Volkswagen: ಫೋಕ್ಸ್ ವ್ಯಾಗನ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನಳಿನ್ ಜೈನ್ ನೇಮಕ

ಸ್ಕೋಡಾ ಆಟೋ ಫೋಕ್ಸ್ ವ್ಯಾಗನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನಳಿನ್ ಜೈನ್ ನನ್ನು ಹಣಕಾಸು ಮತ್ತು ಐಟಿ ಕಾರ್ಯನಿರ್ವಾಹಕ ನಿರ್ದೇಶಕರೆಂದು ಘೋಷಿಸಿದೆ. ನಳಿನ್ ಜೈನ್ ಆಗಸ್ಟ್ ತಿಂಗಳಲ್ಲಿಅಧಿಕಾರ ವಹಿಸಲಿದ್ದಾರೆ.

ನಳಿನ್ ಜೈನ್

ನಳಿನ್ ಜೈನ್

  • Share this:
ನಳಿನ್ ಜೈನ್ (Nalin Jain) ಅವರನ್ನು ಸ್ಕೋಡಾ ಆಟೋ ಫೋಕ್ಸ್ ವ್ಯಾಗನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನ (SAVWIPL) ಹಣಕಾಸು ಮತ್ತು ಐಟಿಯ ಕಾರ್ಯನಿರ್ವಾಹಕ ನಿರ್ದೇಶಕರೆಂದು (Executive Director) ಘೋಷಿಸಿದೆ. ಕಳೆದ ಮೂರು ವಷರ್ಗಳಲ್ಲಿ ಗ್ರೂಪ್ ನ ಇಂಡಿಯಾ 2.0 ಯೋಜನೆಗೆ (India 2.0 Project) ಹಣಕಾಸು ಕಾರ್ಯತಂತ್ರವನ್ನು ಯಶಸ್ವಿಯಾಗಿ ಮುನ್ನಡೆಸಿದ ಮಾರ್ಟಿನ್ ಮಹಲ್ಕೆ (Martin Mahlke) ಅವರ ಉತ್ತರಾಧಿಕಾರಿಯಾಗಿದ್ದಾರೆ. ಕಾರ್ಯನಿರ್ವಾಹಕ ನಿರ್ದೇಶಕರಾಗಿ ನಳಿನ್ ಜೈನ್ ಅವರು ಕಂಪೆನಿಯ ಆರ್ಥಿಕ ಬೆಳವಣಿಗೆಯ ಜವಬ್ದಾರಾಗಿದ್ದಾರೆ. ಇವರು ಆಗಸ್ಟ್ ತಿಂಗಳಲ್ಲಿ ಅಧಿಕಾರ ವಹಿಸಿಕೊಳ್ಲಲಿದ್ದಾರೆ.

ಸ್ಕೋಡಾ ಆಟೋ ವೋಕ್ಸ್ ವ್ಯಾಗನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಸ್ಕೋಡಾ, ವೋಕ್ಸ್ ವ್ಯಾಗನ್, ಆಡಿ, ಪೋರ್ಷೆ ಮತ್ತು ಅಂಬೋರ್ಗಿನಿ ಎಂಬ ಐದು ಪ್ರಮುಖ ಬ್ರಾಂಡ್ ಗಳ ಭಾರತದ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತದೆ.

ಆಗಸ್ಟ್ ನಲ್ಲಿ ಅಧಿಕಾರ ವಹಿಸಿಕೊಳ್ಳಲಿರುವ ನಳಿನ್ ಜೈನ್
ನಳಿನ್ ಜೈನ್ ಸ್ಕೋಡಾ ಆಟೋ ಫೋಕ್ಸ್ ವ್ಯಾಗನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನ ಹಣಕಾಸು ಮತ್ತು ಐಟಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಆಗಸ್ಟ್ 8 2022ರಂದು ಅಧಿಕಾರ ವಹಿಸಲಿದ್ದಾರೆ. ಇವರು ಗ್ರೂಪ್ ನಲ್ಲಿ ಐದು (2010 ರಿಂದ 2015)ವರ್ಷಗಳು ಜೊತೆಗಿದ್ದರು. ಆರಂಭದಲ್ಲಿ ಹಣಕಾಸು ನಿಯಂತ್ರಣದ ಮುಖ್ಯಸ್ಥರಾಗಿ ನಂತರದಲ್ಲಿ CFO ಮತ್ತು ಹಣಕಾಸಿನ ನಿರ್ದೇಶಕರಾಗಿದ್ದರು.

ಇದನ್ನೂ ಓದಿ: Pension Scheme: ಈ ಪೆನ್ಶನ್ ಯೋಜನೆಗೆ ಮಿಸ್ ಮಾಡ್ದೇ ಸೇರ್ಕೊಳ್ಳಿ! ಮಿಸ್ಸಾದ್ರೆ ನಿಮಗೇ ಲಾಸ್

27 ವರ್ಷಗಳ ಕೆಲಸದ ಅನುಭವ
ಸುನಿ ಬಫಲೋದಿಂದ (Sunny Buffalo) ತನ್ನ ಮಾಸ್ಟರ್ಸ್ ಅನ್ನು ಪೂರ್ಣಗೊಳಿಸಿದ ನಂತರ, ಜೈನ್ ಭಾರತೀಯ ಆಟೋ ಮೇಜರ್ ಮಹೀಂದ್ರಾ & ಮಹೀಂದ್ರಾದೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. 2010 ರಲ್ಲಿ, MIT ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ MBA ಮುಗಿಸಿದ ನಂತರ ಅವರು ಭಾರತದಲ್ಲಿ ವೋಕ್ಸ್‌ವ್ಯಾಗನ್ ಗ್ರೂಪ್ ಮತ್ತು ವೋಲ್ವೋ ಆಟೋ ಇಂಡಿಯಾದಲ್ಲಿ ಕೆಲಸ ಮಾಡಿದರು. ಮುಂದೆ ವೋಲ್ವೋ ಕಾರ್ಸ್ ಮಲೇಷ್ಯಾದಲ್ಲಿ MD ಮತ್ತು ಮಂಡಳಿಯ ಸದಸ್ಯರಾಗಿದ್ದರು.

ಇತ್ತೀಚೆಗೆ, ಅವರು ಮಹೀಂದ್ರಾ & ಮಹೀಂದ್ರಾ (ಆಟೋಮೋಟಿವ್ ಸೆಕ್ಟರ್) ನಲ್ಲಿ VP - ವ್ಯಾಪಾರ ರೂಪಾಂತರ ಮತ್ತು ಅನಾಲಿಟಿಕ್ಸ್ ಆಗಿ ಸೇವೆ ಸಲ್ಲಿಸಿದರು. ಜೈನ್ ಸುಮಾರು 27 ವರ್ಷಗಳ ಕೆಲಸದ ಅನುಭವವನ್ನು ಹೊಂದಿದ್ದಾರೆ ಮತ್ತು ಭಾರತೀಯ ಆಟೋಮೊಬೈಲ್ ಉದ್ಯಮದ ಬಗ್ಗೆ ವ್ಯಾಪಕವಾದ ಜ್ಞಾನ ಮತ್ತು ತಿಳುವಳಿಕೆಯನ್ನು ಹೊಂದಿದ್ದಾರೆ

ಕೋವಿಡ್ ಸಂದರ್ಭದಲ್ಲಿ ಗ್ರೂಪ್ ನ ಆರ್ಥಿಕ ಸ್ಥಿರತೆಯನ್ನು ಕಾಪಾಡಿದ್ದ ಮಾರ್ಟಿನ್ ಮಹಲ್ಕೆ
ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಬೋರ್ಡ್ ಸದಸ್ಯ, ಹಣಕಾಸು, ಐಟಿ, ಸ್ಕೋಡಾ ಆಟೋ ಮತ್ತು ಸ್ಕೋಡಾ ಆಟೋ ವೋಕ್ಸ್ ವ್ಯಾಗನ್ ಅಧ್ಯಕ್ಷ ಕ್ರಿಶ್ಚಿಯನ್ ಶೆಂಕೆ, " ಕೋವಿಡ್ ಸಂದರ್ಭದಲ್ಲಿ ಗ್ರೂಪ್ ಬಹಳಷ್ಟು ಸಂಕಷ್ಟವನ್ನು ಎದುರಿಸಿತ್ತು. ಮತ್ತು ಆರ್ಥಿಕವಾಗಿಯೂ ಹಿನ್ನಡೆಯನ್ನು ಹೊಂದುವಂತಿತ್ತು ಆದರೆ ಈ ಸಮಯದಲ್ಲಿ SAVWIPLನ CFO ಆಗಿ ದಕ್ಷವಾಗಿ ಕಾರ್ಯನಿರ್ವಹಿಸಿದ್ದಾರೆ."

ಕೊವಿಡ್ ಸಂದರ್ಭದಲ್ಲಿ ಕಂಪೆನಿಯ ನಗದು ಮತ್ತು ವೆಚ್ಚವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಕಂಪೆನಿಯ ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆಯನ್ನು ಕಾಪಾಡಿದ್ದಾರೆ ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು ಮತ್ತು ಅವರ ಮುಂದಿನ ಭವಿಷ್ಯಕ್ಕೆ ಶುಭಹಾರೈಸಿದರು.

SAVWIPLನ ವ್ಯವಸ್ಥಾಪಕ ನಿದೇರ್ಶಕ ಪಿಯೂಷ್ ಆರೋರಾ ಅಭಿಪ್ರಾಯ
ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪಿಯೂಷ್ ಅರೋರಾ ಮಾತನಾಡಿ "ಉದ್ಯಮವು ಎದುರಿಸುತ್ತಿರುವ ಸವಾಲುಗಳ ಹೊರತಾಗಿಯೂ SAVWIPL ಕಾರುಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿರುವ ಕಾರಣ 2022 ನಮ್ಮ ಗ್ರೂಪ್ಗೆ ಪ್ರಮುಖವಾದ ವರ್ಷವಾಗಿದೆ. ಇಂತಹ ಕ್ರಿಯಾತ್ಮಕ ಸಮಯದಲ್ಲಿ ಗ್ರೂಪ್‌ಗೆ ಸೇರುತ್ತಿರುವ ನಳಿನ್ ಜೈನ್ ಅವರನ್ನು ಸ್ವಾಗತಿಸಲು ಇದು ನನಗೆ ಅಪಾರ ಸಂತೋಷವನ್ನು ನೀಡುತ್ತದೆ" ಹೇಳಿದರು.

ಇದನ್ನೂ ಓದಿ: Kangana Ranaut: ಇಂದಿರಾ ಗಾಂಧಿ ಬಯೋಪಿಕ್‌ ಫಸ್ಟ್ ಲುಕ್ ರಿಲೀಸ್​, ‘ಎರ್ಮಜೆನ್ಸಿ‘ ಡಿಕ್ಲೇರ್ ಮಾಡಿದ ಕಂಗನಾ

ನಳಿನ್ ಜೈನ್ ಆಟೋಮೋಟಿವ್ ಉದ್ಯಮದಲ್ಲಿ ಅಂತರಾಷ್ಟ್ರೀಯ ಮಟ್ಟದ ಅನುಭವವನ್ನು ಹೊಂದಿದ್ದಾರೆ. ಆದ್ದರಿಂದ SAVWIPL ಗ್ರೂಪ್ ನ ಉತ್ತಮ ಭವಿಷ್ಯ ಮತ್ತು ಆರ್ಥಿಕ ಪ್ರಗತಿಯ ಕುರಿತಾಗಿ ಜೈನ್ ಮೇಲೆ ಭರವಸೆಯನ್ನು ಹೊಂದಿದೆ.
Published by:Nalini Suvarna
First published: