• Home
  • »
  • News
  • »
  • business
  • »
  • Symphony: ಸಿಂಫೊನಿ ಕುಟುಂಬದಿಂದ ಐಷಾರಾಮಿ ಬಂಗಲೆ ಖರೀದಿ! ಮೌಲ್ಯ ಎಷ್ಟು ಗೊತ್ತಾ?

Symphony: ಸಿಂಫೊನಿ ಕುಟುಂಬದಿಂದ ಐಷಾರಾಮಿ ಬಂಗಲೆ ಖರೀದಿ! ಮೌಲ್ಯ ಎಷ್ಟು ಗೊತ್ತಾ?

ಸಿಂಫೊನಿ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಚಲ್ ಬೇಕರಿ ಅವರ ಕುಟುಂಬವು ಮುಂಬೈನಲ್ಲಿ 72.85 ಕೋಟಿ ರೂಪಾಯಿಗೆ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಸಿಂಫೊನಿ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಚಲ್ ಬೇಕರಿ ಅವರ ಕುಟುಂಬವು ಮುಂಬೈನಲ್ಲಿ 72.85 ಕೋಟಿ ರೂಪಾಯಿಗೆ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಸಿಂಫೊನಿ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಚಲ್ ಬೇಕರಿ ಅವರ ಕುಟುಂಬವು ಮುಂಬೈನಲ್ಲಿ 72.85 ಕೋಟಿ ರೂಪಾಯಿಗೆ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

  • Share this:

    ವಾಣಿಜ್ಯ ನಗರಿ ಮುಂಬೈ ಒಂದು ಸುಂದರ ನಗರಿ. ಸಮುದ್ರ ಪಕ್ಕವೇ ಇರುವ ಈ ಸಿಟಿ ಸೌಂದರ್ಯಕ್ಕೆ ಹೆಸರಾಗಿದೆ. ಜಗತ್ತಿನಲ್ಲೇ ಶ್ರೀಮಂತರು ಎನಿಸಿಕೊಂಡವರು ಇಲ್ಲಿ ನೆಲೆಸಿದ್ದಾರೆ. ಬಹಳಷ್ಟು ಬಾಲಿವುಡ್‌ ಸೆಲೆಬ್ರಿಟಿಗಳು ವಾಸವೂ ಇಲ್ಲಿಯೇ. ದೇಶದ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿರುವ ಈ ಮುಂಬೈನಲ್ಲಿ (Mumbai) ಮತ್ತೊಬ್ಬ ಕುಬೇರ ಬಹುಕೋಟಿ ಅಪಾರ್ಟ್‌ ಮೆಂಟ್‌ ಖರೀದಿಸಿರುವುದು ವರದಿಯಾಗಿದೆ. ಅಷ್ಟಕ್ಕೂ ಕೋಟಿ ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್‌ ಮೆಂಟ್‌ (Apaartment) ಖರೀದಿ ಮಾಡಿರುವ ವ್ಯಕ್ತಿ ಸಿಂಫೊನಿ (Symphony) ಲಿಮಿಟೆಡ್‌ ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅಚಲ್ ಬೆಕರಿ(Achal Bakeri) ಅವರ ಕುಟುಂಬ.


    ಹೌದು, ಸಿಂಫೊನಿ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಚಲ್ ಬೇಕರಿ ಅವರ ಕುಟುಂಬವು ಮುಂಬೈನಲ್ಲಿ 72.85 ಕೋಟಿ ರೂಪಾಯಿಗೆ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.


    ಈ ಬಗ್ಗೆ ಸೆಪ್ಟೆಂಬರ್ 27ರಂದು ಆಸ್ತಿ ನೋಂದಣಿಯಾಗಿದೆ. ಅಚಲ್ ಬೇಕರಿ ಫ್ಯಾಮಿಲಿ ಟ್ರಸ್ಟ್ ಮತ್ತು ರೂಪಾ ಅಚಲ್ ಬೇಕರಿ ಪ್ರತಿನಿಧಿಸುವ ಅಚಲ್ ಅನಿಲ್ ಬೇಕರಿ ಈ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


    ಇದನ್ನೂ ಓದಿ: ಕೈಯಲ್ಲಿ 25 ಸಾವಿರ ಇಟ್ಕೊಂಡು ಈ ಬ್ಯುಸಿನೆಸ್​ ಆರಂಭಿಸಿ, ತಿಂಗಳಿಗೆ ಲಕ್ಷ ಲಕ್ಷ ಎಣಿಸಿ!


    ಹೇಗಿದೆ ಗೊತ್ತ 360 ವೆಸ್ಟ್?‌


    ಓಯಸಿಸ್ ರಿಯಾಲ್ಟಿಯಿಂದ ಖರೀದಿಸಲಾದ ಆಸ್ತಿಯು ವರ್ಲಿಯ ಒಬೆರಾಯ್ ತ್ರೀ ಸಿಕ್ಸ್ಟಿ ವೆಸ್ಟ್‌ನಲ್ಲಿದೆ. ಇದು 7762 ಚದರ ಅಡಿ ವಿಸ್ತಾರವಾಗಿದೆ. ಅಲ್ಲದೇ ಇದು ನಾಲ್ಕು ಕಾರ್ ಪಾರ್ಕಿಂಗ್‌ ಹೊಂದಿರುತ್ತದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿದೆ. ವಹಿವಾಟಿನ ಮೇಲೆ 4.37 ಕೋಟಿ ರೂಪಾಯಿ ಮುದ್ರಾಂಕ ಶುಲ್ಕ ಪಾವತಿಸಲಾಗಿದೆ. ಆದರೆ ಖರೀದಿದಾರ ಮತ್ತು ಮಾರಾಟಗಾರರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.


    ಅಪಾರ್ಟ್‌ ಮೆಂಟ್‌ ನ ಎತ್ತರ 360 ಮೀಟರ್‌ !


    ಒಬೆರಾಯ್ ರಿಯಾಲ್ಟಿಯ ತ್ರೀ ಸಿಕ್ಸ್ಟಿ ವೆಸ್ಟ್ 4BHK ಮತ್ತು 5BHK ಯುನಿಟ್‌ ಗಳನ್ನು ಒಳಗೊಂಡಿರುವ ಯೋಜನೆಯಾಗಿದೆ. ಇದು ಎರಡು ಟವರ್‌ ಗಳನ್ನು ಒಳಗೊಂಡಿದೆ. ಅದರಲ್ಲಿ ಒಂದು ದಿ ರಿಟ್ಜ್-ಕಾರ್ಲ್ಟನ್ ಹೋಟೆಲ್ ಅನ್ನು ಹೊಂದಿರುತ್ತದೆ. ಹಾಗೆಯೇ ಇನ್ನೊಂದು ಜಾಗತಿಕ ಆತಿಥ್ಯ ಸರಪಳಿಯಿಂದ ನಿರ್ವಹಿಸಲ್ಪಡುವ ಐಷಾರಾಮಿ ನಿವಾಸಗಳನ್ನು ಹೊಂದಿರುತ್ತದೆ.


    360 ವೆಸ್ಟ್‌ ಅಪಾರ್ಟ್​ಮೆಂಟ್​ ಹೆಸರು


    ಈ ಅಪಾರ್ಟ್‌ ಮೆಂಟ್‌ ಗೆ 360 ವೆಸ್ಟ್‌ ಅಂತ ಹೆಸರಿಡೋಕೆ ಕಾರಣ ಬಹುಶಃ ಇದರ ಯೋಜನೆ. ಅಂದರೆ ಇದರ ಎತ್ತರವು 360 ಮೀಟರ್ ಆಗಿದೆ. ಅಲ್ಲದೇ ಇಲ್ಲಿರುವ ಎಲ್ಲಾ ಅಪಾರ್ಟ್‌ಮೆಂಟ್‌ ಗಳೂ ಪಶ್ಚಿಮಕ್ಕೆ ಮುಖ ಮಾಡಿವೆ ಎನ್ನುವುದು ವಿಶೇಷ. ಹೀಗಾಗಿಯೇ ಇದಕ್ಕೆ 360 ವೆಸ್ಟ್‌ ಅಂತ ಹೆಸರಿಡಲಾಗಿದೆ. ಸೆಪ್ಟೆಂಬರ್ 2022 ರಲ್ಲಿ, ಐಜಿಇ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಮುದ್ರದ ವ್ಯೂವ್‌ ಹೊಂದಿರುವ ಎರಡು ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ರೂ 151 ಕೋಟಿಗೆ ಒಬೆರಾಯ್ ತ್ರೀ ಸಿಕ್ಸ್ಟಿ ವೆಸ್ಟ್‌ನಲ್ಲಿ 16,000 ಚದರ ಅಡಿ ವಿಸ್ತೀರ್ಣದಲ್ಲಿ ಖರೀದಿಸಿದೆ. ಇನ್ನು ಬೇಕರ್ ಕಂಪನಿ ಸಿಂಫೊನಿ ಲಿಮಿಟೆಡ್ ಏರ್ ಕೂಲರ್‌ಗಳನ್ನು ತಯಾರಿಸುತ್ತದೆ. 1988 ರಲ್ಲಿ ಅಹ್ಮದಾಬಾದ್‌ ನಲ್ಲಿ ಸ್ಥಾಪಿಸಲ್ಪಟ್ಟ ಈ ಕಂಪನಿ ಇಂದು ಬೇರೆ ಬೇರೆ ದೇಶಗಳಲ್ಲಿ ಮಾರುಕಟ್ಟೆ ಹೊಂದಿದೆ.


    ಇದನ್ನೂ ಓದಿ : ಈ ಬೆಳೆ ಬೆಳೆದ್ರೆ ರೈತರ ಬದುಕೆ ಬದಲಾಗುತ್ತೆ, ಕೆಜಿಗೆ 800 ರೂಪಾಯಿ ಅಂದ್ರೆ ಯೋಚನೆ ಮಾಡಿ!


    ಒಟ್ಟಾರೆ, ಮುಂಬೈನಲ್ಲಿ ಸಣ್ಣ ನಗರದಲ್ಲಿ ಸೆಲೆಬ್ರಿಟಿಗಳು, ದೊಡ್ಡ ದೊಡ್ಡ ಉದ್ಯಮಿಗಳು ಹೆಚ್ಚಾಗಿ ಇದ್ದಾರೆ. ಅಲ್ಲದೇ ಇಲ್ಲಿ ಸೀ ವ್ಯೂವ್‌ ಮನೆಗಳಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಐಷಾರಾಮಿ ಮನೆಗಳು ಕೋಟಿ ಕೋಟಿ ಬೆಲೆ ಬಾಳುತ್ತವೆ. ಸಮುದ್ರದ ಸುಂದರ ನೋಟವನ್ನು ಮನೆಯಿಂದಲೇ ನೋಡಲು ಸಾಧ್ಯವಾಗುವಂತಹ ಅವಕಾಶ ಇರುವುದರಿಂದ ದೊಡ್ಡವರು ಕೋಟಿ ಕೋಟಿ ಕೊಟ್ಟು ಮನೆಗಳನ್ನು ಖರೀದಿಸುತ್ತಾರೆ.

    Published by:Precilla Olivia Dias
    First published: