Netflix: ಲಾಸ್ ಅಂದ್ರೆ ಲಾಸ್! ನೆಟ್​ಫ್ಲಿಕ್ಸ್​ಗೆ ಭಾರೀ ನಷ್ಟ! ಏನು ಕಾರಣ?

Netflix

Netflix

ಸ್ಟ್ರೀಮಿಂಗ್‌ನ ರಾಜನೆಂದೆ ನೆಟ್‌ಫ್ಲೀಕ್ಸ್‌ ಅನ್ನು ಕರೆಯುತ್ತಾರೆ. ಏಕೆಂದರೆ ನೆಟ್‌ಫಿಕ್ಸ್‌ ಸ್ಟ್ರೀಮಿಂಗ್‌ನಲ್ಲಿ ಮಾಡಿದಂತಹ ಜಾದು ಮತ್ತೆ ಎಲ್ಲೂ ಯಾವುದು ಮಾಡಿಲ್ಲ. ಆದರೆ ಬಹಳ ಕಾಲ ಪ್ರೇಕ್ಷಕರನ್ನು ಸೆಳೆದಿರುವ ಇದು, ಈಗ ತನ್ನ ಪ್ರೇಕ್ಷಕರನ್ನು ಕಳೆದುಕೊಳ್ಳುವ ಭಯದಲ್ಲಿ ದಿನ ದೂಡುತ್ತಿದೆ. ನೆಟ್‌ಫ್ಲಿಕ್ಸ್ ತನ್ನ ಕಿರೀಟವನ್ನು ಉಳಿಸಿಕೊಳ್ಳಲು ಈಗ ಕಠಿಣ ಹೋರಾಟವನ್ನು ಎದುರಿಸುತ್ತಿದೆ ಎಂದೇ ಹೇಳಬಹುದು.

ಮುಂದೆ ಓದಿ ...
  • Share this:

ಸ್ಟ್ರೀಮಿಂಗ್‌ನ ರಾಜನೆಂದೆ ನೆಟ್‌ಫ್ಲಿಕ್ಸ್ ಅನ್ನು (Netflix) ಕರೆಯುತ್ತಾರೆ. ಏಕೆಂದರೆ ನೆಟ್‌ಫಿಕ್ಸ್‌ ಸ್ಟ್ರೀಮಿಂಗ್‌ನಲ್ಲಿ ಮಾಡಿದಂತಹ ಜಾದು ಮತ್ತೆ ಎಲ್ಲೂ ಯಾವುದು ಮಾಡಿಲ್ಲ. ಆದರೆ ಬಹಳ ಕಾಲ ಪ್ರೇಕ್ಷಕರನ್ನು (Audience) ಸೆಳೆದಿರುವ ಇದು, ಈಗ ತನ್ನ ಪ್ರೇಕ್ಷಕರನ್ನು ಕಳೆದುಕೊಳ್ಳುವ ಭಯದಲ್ಲಿ ದಿನ ದೂಡುತ್ತಿದೆ. ನೆಟ್‌ಫ್ಲಿಕ್ಸ್ ತನ್ನ ಕಿರೀಟವನ್ನು ಉಳಿಸಿಕೊಳ್ಳಲು ಈಗ ಕಠಿಣ ಹೋರಾಟವನ್ನು ಎದುರಿಸುತ್ತಿದೆ ಎಂದೇ ಹೇಳಬಹುದು. ಈ ನೆಟ್‌ಫ್ಲಿಕ್ಸ್‌ ನಿಂದ ದೂರ ಸರಿಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಏಪ್ರಿಲ್ ಮತ್ತು ಜುಲೈ ತಿಂಗಳುಗಳ ನಡುವೆ ಇದು ಸುಮಾರು 1 ಮಿಲಿಯನ್ ಚಂದಾದಾರರನ್ನು (Subscribers) ಕಳೆದುಕೊಂಡಿದೆ.


ನೆಟ್‌ಫ್ಲಿಕ್ಸ್ ಚಂದಾದಾರನ್ನು ಕಳೆದುಕೊಳ್ಳಲು ಕಾರಣವೇನು?
ನೆಟ್‌ಫ್ಲಿಕ್ಸ್‌ನಲ್ಲಿ ಚಂದಾದಾರಿಕೆಗಳು ತೆಗೆದುಕೊಳ್ಳುವುದು ನಿಲ್ಲುತ್ತಿದೆ, ಇದಕ್ಕೆ ಕಾರಣ ಏನು ಎಂದು ಕೇಳಿದಾಗ, ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ರೀಡ್ ಹೇಸ್ಟಿಂಗ್ಸ್ "ಇದಕ್ಕೆ ಕಾರಣ ಒಂದೇ ಒಂದು ವಿಷಯವೆಂದರೆ, ನಮ್ಮ 'ಸ್ಟ್ರೇಂಜರ್ ಥಿಂಗ್ಸ್' “ ಎಂದು ಹೇಳಿದರು.


" ಹಿಟ್ ಡ್ರಾಮಾದ ಹೊಸ ಸೀಸನ್ ಅದ್ಭುತ ಯಶಸ್ಸನ್ನು ಕಂಡಿದೆ ಮತ್ತು ನೆಟ್‌ಫ್ಲಿಕ್ಸ್ ಗ್ರಾಹಕಕು ಹೊರ ಹೋಗುವುದನ್ನು ಸಾಧ್ಯವಾದಷ್ಟು ತಡೆಯಲು ಸಹಾಯ ಮಾಡಿರಬಹುದು. ಕಂಪನಿಯು 2011 ರಿಂದ ತನ್ನ ಮೊದಲ ಚಂದಾದಾರರ ನಷ್ಟವನ್ನು ಏಪ್ರಿಲ್‌ನಲ್ಲಿ ವರದಿ ಮಾಡಿದೆ, ಅದರ ನಂತರ ಇದರಿಂದ ನೂರಾರು ಕಂಪನಿಯ ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಈ ಕಂಪನಿಯ ಪ್ರತಿಸ್ಪರ್ಧಿಗಳು ಅದರ ಪ್ರಾಬಲ್ಯಕ್ಕೆ ಸವಾಲು ಹಾಕುತ್ತಿದ್ದಾರೆ.


ಚಂದಾದಾರರ ನಷ್ಟ ಸಂಸ್ಥೆಯ ಇತಿಹಾಸದಲ್ಲಿ ಅತಿ ದೊಡ್ಡ ನಷ್ವವಂತೆ 
ಮಂಗಳವಾರ ವರದಿಯಾದ ಚಂದಾದಾರರ ನಷ್ಟವು ಸಂಸ್ಥೆಯ ಇತಿಹಾಸದಲ್ಲಿ ಅತಿ ದೊಡ್ಡ ನಷ್ವವೆಂದೆ ಹೇಳಬಹುದು. ಯುಎಸ್ ಮತ್ತು ಕೆನಡಾವು ತ್ರೈಮಾಸಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಚಂದಾದಾರಿಕೆಗಳು ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ. ಇದರ ನಂತರ ಯುರೋಪ್ ಈ ಪಟ್ಟಿನ ಸಾಲಿಗೆ ನಿಲ್ಲುತ್ತದೆ.


ಇದನ್ನೂ ಓದಿ:  Airtel Plan: ಏರ್​ಟೆಲ್​​ನಿಂದ ಶುಭಸುದ್ದಿ; ಕೇವಲ 296 ರೂ.ಗೆ ಅನ್​​ಲಿಮಿಟೆಡ್ ಪ್ಲಾನ್ ಇಲ್ಲಿದೆ ನೋಡಿ


ಆಂಪಿಯರ್ ಅನಾಲಿಸಿಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಗೈ ಬಿಸ್ಸನ್, “ನೆಟ್‌ಫ್ಲಿಕ್ಸ್ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಸಡಿಲಗೊಳಿಸಲು ಪ್ರಾರಂಭಿಸುವುದು ʼಅನಿವಾರ್ಯʼ “ ಎಂದು ಹೇಳಿದರು. "ನಾವು ನಾಯಕರಾಗಿದ್ದಾಗ, ಹೋಗಲು ನಮಗೆ ಒಂದೇ ಒಂದು ದಿಕ್ಕು ಇರುತ್ತದೆ, ಆದರೆ ಇದರ ನಂತರ ದೊಡ್ಡ ಪ್ರಮಾಣದ ಸ್ಪರ್ಧೆಯು ಪ್ರಾರಂಭವಾದಾಗ, ಅನಿವಾರ್ಯವಾಗಿ ನಷ್ಟ ಸಂಭವಿಸುತ್ತದೆ. ಕಳೆದೆರಡು ವರ್ಷಗಳಲ್ಲಿ ನೆಟ್‌ಫ್ಲಿಕ್ಸ್ ಅನೇಕ ಸೋಲುಗಳನ್ನು ಕಂಡಿದೆ" ಎಂದು ಅವರು ಹೇಳಿದರು.


ಕೋವಿಡ್ ಸಂದರ್ಭದಲ್ಲಿ ಜಾಗತಿಕ ರಾಜನಾಗಿ ತನ್ನ ಸ್ಥಾನವನ್ನು ಗಟ್ಟಿಸಿಕೊಂಡ ನೆಟ್‌ಫ್ಲಿಕ್ಸ್
ಇದು ನೆಟ್‌ಫ್ಲಿಕ್ಸ್‌ಗೆ ಒಂದು ಬದಲಾವಣೆಯಾಗಿದೆ, ಇದು ಕೆಲ ವರ್ಷಗಳ ಹಿಂದೆ ಸಾಕಷ್ಟು ಬೆಳವಣಿಗೆಯನ್ನು ಅನುಭವಿಸಿದೆ, ಏಕೆಂದರೆ ಇದು ಪ್ರಪಂಚದಾದ್ಯಂತದ ಜನರಿಗೆ ಸಾಕಷ್ಟು ಮನರಂಜನೆಯನ್ನು ನೀಡುವಲ್ಲಿ ಕ್ರಾಂತಿಯನ್ನುಂಟುಮಾಡಿತು. ಇನ್ನು 2020 ರಲ್ಲಿ ಸಾಂಕ್ರಾಮಿಕ ರೋಗವು ಅಪ್ಪಳಿಸಿದಾಗ ಜಾಗತಿಕ ರಾಜನಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿತ್ತು. ಮನೆಯಲ್ಲಿ ಸಿಲುಕಿಕೊಂಡ ಜನರು ಬೇರೆ ಆಯ್ಕೆ ಇಲ್ಲದಿದ್ದಾಗ ಸ್ಕ್ವಿಡ್ ಗೇಮ್ ಮತ್ತು ದಿ ಕ್ರೌನ್‌ನಂತಹ ದೈತ್ಯಾಕಾರದ ಹಿಟ್‌ ಗೇಮ್‌ಗಳನ್ನು ಆನಂದಿಸಿದ್ದಾರೆ.


ಇದನ್ನೂ ಓದಿ: Google News: ಕನ್ನಡದಲ್ಲೇ ಸುದ್ದಿಗಳನ್ನು ಓದಬೇಕಾ? ಹಾಗಿದ್ರೆ ಈ ಸೆಟ್ಟಿಂಗ್ಸ್​ ಬದಲಾಯಿಸಿ


ಆದರೆ ಸಾಂಕ್ರಾಮಿಕ ರೋಗ ಕೋವಿಡ್‌-19 ಕಡಿಮೆಯಾದ ನಂತರ, ನೆಟ್‌ಫ್ಲಿಕ್ಸ್ ಹೊಸ ಸೈನ್-ಅಪ್‌ಗಳನ್ನು ಆಕರ್ಷಿಸಲು ತುಂಬಾನೇ ಕಷ್ಟ ಪಡುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಆದರೆ ಈಗ ಸದ್ಯಕ್ಕೆ ಅಲ್ಲಿರುವ ಸದಸ್ಯರು ಬೇರೆ ಕಡೆ ಹೋಗಬಾರದೆಂದು ಅನೇಕ ಕಸರತ್ತುಗಳನ್ನು ಇದು ಮಾಡುತ್ತಿದೆ. ನೆಟ್‌ಫ್ಲಿಕ್ಸ್‌ಗೆ ಈ ಸಂಕಷ್ಟ ಬಂದಿರುವುದು ಏಕೆಂದರೆ ಕೋವಿಡ್‌ -19 ಸಾಂಕ್ರಾಮಿಕ ರೋಗದ ನಂತರ ಜನರು ತಮ್ಮ ಜೀವನ ನಡೆಸಲು ಹೆಣಗಾಡುತ್ತಿದ್ದಾರೆ. ಜೀವನ ವೆಚ್ಚ ಸರಿದೂಗಿಸಲು ಜಗತ್ತಿನ ಎಲ್ಲ ಜನತೆಗೂ ಸ್ವಲ್ಪ ಕಷ್ಟವೇ ಆಗುತ್ತಿದೆ ಎಂಬುದು ಇಲ್ಲಿರುವ ಕಾರಣಕ್ಕೆ ವಾಸ್ತವಾಂಶ ಆಗಿದೆ.


ನೆಟ್‌ಫ್ಲಿಕ್ಸ್ ನಿಂದ ಜನ ದೂರವಿರಲು ಇದೂ ಒಂದು ಕಾರಣವಿರಬಹುದು 
ಈ ಕಂಪನಿಯು Apple TV, HBO Max, Amazon Prime ಮತ್ತು Disney+ ನಂತಹವುಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ನೆಟ್‌ಫ್ಲಿಕ್ಸ್‌ ತನ್ನ ಸೇವೆಯನ್ನು ಹೆಚ್ಚು ದುಬಾರಿಯನ್ನಾಗಿ ಮಾಡುವ ಕ್ರಮವು ಕೂಡ ಕೆಲವು ಗ್ರಾಹಕರನ್ನು ದೂರವಿಟ್ಟಿದೆ. ಇದಕ್ಕೆ ಮತ್ತೊಂದು ಕಾರಣ ಬೆಲೆ ಏರಿಕೆ ಆಗಿದೆ. ಆದ್ದರಿಂದ ಗ್ರಾಹಕರು ಇದರಿಂದ ದೂರ ಸರಿಯುತ್ತಿದ್ದಾರೆ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು