Mukesh Ambani: 1 ಲಕ್ಷ ಹೊಸ ಉದ್ಯೋಗ ಸೃಷ್ಟಿಸುತ್ತೇವೆ; ಮುಕೇಶ್​ ಅಂಬಾನಿ ಘೋಷಣೆ

ಉದ್ಯಮಿ ಮುಕೇಶ್ ಅಂಬಾನಿ

ಉದ್ಯಮಿ ಮುಕೇಶ್ ಅಂಬಾನಿ

Reliance: ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ನಿಂದ ಉತ್ತರ ಪ್ರದೇಶದಲ್ಲಿ 75 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ.

  • Share this:

ಇತ್ತೀಚೆಗಷ್ಟೇ ಭಾರತದ ಶ್ರೀಮಂತ ಉದ್ಯಮಿ ಎಂದು ಖ್ಯಾತಿ ಪಡೆದಿರುವ ಮುಕೇಶ್​ ಅಂಬಾನಿ (Mukesh Ambani) ಅವರು ರಿಲಯನ್ಸ್​ ಇಂಡಸ್ಟ್ರೀಸ್​ನ (Reliance Industries) ಚುಕ್ಕಾಣಿ ಹಿಡಿದು  20 ವರ್ಷಗಳನ್ನು ಪೂರೈಸಿದ್ದಾರೆ. 2002ರ ಜುಲೈ 6 ರಂದು ತಮ್ಮ ತಂದೆ ಮತ್ತು ರಿಲಯನ್ಸ್ ಸಂಸ್ಥಾಪಕ  ಧೀರೂಭಾಯಿ ಅಂಬಾನಿ (Reliance founder Dhirubhai Ambani) ಅವರ ನಿಧನದ ನಂತರ ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಎರಡು ದಶಕಗಳಿಂದ ರಿಲಯನ್ಸ್​ ಇಂಡಸ್ಟ್ರಿಸ್ ಅನ್ನು ಮುಕೇಶ್​ ಅಂಬಾನಿ ಮುನ್ನಡೆಸುತ್ತಿದ್ದು, ಈ 20 ವರ್ಷಗಳಲ್ಲಿ ಕಂಪನಿಯು ಆದಾಯ, ಲಾಭಗಳು, ನಿವ್ವಳ ಮೌಲ್ಯ, ಆಸ್ತಿಗಳು ಮತ್ತು ಮಾರುಕಟ್ಟೆ ಬಂಡವಾಳೀಕರಣ ಎಲ್ಲವೂ ಎರಡರಷ್ಟು ಅಭಿವೃದ್ಧಿಯಾಗಿದೆ.


ಉತ್ತರಪ್ರದೇಶದಲ್ಲಿ 75 ಸಾವಿರ ಕೋಟಿ ಹೂಡಿಕೆ!


ಇದೀಗ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ನಿಂದ ಉತ್ತರ ಪ್ರದೇಶದಲ್ಲಿ 75 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ನಿಂದ ಉತ್ತರ ಪ್ರದೇಶದಲ್ಲಿ 75 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ.  ಉತ್ತರ ಪ್ರದೇಶದಲ್ಲಿ ಟೆಲಿಕಾಂ, ರಿಟೇಲ್ ಮತ್ತು ಇಂಧನ ವಲಯಗಳಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ 75,000 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ಶುಕ್ರವಾರ ಭರವಸೆ ನೀಡಿದ್ದಾರೆ.


1 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಭರವಸೆ!


ಉತ್ತರಪ್ರದೇಶ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 1 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿಸುವ ಭರವಸೆ ಕೂಡ ನೀಡಿದ್ದಾರೆ. ಇನ್ನೂ ರಿಲಯನ್ಸ್​​ 2018ರಿಂದ ರಾಜ್ಯದಲ್ಲಿ ಈಚೆಗೆ 50 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಈಗ ಹೊಸದಾಗಿ 75 ಸಾವಿರ ಕೋಟಿ ರೂಪಾಯಿ ಹೂಡಿಕೆ ಭರವಸೆ ನೀಡಿದ್ದಾರೆ. ಈ 75 ಸಾವಿರ  ಸೇರಿ ಒಟ್ಟು ಹೂಡಿಕೆ ಮೊತ್ತ 1.25 ಲಕ್ಷ ಕೋಟಿಗೆ ಏರಿಕೆಯಾಗಿದೆ.


5 ವರ್ಷಗಳಲ್ಲಿ ಆಗಲಿದೆ $1 ಟ್ರಿಲಿಯನ್ ಆರ್ಥಿಕತೆ!


ಉತ್ತರಪ್ರದೇಶ ಇನ್ನು 5 ವರ್ಷಗಳಲ್ಲಿ ಆಗಲಿದೆ $1 ಟ್ರಿಲಿಯನ್ (ಲಕ್ಷ ಕೋಟಿ) ಆರ್ಥಿಕತೆ ಆಗಲಿದೆ ಎಂದ ಮುಕೇಶ್ ಅಂಬಾನಿ  ಲಖನೌದಲ್ಲಿ ನಡೆದ “ಉತ್ತರಪ್ರದೇಶ ಜಾಗತಿಕ ಹೂಡಿಕೆದಾರರ ಸಮಾವೇಶ”ದಲ್ಲಿ ಮಾತನಾಡಿದ ಮುಕೇಶ್ ಅಂಬಾನಿ, ಉತ್ತರ ಪ್ರದೇಶವು 5 ವರ್ಷಗಳಲ್ಲಿ $ 1 ಟ್ರಿಲಿಯನ್ (ಲಕ್ಷ ಕೋಟಿ) ಆರ್ಥಿಕತೆ ಆಗಲಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಎಲ್ಲವನ್ನೂ ಮಕ್ಕಳ ಸುಪರ್ದಿಗೆ ವಹಿಸಿ ಹೊಸ ಉದ್ಯಮದತ್ತ ಅಂಬಾನಿ ಚಿತ್ತ, ಈ ಕ್ಷೇತ್ರದಲ್ಲೂ ಬಿರುಗಾಳಿ?


ಉತ್ತರ ಪ್ರದೇಶದಲ್ಲಿ 10 ಗಿಗಾ ವಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಸ್ಥಾವರವನ್ನು ರಿಲಯನ್ಸ್ ಸ್ಥಾಪಿಸಲಿದೆ. ಇದು ಉತ್ತರ ಪ್ರದೇಶದಲ್ಲಿ ಇದುವರೆಗಿನ ಅತಿದೊಡ್ಡ ನವೀಕರಿಸಬಹುದಾದ ಇಂಧನ ಯೋಜನೆ ಆಗಿದೆ. ಕಂಪನಿಯು ಉತ್ತರಪ್ರದೇಶದಲ್ಲಿ ಜೈವಿಕ ಅನಿಲ ಶಕ್ತಿ ವ್ಯವಹಾರಕ್ಕೆ ಪ್ರವೇಶವನ್ನು ಘೋಷಿಸಿತು. ಈ ಕುರಿತು ಮುಕೇಶ್ ಅಂಬಾನಿ ಮಾತನಾಡಿ, ಜೈವಿಕ ಅನಿಲ ಪರಿಸರವನ್ನು ಸುಧಾರಿಸುವುದಲ್ಲದೆ ರೈತರಿಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ.


"ನಮ್ಮ ರೈತರು ಕೇವಲ ಆಹಾರ ಪೂರೈಕೆದಾರರಲ್ಲ, ಈಗ ಅವರು ಇಂಧನ ಪೂರೈಕೆದಾರರಾಗುತ್ತಾರೆ,” ಎಂದಿದ್ದಾರೆ. ರಾಜ್ಯದ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಕೈಗೆಟುಕುವ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಜಿಯೋ ಪ್ಲಾಟ್​ಫಾರ್ಮ್​ಗಳ ಮೂಲಕ ಜಿಯೋ-ಸ್ಕೂಲ್ ಮತ್ತು ಜಿಯೋ-ಎಐ-ಡಾಕ್ಟರ್ ಎಂಬ ಎರಡು ಪ್ರಾಯೋಗಿಕ ಯೋಜನೆಗಳನ್ನು ರಿಲಯನ್ಸ್ ಘೋಷಿಸಿತು.


ಎಲ್ಲಾ ನಗರಗಳಲ್ಲೂ 5 ಜಿ ಬಿಡುಗಡೆ!


ಇದರೊಂದಿಗೆ, ಯುಪಿಯ ಕೃಷಿ ಮತ್ತು ಕೃಷಿಯೇತರ ಉತ್ಪನ್ನಗಳ ಮೂಲವನ್ನು ಹೆಚ್ಚಿಸುವ ಉದ್ದೇಶವನ್ನು ಮುಕೇಶ್ ಅಂಬಾನಿ ವ್ಯಕ್ತಪಡಿಸಿದ್ದಾರೆ. ಇದರಿಂದ ರೈತರು, ಸ್ಥಳೀಯ ಕುಶಲಕರ್ಮಿಗಳು ಮತ್ತು ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಅನುಕೂಲ ಆಗಲಿದೆ. 2023ರ ಅಂತ್ಯದ ವೇಳೆಗೆ ಉತ್ತಮ ಪ್ರದೇಶದ ಎಲ್ಲಾ ನಗರಗಳಲ್ಲಿ 5ಜಿ ಅನ್ನು ಬಿಡುಗಡೆ ಮಾರುವ ಬಗ್ಗೆಯೂ ಮುಕೇಶ್ ಅಂಬಾನಿ ಮಾತನಾಡಿದರು.

Published by:ವಾಸುದೇವ್ ಎಂ
First published: