Network 18 ಮೈಲಿಗಲ್ಲು, ವರ್ಷದಿಂದ ವರ್ಷಕ್ಕೆ 58% ವೇಗದ ಬೆಳವಣಿಗೆ ಕಂಡ ಮಾಧ್ಯಮ ಸಮೂಹ

ಟೆಲಿವಿಷನ್ ಮಾಧ್ಯಮದಲ್ಲಿ ನಮ್ಮ ಬಲವನ್ನು ಹೆಚ್ಚಿಸಿಕೊಳ್ಳುತ್ತೇವೆ. ಇದರ ಜೊತೆಗೆ ಡಿಜಿಟಲ್ ಮಾಧ್ಯಮ ಜಗತ್ತಿನಲ್ಲಿ ಇನ್ನಷ್ಟು ಬಲಿಷ್ಠರಾಗುವ ಗುರಿಯನ್ನು ಹೊಂದಿದ್ದೇವೆ ಎಂದು ಸಹ ಆದಿಲ್ ಜೈನುಲ್​ಭಾಯ್ ತಿಳಿಸಿದ್ದಾರೆ.

ನೆಟ್​ವರ್ಕ್ 18 (ಪ್ರಾತಿನಿಧಿಕ ಚಿತ್ರ)

ನೆಟ್​ವರ್ಕ್ 18 (ಪ್ರಾತಿನಿಧಿಕ ಚಿತ್ರ)

  • Share this:
    Network18 Media & Investments ಸಂಸ್ಥೆಯು ವರ್ಷದಿಂದ ವರ್ಷಕ್ಕೆ ಶೇಕಡಾ 58.1 ದಷ್ಟು ಏಕೀಕೃತ ನಿವ್ವಳ ಲಾಭ ಗಳಿಸಿರುವುದಾಗಿ ಘೋಷಿಸಿದೆ. ಮೇ 3 ರಂದು ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಮಾರ್ಚ್‌ ತಿಂಗಳಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ಗಳಿಸಿರುವ ಲಾಭ 61.6 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ದೇಶದ ಪ್ರಮುಖ ಮಾಧ್ಯಮ ಕಂಪನಿಯಾದ Network18 Media & Investments ತನ್ನ ಕಾರ್ಯಾಚರಣೆಗಳಿಂದ ಕ್ರೋಢೀಕೃತ ಆದಾಯದಲ್ಲಿ 14.6 ಶೇಕಡಾ ಹೆಚ್ಚಳ ವರದಿ ಮಾಡಿದೆ. ಇದರ ಆದಾಯ 1,621.1 ಕೋಟಿ ರೂ ಆಗಿದೆ ಎಂದು ಕಂಪನಿಯು ಮಾಹಿತಿ ನೀಡಿದೆ.

    ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಕಾರ್ಯಾಚರಣೆಗಳಿಂದ Network18 Media & Investments  ಸಂಸ್ಥೆಯ ಆದಾಯದ ಬೆಳವಣಿಗೆ ಸಾಧ್ಯವಾಗಿದೆ. ಇದು ಜಾಹೀರಾತು ಆದಾಯ ಹೆಚ್ಚಳ ಮತ್ತು ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳದಿಂದ ಸಾಧ್ಯವಾಗಿದೆ ಎಂದು ಸಂಸ್ಥೆಯು ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

    ಧನಾತ್ಮಕ ಫಲಿತಾಂಶ ನೀಡಿದ ನಿರ್ಧಾರಗಳು
    ಈಗಿನ ಆರ್ಥಿಕ ಬೆಳವಣಿಗೆಯು ಕೆಲವು ವರ್ಷಗಳ ಹಿಂದೆ ಹೊಸ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ನಮ್ಮ ನಿರ್ಧಾರವನ್ನು ಸಮರ್ಥಿಸಿದಂತಾಗಿದೆ. ನಮ್ಮ ನಿರ್ಧಾರಗಳು ಧನಾತ್ಮಕ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸಿವೆ ಎಂದು ಅಧ್ಯಕ್ಷ ಆದಿಲ್ ಜೈನುಲ್​ಭಾಯ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಟೆಲಿವಿಷನ್ ಮಾಧ್ಯಮದಲ್ಲಿ ನಮ್ಮ ಬಲವನ್ನು ಹೆಚ್ಚಿಸಿಕೊಳ್ಳುತ್ತೇವೆ. ಇದರ ಜೊತೆಗೆ ಡಿಜಿಟಲ್ ಮಾಧ್ಯಮ ಜಗತ್ತಿನಲ್ಲಿ ಇನ್ನಷ್ಟು ಬಲಿಷ್ಠರಾಗುವ ಗುರಿಯನ್ನು ಹೊಂದಿದ್ದೇವೆ ಎಂದು ಸಹ ಆದಿಲ್ ಜೈನುಲ್​ಭಾಯ್ ತಿಳಿಸಿದ್ದಾರೆ.

    ಮೂರು ವಿಭಾಗಗಳಲ್ಲೂ ಬೆಳವಣಿಗೆ
    ಕಂಪನಿಯು 2021-22ರಲ್ಲಿ ಟಿವಿ ಸುದ್ದಿ, ಮನರಂಜನೆ ಮತ್ತು ಡಿಜಿಟಲ್ ಸುದ್ದಿಗಳ ಎಲ್ಲಾ ಮೂರು ವಿಭಾಗಗಳೊಂದಿಗೆ ತನ್ನ ಅತ್ಯುತ್ತಮ ಆರ್ಥಿಕ ಕಾರ್ಯಕ್ಷಮತೆಯನ್ನು ವರದಿ ಮಾಡಿದೆ.

    ರಷ್ಯಾ-ಉಕ್ರೇನ್ ಸಂಘರ್ಷ ಪರಿಣಾಮ ಬೀರಿತೇ?
    ಡಿಜಿಟಲ್ ಸುದ್ದಿ ವಿಭಾಗವು 2021-22 ರಲ್ಲಿ ಲಾಭದಾಯಕವಾಗಿ ಮಾರ್ಪಟ್ಟಿದೆ. ಆದರೂ ರಷ್ಯಾ-ಉಕ್ರೇನ್ ಸಂಘರ್ಷದಿಂದ ಹೆಚ್ಚಿನ ಹಣದುಬ್ಬರದ ವಾತಾವರಣವು ಮತ್ತಷ್ಟು ಹದಗೆಟ್ಟಿದೆ ಎಂದು ನೆಟ್‌ವರ್ಕ್ 18 ಹೇಳಿದೆ. ಇದು ಗ್ರಾಹಕರ ಬೇಡಿಕೆಯ ಮೇಲೆ ಪರಿಣಾಮ ಬೀರಿತು. ಇದರ ಪರಿಣಾಮವಾಗಿ ಜಾಹೀರಾತು ವೆಚ್ಚಗಳ ಮೇಲೂ ಈ ಸಂಘರ್ಷ ಪರಿಣಾಮ ಬೀರಿದೆ ಎಂದು ಸಂಸ್ಥೆಯು ತಿಳಿಸಿದೆ.

    ಕಾರ್ಯಾಚರಣೆಯ ಆದಾಯವೂ ಹೆಚ್ಚಳ
    ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಾರ್ಯಾಚರಣೆಯ ಆದಾಯವು ವರ್ಷಕ್ಕೆ 10 ಪ್ರತಿಶತದಷ್ಟು ಏರಿಕೆಯಾಗಿ 346 ಕೋಟಿ ರೂಪಾಯಿಗಳಿಗೆ ತಲುಪಿದೆ.

    ವ್ಯಾಪಾರ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಸುದ್ದಿಗಳ ಎಲ್ಲಾ ಮೂರು ವಿಭಾಗಗಳಲ್ಲಿ ಜಾಹೀರಾತು ಆದಾಯದಲ್ಲಿನ ಬೆಳವಣಿಗೆಯಿಂದಾಗಿ 2021-22 ರಲ್ಲಿ ಆದಾಯವು 14 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ನೆಟ್‌ವರ್ಕ್ 18 ಮೀಡಿಯಾ ಹೇಳಿದೆ.

    ಮನರಂಜನಾ ಮಾಧ್ಯಮದಲ್ಲಿ ಸಾರ್ವಭೌಮ
    2022ರ ಮೊದಲ ತ್ರೈಮಾಸಿಕದಲ್ಲಿ ಮನರಂಜನಾ ವಿಭಾಗದ ಕಾರ್ಯಕ್ಷಮತೆಯು ಮತ್ತಷ್ಟು ಪ್ರಬಲವಾಗಿ ಬೆಳೆದಿದೆ. ಏಕೆಂದರೆ ನಿರ್ವಹಣಾ ಆದಾಯವು ವರ್ಷಕ್ಕೆ 11 ಪ್ರತಿಶತದಷ್ಟು ಬೆಳೆದು 1,150 ಕೋಟಿ ರೂ. ತಲುಪಿದೆ.

    ಮನರಂಜನಾ ವ್ಯವಹಾರವು 2021-22 ರಲ್ಲಿ ಶೇಕಡಾ 23 ರಷ್ಟು ಏರಿಕೆಯಾಗಿ 777 ಕೋಟಿ ರೂ.ಗಳ ವಾರ್ಷಿಕ ಕಾರ್ಯಾಚರಣೆಯ ಲಾಭವನ್ನು ನೀಡಿದೆ. ಆದರೆ 18.2 ಪ್ರತಿಶತದಷ್ಟು ಮಾರ್ಜಿನ್​ನ್ನು ಉಳಿಸಿಕೊಂಡಿದೆ ಎಂದು ಕಂಪನಿ ಹೇಳಿದೆ.

    ಚಂದಾದಾರಿಕೆ ಮಾದರಿಯ ಆದಾಯದಲ್ಲಿ ಏನಾಗಿದೆ?
    2021-22 ರಲ್ಲಿ ಜಾಹೀರಾತಿನ ಬೆಳವಣಿಗೆಯು ಸ್ವಲ್ಪ ಮಟ್ಟಿಗೆ ಕಡಿಮೆಯಿತ್ತು. ಆದರೆ ಕೋವಿಡ್ ಪೂರ್ವ 2019-20 ಗೆ ಹೋಲಿಸಿದರೆ ವ್ಯವಹಾರವು ಬಲವಾದ ಬೆಳವಣಿಗೆಯನ್ನು ಕಂಡಿದೆ ಎಂದು ನೆಟ್‌ವರ್ಕ್ 18 ಮೀಡಿಯಾ ಹೇಳಿದೆ. ಆದರೂ ಚಂದಾದಾರಿಕೆಯ ಆದಾಯವು ಹೆಚ್ಚಾಗಿ ಬೆಳವಣಿಗೆ ದಾಖಲಿಸಿಲ್ಲ. ಆದರೆ ವರ್ಷದ ಎರಡನೇ ಭಾಗದಲ್ಲಿ ಚಲನಚಿತ್ರ ಆದಾಯವು ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ಕಂಪನಿ ತಿಳಿಸಿದೆ.

    ಡಿಜಿಟಲ್ ಮೀಡಿಯಾದಲ್ಲಿ ಲೀಡರ್!
    ನೆಟ್‌ವರ್ಕ್ 18 ಮೀಡಿಯಾದ ತ್ರೈಮಾಸಿಕದಲ್ಲಿ ಡಿಜಿಟಲ್ ಸುದ್ದಿ ವ್ಯವಹಾರವು ಅತ್ಯುತ್ತಮ ಹಂತ ತಲುಪಿದೆ. ಕಾರ್ಯಾಚರಣೆಯ ಆದಾಯವು ವರ್ಷಕ್ಕೆ 32 ಪ್ರತಿಶತದಷ್ಟು ಏರಿಕೆಯಾಗಿ ರೂ 80 ಕೋಟಿಗಳಿಗೆ ತಲುಪಿದೆ. ಮಾರ್ಚ್‌ವರೆಗಿನ ತ್ರೈಮಾಸಿಕದಲ್ಲಿ ಕಾರ್ಯಾಚರಣೆಯ ಲಾಭವು ವರ್ಷಕ್ಕೆ 77 ಪ್ರತಿಶತದಷ್ಟು ಏರಿದೆ.

    ಮನಿ ಕಂಟ್ರೋಲ್ ಸಾಧನೆ
    ಬ್ಯುಸಿನೆಸ್ ಲೋಕಕ್ಕೆ ಸಂಬಂಧಿಸಿದ ಡಿಜಿಟಲ್ ಸುದ್ದಿ ಪೋರ್ಟಲ್ ಮನಿ ಕಂಟ್ರೋಲ್ ಇತ್ತೀಚೆಗೆ ತನ್ನ ಹತ್ತಿರದ ಪ್ರತಿಸ್ಪರ್ಧಿಯನ್ನು ಮೀರಿಸಿದೆ. ಭಾರತದಲ್ಲಿ ಹೆಚ್ಚು ಭೇಟಿ ನೀಡಿದ ಡಿಜಿಟಲ್ ವ್ಯಾಪಾರ ಸುದ್ದಿ ಪೋರ್ಟಲ್ ಆಗಿ ಬೆಳೆದು ನಿಂತಿದೆ.

    ಮನಿಕಂಟ್ರೋಲ್ 2021-22ರಲ್ಲಿ ಹೊಸ ಓದುಗರಲ್ಲಿ 81 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಜನರನ್ನು ತಲುಪುವಿಕೆ ಮತ್ತು ಎಂಗೇಜ್​ಮೆಂಟ್​ನಲ್ಲಿ ತೀವ್ರ ಬೆಳವಣಿಗೆಯನ್ನು ಕಂಡಿದೆ ಎಂದು ನೆಟ್‌ವರ್ಕ್ 18 ಮೀಡಿಯಾ ಹೇಳಿದೆ.

    ಇದನ್ನೂ ಓದಿ: Reliance Swadesh store: ರಿಲಾಯನ್ಸ್​ನಿಂದ 'ಸ್ವದೇಶ್ ಸ್ಟೋರ್' ಆರಂಭ; ಭಾರತೀಯ ಕಲೆ, ಕರಕುಶಲಿಗಳಿಗೆ ಇದುವೇ ಭರವಸೆ

    2021-22 ರಲ್ಲಿ ಡಿಜಿಟಲ್ ಸುದ್ದಿ ವಿಭಾಗವು ಶೇಕಡಾ 49 ರಷ್ಟು ಆದಾಯದ ಬೆಳವಣಿಗೆಯನ್ನು ಸಾಧಿಸಿದೆ.  ಜೊತೆಗೆ ಕಾರ್ಯಾಚರಣೆಯ ಲಾಭ ರೂ 38 ಕೋಟಿ ತಲುಪಿದೆ.

    ಗುರಿ ಸಾಧಿಸಿದ ಹರ್ಷ
    ಮನಿ ಕಂಟ್ರೋಲ್ ಪ್ರೊ, ಚಂದಾದಾರಿಕೆ ಆಧಾರಿತ ಕೊಡುಗೆಯಾಗಿದ್ದು ಪಾವತಿಸಿದ ಚಂದಾದಾರರ ಸಂಖ್ಯೆಯಲ್ಲಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಂಡಿದೆ. 5,00,000 ಕ್ಕಿಂತ ಹೆಚ್ಚು ಪಾವತಿಸಿದ ಚಂದಾದಾರರನ್ನು ಹೊಂದುವ ಗುರಿಯನ್ನು ಮನಿ ಕಂಟ್ರೋಲ್ ಪ್ರೋ ಸಾಧಿಸಿದೆ.

    ಇದನ್ನೂ ಓದಿ: Viacom 18ನಲ್ಲಿ 13,500 ಕೋಟಿ ರೂ. ಹೂಡಿಕೆ ಮಾಡಿದ ಬೋಧಿ ಟ್ರೀ ಸಿಸ್ಟಮ್ಸ್

    ಮೇ 2 ರಂದು, ನೆಟ್‌ವರ್ಕ್ 18 ಮೀಡಿಯಾದ ಷೇರುಗಳು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಶೇಕಡಾ 1.9 ರಷ್ಟು ಕಡಿಮೆಯಾಗಿ ತಲಾ ರೂ 84.6 ಕ್ಕೆ ಕೊನೆಗೊಂಡಿವೆ.
    Published by:guruganesh bhat
    First published: