• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Sudha Murthy: ನಾನು ನನ್ನ ಗಂಡನನ್ನು ಉದ್ಯಮಿಯನ್ನಾಗಿ ಮಾಡಿದೆ, ನನ್ನ ಮಗಳು ತನ್ನ ಪತಿಯನ್ನ ಪ್ರಧಾನಿ ಮಾಡಿದಳು! ಸುಧಾ ಮೂರ್ತಿ

Sudha Murthy: ನಾನು ನನ್ನ ಗಂಡನನ್ನು ಉದ್ಯಮಿಯನ್ನಾಗಿ ಮಾಡಿದೆ, ನನ್ನ ಮಗಳು ತನ್ನ ಪತಿಯನ್ನ ಪ್ರಧಾನಿ ಮಾಡಿದಳು! ಸುಧಾ ಮೂರ್ತಿ

ಸುಧಾ ಮೂರ್ತಿ -ನಾರಾಯಣ ಮೂರ್ತಿ, ಅಕ್ಷತಾ ಮೂರ್ತಿ-ರಿಷಿ ಸುನಕ್

ಸುಧಾ ಮೂರ್ತಿ -ನಾರಾಯಣ ಮೂರ್ತಿ, ಅಕ್ಷತಾ ಮೂರ್ತಿ-ರಿಷಿ ಸುನಕ್

ಬ್ರಿಟನ್‌ನ ಪ್ರಧಾನಿಯಾಗಿ ಅಧಿಕಾರದಲ್ಲಿರುವ ರಿಷಿ ಸುನಕ್ ತಮ್ಮ 42 ನೇ ವಯಸ್ಸಿನಲ್ಲಿಯೇ ಅತ್ಯಂತ ಮಹೋನ್ನತ ಹುದ್ದೆಗೆ ಏರಿದ್ದಾರೆ. ಅವರು ಯುಕೆಯ ಅತ್ಯಂತ ಕಿರಿಯ ಪ್ರಧಾನಿ ಎಂಬ ಬಿರುದಿನೊಂದಿಗೆ ಇತಿಹಾಸ ಸೃಷ್ಟಿಸಿದ್ದಾರೆ. 

  • Share this:

ಲಂಡನ್​: ನಾನು ನನ್ನ ಪತಿಯನ್ನು ಉದ್ಯಮಿಯನ್ನಾಗಿ ಮಾಡಿದೆ, ನನ್ನ ಪುತ್ರಿ ಆಕೆಯ ಪತಿಯನ್ನು ಪ್ರಧಾನ ಮಂತ್ರಿಯನ್ನಾಗಿ (Prime Minister) ಮಾಡಿದ್ದಾಳೆ.  ಹೆಂಡತಿ ಗಂಡನನ್ನು ಹೇಗೆ ಬದಲಾಯಿಸುತ್ತಾಳೆ ಎಂಬುದಕ್ಕೆ ಇದೇ ಸಾಕ್ಷಿ ಎಂದು  ಇನ್ಫೋಸಿಸ್ (Infosys) ಸಂಸ್ಥೆಯ ಅಧ್ಯಕ್ಷೆ ಸುಧಾಮೂರ್ತಿ (Sudha Murty) ಹೇಳಿದ್ದಾರೆ.  ಬ್ರಿಟನ್ ಪ್ರಧಾನಿಯಾಗಿರುವ ರಿಷಿ ಸುನಕ್ (UK Prime Minister Rishi Sunak) ತಮ್ಮ ಚಾಣಾಕ್ಷತನ ಹಾಗೂ ಬುದ್ಧಿವಂತಿಕೆಯಿಂದ ವಿದೇಶದಲ್ಲಿ ಪ್ರಧಾನಿಯಾಗಿ ಖ್ಯಾತಿ ಮೆರೆದಿದ್ದರೂ ಅವರ ಅತ್ತೆಯಾದ ಸುಧಾ ಮೂರ್ತಿ ರಿಷಿ ಸುನಕ್ ಪ್ರಧಾನಿಯಾಗಲು ತಮ್ಮ ಮಗಳು ಅಕ್ಷತಾ ಮೂರ್ತಿ (Akshata Murty) ಕಾರಣ ಎಂದು ತಿಳಿಸಿದ್ದಾರೆ.


ಸುಧಾ ಮೂರ್ತಿಯವರು ನೀಡಿರುವ ಈ ಹೇಳಿಕೆ ಇದೀಗ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ತಮ್ಮ ಮಗಳಿಂದಾಗಿಯೇ ರಿಷಿ ಸುನಕ್ ಇಂಗ್ಲೆಂಡ್‌ನ ಕಿರಿಯ ಪ್ರಧಾನಿಯಾಗಿ ಖ್ಯಾತಿ ಪಡೆದುಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದೇ ವಿಡಿಯೋದಲ್ಲಿ ಸುಧಾ ಮೂರ್ತಿಯವರು ನಾನು ನನ್ನ ಪತಿಯನ್ನು ಉದ್ಯಮಿಯನ್ನಾಗಿ ಮಾಡಿದೆ ಹಾಗೂ ನನ್ನ ಮಗಳು ಆಕೆಯ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದಳು ಎಂದು  ಹೇಳಿದ್ದಾರೆ.


ಪತಿಯನ್ನು ಪತ್ನಿ ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಉದಾಹರಣೆ


ವೈರಲ್ ಆಗಿರುವ ಈ  ವಿಡೀಯೋದಲ್ಲಿ ಸುಧಾ ಮೂರ್ತಿಯವರು ಇದೆಲ್ಲಾ ಹೆಂಡತಿಯ ಮಹಿಮೆ ಎಂದು ಬಣ್ಣಿಸಿದ್ದಾರೆ. ಪತ್ನಿ ಪತಿಯನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಆದರೆ ನನ್ನ ಪತಿಯನ್ನು ಬದಲಾಯಿಸಲು ನನ್ನಿಂದ ಆಗಿಲ್ಲ, ನಾನು ನನ್ನ ಗಂಡನನ್ನು ಉದ್ಯಮಿಯಾಗಿ ಮಾಡಿದೆ, ನನ್ನ ಮಗಳು ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದಳು ಎಂದು ಸುಧಾ ಮೂರ್ತಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: Mantralaya Devotee Rishi Sunak: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಗುರುವಾರ ಉಪವಾಸ ಮಾಡ್ತಾರೆ!


730 ಮಿಲಿಯನ್ ಪೌಂಡ್ ವೈಯಕ್ತಿಕ ಸಂಪತ್ತಿಗೆ ಒಡತಿ


ರಿಷಿ ಸುನಕ್ 2009 ರಲ್ಲಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದರು. ಕೆಲವು ವರ್ಷಗಳಲ್ಲಿ ತಮ್ಮ ಅವಿರತ ಶ್ರಮ ಹಾಗೂ ಚಾಣಾಕ್ಷತನದಿಂದ ರಿಷಿ ಸುನಕ್ ಬ್ರಿಟನ್‌ನ ಪ್ರಧಾನ ಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.


ವಿಶ್ವದ ಅತ್ಯಂತ ಶ್ರೀಮಂತ ಬಿಲಿಯನೇರ್‌ಗಳಲ್ಲೊಬ್ಬರು ಎಂಬ ಖ್ಯಾತಿಗೆ ಪಾತ್ರರಾಗಿರುವ ಸುಧಾ ಮೂರ್ತಿ ಹಾಗೂ ನಾರಾಯಣ್ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿ, ಸುಮಾರು 730 ಮಿಲಿಯನ್ ಪೌಂಡ್ ವೈಯಕ್ತಿಕ ಸಂಪತ್ತಿಗೆ ಒಡತಿಯಾಗಿದ್ದು ದೇಶದಲ್ಲಿ  ಶಕ್ತಿಶಾಲಿ ಮಹಿಳೆ ಎಂದೆನಿಸಿದ್ದಾರೆ. ಜೊತೆಗೆ ಆಕೆಯ ಪೋಷಕರು ಶತಕೋಟಿ ಮೌಲ್ಯದ ಟೆಕ್ ಸಂಸ್ಥೆಯ ಮಾಲೀಕರಾಗಿದ್ದರೂ ಎಂದಿಗೂ ಪ್ರಚಾರ ಬಯಸದೇ ಇರುವ ಸರಳ ಭಾರತೀಯರಾಗಿದ್ದಾರೆ.




ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆ


ಅಕ್ಷತಾ ಮೂರ್ತಿಯವರ ತಂದೆ ನಾರಾಯಣ್ ಮೂರ್ತಿಯವರು, ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಇನ್ಫೋಸಿಸ್ ಟೆಕ್ ಕಂಪನಿಯ ಸ್ಥಾಪಕರಾಗಿ ಖ್ಯಾತಿ ಗಳಿಸಿದ್ದಾರೆ.


ಬ್ರಿಟನ್‌ನ ಪ್ರಧಾನಿಯಾಗಿ ಅಧಿಕಾರದಲ್ಲಿರುವ ರಿಷಿ ಸುನಕ್ ತಮ್ಮ 42 ನೇ ವಯಸ್ಸಿನಲ್ಲಿಯೇ ಅತ್ಯಂತ ಮಹೋನ್ನತ ಹುದ್ದೆಗೆ ಏರಿದ್ದಾರೆ. ಅವರು ಯುಕೆಯ ಅತ್ಯಂತ ಕಿರಿಯ ಪ್ರಧಾನಿ ಎಂಬ ಬಿರುದಿನೊಂದಿಗೆ ಇತಿಹಾಸ ಸೃಷ್ಟಿಸಿದ್ದಾರೆ.  ಅಲ್ಲದೆ ಕೇವಲ ಏಳು ವರ್ಷಗಳಲ್ಲಿ ಪ್ರಧಾನಿಯಾದ ಸಂಸದರಾಗಿದ್ದಾರೆ.


ಪ್ರತೀ ಗುರುವಾರ ಉಪವಾಸ ಮಾಡುವ ರಿಷಿ ಸುನಕ್


ಅಕ್ಷತಾ ಮೂರ್ತಿಯವರ ತಾಯಿ ಸುಧಾ ಮೂರ್ತಿ ಪ್ರಧಾನಿ ರಿಷಿ ಸುನಕ್ ಜೀವನ ಶೈಲಿಯ ಬಗ್ಗೆ ಮಾತನಾಡಿದ್ದು, ವಿಶೇಷವಾಗಿ ಅವರ ಆಹಾರ ಕ್ರಮದಲ್ಲಿ ತಮ್ಮ ಮಗಳು ಯಾವ ರೀತಿಯ ಮಾರ್ಪಾಡುಗಳನ್ನು ಮಾಡಿದ್ದಾರೆ ಎಂಬುದನ್ನು ಹಂಚಿಕೊಂಡಿದ್ದಾರೆ.


ಪ್ರತೀ ಗುರುವಾರ ಉಪವಾಸ ಮಾಡುವ ಮೂರ್ತಿಯವರ ಕುಟುಂಬ ಈ ಸಂಪ್ರದಾಯವನ್ನು ಬಹಳ ಹಿಂದಿನಿಂದಲೂ ಅನುಸರಿಸಿಕೊಂಡು ಬರುತ್ತಿದೆ. ಇದನ್ನು ಸುನಕ್​ ಅವರು ಕೂಡು ಅಳವಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: PM Modi-Rishi Sunak: ರಿಷಿ ಸುನಕ್ ಜೊತೆ ಮಾತನಾಡಿದ ನರೇಂದ್ರ ಮೋದಿ; ಭಾರತ ವಿರೋಧಿ ಕೃತ್ಯಗಳ ವಿರುದ್ಧ ಕ್ರಮಕ್ಕೆ ಆಗ್ರಹ


ಮೂರ್ತಿ ಕುಟುಂಬಕ್ಕೆ ಗುರುವಾರ ಮಹತ್ವದ ದಿನ


ನಾವು ಯಾವುದೇ ಮಹತ್ವದ ಕಾರ್ಯವನ್ನು ಆರಂಭಿಸಬೇಕಾದರೂ ಗುರುವಾರವನ್ನೇ ಆಯ್ದುಕೊಳ್ಳುತ್ತೇವೆ ಎಂದು ತಿಳಿಸಿರುವ ಸುಧಾ ಮೂರ್ತಿ, ನಾವು ಇನ್ಫೋಸಿಸ್ ಆರಂಭಿಸಿದ್ದೇ ಗುರುವಾರ ಎಂದು ಹೇಳಿದ್ದಾರೆ.


ಅಷ್ಟಲ್ಲದೆ ನಮ್ಮ ಅಳಿಯ ಅಕ್ಷತಾ ಮೂರ್ತಿಯವರ ಪತಿ ರಿಷಿ ಸುನಕ್ ತಮ್ಮ ಪೂರ್ವಜರ ಕಾಲದಿಂದ ಸುಮಾರು 150 ವರ್ಷಗಳಿಂದ ಇಂಗ್ಲೆಂಡ್‌ನಲ್ಲಿ ವಾಸವಾಗಿದ್ದಾರೆ. ಅದಾಗ್ಯೂ ತಮ್ಮ ಧಾರ್ಮಿಕ ನೀತಿ ನಿಯಮಗಳನ್ನು ಅನುಸರಿಸಿಕೊಂಡೇ ಬಂದಿದ್ದಾರೆ ಎಂದು ಅಳಿಯನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



ಅಳಿಯನ ಬಗ್ಗೆ ಸುಧಾಮೂರ್ತಿ ಹೇಳಿದ್ದೇನು


ತಮ್ಮ ಮಗಳನ್ನು ವಿವಾಹವಾದ ನಂತರ ಸುನಕ್​,  ನೀವು ಯಾವುದೇ ಹೊಸ ಕಾರ್ಯವನ್ನು ಆರಂಭಿಸಲು ಏಕೆ ಗುರುವಾರವನ್ನೇ ಆಯ್ದುಕೊಳ್ಳುತ್ತೀರಿ ಎಂದು ಕೇಳಿದ್ದರಂತೆ, ಅದಕ್ಕೆ ಸುಧಾ ಮೂರ್ತಿ, " ಗುರುವಾರ ತಾವು ರಾಘವೇಂದ್ರ ಸ್ವಾಮಿಗಳ ದೇವಾಲಯಕ್ಕೆ ಭೇಟಿ ನೀಡುತ್ತೇವೆ ಹಾಗೂ ರಾಯರ ದಿನವಾಗಿರುವುದರಿಂದ ನಮಗೆ ಗುರುವಾರ ಶುಭದಿನ" ಎಂದು ಹೇಳಿದ್ದರಂತೆ.


ಈ ದಿನ ಒಳ್ಳೆಯದು ಎಂದು ತಿಳಿಸಿದೊಡನೆ ರಿಷಿ ಸುನಕ್ ಪ್ರತೀ ಗುರುವಾರ ಉಪವಾಸ ಮಾಡಲು ಶುರು ಮಾಡಿದರಂತೆ,  ಅವರ ತಾಯಿ ಪ್ರತೀ ಸೋಮವಾರ ಉಪವಾಸ ಮಾಡುತ್ತಾರೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.


ಆಸ್ತಿಪಾಸ್ತಿ ಘೋಷಣೆಯ ಒತ್ತಡ


ರಿಷಿ ಸುನಕ್ ಮತ್ತು ಅವರ ಪತ್ನಿ ಕಳೆದ ನಾಲ್ಕು ವರ್ಷಗಳಿಂದ ಅವರ ಪತ್ನಿಯ ತಂದೆಯ ಬಿಲಿಯನೇರ್ ಸ್ಥಾನಮಾನದ ಕಾರಣದಿಂದಾಗಿ ಪದೇ ಪದೇ ಪರಿಶೀಲನೆಗಳಿಗೆ ಹಾಗೂ ತನಿಖೆಗಳಿಗೆ ಒಳಪಡುತ್ತಿದ್ದಾರೆ.

First published: