• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Solar Power: ಸೌರಶಕ್ತಿಯಿಂದ ಜಗಮಗಿಸಿದ ಗ್ರಾಮ, ವಿದ್ಯುತ್‌ಗಾಗಿ ಪಾವತಿ ಮಾಡಬೇಕಿಲ್ಲ ಬದಲಿಗೆ ಹಣ ಗಳಿಸಬಹುದು

Solar Power: ಸೌರಶಕ್ತಿಯಿಂದ ಜಗಮಗಿಸಿದ ಗ್ರಾಮ, ವಿದ್ಯುತ್‌ಗಾಗಿ ಪಾವತಿ ಮಾಡಬೇಕಿಲ್ಲ ಬದಲಿಗೆ ಹಣ ಗಳಿಸಬಹುದು

ಸೋಲಾರ್ ವ್ಯವಸ್ಥೆ

ಸೋಲಾರ್ ವ್ಯವಸ್ಥೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮೊಧೇರಾ ಗ್ರಾಮವನ್ನು ಭಾರತದ ಮೊದಲ ಸೌರಶಕ್ತಿ ಚಾಲಿತ ಗ್ರಾಮವೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

  • Trending Desk
  • 3-MIN READ
  • Last Updated :
  • Share this:

ನವದೆಹಲಿ: ಗುಜರಾತ್‌ನ (Gujarat) ಮೆಹ್ಸಾನಾ ಜಿಲ್ಲೆಯ ಮೊಧೇರಾ ಗ್ರಾಮವನ್ನು ಭಾರತದ ಮೊದಲ ಸೌರಶಕ್ತಿ ಚಾಲಿತ ಗ್ರಾಮವೆಂದು ಪ್ರಧಾನಮಂತ್ರಿ ನರೇಂದ್ರ (Prime Minister Narendra Modi) ಮೋದಿ ಘೋಷಣೆ ಮಾಡಿದ್ದಾರೆ. ಪ್ರಸಿದ್ಧ ಸೂರ್ಯ ಮಂದಿರದಲ್ಲಿ 3ಡಿ ಪ್ರೊಜೆಕ್ಷನ್ (3D Projection) ಮ್ಯಾಪಿಂಗ್ ಲೈಟ್ ಮತ್ತು ಸೌಂಡ್ ಶೋಗೆ ಪ್ರಧಾನಿ ಸಾಕ್ಷಿಯಾದರು. ಈ ಮೂಲಕ ಭಾರತದಲ್ಲಿ ನವೀಕರಿಸಬಹುದಾದ ಶಕ್ತಿಯ (Power) ಬಳಕೆಯನ್ನು ಹೆಚ್ಚಿಸುವ ಪ್ರಧಾನ ಮಂತ್ರಿಯವರ ಗುರಿಯನ್ನು ಗುಜರಾತ್‌ ರಾಜ್ಯ ಸಕಾರಗೊಳಿಸಿದೆ.


"ಮೊಧೇರಾಗೆ ಇಂದು ಐತಿಹಾಸಿಕ ದಿನ"


ಮೂರು ದಿನಗಳ ಗುಜರಾತ್‌ ಪ್ರವಾಸದಲ್ಲಿದ್ದ ಪ್ರಧಾನಿ ಮೊಧೇರಾದಲ್ಲಿ ಭಾನುವಾರದಂದು ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೋದಿ, "ಸೂರ್ಯ ದೇವಾಲಯದೊಂದಿಗೆ ಸಂಬಂಧ ಹೊಂದಿರುವ ಮೊಧೇರಾ ಸೌರಶಕ್ತಿ ಕ್ಷೇತ್ರದಲ್ಲಿ ತನ್ನ ಪ್ರಗತಿಗೆ ಹೆಸರುವಾಸಿಯಾಗಲಿದೆ. ಸೌರಶಕ್ತಿಯನ್ನು ಬಳಸಿಕೊಳ್ಳುವತ್ತ ದೊಡ್ಡ ಹೆಜ್ಜೆ ಇಟ್ಟಿರುವ ಮೊಧೇರಾಗೆ ಇಂದು ಐತಿಹಾಸಿಕ ದಿನ" ಎಂದರು.


ನಮ್ಮ ಭವ್ಯ ಪರಂಪರೆಯೊಂದಿಗೆ ಹೊಸ ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ ಮೊಧೇರಾ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಮೋದಿ ಹೇಳಿದರು.


"ವಿದ್ಯುತ್‌ಗಾಗಿ ಪಾವತಿ ಮಾಡಬೇಕಿಲ್ಲ ಬದಲಿಗೆ ಹಣ ಗಳಿಸಬಹುದು"


ಮೊಧೇರಾದ ಜನರು ವಿದ್ಯುತ್‌ಗಾಗಿ ಹಣ ಪಾವತಿಸಬೇಕಾಗಿಲ್ಲ ಆದರೆ ಅವರು ಅದನ್ನು ಮಾರಾಟ ಮಾಡಲು ಪ್ರಾರಂಭಿಸಬಹುದು ಮತ್ತು ಅದರಿಂದ ಹಣ ಗಳಿಸಬಹುದು ಎಂದು ಮೋದಿ ಹೇಳಿದರು. "ಇಲ್ಲಿಯವರೆಗೆ ಸರ್ಕಾರವು ವಿದ್ಯುತ್ ಉತ್ಪಾದಿಸುತ್ತಿತ್ತು, ಮತ್ತು ಜನರು ಅದನ್ನು ಖರೀದಿಸುತ್ತಿದ್ದರು; ಆದರೆ, ಈಗ ರೈತರು ಸೋಲಾರ್ ಪ್ಯಾನಲ್ಗಳನ್ನು ಸಹಾಯದಿಂದ ಸ್ವಂತವಾಗಿ ವಿದ್ಯುತ್ ಉತ್ಪಾದಿಸುತ್ತಿದ್ದಾರೆ. ಇದು ದೊಡ್ಡ ಮೈಲಿಗಲ್ಲು" ಎಂದು ಪ್ರಧಾನಿ ಮೊಧೇರಾದಲ್ಲಿ ಹೇಳಿದರು.


ನವ ಭಾರತ ನಿರ್ಮಾಣದಲ್ಲಿ ಸೌರಶಕ್ತಿ ಪಾತ್ರ ದೊಡ್ಡದು


ಹಿಂದೆ ವಿದ್ಯುತ್ ಇಲ್ಲದ ಕಾರಣ ಶಿಕ್ಷಣ ಮತ್ತು ಕೆಲ ಕೆಲಸಗಳಲ್ಲಿ ಅಡೆತಡೆಗಳು ಮತ್ತು ಸಮಸ್ಯೆಗಳಿದ್ದವು. ಆದರೆ ಈಗ ಸೌರಶಕ್ತಿಯು ನವ ಭಾರತವನ್ನು ತನ್ನ ಸುವ್ಯವಸ್ಥಿತ ಗುರಿಯನ್ನು ಸಾಧಿಸಲು ಸಹಕಾರಿಯಾಗಿದೆ ಎಂದರು.


ಇಂದು ಮೊಧೇರಾ, ಮೆಹ್ಸಾನಾ ಮತ್ತು ಇಡೀ ಉತ್ತರ ಗುಜರಾತ್‌ನಲ್ಲಿ ಅಭಿವೃದ್ಧಿಯ ಹೊಸ ಶಕ್ತಿ ಹರಡಿದೆ ಎಂದು ಪ್ರಧಾನಿ ಹೇಳಿದರು. ವಿದ್ಯುತ್, ನೀರು, ರಸ್ತೆ ಮತ್ತು ರೈಲಿನವರೆಗೆ, ಹೈನುಗಾರಿಕೆ, ಕೌಶಲ್ಯ ಅಭಿವೃದ್ಧಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಉದ್ಘಾಟಿಸಲಾಯಿತು.


ಅಲ್ಲದೆ ಅನೇಕ ಯೋಜನೆಗಳಿಗೆ ಅಡಿಪಾಯ ಹಾಕಲಾಗಿದೆ ಎಂದರು. ಮೆಹ್ಸಾನಾದ ಜನರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದ ಕಾಲವೊಂದಿತ್ತು. ಹೆಣ್ಣು ಮಕ್ಕಳು ನೀರು, ವಿದ್ಯುತ್‌ಗಾಗಿ ಬಹಳ ದೂರ ನಡೆಯಬೇಕಾಗಿತ್ತು ಆದರೆ ಇಂದು ಹೊಸ ಪೀಳಿಗೆ ಈ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಎಂದು ಹೇಳಿದರು.


ಇದನ್ನೂ ಓದಿ: ಎರಡನೇ ಪತಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಜೆಫ್ ಬೆಜೋಸ್ ಮಾಜಿ ಪತ್ನಿ ಮೆಕೆಂಜಿ ಸ್ಕಾಟ್


"ನಾವು ಸೈಕಲ್‌ಗಳನ್ನು ತಯಾರಿಸಲು ಸಾಧ್ಯವಾಗದ ಸಮಯವಿತ್ತು, ಇಂದು ಗುಜರಾತ್ ಕಾರುಗಳು ಮತ್ತು ಮೆಟ್ರೋ ಕೋಚ್‌ಗಳನ್ನು ತಯಾರಿಸುತ್ತಿದೆ ಮತ್ತು ವಿಮಾನಗಳನ್ನು ತಯಾರಿಸುವ ದಿನ ಕೂಡ ದೂರವಿಲ್ಲ" ಎಂದು ತವರು ರಾಜ್ಯದ ಬಗ್ಗೆ ಹೆಮ್ಮೆ ವ್ಯಕ್ತೊಡಿಸಿದರು.


1000 ಕ್ಕೂ ಹೆಚ್ಚು ಮನೆಗಳ ಛಾವಣಿ ಮೇಲೆ ಸೌರ ವ್ಯವಸ್ಥೆ ಸ್ಥಾಪನೆ


ಇನ್ನೂ ಮೊಧೇರಾ ಗ್ರಾಮದಲ್ಲಿರುವ ಮನೆಗಳ ಮೇಲೆ 1000ಕ್ಕೂ ಹೆಚ್ಚು ಛಾವಣಿಯ ಸೌರ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ. ಸೌರ ಫಲಕಗಳಿಂದ ಹಗಲಿನಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಸಂಜೆ ವೇಳೆಗೆ ಮನೆಗಳಿಗೆ ಬಿಇಎಸ್‌ಎಸ್‌ ಮೂಲಕ ವಿದ್ಯುತ್‌ ಪೂರೈಕೆ ಮಾಡಲಾಗುತ್ತದೆ. ಈ ಯೋಜನೆಯ ಮೂಲಕ ಮೊಧೇರಾ ಗ್ರಾಮ ನಿವ್ವಳ ನವೀಕರಿಸಬಹುದಾದ (ನೆಟ್​ ರಿನ್ಯೂವೇಬಲ್​) ಇಂಧನವನ್ನು ಉತ್ಪಾದಿಸುವ ಭಾರತದ ಮೊದಲ ಗ್ರಾಮವಾಗಲಿದೆ.


ಭಾರತದಲ್ಲಿ ನವೀಕರಿಸಬಹುದಾದ ಶಕ್ತಿಯ ಬಳಕೆಯನ್ನು ಹೆಚ್ಚಿಸುವ ಪ್ರಧಾನ ಮಂತ್ರಿಯವರ ಗುರಿಯನ್ನು ಗಮನದಲ್ಲಿಟ್ಟುಕೊಂಡು ಗುಜರಾತ್‌ನಲ್ಲಿ ವಿವಿಧ ಕಲ್ಯಾಣ ಯೋಜನೆಗಳ ಸುಸ್ಥಿರ ಅನುಷ್ಠಾನವನ್ನು ಖಚಿತಪಡಿಸಿದೆ ಎಂದು ಗುಜರಾತ್ ಸರ್ಕಾರ ಹೇಳಿದೆ.


ಮೊಧೇರಾ ಸೂರ್ಯ ದೇವಾಲಯದಿಂದ ಸುಮಾರು 6 ಕಿಮೀ ದೂರದಲ್ಲಿರುವ ಮೆಹ್ಸಾನಾದ ಸಜ್ಜನಪುರದಲ್ಲಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (BESS) ನೊಂದಿಗೆ ಸಂಯೋಜಿಸಲ್ಪಟ್ಟ ಸೌರ ವಿದ್ಯುತ್ ಯೋಜನೆಯ ಮೂಲಕ ಮೊಧೇರಾಗೆ 24x7 ಸೌರ ಶಕ್ತಿ ಒದಗಿಸುವ ಮೂಲಕ ಮೊಧೇರಾ ಸೂರ್ಯ ಮಂದಿರ ಮತ್ತು ಪಟ್ಟಣವನ್ನು ಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರ ಸೌರೀಕರಣಗೊಳಿಸಿದೆ. ಈ ಮೂಲಕ ಮೊದಲ ಸೌರಶಕ್ತಿ ಚಾಲಿತ ಗ್ರಾಮವಾಗಿ ಮೊಧೇರಾ ಗುರುತಿಸಿಕೊಂಡಿದೆ.


ಇದನ್ನೂ ಓದಿ: ಮೋದಿ ನಿಂದಿಸಿದ ಆಪ್​ ಅಧ್ಯಕ್ಷ: ಇದು ಗುಜರಾತಿಗರಿಗೆ ಅವಮಾನ ಎಂದ ಬಿಜೆಪಿ!


ಪ್ರವಾಸಿಗರಿಗೆ ವೀಕ್ಷಿಸಲು ಅನುವು


ಸೂರ್ಯ ಮಂದಿರದಲ್ಲಿ ಸೌರಶಕ್ತಿಯಿಂದ ಹೆರಿಟೇಜ್ ಲೈಟಿಂಗ್‌ಗಳು ಮತ್ತು 3ಡಿ ಪ್ರೊಜೆಕ್ಷನ್ ಕಾರ್ಯನಿರ್ವಹಿಸಲಿದೆ. ಈ 3ಡಿ ಪ್ರೊಜೆಕ್ಷನ್ ಮೂಲಕ ಪ್ರವಾಸಿಗರಿಗೆ ಸಂಜೆ 15 ರಿಂದ 18 ನಿಮಿಷಗಳ ಕಾಲ ಮೊಧೇರಾದ ಇತಿಹಾಸವನ್ನು ಪರಿಚಯಿಸಲಾಗುತ್ತದೆ. ದೇವಾಲಯದ ಆವರಣದಲ್ಲಿ ಪರಂಪರೆಯ ದೀಪಗಳನ್ನು ಅಳವಡಿಸಲಾಗಿದೆ. ಈ ದೀಪಾಲಂಕಾರವನ್ನು ನೋಡಲು ಜನರು ಈಗ ಸಂಜೆ 6 ರಿಂದ ರಾತ್ರಿ 10 ರವರೆಗೆ ದೇವಸ್ಥಾನಕ್ಕೆ ಭೇಟಿ ನೀಡಬಹುದು.


3ಡಿ ಪ್ರೊಜೆಕ್ಷನ್ ನಿತ್ಯ ಸಂಜೆ 7 ರಿಂದ 7.30 ರವರೆಗೆ ಕಾರ್ಯನಿರ್ವಹಿಸುತ್ತದೆ. ಸೂರ್ಯ ದೇವಾಲಯವು ಪುಷ್ಪಾವತಿ ನದಿಯ ಮೇಲೆ ನೆಲೆಸಿದ್ದು ಮೆಹ್ಸಾನಾ ಜಿಲ್ಲೆಯ ಮೊಧೇರಾದಲ್ಲಿದೆ. ಇದನ್ನು 1026-27ರಲ್ಲಿ ಚೌಲುಕ್ಯ ರಾಜವಂಶದ ರಾಜ ಭೀಮ-I ನಿರ್ಮಿಸಿದನು.

First published: