ವರ್ಷದ ಅಂತ್ಯದ ಆರ್ಥಿಕ ತ್ರೈಮಾಸಿಕದಲ್ಲಿ ದಾಖಲೆಯ ಆದಾಯ ಗಳಿಸಿರುವ Network18

ಆದಾಯಗಳ ಬೆಳವಣಿಗೆ, ನಿಯಂತ್ರಿತ ನಿರ್ವಹಣಾ ವೆಚ್ಚಗಳು ಮತ್ತು ಕಡಿಮೆ ಹಣಕಾಸು ವೆಚ್ಚಗಳಿಂದ ಆಗಿರುವ ಲಾಭ ವರ್ಷಕ್ಕೆ 31% ರಷ್ಟು ಏರಿಕೆಯಾಗಿದೆ. ಆ ಮೂಲಕ ₹337 ಕೋಟಿ ಲಾಭ ಗಳಿಸಲು ಸಾಧ್ಯವಾಗಿದೆ.

 Network18

Network18

  • Share this:
 ಡಿ.31ಕ್ಕೆ ಅಂತ್ಯವಾದ 3ನೇ ಆರ್ಥಿಕ ತ್ರೈಮಾಸಿಕದಲ್ಲಿ ನೆಟ್​​​ವರ್ಕ್​​​ 18 ಮೀಡಿಯಾ (Network 18 Media and Investments) ದಾಖಲೆಯ ಲಾಭವನ್ನು ಗಳಿಸಿದೆ. ನಿರ್ವಹಣಾ ಲಾಭ (operating profit), ಆದಾಯವೂ ಬರೋಬ್ಬರಿ ₹373 ಕೋಟಿ ಎಂದು ಸಂಸ್ಥೆ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. Network18 ನ ತ್ರೈಮಾಸಿಕ ಆದಾಯ 1,657 ಕೋಟಿ. ವರ್ಷದಿಂದ ವರ್ಷಕ್ಕೆ 16.5 ರಷ್ಟು ಏರಿಕೆಯಾಗಿದೆ. ಕಳೆದ ಒಂದೇ ತ್ರೈಮಾಸಿಕದಲ್ಲಿ ಇದುವರೆಗಿನ ಅತ್ಯಧಿಕ ಲಾಭವನ್ನು ಗಳಿಸುವ ಮೂಲಕ ದಾಖಲೆಯನ್ನು ನಿರ್ಮಿಸಿದೆ.  ಪ್ರಾದೇಶಿಕ ಮಾರುಕಟ್ಟೆಗಳಲ್ಲಿನ ಆದಾಯದ ಬೆಳವಣಿಗೆ ಪ್ರಾದೇಶಿಕ ಸುದ್ದಿ ಮಾಧ್ಯಮಗಳಿಂದ ಸಾಧ್ಯವಾಗಿದೆ. ಆ ಮೂಲಕ ಒಂದೇ ಆರ್ಥಿಕ ತ್ರೈಮಾಸಿಕದಲ್ಲಿ ಇಷ್ಟೊಂದು ಲಾಭ ಗಳಿಸಲು ಸಾಧ್ಯವಾಗಿದೆ. ನೆಟ್​​ವರ್ಕ್​​ 18 ದೇಶ ಬಹುತೇಕ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿಯೂ ಸುದ್ದಿ ಮಾಧ್ಯಮಗಳನ್ನು ಹೊಂದಿದೆ.

ಜಾಹೀರಾತುದಾರನ್ನು ಸೆಳೆಯುವಲ್ಲಿ ಮಹತ್ತರ ಸಾಧನೆ

ಆದಾಯಗಳ ಬೆಳವಣಿಗೆ, ನಿಯಂತ್ರಿತ ನಿರ್ವಹಣಾ ವೆಚ್ಚಗಳು ಮತ್ತು ಕಡಿಮೆ ಹಣಕಾಸು ವೆಚ್ಚಗಳಿಂದ ಆಗಿರುವ ಲಾಭ ವರ್ಷಕ್ಕೆ 31% ರಷ್ಟು ಏರಿಕೆಯಾಗಿದೆ. ಆ ಮೂಲಕ ₹337 ಕೋಟಿ ಲಾಭ ಗಳಿಸಲು ಸಾಧ್ಯವಾಗಿದೆ. ಡಿಜಿಟಲ್ ಜಾಹೀರಾತು ಬಳಕೆದಾರರು ಮತ್ತು ಜಾಹೀರಾತುದಾರನ್ನು ಸೆಳೆಯುವಲ್ಲಿ ನೆಟ್​ವರ್ಕ್​ ಮಾಧ್ಯಮಗಳು ಯಶಸ್ವಿಯಾಗಿರುವ ಫಲವೇ ಈ ದೊಡ್ಡ ಮೊತ್ತದ ಲಾಭಕ್ಕೆ ಕಾರಣ ಎಂದು ಸಂಸ್ಥೆ ಹೇಳಿಕೊಂಡಿದೆ.

ಇದನ್ನೂ ಓದಿ: Dunzoನಲ್ಲಿ 200 ಮಿಲಿಯನ್​​ ಡಾಲರ್​ ಹೂಡಿಕೆ ಮಾಡಿದ Reliance Retail

ಡಿಜಿಟಲ್​ ಸುದ್ದಿ ಮಾಧ್ಯಮಗಳು ಅತ್ಯತ್ತಮ ಸಾಧನೆಯೊಂದಿಗೆ ಜಾಹೀರಾತಿನಿಂದ ಬರುವ ಲಾಭವು ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ದುಪಟ್ಟಾಗಿವೆ. ನಮ್ಮ ಸಂಸ್ಥೆಯ ವೆಬ್​ ಪೋರ್ಟಲ್​ ಗಳ ಮೂಲಕ ಡಿಜಿಟಲ್​​ ಜಾಹೀರಾತನ್ನು ಜನರ ಮುಂದಿಡಲು ಜಾಹೀರಾತುದಾರರು ಉತ್ಸುಕರಾಗಿದ್ದಾರೆ. ದಿನದಿಂದ ದಿನಕ್ಕೆ ಬಲವಾದ ಡಿಜಿಟಲ್​ ವೇದಿಕೆಯಾಗಿ ನೆಟ್​ವರ್ಕ್​ 18 ರೂಪುಗೊಂಡಿದೆ ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ. ಬಲವಾದ ಜಾಹೀರಾತಿನ ಬೇಡಿಕೆಯಿಂದ ನೆಟ್‌ವರ್ಕ್‌ನ YTD ಜಾಹೀರಾತು ಆದಾಯವು ಈಗಾಗಲೇ FY21 ಗಾಗಿ ಪೂರ್ಣ ವರ್ಷದ ಅಂಕಿ ಅಂಶವನ್ನು ಮೀರಿದೆ.

ವರ್ಷದಿಂದ ವರ್ಷಕ್ಕೆ ಶೇ.41ರಷ್ಟು ಲಾಭ ಹೆಚ್ಚಳ

ಡಿಜಿಟಲ್ ಸುದ್ದಿ ವಿಭಾಗವು ಕಳೆದ 18 ತಿಂಗಳುಗಳಲ್ಲಿ ನಿರಂತರ ಆದಾಯದ ಬೆಳವಣಿಗೆಯನ್ನು ಪ್ರದರ್ಶಿಸಿದೆ.   ಡಿಜಿಟಲ್ ಲೋಕದಲ್ಲಿ ಹೆಚ್ಚುತ್ತಿರುವ ವ್ಯಾಪ್ತಿಗೆ ಸಾಕ್ಷಿಯಾಗಿದೆ ಎಂದು ಕಂಪನಿಯು ತನ್ನ ಬಿಡುಗಡೆಯಲ್ಲಿ ತಿಳಿಸಿದೆ. ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ 41 ಪ್ರತಿಶತ ಹೆಚ್ಚಳ ಆಗುತ್ತಿದೆ ತ್ರೈಮಾಸಿಕದಲ್ಲಿ ಆಪರೇಟಿಂಗ್ ಮಾರ್ಜಿನ್(Operating margin) ಶೇಕಡಾ 21.2 ಆಗಿತ್ತು.

ಮಾಧ್ಯಮಗಳ ವ್ಯಾಪ್ತಿಯು ವರ್ಷಕ್ಕೆ ಶೇ.50ರಷ್ಟು ಹೆಚ್ಚಿದೆ

ನೆಟ್‌ವರ್ಕ್ 18 ರ ಡಿಜಿಟಲ್ ಸುದ್ದಿ ಸ್ವತ್ತುಗಳ ವ್ಯಾಪ್ತಿಯು 50 ಪ್ರತಿಶತದಷ್ಟು ವರ್ಷದಿಂದ ಹೆಚ್ಚಾಯಿತು, ಇದು ಕವರೇಜ್‌ನಲ್ಲಿ ನಿರಂತರವಾಗಿ ವಿಸ್ತರಿಸುತ್ತಿರುವ ವಿಷಯಗಳಿಂದ ನಡೆಸಲ್ಪಟ್ಟಿದೆ. ನೆಟ್‌ವರ್ಕ್ 18 ರ ಡಿಜಿಟಲ್ ಸುದ್ದಿ ಸ್ವತ್ತುಗಳ ವ್ಯಾಪ್ತಿಯು ವರ್ಷಕ್ಕೆ ಶೇ.50ರಷ್ಟು ಹೆಚ್ಚಿದೆ. ವಿಶೇಷವಾಗಿ ಮೊಬೈಲ್ , ಇಂಟರ್ನೆಟ್ ಬಳಕೆದಾರರ ಮೇಲೆ ಕೇಂದ್ರೀಕೃತವಾಗಿರುವ ನವೀನ ವರದಿ ಸ್ವರೂಪಗಳಿಂದ ನಡೆಸಲ್ಪಟ್ಟಿದೆ. 50 ಪ್ರತಿಶತ ಪ್ಲಸ್ ಇಂಟರ್ನೆಟ್ ಬಳಕೆದಾರರು (ಸಾಮಾನ್ಯ ಸುದ್ದಿ, ಹಣಕಾಸು, ಕ್ರಿಕೆಟ್) ಮತ್ತು ಭಾಷೆಗಳ ಉಪಸ್ಥಿತಿಯೊಂದಿಗೆ, Network18 ನ ವೆಬ್‌ಸೈಟ್‌ಗಳು ವೈವಿಧ್ಯಮಯ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಜಾಹೀರಾತುದಾರರು ತಮ್ಮ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಸೂಕ್ತವಾದ ವೇದಿಕೆಯನ್ನು ನೀಡುತ್ತದೆ.

ಹಣಕಾಸಿನ ಕಾರ್ಯಕ್ಷಮತೆಯ ಕುರಿತು ಪ್ರತಿಕ್ರಿಯಿಸಿದ TV18 ನ ಅಧ್ಯಕ್ಷ ಆದಿಲ್ ಜೈನುಲ್ಭಾಯ್ , ನಾವು ಬಲವಾದ ಮತ್ತು ಸಮರ್ಥನೀಯ ಮಾಧ್ಯಮ ಫ್ರ್ಯಾಂಚೈಸ್ ಅನ್ನು ನಿರ್ಮಿಸುತ್ತಿದ್ದೇವೆ. ಅದು ಭಾರತೀಯ ಪ್ರೇಕ್ಷಕರಿಗೆ ಗುಣಮಟ್ಟದ ವಿಷಯವನ್ನು ತಲುಪಿಸುತ್ತದೆ. ಆ ಮೂಲಕ ಷೇರುದಾರರಿಗೆ ಮೌಲ್ಯವನ್ನು ನೀಡುತ್ತದೆ. ಕಳೆದ ಕೆಲವು ವರ್ಷಗಳಿಂದ ನಾವು ಹಲವಾರು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇದು ಲಾಭದಾಯಕತೆಯನ್ನು ಸಾಧಿಸಲು ಮತ್ತು ನಮ್ಮ ವ್ಯವಹಾರಗಳಲ್ಲಿ ಬದಲಾವಣೆಯನ್ನು ಸಾಧಿಸಲು ಸಹಾಯ ಮಾಡಿದೆ ಎಂದರು.
Published by:Kavya V
First published: