• Home
  • »
  • News
  • »
  • business
  • »
  • Neha Narkhede: ಭಾರತದ ಅತ್ಯಂತ ಕಿರಿಯ 'ಸೆಲ್ಪ್‌ ಮೇಡ್‌' ಶ್ರೀಮಂತ ಮಹಿಳೆ ನೇಹಾ ನಾರ್ಖೆಡೆ!

Neha Narkhede: ಭಾರತದ ಅತ್ಯಂತ ಕಿರಿಯ 'ಸೆಲ್ಪ್‌ ಮೇಡ್‌' ಶ್ರೀಮಂತ ಮಹಿಳೆ ನೇಹಾ ನಾರ್ಖೆಡೆ!

ನೇಹಾ ನಾರ್ಖೆಡೆ

ನೇಹಾ ನಾರ್ಖೆಡೆ

ನೇಹಾ ನಾರ್ಖೆಡೆ ಭಾರತದ ಅತ್ಯಂತ ಕಿರಿಯ ಸೆಲ್ಪ್‌ ಮೇಡ್‌ ಶ್ರೀಮಂತ ಮಹಿಳೆ. ಹೌದು, ಸ್ಟ್ರೀಮಿಂಗ್ ಡೇಟಾ ಟೆಕ್ನಾಲಜಿ ಕಂಪನಿ ಕನ್‌ಫ್ಲುಯೆಂಟ್‌ನ ಸಹ-ಸಂಸ್ಥಾಪಕಿ ಪುಣೆ ಮೂಲದ ನೇಹಾ ನಾರ್ಖೆಡೆ ಅವರು IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರಲ್ಲಿ ಸ್ಥಾನ ಪಡೆದಿದ್ದಾರೆ. 37 ವರ್ಷದ ಭಾರತೀಯ-ಅಮೆರಿಕನ್ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅತ್ಯಂತ ಕಿರಿಯ ಸೆಲ್ಪ್‌ ಮೇಡ್‌ ಮಹಿಳಾ ಉದ್ಯಮಿ ಎಂದು ಹೆಸರು ಪಡೆದಿದ್ದಾರೆ.

ಮುಂದೆ ಓದಿ ...
  • Share this:

ಕೆಲವರಿಗೆ ಬದುಕಿನಲ್ಲಿ ಅತ್ಯುತ್ಸಾಹ. ಏನಾದರೂ ಸಾಧನೆ ಮಾಡಬೇಕೆಂಬ ಹುರುಪು. ಬಿಟ್ಟೂ ಬಿಡದೇ ಪ್ರಯತ್ನಿಸಿ ಅವರು ಸಾಧನೆಯ (Achievement) ಶಿಖರವನ್ನೇರಿಯೇ ಬಿಡುತ್ತಾರೆ. ಜೊತೆಗೆ ಬೇರೆಯವರಿಗೆ ಮಾದರಿಯಾಗ್ತಾರೆ. ಅಂಥವರಲ್ಲಿ ಒಬ್ಬರು ನೇಹಾ ನಾರ್ಖೆಡೆ (Neha Narkhede). ಅಂದಹಾಗೆ ಇವರು ಭಾರತದ ಅತ್ಯಂತ ಕಿರಿಯ ಸೆಲ್ಪ್‌ ಮೇಡ್‌ ಶ್ರೀಮಂತ ಮಹಿಳೆ. ಹೌದು, ಸ್ಟ್ರೀಮಿಂಗ್ ಡೇಟಾ ಟೆಕ್ನಾಲಜಿ ಕಂಪನಿ ಕನ್‌ಫ್ಲುಯೆಂಟ್‌ನ ಸಹ-ಸಂಸ್ಥಾಪಕಿ ಪುಣೆ (Pune) ಮೂಲದ ನೇಹಾ ನಾರ್ಖೆಡೆ ಅವರು IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರಲ್ಲಿ ಸ್ಥಾನ ಪಡೆದಿದ್ದಾರೆ. 37 ವರ್ಷದ ಭಾರತೀಯ-ಅಮೆರಿಕನ್ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅತ್ಯಂತ ಕಿರಿಯ ಸೆಲ್ಪ್‌ ಮೇಡ್‌ ಮಹಿಳಾ ಉದ್ಯಮಿ (Woman Entrepreneur) ಎಂದು ಹೆಸರು ಪಡೆದಿದ್ದಾರೆ.


ಶ್ರೀಮಂತರ ಪಟ್ಟಿಯಲ್ಲಿ ನೇಹಾ ಗೆ 336 ನೇ ಸ್ಥಾನ
ಅಂದಹಾಗೆ ನೇಹಾ ನಾರ್ಖೆಡೆ ಅವರು ಮಹಾರಾಷ್ಟ್ರದ ಪುಣೆಯ ಮೂಲದವರು. ಜಾರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಅನ್ನು ಅಧ್ಯಯನ ಮಾಡಿದವರು. ಕನ್ಫ್ಲುಯೆಂಟ್ ಕೋ ಫೌಂಡರ್‌ ಆಗೋದ್ರ ಜೊತೆಗೆ ನೇಹಾ ಅವರು ಓಪನ್ ಸೋರ್ಸ್ ಮೆಸೇಜಿಂಗ್ ಸಿಸ್ಟಮ್ ಅಪಾಚೆ ಕಾಫ್ಕಾದ ಕೋ ಕ್ರಿಯೇಟರ್‌ ಕೂಡ ಆಗಿದ್ದಾರೆ. ಅಲ್ಲದೇ ಅವರು ಇಂದು ಬಹು ತಂತ್ರಜ್ಞಾನ ಕಂಪನಿಗಳಿಗೆ ಹೂಡಿಕೆದಾರರಾಗಿ ಮತ್ತು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಅಂದಾಜು ₹ 4,700 ಕೋಟಿ ಸಂಪತ್ತು ಹೊಂದಿರುವ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ನೇಹಾ ನಾರ್ಖೆಡೆ 336ನೇ ಸ್ಥಾನ ಪಡೆದಿದ್ದಾರೆ.


ಇದನ್ನೂ ಓದಿ: Business Idea: ಕಾರ್ಪೊರೇಟ್​​ ಕೆಲ್ಸ ಬಿಟ್ಟು, ಲಕ್ಷ ಲಕ್ಷ ದುಡಿಯುತ್ತಿದ್ದಾರೆ ಬೆಂಗಳೂರು ಹುಡುಗಿ!


ನೇಹಾ ನಾರ್ಖೆಡೆ ಸಾಧನೆಯ ಹಾದಿ
ತನ್ನ ಕಂಪನಿಯನ್ನು ಪ್ರಾರಂಭಿಸುವ ಮೊದಲು, ನೇಹಾ ನಾರ್ಕೆಡೆ ಅವರು ಲಿಂಕ್ಡ್‌ಇನ್ ಮತ್ತು ಒರಾಕಲ್‌ನಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಅವರು ಅಪಾಚೆ ಕಾಫ್ಕಾ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಿದ ತಂಡದ ಭಾಗವಾಗಿದ್ದರು. ನಂತರ ಅವರು ತಂತ್ರಜ್ಞಾನವನ್ನು ತನ್ನ ತಂಡದೊಂದಿಗೆ, ನಂತರ ಇತರ ವ್ಯವಹಾರಗಳಲ್ಲಿ ಬಳಸಲು ನಿರ್ಧರಿಸಿದರು. ನಂತರ 2014 ರಲ್ಲಿ ಕನ್ಫ್ಲುಯೆಂಟ್ ಅನ್ನು ಸ್ಥಾಪಿಸಿದರು.


ಅಮೆರಿಕ ಹಾಗೂ ಪುಣೆಯಲ್ಲಿ ಪದವಿ !
ಅಂದಹಾಗೆ ಸುಮಾರು 15 ವರ್ಷಗಳ ಹಿಂದೆ ನೇಹಾ ಅವರು ಅಮೆರಿಕಕ್ಕೆ ತೆರಳಿ ಜಾರ್ಜಿಯಾ ಟೆಕ್‌ನಿಂದ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ವಿಜ್ಞಾನ ಪದವಿ ಪಡೆದರು. ಅಲ್ಲದೇ ಅವರು ಪುಣೆ ವಿಶ್ವವಿದ್ಯಾನಿಲಯದಿಂದ ಎಂಜಿನಿಯರಿಂಗ್‌ನಲ್ಲಿ ವಿಜ್ಞಾನ ಪದವಿಯನ್ನೂ ಪಡೆದಿದ್ದಾರೆ.


ಇನ್ನು ಫೋರ್ಬ್ಸ್ ಸಂಗ್ರಹಿಸಿದ 2022 ರ ಅಮೆರಿಕದ ಶ್ರೀಮಂತ ಸ್ವಯಂ ನಿರ್ಮಿತ ಮಹಿಳೆಯರ ಪಟ್ಟಿಯಲ್ಲಿ ಉದ್ಯಮಿ ನೇಹಾ 57 ನೇ ಸ್ಥಾನವನ್ನು ಪಡೆದಿದ್ದಾರೆ. ಅಲ್ಲದೇ ಅವರು 2018 ರಲ್ಲಿ ಫೋರ್ಬ್ಸ್‌ನ ಟೆಕ್‌ನಲ್ಲಿ ವಿಶ್ವದ ಟಾಪ್ 50 ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.ಅಂದಹಾಗೆ ಹುರುನ್ ಇಂಡಿಯಾದ ಪ್ರಕಾರ, ಒಟ್ಟು 1,103 ವ್ಯಕ್ತಿಗಳು ₹ 1,000 ಕೋಟಿ ಸಂಪತ್ತನ್ನು ಹೊಂದಿರುವ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶ್ರೀಮಂತ ವ್ಯಕ್ತಿಗಳ ಸಂಖ್ಯೆಯಲ್ಲಿ 96 ಹೆಚ್ಚಳವಾಗಿದೆ.


ಇದನ್ನೂ ಓದಿ:  Terrace Farming: ವಯಸ್ಸು 63, ಆದ್ರೆ ಇವರ ಟೆರೇಸ್ ಮೇಲಿನ ಕೈತೋಟ ಹೇಗಿದೆ ನೋಡಿ


ಕೆಲವಷ್ಟು ಜನರು ಚಿಕ್ಕ ವಯಸ್ಸಿನಲ್ಲೇ ವಯಸ್ಸಿಗೆ ಮೀರಿದ ಸಾಧನೆ ಮಾಡ್ತಾರೆ. ಇನ್ನೂ ಕೆಲವರು ಜೀವನ ಬಂದಹಾಗೆ ಬದುಕಿ ಬಿಡ್ತಾರೆ. ಆದರೆ ಸಾಧನೆ ಮಾಡಬೇಕೆಂದರೆ ಕಷ್ಟ ಪಡಬೇಕು. ಅದನ್ನೊಂದು ತಪಸ್ಸಿನಂತೆ ನಿರಂತರವಾಗಿ ಮಾಡಬೇಕು ಅನ್ನೋದು ಸತ್ಯ. ಬದುಕಿನಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದೇ ನಿರಂತರವಾಗಿ ಪ್ರಯತ್ನಿಸೋದ್ರಿಂದ ಯಶಸ್ಸು ಒಲಿಯುತ್ತದೆ ಅನ್ನೋದಕ್ಕೆ ನೇಹಾ ಅಂಥವರು ಸಾಕ್ಷಿಯಾಗ್ತಾರೆ. ಚೆನ್ನಾಗಿ ಓದಿ, ದುಡಿದು ಸಾಧನೆ ಮಾಡಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವುದಿದೆಯಲ್ಲ.. ಅದು ಸಾಮಾನ್ಯದ ಕೆಲಸವಲ್ಲ. ಹೀಗೆ ಚಿಕ್ಕ ವಯಸ್ಸಿನಲ್ಲೇ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಂಡ ನೇಹಾ ನಾರ್ಖೆಡೆ ಸಾಧನೆ ಅನೇಕರಿಗೆ ಸ್ಪೂರ್ತಿಯಾಗುತ್ತೆ.

Published by:Ashwini Prabhu
First published: