• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Nayanthara: ಅವಳಿ ಮಕ್ಕಳ ತಾಯಿಯಾಗಿದ್ದು ನಯನ, ಟ್ರೆಂಡಿಂಗ್​ ಆಗ್ತಿರೋದ್ಯಾಕೆ ಜೂನಿಯರ್​ NTR​ ಹೆಸರು? ಇದು ಅಸಲಿ ಮ್ಯಾಟರ್​!

Nayanthara: ಅವಳಿ ಮಕ್ಕಳ ತಾಯಿಯಾಗಿದ್ದು ನಯನ, ಟ್ರೆಂಡಿಂಗ್​ ಆಗ್ತಿರೋದ್ಯಾಕೆ ಜೂನಿಯರ್​ NTR​ ಹೆಸರು? ಇದು ಅಸಲಿ ಮ್ಯಾಟರ್​!

ನಯನತಾರ, ಜೂ. ಎನ್​ಟಿಆರ್​

ನಯನತಾರ, ಜೂ. ಎನ್​ಟಿಆರ್​

ಟೀಂ ಇಂಡಿಯಾ ಕ್ರಿಕೆಟ್​ ತಂಡದ ಹಾರ್ದಿಕ ಪಾಂಡ್ಯ ಫಾಸ್ಟ್​ ಅಂತೆ, ಆಲಿಯಾ ಭಟ್​ ಹಾಗೂ ರಣಬೀರ್ ಫಾಸ್ಟರ್​ ಅಂತೆ, ಇನ್ನೂ ನಯನತಾರ ಹಾಗೂ ವಿಘ್ನೇಶ್​ ಜೋಡಿ ಫಾಸ್ಟೆಸ್ಟ್​ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇದೀಗ ಮತ್ತೊಂದು ವಿಚಾರ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.

  • Share this:

ಮದುವೆಯಾದ ಮೂರೇ ತಿಂಗಳಿಗೆ ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan), ನಟಿ ನಯನತಾರಾ (Nayanthara) ದಂಪತಿ ಅಭಿಮಾನಿಗಳಿಗಾಗಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಯನತಾರ ಅವಳಿ ಮಕ್ಕಳ (Twins Babies) ತಾಯಿ ಎಂದು ಇನ್​ಸ್ಟಾಗ್ರಾಂನಲ್ಲಿ ದಂಪತಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅರೇ, ಮದುವೆಯಾದ ಮೂರೇ ತಿಂಗಳಿಗೆ ಇದು ಹೇಗೆ ಸಾಧ್ಯ ಎನ್ನುವವರಿಗೆ ಉತ್ತರವನ್ನೂ ಕೊಟ್ಟಿರುವ ದಂಪತಿ, ಬಾಡಿಗೆ ತಾಯಿ  ಮೂಲಕ ಅವಳಿ ಮಕ್ಕಳ ಪಾಲಕರಾಗಿದ್ದಾರೆ. ಟೀಂ ಇಂಡಿಯಾ ಕ್ರಿಕೆಟ್​ ತಂಡದ ಹಾರ್ದಿಕ ಪಾಂಡ್ಯ (Hardik Pandya) ಫಾಸ್ಟ್​ ಅಂತೆ, ಆಲಿಯಾ ಭಟ್ (Alia Bhatt)​ ಹಾಗೂ ರಣಬೀರ್ (Ranbir) ಫಾಸ್ಟರ್​ ಅಂತೆ, ಇನ್ನೂ ನಯನತಾರ ಹಾಗೂ ವಿಘ್ನೇಶ್​ ಜೋಡಿ ಫಾಸ್ಟೆಸ್ಟ್​ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇದೀಗ ಮತ್ತೊಂದು ವಿಚಾರ ಸಿಕ್ಕಾಪಟ್ಟೆ ಟ್ರೋಲ್ (Troll) ಆಗುತ್ತಿದೆ.


ಟ್ರೆಂಡಿಂಗ್​ ಆಗ್ತಿರೋದ್ಯಾಕೆ ಜೂನಿಯರ್​ ಎನ್​ಟಿಆರ್​ ಹೆಸರು!


ನಯನತಾರಾ ಮದುವೆಯಾದ ನಾಲ್ಕು ತಿಂಗಳೊಳಗೆ ಇದು ಹೇಗೆ ಸಾಧ್ಯವಾಯಿತು ಎಲ್ಲರೂ ಚರ್ಚೆ ಮಾಡುತ್ತಿದ್ದಾರೆ. ಆದರೆ, ಟ್ವಿಟ್ಟರ್​ ಹಾಗೂ ಸೋಷಿಯಲ್​ ಮೀಡಿಯಾದಲ್ಲಿ ಜೂನಿಯರ್​ ಹೆಸರು ಟ್ರೆಂಡಿಂಗ್ ಆಗಿದೆ. ನಯನತಾರಾಗೆ ಅವಳಿ ಮಕ್ಕಳಾಗುತ್ತಾರೆ ಎಂದು ಜೂನಿಯರ್ ಎನ್‌ಟಿಆರ್ ಹೇಳಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ನಯನತಾರಾ ಅವರ ಎಡ ಸೊಂಟದ ಮೇಲೆ ಮಚ್ಚೆ ಇದೆ, ಆದ್ದರಿಂದ ಅವರಿಗೆ ಅವಳಿ ಮಕ್ಕಳಾಗುತ್ತಾರೆ ಎಂದು ಜೂನಿಯರ್ ಎನ್​​ಟಿಆರ್​ ಈ ಹಿಂದೆಯೇ ಈಗಾಗಲೇ ಊಹಿಸಿದ್ದರು.


ಅವಳಿ ಮಕ್ಕಳಾಗುತ್ತೆ ಅಂತ ಜೂ ಎನ್​ಟಿಆರ್ ಹೇಳಿದ್ರಂತೆ!


ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇದು ನಿಜ ಜೀವನದ ವಿಡಿಯೋ ಅಲ್ಲ. ‘ಅದುರ್ಸ್’ ಸಿನಿಮಾದ ದೃಶ್ಯವೊಂದರ ಭಾಗವಾಗಿ ಎನ್​ಟಿಆರ್ ನಯನ ಬಳಿ ಹೀಗೆ ಹೇಳಿದ್ದಾರೆ. ಇದೀಗ ನಯನಗೆ ನಿಜವಾಗಿಯೂ ಅವಳಿ ಮಕ್ಕಳಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ಈ ದೃಶ್ಯ ನೆಟ್ಟಿಗರಿಂದ ವೈರಲ್ ಆಗಿದೆ.


ಇದನ್ನೂ ಓದಿ: ನಯನತಾರಾ ದಂಪತಿಗೆ ಅವಳಿ ಮಕ್ಕಳು! ಕ್ಯೂಟ್ ಕಂದಮ್ಮಗಳ ಫೋಟೊ ನೋಡಿ


ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರಿಗೆ ಅವಳಿ ಮಕ್ಕಳಾಗುತ್ತಾರೆ ಎಂದು ಎನ್‌ಟಿಆರ್ ಒಮ್ಮೆ ಹೇಳಿದ್ದರು ಎಂದು ನೆಟಿಜನ್‌ಗಳು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಆದರೆ, ಈ ಟ್ವಿಸ್ಟ್ ಚೆನ್ನಾಗಿದೆ ಎಂದು ಹೇಳುವವರೂ ಇದ್ದಾರೆ.



ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ಜೋಡಿ!


ತಮಗೆ ಅವಳಿ ಗಂಡು ಮಕ್ಕಳಿದ್ದಾರೆ ಎಂದಿರುವ ವಿಘ್ನೇಶ್ ಶಿವನ್, ನಮ್ಮ ಪ್ರಾರ್ಥನೆ ಹಾಗೂ ಪೂರ್ವಜರ ಆಶೀರ್ವಾದದಿಂದ ನಮ್ಮ ಜೀವನದಲ್ಲಿ ಇಬ್ಬರು ಮಕ್ಕಳು ಬಂದಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ನಮಗೆ ಬೇಕು ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಅವಳಿ ಮಕ್ಕಳ ಕಾಲಿಗೆ ಪ್ರೀತಿಯಿಂದ ಮುತ್ತಿಕ್ಕುತ್ತಿರುವ ಫೋಟೋಗಳನ್ನು ನಯನ ಹಂಚಿಕೊಂಡಿದ್ದಾರೆ. ಇದರೊಂದಿಗೆ ನಯನ-ವಿಘ್ನೇಶ್ ಮಕ್ಕಳ ವಿಷಯ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಾಡಿಗೆ ತಾಯ್ತನದ ಮೂಲಕ ತಾವೇ ತಂದೆ-ತಾಯಿಯಾಗಿದ್ದಾರೆ ಎಂದು ತಿಳಿದು ಎಲ್ಲರೂ ವಿಭಿನ್ನವಾಗಿ ಮಾತನಾಡುತ್ತಿದ್ದಾರೆ.


ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ​ To ನಯನತಾರಾ, ಬಾಡಿಗೆ ತಾಯ್ತನದಿಂದ ಮಕ್ಕಳ ಪಡೆದ ತಾರೆಯರಿವರು!


ಮಾರ್ಚ್‌ನಲ್ಲಿ ಈ ಜೋಡಿ ಇನ್ನೂ ಮದುವೆ ಆಗದೇ ಇದ್ದರೂ, ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಳ್ಳುವ ಪ್ಲ್ಯಾನ್ ಮಾಡಲಿದ್ದಾರೆ ಎಂಬುದು ತಮಿಳು ಸಿನಿಮಾ ರಂಗದಲ್ಲಿ ಜೋರಾಗಿಯೇ ಸುದ್ದಿ ಆಗಿತ್ತು. ಅದು ಕೂಡ ಇದೀಗ ನಿಜವಾಗಿದೆ. ಮದುವೆಗೂ ಮುನ್ನ ಬಾಡಿಗೆ ತಾಯಿಯನ್ನು ಫಿಕ್ಸ್ ಮಾಡಿಯೇ ಇವರು ಹೊಸ ಜೀವನಕ್ಕೆ ಕಾಲಿಟ್ಟಿದ್ದರು.

Published by:ವಾಸುದೇವ್ ಎಂ
First published: