Positive Thinking: ವೈಯಕ್ತಿಕ, ಆರ್ಥಿಕವಾಗಿ ಸದೃಢರಾಗಬೇಕೇ? ಹಾಗಿದ್ರೆ ಈ ಮೂರು ಮುತ್ತಿನಂತಹ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಿ

ಉದ್ಯಮಿಗಳು ಅದರಲ್ಲೂ ಈ ಕ್ಷೇತ್ರದಲ್ಲಿ ಹೊಸದಾಗಿ ಕಾಲಿಟ್ಟ ಉದ್ಯಮಿಗಳು ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ತಮ್ಮ ಉದ್ಯಮದಲ್ಲಿ ಸಾಕಷ್ಟು ಬೆಳವಣಿಗೆ ಉಂಟಾಗುವಂತೆ ಮಾಡಬಲ್ಲರು, ಅಷ್ಟೆ ಅಲ್ಲದೆ, ಈ ಧನಾತ್ಮಕ ಚಿಂತನೆ ವೈಯಕ್ತಿಕವಾಗಿಯೂ ಅವರಿಗೆ ಸಾಕಷ್ಟು ಸಹಾಯ ಮಾಡುತ್ತದೆ. ನೀವೊಬ್ಬ ಉದ್ಯಮಿಯಾಗಿದ್ದು ಯಶಸ್ಸಿನ ಹಿಂದೆ ನಿಮ್ಮ ನಡೆ ಇದ್ದರೆ ಆ ಮಾರ್ಗದಲ್ಲಿ ಬರುವ ಅಡೆ-ತಡೆಗಳನ್ನು ಧನಾತ್ಮಕ ಚಿಂತನೆಯಿಂದ ಹೇಗೆ ಹಿಮ್ಮೆಟಿಸಿ ಮುಂದೆ ಸಾಗಬಹುದೆಂಬುದರ ಬಗ್ಗೆ ಮುಂದೆ ಓದಿ.

ಧನಾತ್ಮಕ ಚಿಂತನೆಗಳು

ಧನಾತ್ಮಕ ಚಿಂತನೆಗಳು

  • Share this:
ನೀವು ಒಬ್ಬ ಉದ್ಯಮಿಯಾಗಿದ್ದು (Businessman) ನಿಮ್ಮ ಉದ್ಯಮದ ಬೆಳವಣಿಗೆಗಾಗಿ ಸಾಕಷ್ಟು ಕಷ್ಟಪಡುತ್ತಿರುವಿರಾ? ಅಥವಾ ನಿಮ್ಮ ಉದ್ಯಮದಲ್ಲಿ (Business) ಎಲ್ಲವೂ ಸರಿಯಿದ್ದರೂ ಸಹ ನೀವು ನಿರೀಕ್ಷಿಸಿದಷ್ಟು ಪ್ರಗತಿಯ ದರದಲ್ಲಿ ನಿಮ್ಮ ಉದ್ಯಮ ನಡೆಯುತ್ತಿಲ್ಲ ಎಂಬ ಅಸಮಾಧಾನ ನಿಮ್ಮನ್ನು ಬಾಧಿಸುತ್ತಿದೆಯೆ..? ಹೌದೆಂದಾದಲ್ಲಿ, ಇದೀಗ ನೀವು ನಿಮ್ಮ ಮನಸ್ಥಿತಿಯನ್ನು ಬದಲಾಯಿಸಬೇಕಾದ ಸಮಯವಿದು ಎಂದು ತಿಳಿದುಕೊಳ್ಳಿ ಹಾಗೂ ಧನಾತ್ಮಕ ಚಿಂತನೆಯೆಡೆ (Positive Thinking) ನಿಮ್ಮ ಗಮನವನ್ನು ಕೇಂದ್ರೀಕರಿಸಿ ಅದನ್ನು ಅಳವಡಿಸಿಕೊಳ್ಳುವ ಬಗ್ಗೆ ಗಂಭೀರವಾಗಿ ಯೋಚಿಸಿ ನೋಡಿ. ಧನಾತ್ಮಕತೆ ಎನ್ನುವುದು ನಿರಂತರವಾಗಿ ಹರಿಯುತ್ತಿರುವ ಶುದ್ಧ ನೀರಿನ ಹಾಗೆ. ಹರಿಯುವ ಶುದ್ಧ ನೀರು ಎಂದಿಗೂ ಹಾನಿ ಮಾಡದು ಬದಲಾಗಿ ಉತ್ಸಾಹ, ಹುರುಪುಗಳು ಮನದಲ್ಲರಳುವಂತೆ ಮಾಡುತ್ತದೆ.

ಧನಾತ್ಮಕ ದೃಷ್ಟಿಯಿಂದ ನೋಡಿದಾಗ ಎಲ್ಲವೂ ಉತ್ತಮವಾಗಿಯೇ ಆಗುತ್ತದೆ ಎಂದು ದೃಢವಾಗಿ ನಂಬಲಾಗುತ್ತದೆ. ಹಾಗಾಗಿ ಉದ್ಯಮಿಗಳು ಅದರಲ್ಲೂ ಈ ಕ್ಷೇತ್ರದಲ್ಲಿ ಹೊಸದಾಗಿ ಕಾಲಿಟ್ಟ ಉದ್ಯಮಿಗಳು ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ತಮ್ಮ ಉದ್ಯಮದಲ್ಲಿ ಸಾಕಷ್ಟು ಬೆಳವಣಿಗೆ ಉಂಟಾಗುವಂತೆ ಮಾಡಬಲ್ಲರು.

ಅಷ್ಟೆ ಅಲ್ಲದೆ, ಈ ಧನಾತ್ಮಕ ಚಿಂತನೆ ವೈಯಕ್ತಿಕವಾಗಿಯೂ ಅವರಿಗೆ ಸಾಕಷ್ಟು ಸಹಾಯ ಮಾಡುತ್ತದೆ. ನೀವೊಬ್ಬ ಉದ್ಯಮಿಯಾಗಿದ್ದು ಯಶಸ್ಸಿನ ಹಿಂದೆ ನಿಮ್ಮ ನಡೆ ಇದ್ದರೆ ಆ ಮಾರ್ಗದಲ್ಲಿ ಬರುವ ಅಡೆ-ತಡೆಗಳನ್ನು ಧನಾತ್ಮಕ ಚಿಂತನೆಯಿಂದ ಹೇಗೆ ಹಿಮ್ಮೆಟಿಸಿ ಮುಂದೆ ಸಾಗಬಹುದೆಂಬುದರ ಬಗ್ಗೆ ಮುಂದೆ ಓದಿ.

ಸದಾ ಧನಾತ್ಮಕ ಮನಸ್ಥಿತಿ ಕಾಪಾಡಿಕೊಳ್ಳುವುದು
ಒಮ್ಮೆ ಯೋಚಿಸಿ, ನಾವು ಯಾವುದಾದರೊಂದು ವ್ಯಾಪಾರವನ್ನು ಪ್ರಾರಂಭಿಸುವ ಹಾದಿಯಲ್ಲಿದ್ದಾಗ ಆ ಬಗ್ಗೆ ಎಷ್ಟು ಧನಾತ್ಮಕ ಭಾವನೆಯನ್ನು ಹೊಂದಿರುತ್ತೇವೆ ಎಂದು. ಈ ವ್ಯಾಪಾರವನ್ನು ಹೇಗೆಲ್ಲ ಬೆಳೆಸಬಹುದು, ಇದನ್ನು ಹೇಗೆ ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದು ಹಾಗೂ ಎಷ್ಟೆಲ್ಲ ಯಶಗಳಿಸಬಹುದು, ಎಂಬ ಒಂದು ದೂರದೃಷ್ಟಿಯ ಲೆಕ್ಕಾಚಾರ ನಮ್ಮಲ್ಲಿರುತ್ತದೆ ಹಾಗೂ ಅದರ ಪ್ರತಿ ನಾವು ಧನಾತ್ಮಕ ಮನಸ್ಥಿತಿಯನ್ನೇ ಹೊಂದಿರುತ್ತೇವೆ.

ಇದನ್ನೂ ಓದಿ: Self-Confidence: ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆಯೇ? ಈ ಅಂಶಗಳನ್ನು ಅಳವಡಿಸಿಕೊಂಡರೆ ನಿಮಗಿದೆ ಸಕ್ಸಸ್

ಒಂದೊಮ್ಮೆ ವ್ಯಾಪಾರ ನಡೆಯುವ ಸಂದರ್ಭದಲ್ಲಿ ಪ್ರಾರಂಭದಲ್ಲಿ ಕೆಲ ಹಾನಿ ಹಾಗೂ ಅಡೆ-ತಡೆಗಳು ಉಂಟಾಗಲು ಪ್ರಾರಂಭಿಸಿದರೆ ನಮ್ಮಲ್ಲಿ ಬಹುತೇಕರು ಈ ಮೊದಲು ಹೊಂದಿದ್ದಂತಹ ಆ ಧನಾತ್ಮಕ ಮನಸ್ಥಿತಿಯನ್ನು ಕಳೆದುಕೊಂಡೇ ಬಿಡುತ್ತೇವೆ, ನಿರುತ್ಸಾಹಿಗಳಾಗಿಬಿಡುತ್ತೇವೆ. ಪ್ರಯತ್ನದ ಮಹತ್ವ ಏನು ಎಂಬುದರ ವ್ಯಾಖ್ಯಾನವೇ ನಮ್ಮ ಮಸ್ತಿಷ್ಕದಿಂದ ಹಾರಿ ಹೋಗಿಬಿಟ್ಟಂತಾಗುತ್ತದೆ.

ಹಾಗಾಗಿ ಯಶಸ್ಸು ಗಳಿಸಲು ಸಹನೆಯ ಜೊತೆ ಸದಾ ಧನಾತ್ಮಕ ಮನಸ್ಥಿತಿ ಇರುವುದು ಬಲು ಅವಶ್ಯಕ. ಎಷ್ಟೇ ಅಡೆ-ತಡೆಗಳು ಬಂದರೂ ಧನಾತ್ಮಕ ಮನಸ್ಥಿತಿಯನ್ನು ಮಾತ್ರ ಕಳೆದುಕೊಳ್ಳಬೇಡಿ. ಹೀಗೆ ಮಾಡುವುದರಿಂದ ಇದು ನೀವು ನಿರ್ದಿಷ್ಟ ಪರಿಸ್ಥಿತಿಯಿಂದ ಹೇಗೆ ಹೊರಬರಬಹುದು ಎಂಬುದರ ಬಗ್ಗೆ ಆಲೋಚನೆಗಳನ್ನು ಒದಗಿಸುತ್ತದೆ ಹಾಗೂ ಆ ಮೂಲಕ ನೀವು ಕಷ್ಟದ ಪರಿಸ್ಥಿತಿಗಳನ್ನು ಗಟ್ಟಿತನದಿಂದ ಎದುರಿಸಬಹುದು.

"ಏನು ಕಳೆದಿದೆ" ಎಂಬುದರ ಬಗ್ಗೆ ಚಿಂತನೆ
ಸಾಮಾನ್ಯವಾಗಿ ಧನಾತ್ಮಕ ಚಿಂತನೆ ಎಂದಾಗ ಬಹು ಜನರು ತಿಳಿಯುತ್ತಾರೆ, ಉತ್ತಮ ವಿಚಾರಗಳ ಬಗ್ಗೆ ಚಿಂತಿಸುವುದು, ಸದಾ ಹಸನ್ಮುಖಿಯಾಗಿರುವುದು, ಇತ್ಯಾದಿ. ಇವೆಲ್ಲವೂ ಸರಿ, ಆದರೂ ಧನಾತ್ಮಕ ಚಿಂತನೆ ಎಂಬುದು ಇವೇ ಅಲ್ಲ.

ಇವುಗಳ ಹೊರತಾಗಿಯೂ ಮುಖ್ಯವಾದ ಕೆಲ ವಿಷಯಗಳಿವೆ. ಅದೇನೆಂದರೆ, ನಮ್ಮ ಉದ್ದೇಶ ಏನು, ನಾವು ಉತ್ತಮವಾದುದನ್ನು ಮಾಡಲು ಏನು ಮಾಡಬೇಕು, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಲ್ಲಿ ಕಳೆದುಕೊಂಡಿರುವುದು ಏನು? ಎಂಬುದರ ಬಗ್ಗೆ ಚಿಂತಿಸಬೇಕು. ಆಗ ನಮಗೆ ಸ್ವತಃ, ನಮ್ಮಲ್ಲಿ ಯಾವ ಯಾವ ಅಂಶಗಳು ಕಳೆದುಹೋಗಿವೆ ಮತ್ತು ಅವುಗಳನ್ನು ಮತ್ತೆ ಅಳವಡಿಸಿಕೊಳ್ಳುವ ಮೂಲಕ ನಾವು ಏನೆಲ್ಲ ಸಾಧನೆಗಳನ್ನು ಮಾಡಬಹುದು ಎಂಬುದರ ಬಗ್ಗೆ ತಿಳಿಯಲಾರಂಭಿಸುತ್ತದೆ.

ಒಟ್ಟಿನಲ್ಲಿ ನಮ್ಮಲ್ಲಿರುವ ಕೊರತೆಗಳ ಬಗ್ಗೆ ತಿಳಿದುಕೊಳ್ಳುವುದು ಧನಾತ್ಮಕ ಚಿಂತನೆಯ ಒಂದು ಪ್ರಮುಖ ಭಾಗವಾಗಿದೆ ಅಂತಾನೇ ಹೇಳಬಹುದು.

ಸ್ವ-ಘನತೆ ಹೊಂದಿರುವುದು
ನೀವು ನೋಡಿ, ಕೆಲ ಜನರು ನಿರರ್ಗಳವಾಗಿ ಯಶಸ್ಸನ್ನು ಪಡೆದರೆ ಇನ್ನೂ ಕೆಲವರು ಯಶಸ್ಸಿಗಾಗಿ ಸಾಕಷ್ಟು ಪರದಾಡುತ್ತಿರುತ್ತಾರೆ. ಯಾಕೆ ಹೀಗೆ? ಇದಕ್ಕೆ ಒಂದು ಪ್ರಮುಖ ಉತ್ತರವೇ ಸ್ವಘನತೆ (ಸೆಲ್ಫ್ ಇಮೇಜ್) ಎಂಬುದಾಗಿದೆ. ಸ್ವಘನತೆ ಎಂಬುದು ನೀವು ನಿಮ್ಮನ್ನು ನಿಮ್ಮ ಮನದಲ್ಲಿ ಹೇಗೆ ನೋಡುತ್ತೀರಿ ಎಂಬುದರ ಸ್ವರೂಪವೇ ಆಗಿದೆ.

ಏಕೆಂದರೆ ನಿಮ್ಮಲ್ಲಿರುವ ಸಾಮರ್ಥ್ಯ ನೀವು ಏನೆಲ್ಲ ಮಾಡಬಹುದೆಂಬುದರ ಬಗ್ಗೆ ನಿಮಗೊಂದು ಕಲ್ಪನೆ ನೀಡುತ್ತಲೇ ಇರುತ್ತದೆ ಹಾಗೂ ಇದನ್ನು ಅರ್ಥಪೂರ್ಣವಾಗಿ ಸಾಧಿಸುವ ಮೂಲಕ ನಿಮ್ಮ ಮನದಲ್ಲೇ ನಿಮ್ಮ ಪ್ರತಿ ನಿಮಗೆ ಗೌರವ-ಆದರ ಹೆಚ್ಚಾಗುವಂತೆ ಮಾಡುತ್ತದೆ.

ಈ ರೀತಿ ರೂಪಗೊಳ್ಳುವ ಸೆಲ್ಫ್ ಇಮೇಜ್ ನಿಮ್ಮಲ್ಲಿ ಬೇಕಾದ ಆತ್ಮವಿಶ್ವಾಸವನ್ನು ನೀಡುವುದಲ್ಲದೆ ಬರುವ ವಿಪರೀತ ಪರಿಸ್ಥಿತಿಗಳನ್ನು ಎದುರಿಸಿ ಮುನ್ನುಗ್ಗುವ ಹಾಗೆ ಉತ್ತೇಜಿಸುತ್ತದೆ. ಹಾಗಾಗಿಯೇ ಯಶಸ್ಸೆಂಬುದು ನಿಮ್ಮ ಬಳಿ ಬಂದೇ ಬರುತ್ತದೆ.

ಇದನ್ನೂ ಓದಿ:  Relationships: ಸಂಬಂಧಗಳಲ್ಲಿ ವಯಸ್ಸಿನ ಅಂತರ ಕೂಡ ಮುಖ್ಯವಂತೆ, ಈ ವಿಚಾರ ನಿಮಗೆ ತಿಳಿದಿರಲೇಬೇಕು

ಆದರೆ, ನೆನಪಿಡಿ ಸೆಲ್ಫ್ ಇಮೇಜ್ ಎಂಬುದು ಧನಾತ್ಮಕವಾಗಿಯೂ ಇರಬಹುದು ಅಥವಾ ನಕಾರಾತ್ಮಕವಾಗಿಯೂ ಇರಬಹುದು. ನಕಾರಾತ್ಮಕವಾಗಿರುವ ಸೆಲ್ಫ್ ಇಮೇಜ್ ಅಪಕೀರ್ತಿ, ಅಪಯಶಸ್ಸಲ್ಲದೆ ಇನ್ನೇನೂ ಕೊಡಲು ಸಾಧ್ಯವಿಲ್ಲ. ಆದರೆ ಧನಾತ್ಮಕವಾಗಿರುವ ಸೆಲ್ಫ್ ಇಮೇಜ್ ನೀವು ಅಂದುಕೊಂಡಿದ್ದನ್ನು ಸಾಧಿಸಲು ನಿಮಗೆ ಶತಪ್ರತಿಶತ ನೆರವು ನೀಡುತ್ತದೆ.
Published by:Ashwini Prabhu
First published: