Multibagger Stock: 15 ವರ್ಷಗಳಲ್ಲಿ ಭಾರಿ ಏರಿಕೆ ಕಂಡ ಮಲ್ಟಿಬ್ಯಾಗರ್ ಸ್ಟಾಕ್; ಇದರ ಈಗಿನ ಮೊತ್ತವೆಷ್ಟು ಗೊತ್ತಾ?

ಸ್ಟಾಕ್ ಮಾರುಕಟ್ಟೆಯ ಹೂಡಿಕೆದಾರರು ಸಾಧ್ಯವಾದಷ್ಟು ಸ್ಟಾಕ್ ಅನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಈ ಸ್ಟಾಕ್ ಮಾರುಕಟ್ಟೆ ಹೂಡಿಕೆ ತಂತ್ರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಲು, ಎಚ್‌ಎಲ್‌ಇ ಗ್ಲಾಸ್‌ಕೋಟ್‌ ಷೇರುಗಳನ್ನು ಒಂದು ಸಲ ಪರಿಶೀಲಿಸಬೇಕು. ಕಳೆದ 15 ವರ್ಷಗಳಲ್ಲಿ ಈ ಮಿಡ್-ಕ್ಯಾಪ್ ಸ್ಟಾಕ್ ಸುಮಾರು ರೂ. 33 ರಿಂದ ರೂ. 3107 ಕ್ಕೆ ಏರಿದೆ, ಇದು ಅದರ ಷೇರುದಾರರಿಗೆ ಸುಮಾರು ಶೇ 9,300 ರಷ್ಟು ಲಾಭವನ್ನು ನೀಡಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಅಮೆರಿಕದ ಹಿರಿಯ ಹೂಡಿಕೆದಾರರೊಬ್ಬರು (Senior American investor) ಹೇಳಿರುವ ಪ್ರಕಾರ, ಹಣ ಇರುವುದು ಖರೀದಿ ಮತ್ತು ಮಾರಾಟದಲ್ಲಿ ಅಲ್ಲ; ಕಾಯುವುದರಲ್ಲಿ ಎಂದಿದ್ದಾರೆ. ಷೇರು ಮಾರುಕಟ್ಟೆಯ (Share Market) ಹೂಡಿಕೆದಾರರು (Investment) ಎಲ್ಲಿಯವರೆಗೆ ಸ್ಟಾಕ್ ಅನ್ನು (Stock) ಇಟ್ಟುಕೊಳ್ಳಲು ಸಾಧ್ಯವೋ ಅಲ್ಲಿಯ ತನಕ ಇರಿಸಿಕೊಳ್ಳಲು ಸಲಹೆ ನೀಡುತ್ತಾರೆ. ಹಣ ಗಳಿಸಬಹುದಾದ್ದು ಷೇರುಗಳ ಖರೀದಿ ಅಥವಾ ಮಾರಾಟದಲ್ಲಿ ಅಲ್ಲ, ಆದರೆ ಕಾಯುವುದರಲ್ಲಿ ಎಂದು ಹೇಳಿದ್ದಾರೆ. ‘ಖರೀದಿಸಿ, ಇಟ್ಟುಕೊಳ್ಳಿ ಮತ್ತು ಮರೆತುಬಿಡಿ’ ತಂತ್ರವನ್ನು ನಂಬುವವರು ಸಮಯ ಕಳೆದಂತೆ ದೊಡ್ಡ ಮೊತ್ತವನ್ನು ಗಳಿಸುತ್ತಾರೆ ಎಂಬುದು ಈ ಸ್ಟಾಕ್‌ ಮಾರುಕಟ್ಟೆಯ (Stock Market) ವಿಶೇಷತೆ ಆಗಿದೆ.

15 ವರ್ಷಗಳಲ್ಲಿ ಭಾರಿ ಏರಿಕೆ ಕಂಡ ಮಿಡ್-ಕ್ಯಾಪ್ ಸ್ಟಾಕ್ ಷೇರು
ಆದ್ದರಿಂದ, ಸ್ಟಾಕ್ ಮಾರುಕಟ್ಟೆಯ ಹೂಡಿಕೆದಾರರು ಸಾಧ್ಯವಾದಷ್ಟು ಸ್ಟಾಕ್ ಅನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಈ ಸ್ಟಾಕ್ ಮಾರುಕಟ್ಟೆ ಹೂಡಿಕೆ ತಂತ್ರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಲು, ಎಚ್‌ಎಲ್‌ಇ ಗ್ಲಾಸ್‌ಕೋಟ್‌ ಷೇರುಗಳನ್ನು ಒಂದು ಸಲ ಪರಿಶೀಲಿಸಬೇಕು. ಕಳೆದ 15 ವರ್ಷಗಳಲ್ಲಿ ಈ ಮಿಡ್-ಕ್ಯಾಪ್ ಸ್ಟಾಕ್ ಸುಮಾರು ರೂ. 33 ರಿಂದ ರೂ. 3107 ಕ್ಕೆ ಏರಿದೆ, ಇದು ಅದರ ಷೇರುದಾರರಿಗೆ ಸುಮಾರು ಶೇ 9,300 ರಷ್ಟು ಲಾಭವನ್ನು ನೀಡಿದೆ.

ಇದನ್ನೂ ಓದಿ: H/L - ಹಸಿರು NFT ಗಳ ಬಗ್ಗೆ ನೀವು ತಿಳಿದಿರಬೇಕಾದ ಪ್ರತಿಯೊಂದು ಮಾಹಿತಿ ಇಲ್ಲಿದೆ

ಈ ಬಾಂಬೆ ಸ್ಟಾಕ್‌ ಎಕ್ಸ್‌ಚೆಂಜ್‌ ಮಾರುಕಟ್ಟೆಯಲ್ಲಿ (ಬಿಎಸ್‌ಇ) ತನ್ನ ಒಟ್ಟು ವ್ಯವಹಾರವು ಈಗ ರೂ. 7,549ಕ್ಕೆ ಏರಿದ ನಂತರ, ಎಚ್‌ಎಲ್‌ಇ ಗ್ಲಾಸ್‌ಕೋಟ್ ಷೇರು ಮಾರಾಟವು ಅತಿ ಹೆಚ್ಚಾಗಿದೆ. ಇತ್ತೀಚಿಗೆ ಷೇರುಗಳು 52 ವಾರಗಳಲ್ಲಿ ರೂ. 2,951.30 ರಷ್ಟು ಕಡಿಮೆ ಆಗಿವೆ. ಈ ಮಿಡ್ ಕ್ಯಾಪ್ ಸ್ಟಾಕ್ ಕಳೆದ ಒಂದು ವರ್ಷದಲ್ಲಿ ಶೂನ್ಯ ಲಾಭವನ್ನು ನೀಡಿದೆ. ಆದರೆ, ಸ್ಟಾಕ್ ತನ್ನ ಷೇರುದಾರರಿಗೆ ಅತ್ಯಂತ ಹೆಚ್ಚು ಆದಾಯವನ್ನು ನೀಡುವ ಮೂಲಕ ಇತಿಹಾಸವನ್ನು ಸೃಷ್ಟಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯು ಉತ್ಪಾದಿಸುತ್ತಿರುವ ಮಲ್ಟಿಬ್ಯಾಗರ್ ಸ್ಟಾಕ್‌ಗಳಲ್ಲಿ ಒಂದಾಗಿರುವ ಷೇರಾಗಿದೆ.

ಮಲ್ಟಿಬ್ಯಾಗರ್ ಸ್ಟಾಕ್
ಕಳೆದ 5 ವರ್ಷಗಳಲ್ಲಿ, ಈ ಮಲ್ಟಿಬ್ಯಾಗರ್ ಸ್ಟಾಕ್ ಪ್ರತಿ ಸಲವು ರೂ. 160 ರಿಂದ ರೂ. 3107 ಕ್ಕೆ ಏರಿದೆ, ಈ ಸಮಯದಲ್ಲಿ ಸುಮಾರು 1850 ರಷ್ಟು ಏರಿಕೆಯಾಗಿದೆ. ಹಾಗೆಯೇ, ಕಳೆದ 10 ವರ್ಷಗಳಲ್ಲಿ, ಪ್ರತಿ ಷೇರಿನ ರೂ. 3107 ಕ್ಕೆ ರಷ್ಟು ಏರಿದೆ, ಈ ಸಮಯದಲ್ಲಿ ಸುಮಾರು ರೂ. 8530 ರಷ್ಟು ಏರಿಕೆಯಾಗಿದೆ. ಹಾಗೆಯೇ , ಕಳೆದ 15 ವರ್ಷಗಳಲ್ಲಿ, ಈ ಬಿಎಸ್‌ಇ-ಲಿಸ್ಟೆಡ್ ಸ್ಟಾಕ್ ಪ್ರತಿ ಷೇರಿಗೆ ಸುಮಾರು ರೂ. 33 ರಿಂದ ರೂ. 3107 ರಷ್ಟು ಏರಿದೆ, ಈ ಸಮಯದಲ್ಲಿ 94 ಪಟ್ಟು ಏರಿಕೆಯಾಗಿದೆ.

ಹೂಡಿಕೆ ಮೇಲೆ ಪರಿಣಾಮ
ಎಚ್‌ಎಲ್‌ಇ ಗ್ಲಾಸ್‌ಕೋಟ್ ಷೇರು ಬೆಲೆ ಇತಿಹಾಸವನ್ನು ಗಮನಿಸುವುದಾದರೆ, ಹೂಡಿಕೆದಾರರು ಒಂದು ವರ್ಷದ ಹಿಂದೆ ಈ ಬಿಎಸ್‌ಇ ಲಿಸ್ಟೆಡ್ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ, ಅದರ ರೂ. 1 ಲಕ್ಷ ಇಂದು ರೂ. 90,000 ಆಗುತ್ತಿತ್ತು. ಹೂಡಿಕೆದಾರರು 5 ವರ್ಷಗಳ ಹಿಂದೆ ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ, ಅದರ ರೂ. 1 ಲಕ್ಷ ಇಂದು ರೂ. 19.50 ಲಕ್ಷಕ್ಕೆ ಬದಲಾಗುತ್ತಿತ್ತು. , ಆದರೆ ಈ ರೂ. 1 ಲಕ್ಷ ಕಳೆದ 10 ವರ್ಷಗಳ ಹಿಂದೆ ಮಾಡಿದ್ದರೆ ಅದರ ಮೊತ್ತ ಇಂದು ರೂ. 86.30 ಲಕ್ಷಕ್ಕೆ ಬದಲಾಗುತ್ತಿತ್ತು.

ಇದನ್ನೂ ಓದಿ: GST Collections: ಜಿಎಸ್‍ಟಿ ಪರಿಚಯಿಸಿದಾಗಿನಿಂದ ಜೂನ್​ನಲ್ಲಿ ಸಂಗ್ರಹವಾದ ಮೊತ್ತ ಎಷ್ಟು ಗೊತ್ತಾ?

ಅದೇ ರೀತಿ, ಹೂಡಿಕೆದಾರರು 15 ವರ್ಷಗಳ ಹಿಂದೆ ಈ ಮಲ್ಟಿಬ್ಯಾಗರ್ ಬಿಎಸ್‌ಇ ಷೇರುಗಳಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ, ಅದರ ರೂ. 1 ಲಕ್ಷ ಇಂದು ರೂ. 94 ಲಕ್ಷಕ್ಕೆ ಬದಲಾಗುತ್ತದೆ.
Published by:Ashwini Prabhu
First published: