• Home
  • »
  • News
  • »
  • business
  • »
  • Infosys Next Chairman: ಇನ್ಫೋಸಿಸ್ ಮುಂದಿನ ಚೇರ್ಮನ್ ಯಾರು? ಮಾಹಿತಿ ಹಂಚಿಕೊಂಡ ನಂದನ್ ನಿಲೇಕಣಿ!

Infosys Next Chairman: ಇನ್ಫೋಸಿಸ್ ಮುಂದಿನ ಚೇರ್ಮನ್ ಯಾರು? ಮಾಹಿತಿ ಹಂಚಿಕೊಂಡ ನಂದನ್ ನಿಲೇಕಣಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇನ್ಫೋಸಿಸ್​ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಎಲ್ಲರಿಗೂ ಇನ್ಫೋಸಿಸ್​ ನಡೆದುಕೊಂಡ ಬಂದ ಹಾದಿ ಗೊತ್ತು. ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿಯವರ ಬಗ್ಗೆ ಹೇಳೋದೇ ಬೇಡ ಬಿಡಿ.

  • Share this:

ವಿಶಾಲ್ ಸಿಕ್ಕ (Vishal Sikka) ಅವರ ನಿರ್ಗಮನದ ನಂತರ 2017ರಲ್ಲಿ ಕಂಪೆನಿಗೆ ಮರಳಿದ ಇನ್ಫೋಸಿಸ್ (Infosys) ಕಾರ್ಯನಿರ್ವಾಹಕೇತರ ಅಧ್ಯಕ್ಷ ನಂದನ್ ನಿಲೇಕಣಿ (Nandan Nilekani) ತಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾವಣೆ ಮಾಡುತ್ತಿದ್ದು ತಮ್ಮಲ್ಲಿ ಪ್ಲಾನ್ ಬಿ (Plan B) ಇಲ್ಲ ಎಂದಿದ್ದಾರೆ. ಇನ್ಫೋಸಿಸ್‌ನ ಮುಂದಿನ ಚೇರ್ಮನ್‌ (Infosys Next Chairman) ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಇದಕ್ಕೆ ಸಂಬಂಧಪಟ್ಟಂತೆ ಇನ್ಪೋಸಿಸ್‌ನ ಈಗಿನ ಚೇರ್ಮನ್‌ ನಂದನ್‌ ನಿಲೇಕಣಿ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಇನ್ಫೋಸಿಸ್​ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಎಲ್ಲರಿಗೂ ಇನ್ಫೋಸಿಸ್​ ನಡೆದುಕೊಂಡ ಬಂದ ಹಾದಿ ಗೊತ್ತು. ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿಯವರ ಬಗ್ಗೆ ಹೇಳೋದೇ ಬೇಡ ಬಿಡಿ.


ಇನ್ಫೋಸಿಸ್​ ಮುಂದಿನ ಚೇರ್ಮನ್​ ಬಗ್ಗೆ ಮಾಹಿತಿ!ಮಾರುಕಟ್ಟೆ ಬಂಡವಾಳೀಕರಣದ ಮೂಲಕ ಭಾರತದ ಎರಡನೇ ಅಗ್ರ ಮಾಹಿತಿ ತಂತ್ರಜ್ಞಾನ (ಐಟಿ) ಸೇವೆಗಳ ಕಂಪನಿಯಾದ ಇನ್ಫೋಸಿಸ್‌ನ ನಿರ್ದೇಶಕರ ಮಂಡಳಿಯ ಮುಂದಿನ ಅಧ್ಯಕ್ಷರು ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಲ್ಲ ಎಂದಿದ್ದಾರೆ. ಅಂದರೆ, ಕಂಪನಿಯ ಆರಂಭಕ್ಕೆ ಕಾರಣರಾದ ಸಹ ಸಂಸ್ಥಾಪಕರು ಮುಂದಿನ ಚೇರ್ಮನ್‌ ಆಗುವುದಿಲ್ಲ ಎಂದು ನಂದನ್‌ ನಿಲೇಕಣಿ ಹೇಳಿದ್ದಾರೆ.


ಯಾವುದೇ ಪ್ಲಾನ್​ ಬಿ ಇಲ್ಲ ಎಂದ ನಿಲೇಕಣಿ!


ನಿನ್ನೆ ನಡೆದ Infosysನ 40ನೇ ವರ್ಷದ ಸಂಭ್ರಮಾಚರಣೆಯಲ್ಲಿ ಮಾತನಾಡಿರುವ ನಿಲೇಕಣಿ, “ನಾನು ಯಾವ ಹಂತದಲ್ಲಿ ನಿರ್ಗಮಿಸಿದರೂ, ಯಾರು ಸಂಸ್ಥಾಪಕನಲ್ಲದ ಅಧ್ಯಕ್ಷರಿಗೆ ಹಸ್ತಾಂತರಿಸುತ್ತೇನೆ. ಈಗ, ಯಾವುದೇ ಪ್ಲಾನ್ ಬಿ ಇಲ್ಲ. ನೀವು ಯಾರಿಗಾದರೂ ಹಸ್ತಾಂತರಿಸಿದರೆ, ಅದು ಕಾರ್ಯರೂಪಕ್ಕೆ ಬರದಿದ್ದರೆ, ಯಾವುದೇ ಪ್ಲಾನ್ ಬಿ ಇಲ್ಲ ಎಂದಿದ್ದಾರೆ.


ಇದನ್ನೂ ಓದಿ: ರೈಲು ಟಿಕೆಟ್​ ಬುಕ್​ ಮಾಡೋಕೆ ಆ ಆ್ಯಪ್​ ಬಳಸುವವರಿಗೆ ಬಿಗ್​ ರಿಲೀಫ್​!


"ಪ್ರತಿಯೊಬ್ಬರಿಗೂ ಸಮಾನ ಅವಕಾಶ" ನೀಡುವದರ ಬಗ್ಗೆ ಇನ್ಫೋಸಿಸ್​ನ ಸ್ಥಾಪಕರಾದ ಎನ್​ ಆರ್ ನಾರಾಯಣ ಮೂರ್ತಿ ಅವರು ಹೇಳಿದ್ದರು. ಪ್ರಮುಖ ಮ್ಯಾನೇಜ್‌ಮೆಂಟ್‌ ಹುದ್ದೆಗೆ ನಮ್ಮಲ್ಲಿ ಅತ್ಯುತ್ತಮ ಜನರಿದ್ದಾರೆ ಎಂದು ಅವರು ಹೇಳಿದ್ದಾರೆ. "ಕಂಪನಿಯ ಸ್ಥಾಪಕರ, ಸಹಸ್ಥಾಪಕರ ಮುಂದಿನ ಪೀಳಿಗೆಗೆ ಕಂಪನಿಯ ಉನ್ನತ ಸ್ಥಾನ ನೀಡಲಾಗುವುದೇ?ʼʼ ಎಂಬ ಪ್ರಶ್ನೆಗೆ ನಾರಾಯಣ ಮೂರ್ತಿ ಈ ರೀತಿ ಉತ್ತರಿಸಿದ್ದರು. ಈ ಹೇಳಿಕೆಗೆ ಪೂರಕವಾಗಿ ನಂದನ್‌ ನಿಲೇಕಣಿಯವರ ಈಗಿನ ಹೇಳಿಕೆ ಹೊರಬಿದ್ದಿದೆ.


'ಇನ್ಫೋಸಿಸ್‌ನ ಚುಕ್ಕಾಣಿ ಹಿಡಿಯಲು ಬಯಸುವುದಿಲ್ಲ'


ನಿಲೇಕಣಿ ಅವರು ಯಾವಾಗಲೂ ಅಗತ್ಯವಿರುವಷ್ಟು ಸಮಯದವರೆಗೆ ಇರುತ್ತಾರೆ ಎಂದು ಹೇಳಿಕೊಂಡಿದ್ದಾರೆ, ಆದರೆ ಅವರು ಇನ್ಫೋಸಿಸ್‌ನ ಚುಕ್ಕಾಣಿ ಹಿಡಿಯಲು ಬಯಸುವುದಿಲ್ಲ.


ಉಪಾಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿದ್ದ ನಿಲೇಕಣಿ!


ಭಾರತ ಸರಕಾರದ ಆಧಾರ್‌ ಪ್ರಾಜೆಕ್ಟ್‌ಗಾಗಿ ನಿಲೇಕಣಿಯವರು ಇನ್ಫೋಸಿಸ್‌ನ ಚೇರ್ಮನ್‌ ಹುದ್ದೆಯಿಂದ 2009ರ ಜುಲೈನಲ್ಲಿ ಇನ್ಫೋಸಿಸ್‌ ಉಪಾಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿದ್ದರು. 1981ರಲ್ಲಿ ನಾರಾಯಣ ಮೂರ್ತಿ ಜತೆ ಸೇರಿ ಇನ್ಫೋಸಿಸ್‌ ಆರಂಭಕ್ಕೆ ಇವರು ಕಾರಣರಾಗಿದ್ದರು. ಇವರು ಈ ಕಂಪನಿಯ ಸಹ-ಸ್ಥಾಪಕರಲ್ಲಿ ಒಬ್ಬರು.


ಇದನ್ನೂ ಓದಿ: 12 ತಿಂಗಳು ಕೃಷಿ ಮಾಡಿ 15 ಲಕ್ಷದವರೆಗೆ ಗಳಿಸಿ, ಆರೋಗ್ಯಕ್ಕೂ ಉತ್ತಮ ಈ ಹಣ್ಣು!


ಅಲ್ಲಿಂದ ಇಲ್ಲಿಯವರೆಗೆ ಐದು ವರ್ಷಗಳ ಕಾಲ ಕಂಪನಿಯ ವಾರ್ಷಿಕ ಆದಾಯ ಹಲವು ಪಟ್ಟು ಹೆಚ್ಚಾಗಿತ್ತು. 2017ರ ಆರ್ಥಿಕ ವರ್ಷದಲ್ಲಿ 68,484 ಕೋಟಿ ರೂ. ಇದ್ದ ಆದಾಯವು 1.24 ಟ್ರಿಲ್ಲಿಯನ್‌ಗೆ ತಲುಪಿತ್ತು. ಸಲೀಲ್‌ ಪಾರೇಖ್‌ ಅವರ ಜತೆ ಸೇರಿ ನಿಲೇಕಣಿಯವರು ಕಂಪನಿಯ ಆದಾಯ ಹೆಚ್ಚಳಕ್ಕೆ ಕಾರಣವಾಗಿತ್ತು.


Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು