ಪೆಟ್ರೋಲ್-ಡೀಸೆಲ್ ಉಳಿಸಲು 2 ದಿನ ಸರ್ಕಾರಿ ರಜೆ! ನೇಪಾಳ ಸರ್ಕಾರಕ್ಕೆ ಹೀಗೊಂದು ಸಲಹೆ

ತೈಲ ಬೆಲೆಯು ವೇಗವಾಗಿ ಆಕಾಶದೆತ್ತರಕ್ಕೆ ಏರುತ್ತಿದೆ. ಇದೇ ಸಂದರ್ಭದಲ್ಲಿ ಇತರ ಪ್ರಮುಖ ತೈಲ ಉತ್ಪಾದಕರಾದ ಇರಾನ್ ಮತ್ತು ವೆನೆಜುವೆಲಾ ಕೂಡ ಪೆಟ್ರೋಲಿಯಂ ಮಾರಾಟದಲ್ಲಿ ನಿರ್ಬಂಧಗಳನ್ನು ಎದುರಿಸುತ್ತಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಈಗ ಒಂದು ತಿಂಗಳಿನಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದಿಂದ (Russia Ukraine War) ತೈಲ ಬೆಲೆಯು ವೇಗವಾಗಿ ಆಕಾಶದೆತ್ತರಕ್ಕೆ ಏರುತ್ತಿದೆ. ಇದೇ ಸಂದರ್ಭದಲ್ಲಿ ಇತರ ಪ್ರಮುಖ ತೈಲ ಉತ್ಪಾದಕರಾದ ಇರಾನ್ ಮತ್ತು ವೆನೆಜುವೆಲಾ ಕೂಡ ಪೆಟ್ರೋಲಿಯಂ ಮಾರಾಟದಲ್ಲಿ ನಿರ್ಬಂಧಗಳನ್ನು ಎದುರಿಸುತ್ತಿವೆ. ವಿದೇಶಿ ವಿನಿಮಯ ಬಿಕ್ಕಟ್ಟು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರುತ್ತಿರುವ  (Oil Price Hike)  ಕಾರಣ ಇಂಧನ ಬಳಕೆಯನ್ನು ಕಡಿಮೆ ಮಾಡಲು  ನೇಪಾಳ (Nepal Government) ಸರ್ಕಾರವು ಈ ತಿಂಗಳು ಸಾರ್ವಜನಿಕ ವಲಯದ ಕಚೇರಿಗಳಿಗೆ ಎರಡು ದಿನಗಳ ರಜೆಯನ್ನು ಘೋಷಿಸುವ (Holiday For Cut Fuel Consumption) ಸಲಹೆಯನ್ನು ಪರಿಗಳಿಸುವುದಾಗಿ ತಿಳಿಸಿದೆ.

  ನೇಪಾಳದ ಸೆಂಟ್ರಲ್ ಬ್ಯಾಂಕ್ ಮತ್ತು ನೇಪಾಳ ತೈಲ ನಿಗಮವು ಎರಡು ದಿನಗಳ ಸರ್ಕಾರಿ ರಜೆ ನೀಡುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ ಎಂದು ಸಂಪುಟದ ಮೂಲಗಳು ತಿಳಿಸಿವೆ.

  ಕೊವಿಡ್ ಬಂತು, ಪ್ರವಾಸೋದ್ಯಮ ಕುಸಿಯಿತು
  ಕೋವಿಡ್-19 ಸಾಂಕ್ರಾಮಿಕ ರೋಗವು ಅಂತರಾಷ್ಟ್ರೀಯ ಪ್ರಯಾಣವನ್ನು ಸ್ಥಗಿತಗೊಳಿಸಿದ ನಂತರ ಪ್ರವಾಸೋದ್ಯಮವನ್ನೇ ತನ್ನ ಆದಾಯದ ಮೂಲವಾಗಿ ಅವಲಂಬನೆ ಹೊಂದಿದ್ದ ನಮ್ಮ ನೆರೆಯ ದೇಶ ನೇಪಾಳವು ತನ್ನ ವಿದೇಶಿ ಮೀಸಲು ನಿಧಿಯಲ್ಲಿ ಕುಸಿತವನ್ನು ಅನುಭವಿಸುತ್ತಿದೆ.

  ಜಾಗತಿಕ ದರ, ಸಬ್ಸಿಡಿ ತೈಲ, ಭಾರೀ ನಷ್ಟಕ್ಕೆ ಕಾರಣ
  ಸರ್ಕಾರಕ್ಕೆ ನೀಡಿದ ಸಲಹೆಯು ನೇಪಾಳ ತೈಲ ಕಾರ್ಪೊರೇಶನ್‌ಗೆ ಗಮನಾರ್ಹ ಉಳಿತಾಯವನ್ನು ಮಾಡಿಕೊಡುತ್ತದೆ.  ಸದ್ಯ ಸಬ್ಸಿಡಿ ದರದಲ್ಲಿ ಇಂಧನವನ್ನು ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಪ್ರಸ್ತುತ ಜಾಗತಿಕ ದರಗಳಲ್ಲಿ ಭಾರಿ ನಷ್ಟವನ್ನು ಅನುಭವಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಇದನ್ನೂ ಓದಿ: India's Poverty: ಭಾರತದಲ್ಲಿ ತೀವ್ರ ಬಡತನ ಇಳಿಮುಖ; ವಿಶ್ವಬ್ಯಾಂಕ್ ಸಂಶೋಧನೆಯಲ್ಲಿ ಬಹಿರಂಗ

  ಆದರೆ ತೈಲ ಉಳಿಸಲು ಸರ್ಕಾರಿ ಅಧಿಕಾರಿಗಳಿಗೆ ವಾರಕ್ಕೆ ಎರಡು ದಿನಗಳ ರಜೆ ನೀಡುವ ಈ ಸಲಹೆ ಈ ಬಗ್ಗೆ ಸರ್ಕಾರ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸರ್ಕಾರದ ವಕ್ತಾರ ಜ್ಞಾನೇಂದ್ರ ಬಹದ್ದೂರ್ ಕರ್ಕಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.   ಸದ್ಯ ತೈಲ ಉಳಿಸಲು ಸರ್ಕಾರಿ ಅಧಿಕಾರಿಗಳಿಗೆ ವಾರಕ್ಕೆ ಎರಡು ದಿನಗಳ ರಜೆ ನೀಡುವ ಸಲಹೆ ಸರ್ಕಾರದ ಎದುರು ಪ್ರಸ್ತಾವನೆ ಬಂದಿದ್ದು, ಈ ಸಲಹೆಯ ಕುರಿತು ಅಧಿಕೃತ ಪರಿಶೀಲನೆ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

  ಆರ್ಥಿಕತೆ ಉಳಿಸಲು ಹಲವು ಕ್ರಮ
  ವಿದೇಶೀ ವಿನಿಮಯ ಬಿಕ್ಕಟ್ಟನ್ನು ಎದುರಿಸಲು ನೇಪಾಳ ಸರ್ಕಾರವು ವಿದೇಶದಲ್ಲಿ ವಾಸಿಸುವ ನೇಪಾಳದ ಪ್ರಜೆಗಳನ್ನು ದೇಶದಲ್ಲಿ ಬ್ಯಾಂಕ್‌ಗಳಲ್ಲಿ ಡಾಲರ್ ಖಾತೆಗಳನ್ನು ತೆರೆಯಲು ಮತ್ತು ಹೂಡಿಕೆ ಮಾಡಲು ಒತ್ತಾಯಿಸಿದೆ.

  ನೇಪಾಳವು ತನ್ನ ಕುಸಿಯುತ್ತಿರುವ ನೈಸರ್ಗಿಕ ನಿಕ್ಷೇಪಗಳನ್ನು ಕಾಪಾಡಿಕೊಳ್ಳಲು ದುಬಾರಿ ಕಾರುಗಳು, ಚಿನ್ನ ಮತ್ತು ಇತರ ಐಷಾರಾಮಿ ವಸ್ತುಗಳ ಆಮದನ್ನು ಬಿಗಿಗೊಳಿಸಿದೆ. ಆಮದು ಮಾಡಿಕೊಂಡ ವಾಹನಗಳು ಮತ್ತು ಇತರ ಸರಕುಗಳ ಮೇಲಿನ ಸುಂಕವನ್ನು ಕಡಿಮೆ ಮಾಡುವ ಕುರಿತು ಸಹ ನೇಪಾಳ ಸರ್ಕಾರವು ಪರಿಶೀಲಿಸುತ್ತಿದೆ ಎಂದು ನೇಪಾಳ ಸರ್ಕಾರದ ವಕ್ತಾರ ಜ್ಞಾನೇಂದ್ರ ಬಹದ್ದೂರ್ ಕರ್ಕಿ ಮಾಹಿತಿ ನೀಡಿದ್ದಾರೆ.

  ಆರ್ಥಿಕ ಕುಸಿತದ ಅಂಚಿನಲ್ಲಿ ನೇಪಾಳ?
  ಶ್ರೀಲಂಕಾ (Sri Lanka) ತನ್ನ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನೊಂದಿಗೆ (Financial Crisis) ಹೋರಾಡುತ್ತಿರುವ ಸಂದರ್ಭ ಜಗತ್ತಿನ ಇತರ ದೇಶಗಳಲ್ಲಿ ಎಚ್ಚರಿಕೆಯನ್ನು ಹುಟ್ಟುಹಾಕಿದೆ. ಹಲವು ಸರ್ಕಾರಗಳು ತಮ್ಮ ಆರ್ಥಿಕ ನೀತಿಗಳನ್ನು ಮರು ಪರಿಶೀಲಿಸುವಂತೆ ಮಾಡಿದೆ.

  ಇದನ್ನೂ ಓದಿ:  Red Sindhi: ಊರಲ್ಲಿದ್ದೇ ಹಣ ಗಳಿಸಿ! ದಿನಕ್ಕೆ 12 ಲೀಟರ್​ಗೂ ಹೆಚ್ಚು ಹಾಲು ಹಿಂಡುವ ಕೆಂಪು ಸಿಂಧಿ ಆಕಳು ಸಾಕಿ

  ಆದರೆ ಇದೇ ಸಂದರ್ಭದಲ್ಲಿ ದಕ್ಷಿಣ ಏಷ್ಯಾದ (South Asia) ಮತ್ತೊಂದು ದೇಶ ನೇಪಾಳ ಆರ್ಥಿಕ ದುಸ್ಥಿತಿಯತ್ತ (Nepal Economic Crisis) ಹೆಜ್ಜೆ ಹಾಕಿವ ಎಲ್ಲ ಲಕ್ಷಣಗಳು ಇವೆ ಎಂದು ಆರ್ಥಿಕ ಪರಿಣಿತರು ಸೂಚಿಸಿದ್ದಾರೆ. ನೇಪಾಳದ ಪ್ರಮುಖ ವಿರೋಧ ಪಕ್ಷವಾದ ಸಿಪಿಎನ್-ಯುಎಂಎಲ್ ತಕ್ಷಣ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ತಮ್ಮ ಆರ್ಥಿಕತೆಯು ಇನ್ನಷ್ಟು ಹದಗೆಡುತ್ತದೆ ಎಂದು ಆತಂಕ ಹೊರಹಾಕಿದೆ.
  Published by:guruganesh bhat
  First published: