಾಗಿಯೇ ಪರ್ಸನಲ್ ಲೋನ್ ತೆಗೆದುಕೊಳ್ಳಲು ಯೋಚಿಸುತ್ತಿರುವವರು ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಇದನ್ನೂ ಓದಿ: ತಿಂಗಳಿಗೆ ಕೇವಲ 1 ಸಾವಿರ ಉಳಿಸಿ-ಕೋಟ್ಯಧಿಪತಿಯಾಗಿ, ಇದಕ್ಕಿಂತ ಒಳ್ಳೆ ಉಳಿತಾಯ ಆಯ್ಕೆ ಮತ್ತೊಂದಿಲ್ಲ!

ಸುಖಾಸುಮ್ಮನೆ ಶಾರ್ಟ್ ಟೈಮ್​ ಆಸೆಗಾಗಗಿ ಲಾಂಗ್​ ಟೈಮ್​ ಸಾಲ ಪಡೆದು ಹಿಂಸೆ ಪಡಬೇಡಿ. ನಿಮಗೆ ಏನಾದರೂ ಕೊಂಡುಕೊಳ್ಳುವ ಆಸೆ ಇದ್ದರೆ, ಉಳಿತಾಯ ಮಾಡಿದ ಹಣದಲ್ಲಿ ಅದನ್ನು ಖರೀದಿಸಿ. ಆಗ ಸಿಗುವ ಸಂತೋಷವೇ ಬೇರೆ. ಅದು ಬಿಟ್ಟು ಕ್ಷಣಿಕ ಖುಷಿಗೋಸ್ಕರ ವೈಯಕ್ತಿಕ ಸಾಲ ಪಡೆದು ಪೇಚಿಗೆ ಸಿಲುಕಬೇಡಿ.
Published by:Vasudeva M
First published: