PM Modi Net Worth: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಂಪತ್ತೆಷ್ಟು? ತಿಳಿದರೆ ಅಚ್ಚರಿಗೊಳ್ಳುತ್ತೀರಿ!

Narendra Modi Birthday Special: ಮೋದಿ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ಈವರೆಗೆ ಎಷ್ಟು ಆಸ್ತಿ ಸಂಪಾದಿಸಿದ್ದಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಈಗ ಅವರ ಸ್ಥಿರ ಮತ್ತು ಚರ ಆಸ್ತಿಗಳ ಬಗ್ಗೆ ತಿಳಿದುಕೊಳ್ಳೋಣ.

ನರೇಂದ್ರ ಮೋದಿ

ನರೇಂದ್ರ ಮೋದಿ

  • Share this:
ನಾಳೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ತಮ್ಮ 72ನೇ ಹುಟ್ಟುಹಬ್ಬ (Birthday) ವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮೋದಿ ಅವರು ಸೆಪ್ಟೆಂಬರ್ 17, 1950 ರಂದು ಗುಜರಾತ್‌ (Gujarat) ನ ಮೆಹ್ಸಾನಾ ಜಿಲ್ಲೆಯ ವಡ್ನಗರದಲ್ಲಿ ಜನಿಸಿದರು. ಪ್ರಧಾನ ಮಂತ್ರಿ ಮೋದಿ ಅವರ ಹುಟ್ಟುಹಬ್ಬ (PM Narendra Modi) ದಂದು ದೇಶದಲ್ಲಿ ಹಲವಾರು ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗುತ್ತೆ. ಈ ಬಾರಿಯೂ ಮೋದಿ ತಮ್ಮ ಹುಟ್ಟುಹಬ್ಬದಂದು ಮಧ್ಯಪ್ರದೇಶ (Madhya Pradesh) ಕ್ಕೆ ಹೋಗಲಿದ್ದಾರೆ. ನಮೀಬಿಯಾದಿಂದ ತರಲಾದ ಎಂಟು ಚಿರತೆಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗುತ್ತೆ. ನಮ್ಮ ದೇಶದ ಕೊನೆಯ ಚಿರತೆ 1948ರಲ್ಲಿ ಸತ್ತಿತ್ತು. ನಂತರ 1950ರ ದಶಕದಲ್ಲಿ ಚಿರತೆಗಳು ದೇಶದಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗಿತ್ತು. ಮತ್ತೆ ಈಗ ಮೋದಿ ಇವುಗಳನ್ನು ದೇಶಕ್ಕೆ ತರುತ್ತಿದ್ದಾರೆ.

ಈ ನಡುವೆ ದೇಶದ ಪ್ರತಿಯೊಬ್ಬರಿಗೂ ಮೋದಿ ಅವರ ವೈಯಕ್ತಿಕ ಜೀವನದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಆಸೆಯಿದೆ. ಆದರೆ ಮೋದಿ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ಈವರೆಗೆ ಎಷ್ಟು ಆಸ್ತಿ ಸಂಪಾದಿಸಿದ್ದಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಈಗ ಅವರ ಸ್ಥಿರ ಮತ್ತು ಚರ ಆಸ್ತಿಗಳ ಬಗ್ಗೆ ತಿಳಿದುಕೊಳ್ಳೋಣ.

ಪ್ರಧಾನಿ ಮೋದಿ ಸಂಪತ್ತೆಷ್ಟು?

ವಿಶ್ವದ ಟಾಪ್ ಪವರ್‌ಫುಲ್ ನಾಯಕರಲ್ಲಿ ಒಬ್ಬರಾದ ಮೋದಿಯವರ ಆಸ್ತಿ ಎಷ್ಟು ಅಂತ ಗೊತ್ತಾದ್ರೆ ಶಾಕ್ ಆಗಲೇ ಬೇಕು. ಸದ್ಯ ಮೋದಿ ಬಳಿ ಯಾವುದೇ ಸ್ಥಿರಾಸ್ತಿ ಇಲ್ಲ. ಕೆಲವು ಸಮಯದ ಹಿಂದೆ ಅವರು ತಮ್ಮ ತವರು ರಾಜ್ಯವಾದ ಗುಜರಾತ್‌ನಲ್ಲಿ ವಸತಿ ಪ್ಲಾಟ್‌ನಲ್ಲಿ ತಮ್ಮ ಪಾಲಿನ ಭೂಮಿಯನ್ನು ದಾನ ಮಾಡಿದರು. ಹಾಗಾಗಿ ಈಗ ಮೋದಿಗೆ ಯಾವುದೇ ಸ್ಥಿರಾಸ್ತಿ ಇಲ್ಲ.

ಪ್ರಧಾನ ಮಂತ್ರಿ ಮೋದಿಯವರ ಚರ ಆಸ್ತಿ 2.23 ಕೋಟಿ . ಇವುಗಳಲ್ಲಿ ಹೆಚ್ಚಿನವು ಬ್ಯಾಂಕ್ ಠೇವಣಿಗಳಿವೆ. ಕಳೆದ ತಿಂಗಳು ಪ್ರಧಾನ ಮಂತ್ರಿಗಳ ಕಾರ್ಯಾಲಯದ (PMO) ಪ್ರಕಟಣೆಯ ಪ್ರಕಾರ, 2021-22 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 26 ಲಕ್ಷ ರೂ.ಗಳಷ್ಟು ಆಸ್ತಿ ಹೆಚ್ಚಿದೆ. ಅಂದರೆ ಅವರ ಸಂಪತ್ತು ಮಾರ್ಚ್ 2021 ರ ಅಂತ್ಯದ ವೇಳೆಗೆ ರೂ. 1,97,68,885 ರಿಂದ ಮಾರ್ಚ್ 31, 2022 ರ ವೇಳೆಗೆ ರೂ.2,23,82,504 ಕ್ಕೆ ಏರಿತು.

ಇದನ್ನೂ ಓದಿ: ಮೋದಿ ಹುಟ್ಟುಹಬ್ಬಕ್ಕೆ ದೇಶಕ್ಕೆ ಚಿರತೆಗಳ ಉಡುಗೊರೆ!

ಯಾವುದೇ ಸ್ಥಿರಾಸ್ತಿ ಹೊಂದಿಲ್ಲ ಪ್ರಧಾನಿ ಮೋದಿ!

ಸದ್ಯಕ್ಕೆ ಯಾವುದೇ ಸ್ಥಿರಾಸ್ತಿ ಹೊಂದಿಲ್ಲ ಎಂದು ಮೋದಿ ಸ್ಥಿರಾಸ್ತಿ ವಿಭಾಗದಲ್ಲಿ 'NIL' ಎಂದು ಘೋಷಿಸಿದ್ದಾರೆ. ಮೋದಿ ಸ್ಥಿರಾಸ್ತಿ ಸರ್ವೆ ನಂ.401/A ಇತರ ಮೂವರು ಜಂಟಿ ಮಾಲೀಕರೊಂದಿಗೆ ಇತ್ತು. ಇವರೆಲ್ಲರಿಗೂ ಆಸ್ತಿಯಲ್ಲಿ ಶೇ.25ರಷ್ಟು ಸಮಾನ ಪಾಲು ಇದೆ. ಆದರೆ ಈಗ ಮೋದಿ ಆ ಆಸ್ತಿಯಲ್ಲಿ ತಮ್ಮ ಪಾಲಿನ ದೇಣಿಗೆ ನೀಡಿದ್ದಾರೆ. ಈ ಸ್ಥಿರಾಸ್ತಿಯ ಮಾರುಕಟ್ಟೆ ಮೌಲ್ಯ 1.10 ಕೋಟಿ. 2002ರಲ್ಲಿ ಈ ವಸತಿ ಆಸ್ತಿಯನ್ನು ಖರೀದಿಸಿರುವುದಾಗಿ ಮೋದಿ ಕಳೆದ ವರ್ಷ ಘೋಷಿಸಿದ್ದರು.

ಇದನ್ನೂ ಓದಿ: ಭಾರತಕ್ಕೆ ಬಂಪರ್ ಗಿಫ್ಟ್ ನೀಡಲು ರಷ್ಯಾ ಯೋಚನೆ!

1.48 ಲಕ್ಷ ಮೌಲ್ಯದ ಚಿನ್ನ!

ಇತ್ತೀಚಿನ ಚರ ಆಸ್ತಿ ವಿಶ್ಲೇಷಣೆಯ ಪ್ರಕಾರ, ಮೋದಿ ಅವರ ಕೈ-ನಗದು 36,900 ರೂ.ನಿಂದ 35,250 ರೂ.ಗೆ ಇಳಿದಿದೆ. ಮೋದಿ ರಾಷ್ಟ್ರೀಯ 8.9 ಲಕ್ಷಗಳನ್ನು ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡಲಾಗಿದೆ. ಜೀವ ವಿಮಾ ಪಾಲಿಸಿಯಲ್ಲಿ ರೂ.1,50,957 ಪ್ರೀಮಿಯಂ ಜಮಾ ಮಾಡಲಾಗಿದೆ. ಅವರು ಎಲ್ & ಟಿ ಮೂಲಸೌಕರ್ಯ ಬಾಂಡ್‌ಗಳ ರೂಪದಲ್ಲಿ ಹೂಡಿಕೆಗಳನ್ನು ಹೊಂದಿದ್ದಾರೆ. 2012ರಲ್ಲಿ ಮೋದಿ ಇವುಗಳನ್ನು ರೂ.20,000ಕ್ಕೆ ಖರೀದಿಸಿದ್ದರು ಎಂದು ವರದಿಯಾಗಿದೆ. 1.48 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ ಎಂದು ಮೋದಿ ಈ ಹಿಂದೆ ಘೋಷಿಸಿದ್ದರು.
Published by:ವಾಸುದೇವ್ ಎಂ
First published: