• Home
  • »
  • News
  • »
  • business
  • »
  • Infosys: ನಾರಾಯಣ ಮೂರ್ತಿಯವರ ದಿನ ಶುರುವಾಗೋದೇ ಆಫೀಸ್‌ನಲ್ಲಂತೆ! ಇನ್ಫೋಸಿಸ್ ಕಟ್ಟಿ ಬೆಳೆಸೋದು ಅಂದ್ರೆ ಸುಮ್ನೇನಾ?

Infosys: ನಾರಾಯಣ ಮೂರ್ತಿಯವರ ದಿನ ಶುರುವಾಗೋದೇ ಆಫೀಸ್‌ನಲ್ಲಂತೆ! ಇನ್ಫೋಸಿಸ್ ಕಟ್ಟಿ ಬೆಳೆಸೋದು ಅಂದ್ರೆ ಸುಮ್ನೇನಾ?

ನಾರಾಯಣ ಮೂರ್ತಿ

ನಾರಾಯಣ ಮೂರ್ತಿ

ಚಿಕ್ಕದಾಗಿ ಬೆರಳೆಣಿಕೆಯಷ್ಟು ಜನರೊಂದಿಗೆ ಶುರು ಮಾಡಿದ ಒಂದು ಕಂಪನಿಯನ್ನು ದೊಡ್ಡ ಒಂದು ಐಟಿ ಕಂಪನಿ (IT Company) ಮಾಡಬೇಕು ಅಂತ ಹೇಳಿದರೆ ಅದು ಸಾಧಾರಣವಾದ ಮಾತಂತೂ ಅಲ್ಲವೇ ಅಲ್ಲ.

  • Trending Desk
  • Last Updated :
  • Karnataka, India
  • Share this:

ಒಬ್ಬ ಮನುಷ್ಯ (Human) ಯಶಸ್ಸಿ (Success) ನ ಶಿಖರವನ್ನು ಏರಿದ್ದಾರೆ ಅಂತ ಹೇಳಿದರೆ, ಅದರ ಹಿಂದೆ ಅವರ ಕಠಿಣವಾದ ಪರಿಶ್ರಮ ಮತ್ತು ಶಿಸ್ತು (Discipline) ಬದ್ದವಾದ ಜೀವನ ಶೈಲಿ ಕಾರಣವಾಗಿರುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಚಿಕ್ಕದಾಗಿ ಬೆರಳೆಣಿಕೆಯಷ್ಟು ಜನರೊಂದಿಗೆ ಶುರು ಮಾಡಿದ ಒಂದು ಕಂಪನಿಯನ್ನು ದೊಡ್ಡ ಒಂದು ಐಟಿ ಕಂಪನಿ (IT Company) ಮಾಡಬೇಕು ಅಂತ ಹೇಳಿದರೆ ಅದು ಸಾಧಾರಣವಾದ ಮಾತಂತೂ ಅಲ್ಲವೇ ಅಲ್ಲ. ಇಷ್ಟು ಹೇಳಿದರೆ ಸಾಕು, ನಾವು ಯಾರ ಬಗ್ಗೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಚೆನ್ನಾಗಿ ಅರ್ಥವಾಗಿರುತ್ತದೆ. ಹೌದು.. ನಾವು ಇಲ್ಲಿ ಮಾತಾಡ್ತಿರೋದು ಇನ್ಫೋಸಿಸ್ ನ ಸ್ಥಾಪಕರು ಮತ್ತು ಅಧ್ಯಕ್ಷರು ಆದ ನಾರಾಯಣ ಮೂರ್ತಿ ಅವರ ಬಗ್ಗೆ.


ಸಮಯದ ಪ್ರಾಮುಖ್ಯತೆ, ಶಿಸ್ತಿನ ಜೀವನ, ಸರಳವಾದ ಜೀವನ, ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡುವ ಪ್ರವೃತ್ತಿ ಹೀಗೆ ಒಂದೇ ಎರಡೇ, ನಾರಾಯಣ ಮೂರ್ತಿಯವರ ಬಗ್ಗೆ ಮಾತಾಡೋಕೆ ತುಂಬಾನೇ ಇರುತ್ತದೆ ಎಂದು ಹೇಳಬಹುದು.


ಬೆಳಿಗ್ಗೆ 6.20ಕ್ಕೆ ಕಚೇರಿಯಲ್ಲಿ ಇರ್ತಾರಂತೆ ಮೂರ್ತಿ!


ಮೂರ್ತಿಯವರಿಗೆ ಸಮಯದ ಬಗ್ಗೆ ಅರಿವು ಎಷ್ಟಿದೆ ಅಂತ ತಿಳಿದುಕೊಳ್ಳಲು ಇಲ್ಲೊಂದು ಮಾಹಿತಿ ಇದೆ ನೋಡಿ. ಇವರು ಸುಮಾರು ವರ್ಷಗಳಿಂದ ತಮ್ಮ ಇನ್ಫೋಸಿಸ್ ಕಚೇರಿಗೆ ಪ್ರತಿದಿನ ಬೆಳಿಗ್ಗೆ 6.20 ಕ್ಕೆ ಬರ್ತಾರಂತೆ. ಅಬ್ಬಾ.. ಇಷ್ಟು ಬೆಳಿಗ್ಗೆ ಬೆಳಿಗ್ಗೆ ಕಚೇರಿಗೆ ಹೋಗ್ತಾರಾ ಅಂತ ನಿಮಗೆ ಆಶ್ಚರ್ಯವಾಗಬಹುದು. ಬೇಗ ಬಂದು ಬೇಗ ಮನೆಗೆ ಹೋಗ್ತಾರಾ ಅಂತ ನೀವು ಕೇಳಬಹುದು. ಇವರು ಮನೆಗೆ ಹೋಗೋದು ರಾತ್ರಿ 8 ಅಥವಾ 9 ಆದ ನಂತರವೇ ಅಂತೆ.


ಕೆಲಸ ಮೇಲೆ ಶ್ರದ್ಧೆ ಇರಬೇಕು!


76 ವರ್ಷದ ಮೂರ್ತಿ ಅವರು ಮನಿ ಕಂಟ್ರೋಲ್ ನೊಂದಿಗೆ ಮಾತನಾಡಿ, ಇನ್ಫೋಸಿಸ್ ಅನ್ನು ನಿರ್ಮಿಸಲು ಅವರು ಮೀಸಲಿಟ್ಟ ಸಮಯದ ಬಗ್ಗೆ ಮತ್ತು ತಮ್ಮ ಇಬ್ಬರು ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಹೇಗೆ ಆ ಸಮಯವನ್ನು ವಿಭಾಗಿಸಿಕೊಂಡರು ಎಂಬುದರ ಬಗ್ಗೆ ಮಾತನಾಡಿದರು.


ಇದನ್ನೂ ಓದಿ: ಭಾರತದ ಪಾಲಿಗೆ ನಾಚಿಕೆಗೇಡಿನ ವಿಚಾರ: ಹೀಗಂದಿದ್ದೇಕೆ ಇನ್ಫೋಸಿಸ್ ನಾರಾಯಣ ಮೂರ್ತಿ?


ನಾರಾಯಣ ಮೂರ್ತಿ ಅವರು ಬೆಳಿಗ್ಗೆ 7 ಗಂಟೆಗೆ ಇನ್ಫೋಸಿಸ್ ಕ್ಯಾಂಪಸ್ ಗೆ ಹೇಗೆ ತಲುಪುತ್ತಾರೆ ಎಂಬ ಪ್ರಶ್ನೆಗೆ, ಮೂರ್ತಿಯವರು ಮೃದುವಾಗಿ "ಬೆಳಿಗ್ಗೆ 6.20" ಎಂದು ಸಮಯದಲ್ಲಿ ತಿದ್ದುಪಡಿ ಮಾಡಿದರು. 2011 ರಲ್ಲಿ ಅವರು ನಿವೃತ್ತರಾಗುವವರೆಗೆ ಬೆಳಿಗ್ಗೆ ಬೇಗನೆ ಇನ್ಫೋಸಿಸ್ ಕ್ಯಾಂಪಸ್ ತಲುಪುವುದು ಅವರು ಅನುಸರಿಸುತ್ತಿದ್ದ ದಿನಚರಿಯಾಗಿತ್ತು ಎಂದು ಅವರು ಹೇಳಿದರು.


ಇಂದಿನ ಯುವಕರಿಗೆ ಒಂದು ಸಂದೇಶ!


ಅವರ ಸಮಯಪ್ರಜ್ಞೆಯು "ಸಮಯಕ್ಕೆ ಸರಿಯಾಗಿ ಕಚೇರಿಯನ್ನು ತಲುಪುವ ಬಗ್ಗೆ ಯುವಕರಿಗೆ ಅಳಿಸಲಾಗದ ಸಂದೇಶವನ್ನು ಕಳುಹಿಸಿದೆ" ಎಂದು ಮೂರ್ತಿ ಈ ಹಿಂದೆ ಹೇಳಿದ್ದರು. ಸಂದರ್ಶನದ ಸಮಯದಲ್ಲಿ, ಇನ್ಫೋಸಿಸ್ ಅನ್ನು ನಿರ್ಮಿಸಲು ತ್ಯಾಗದ ಅಗತ್ಯವಿದೆ ಎಂದು ಅವರು ಒಪ್ಪಿಕೊಂಡರು ಮತ್ತು ಅವರು ತ್ಯಾಗ ಮಾಡಬೇಕಾದ ಪ್ರಮುಖ ವಿಷಯವೆಂದರೆ ಅವರ ಇಬ್ಬರು ಮಕ್ಕಳಾದ ರೋಹನ್ ಮತ್ತು ಅಕ್ಷತಾ ಅವರೊಂದಿಗೆ ಸಮಯ ಕಳೆಯುವುದು ಎಂಬುದು ಅವರಿಗೆ ತಿಳಿದಿತ್ತು. ಅವರು ತಮ್ಮ ಪತ್ನಿ ಸುಧಾ ಮೂರ್ತಿ ಅವರೇ ತಮ್ಮ ಮಕ್ಕಳನ್ನು ಬೆಳೆಸಿದ್ದಾರೆ ಎಂದು ಮೂರ್ತಿ ಹೇಳುತ್ತಾರೆ.


ತಮ್ಮ ಮಕ್ಕಳ ಜೊತೆ ಹೆಚ್ಚು ಸಮಯ ಕಳೆದಿಲ್ವಂತೆ ಮೂರ್ತಿ


"ಉದ್ಯಮಶೀಲತೆ ಎಂಬುದು ಧೈರ್ಯದ ಮೇಲೆ ಆಧಾರವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಧೈರ್ಯ ಮತ್ತು ತ್ಯಾಗವನ್ನು ಕೋರುತ್ತದೆ" ಎಂದು ನಾರಾಯಣ ಮೂರ್ತಿ ಹೇಳಿದರು. "ಒಂದರ್ಥದಲ್ಲಿ ನಿಜವಾಗಿ ಸೋತವರು ಎಂದರೆ ಅಕ್ಷತಾ ಮತ್ತು ರೋಹನ್ ನನ್ನ ಇಬ್ಬರು ಮಕ್ಕಳು. ವಾಸ್ತವವೆಂದರೆ ನಾನು ಅವರೊಂದಿಗೆ ಯಾವುದೇ ಸಮಯವನ್ನು ಕಳೆಯಲು ಸಾಧ್ಯವಾಗಲಿಲ್ಲ. ಅವರನ್ನು ಸಂಪೂರ್ಣವಾಗಿ ಸುಧಾ ನೋಡಿಕೊಳ್ಳುತ್ತಿದ್ದಳು. ಮಕ್ಕಳ ಯಶಸ್ಸು ಮತ್ತು ಸಾಧನೆ, ಅವರ ಪಿಎಚ್‌ಡಿ, ಅವರ ಸ್ಟ್ಯಾನ್‌ಫೋರ್ಡ್ ಶಿಕ್ಷಣ, ಎಲ್ಲವೂ ಸುಧಾಳಿಂದಲೇ ಆಗಿದೆ" ಎಂದು ಮೂರ್ತಿ ಹೇಳಿದರು.


ಇದನ್ನೂ ಓದಿ: Infosys ಶುರು ಮಾಡೋಕೆ ಪತಿಗೆ ಸಾಲ ಕೊಟ್ಟಿದ್ರಂತೆ ಸುಧಾ ಮೂರ್ತಿ! ಈ ಬಗ್ಗೆ ಅವರೇ ಹೇಳಿದ್ದಾರೆ ನೋಡಿ


ನಾರಾಯಣ ಮೂರ್ತಿ ಅವರು 1981 ರಲ್ಲಿ ತಮ್ಮ ಪತ್ನಿಯಿಂದ 10,000 ರೂಪಾಯಿಗಳ ಸಾಲದೊಂದಿಗೆ ಇನ್ಫೋಸಿಸ್ ಅನ್ನು ಪ್ರಾರಂಭಿಸಿದರು. ಇಂದು ಅದು ಸುಮಾರು 80 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳೀಕರಣವನ್ನು ಹೊಂದಿದೆ ಮತ್ತು 3.35 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.

Published by:ವಾಸುದೇವ್ ಎಂ
First published: