Multibagger Stocks: ಈ ವರ್ಷಕ್ಕೆ ತಜ್ಞರು ಶಿಫಾರಸು ಮಾಡಿರುವ ಪ್ರಮುಖ ಷೇರುಗಳು ಇವು.. ಹೂಡಿಕೆ ಮಾಡುವ ಮುನ್ನ ತಿಳಿಯಿರಿ

2022ಕ್ಕಾಗಿ ಮಲ್ಟಿಬ್ಯಾಗರ್ ಷೇರುಗಳನ್ನು ಆಯ್ಕೆಮಾಡಿ ಈ ಷೇರುಗಳು ಈ ವರ್ಷ ತನ್ನ ಷೇರುದಾರರಿಗೆ 100 ಪ್ರತಿಶತಕ್ಕಿಂತ ಹೆಚ್ಚಿನ ಲಾಭ ನೀಡಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜಾಗತಿಕ (Global) ಆರ್ಥಿಕತೆಯು ಕೋವಿಡ್-19 (Covid) ದಾಳಿಯಿಂದ ತತ್ತರಿಸಿದ್ದರೂ ಭಾರತೀಯ ಷೇರು ಮಾರುಕಟ್ಟೆಯು(Stock Market) 2021ರಲ್ಲಿ ಅತ್ಯದ್ಭುತ ಆದಾಯವನ್ನು ನೀಡುವಲ್ಲಿ ಕೂಡ ಯಶಸ್ವಿಯಾಗಿದೆ. ಇನ್ನು 2021ನೇ ವರ್ಷವು ಷೇರು ಮಾರುಕಟ್ಟೆ ಹೂಡಿಕೆದಾರರಿಗೆ(Investors) ಗಮರ್ನಾಹವಾಗಿದ್ದವು. ಏಕೆಂದರೆ ಉತ್ತಮ ಸಂಖ್ಯೆಯ ಷೇರುಗಳು ಮಲ್ಟಿಬ್ಯಾಗರ್ (Multibagger) ಷೇರುಗಳ ಪಟ್ಟಿಯನ್ನು ಪ್ರವೇಶಿಸಿರುವುದು ಇದಕ್ಕೆ ಕಾರಣವಾಗಿದೆ.

ಷೇರು ಹೂಡಿಕೆದಾರರು ಉತ್ತಮ ಆದಾಯ
ಮಲ್ಟಿಬ್ಯಾಗರ್ ಷೇರುಗಳು ಎಂಬುದು ಕಂಪನಿಯ ಈಕ್ವಿಟಿ ಷೇರುಗಳಾಗಿದ್ದು ತನ್ನ ಸಂಯೋಜಿತ ಸ್ವಾಧೀನ ವೆಚ್ಚಕ್ಕಿಂತ ಅನೇಕ ಪಟ್ಟು ಹೆಚ್ಚುವರಿ ಆದಾಯವನ್ನು ನೀಡುತ್ತದೆ. ಎಲ್ಲಾ ವಿಭಾಗಗಳಲ್ಲಿಯೂ ಉತ್ತಮ ಭಾಗವಹಿಸುವಿಕೆಯಿಂದ ಇದು ಸಾಧ್ಯವಾಗಿರಬಹುದು ಎಂಬುದು ಪರಿಣಿತರ ಅಭಿಪ್ರಾಯವಾಗಿದೆ. ಇನ್ನು 2022 ಹೊಸ ವರ್ಷಕ್ಕೆ ನಾವೆಲ್ಲರೂ ಪ್ರವೇಶ ಮಾಡಿದ್ದು, ಷೇರು ಹೂಡಿಕೆದಾರರು ಉತ್ತಮ ಆದಾಯವನ್ನು ನೀಡುವ ಮೌಲ್ಯಯುತವಾಗಿರುವ ಆಯ್ಕೆಗಳಿಗಾಗಿ ಎದುರು ನೋಡುತ್ತಿದ್ದಾರೆ. ಅಂತೆಯೇ ಷೇರು ಮಾರುಕಟ್ಟೆ ಹೂಡಿಕೆದಾರರು ಮಲ್ಟಿಬ್ಯಾಗರ್ ರಿಟರ್ನ್ ಪಡೆಯುವುದನ್ನು ಮುಂದುವರಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಊಹಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಶೇರ್ ಇಂಡಿಯಾದ ಉಪಾಧ್ಯಕ್ಷ ಮತ್ತು ಸಂಶೋಧನಾ ಮುಖ್ಯಸ್ಥ ರವಿ ಸಿಂಗ್ ಹೂಡಿಕೆದಾರರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದು, 2022ಕ್ಕಾಗಿ ಮಲ್ಟಿಬ್ಯಾಗರ್ ಷೇರುಗಳನ್ನು ಆಯ್ಕೆಮಾಡಿದ್ದಾರೆ. ಈ ಷೇರುಗಳು ಈ ವರ್ಷ ತನ್ನ ಷೇರುದಾರರಿಗೆ 100 ಪ್ರತಿಶತಕ್ಕಿಂತ ಹೆಚ್ಚಿನ ಲಾಭ ನೀಡಬಹುದು ಎಂಬುದು ಅವರ ಅಭಿಪ್ರಾಯವಾಗಿದೆ. ಆ ಷೇರುಗಳು ಯಾವುವೆಂದರೆ CDSL (ಸೆಂಟ್ರಲ್‌ ಡೆಪಾಸಿಟರಿ ಸರ್ವೀಸಸ್‌) ಹಾಗೂ BSE (ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್) ಆಗಿದೆ.

ಇದನ್ನೂ ಓದಿ: ಕೋವಿಡ್​ ಆತಂಕದ ನಡುವೆಯೂ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕದಲ್ಲಿ ಏರಿಕೆ; Sensex, Nifty ಭಾರೀ ಜಿಗಿತ

CDSL (ಸೆಂಟ್ರಲ್‌ ಡೆಪಾಸಿಟರಿ ಸರ್ವೀಸಸ್‌):
ಶೇರ್ ಇಂಡಿಯಾದ ರವಿ ಸಿಂಗ್ ಹೇಳುವಂತೆ CDSL ಷೇರು ದರಗಳು ಆವರ್ತಕ ವಲಯದಲ್ಲಿದ್ದು 1425 ರೂ.ಗಳ ಮಟ್ಟದಿಂದ ಹೆಚ್ಚುವರಿ ಹಾಗೂ ಕಡಿಮೆ ಮಟ್ಟದ ಏರಿಕೆ ಇಳಿಕೆಯ ಮೂಲಕ ಅಗತ್ಯ ಸಾಮರ್ಥ್ಯವನ್ನು ಸೂಚಿಸುತ್ತಿದೆ. ದೈನಂದಿನ ಚಾರ್ಟ್‌ನಲ್ಲಿ 20, 50 ಹಾಗೂ 200 ನೇರ ಮಾರುಕಟ್ಟೆ ಪ್ರವೇಶ (DMA) ಬೆಂಬಲಿಸುವ ಎಲ್ಲಾ ಪ್ರಮುಖ ಸರಾಸರಿಗಳನ್ನು ಮುಚ್ಚಲು ಸ್ಟಾಕ್ ಯಶಸ್ವಿಯಾಗಿದೆ.

ಎಲ್ಲಾ ತಾಂತ್ರಿಕ ಸೆಟಪ್‌ಗಳು ಸಕಾರಾತ್ಮಕವಾಗಿರುವುದರಿಂದ 2022ರಲ್ಲಿ CDSL 3200 ರೂ. ಮಟ್ಟವನ್ನು ತಲುಪುತ್ತದೆ ಎಂಬುದನ್ನು ನಾವು ನಿರೀಕ್ಷಿಸುತ್ತೇವೆ ಎಂದು ರವಿ ಸಿಂಗ್ ಹೇಳಿದ್ದಾರೆ. ಪ್ರಸ್ತುತ, CDSL ಷೇರಿನ ಬೆಲೆ NSEನಲ್ಲಿ ಪ್ರತಿ ಷೇರಿನ ಮಟ್ಟಕ್ಕೆ 1537 ರೂ ಆಗಿದೆ.

BSE (ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್):
ಆಸ್ಕಿಲೇಟರ್ ತಾಂತ್ರಿಕ ವಿಶ್ಲೇಷಕ ಪರಿಕರದ ಆಧಾರದಲ್ಲಿ RSI (ಸಾಪೇಕ್ಷ ಶಕ್ತಿ ಸೂಚ್ಯಂಕ ಎಂಬುದು ತಾಂತ್ರಿಕ ವಿಶ್ಲೇಷಣೆಯಲ್ಲಿ ಬಳಸಲಾಗುವ ಒಂದು ಆವೇಗ ಸೂಚಕ) 14 ಅವಧಿಗಳ BSE ಷೇರಿನ ಬೆಲೆಯು 1700 ರೂನಿಂದ 1800 ರೂ ಮಟ್ಟಗಳ ವಲಯದಲ್ಲಿದ್ದು ಮತ್ತಷ್ಟು ಧನಾತ್ಮಕ ಸಾಮರ್ಥ್ಯವನ್ನು ಸೂಚಿಸುವ 9-ಅವಧಿಯ ಸಿಗ್ನಲ್ ಲೈನ್‌ಗಿಂತ ಮೇಲಿರುತ್ತದೆ. ಬೋಲಿಂಜರ್ ಬ್ಯಾಂಡ್ (20, 2) ರಲ್ಲಿ ಕೂಡ BSE ಷೇರು ಬೆಲೆಗಳು ಮಾರುಕಟ್ಟೆಯಲ್ಲಿ ಏರುತ್ತಿರುವ ಷೇರು ಬೆಲೆಗಳ ಕಾರಣದಿಂದಾಗಿ ತನ್ನ ಕೆಳಮಟ್ಟದ ಸ್ಥಿತಿಯಿಂದ ಉತ್ತಮ ಪ್ರಗತಿ ಸಾಧಿಸಲಿದೆ. ಕಳೆದ ಕೆಲವು ವಹಿವಾಟು ಅವಧಿಗಳಲ್ಲಿ ಷೇರು ದೀರ್ಘ ಸಂಗ್ರಹಣೆಗೆ ಕಾರಣವಾಗಿದ್ದು ಕಡಿಮೆ ಮಟ್ಟದಲ್ಲಿ ಮಾರುಕಟ್ಟೆಯನ್ನು ಒಟ್ಟುಗೂಡಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.

ಇದನ್ನೂ ಓದಿ: Explainer: ಪಾತಾಳಕ್ಕೆ ಕುಸಿಯುತ್ತಿದೆ ಷೇರು ಮಾರುಕಟ್ಟೆ: ಕಾರಣವೇನು ಗೊತ್ತಾ..?

ಷೇರು ಹೂಡಿಕೆದಾರರಿಗೆ ರವಿ ಸಿಂಗ್ ಅವರು ನೀಡಿರುವ ಸಲಹೆಗಳನ್ನು ಆಧರಿಸಿ BSE ಷೇರುಗಳಿಗೆ ಸಂಬಂಧಿಸಿದಂತೆ ಈ ವರ್ಷ ಅಂದರೆ 2022 ರಲ್ಲಿ 4000 ರೂ. ಗಳ ಟಾರ್ಗೆಟ್ ಅನ್ನು ಇರಿಸಿಕೊಂಡು ಮಾರುಕಟ್ಟೆಯಲ್ಲಿ ದೀರ್ಘ ಅವಧಿಯವರೆಗೆ ಹೂಡಿಕೆ ಮಾಡುವುದು ಸೂಕ್ತವಾದ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.
Published by:vanithasanjevani vanithasanjevani
First published: