• Home
 • »
 • News
 • »
 • business
 • »
 • Blockchain Technology- ವಿಶ್ವಾಸಾರ್ಹ ಸಮಾಜಕ್ಕೆ ಬ್ಲಾಕ್​ಚೈನ್ ಟೆಕ್ನಾಲಜಿ ಅಗತ್ಯ: ಮುಕೇಶ್ ಅಂಬಾನಿ

Blockchain Technology- ವಿಶ್ವಾಸಾರ್ಹ ಸಮಾಜಕ್ಕೆ ಬ್ಲಾಕ್​ಚೈನ್ ಟೆಕ್ನಾಲಜಿ ಅಗತ್ಯ: ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ

Mukesh Ambani on Infinity forum- ಕ್ರಿಪ್ಟೋಕರೆನ್ಸಿ ಬೇರೆ ಬ್ಲಾಕ್ ಚೈನ್ ಟೆಕ್ನಾಲಜಿ ಬೇರೆ. ನನಗೆ ಬ್ಲಾಕ್ ಚೈನ್ ತಂತ್ರಜ್ಞಾನದ ಮೇಲೆ ನಂಬಿಕೆ ಇದೆ. ಇದು ಸರಿಸಮ ಸಮಾಜಕ್ಕೆ ಪೂರಕವಾಗಿದೆ ಎಂದು ಆರ್ಐಎಲ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ಧಾರೆ.

 • News18
 • Last Updated :
 • Share this:

  ನವದೆಹಲಿ, ಡಿ. 3: ಕ್ರಿಪ್ಟೋಕರೆನ್ಸಿಗಳಿಗೆ ಬಳಕೆ ಆಗುತ್ತಿರುವ ಬ್ಲಾಕ್​ಚೈನ್ ತಂತ್ರಜ್ಞಾನದ (Blockchain Technologies) ಬಗ್ಗೆ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಮಾತನಾಡಿದ್ದು, ಸಮಾನ ಸಮಾಜ ಮತ್ತು ನಂಬಿಕೆ ಆಧರಿತ ಸಮಾಜಕ್ಕೆ ಬ್ಲಾಕ್​ಚೈನ್ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ಧಾರೆ. IFSCA ಸಂಸ್ಥೆ ಆನ್​ಲೈನ್​ನಲ್ಲಿ ಆಯೋಜಿಸಿದ್ದ ಇನ್ಫಿನಿಟಿ ಫೋರಂ (InFinity Forum) ನಲ್ಲಿ ಮಾತನಾಡುತ್ತಿದ್ದ ಅಂಬಾನಿ, “ನನಗೆ ಬ್ಲಾಕ್​ಚೈನ್ ತಂತ್ರಜ್ಞಾನದ ಮೇಲೆ ನಂಬಿಕೆ ಇದೆ. ಕ್ರಿಪ್ಟೋಕರೆನ್ಸಿಗಿಂತ ಇದು ಭಿನ್ನ” ಎಂದು ಹೇಳಿದ್ದಾರೆ.


  “ಬ್ಲಾಕ್​ಚೈನ್ ಬಳಸಿ ನೀವು ಎಂಥದ್ದೇ ವಹಿವಾಟನ್ನು ಬಹಳ ವಿಶ್ವಾಸರ್ಹವಾಗಿ, ಸುರಕ್ಷಿತವಾಗಿ, ಪರಿಣಾಮಕಾರಿಯಾಗಿ ಮಾಡಬಹುದು… ಎಂದಿಗೂ ತಿರುಚಲು ಸಾಧ್ಯವಾಗದ ರೀತಿಯಲ್ಲಿ ನಿಮ್ಮ ವಹಿವಾಟು ಇರುವಂತೆ ಆ ಸ್ಮಾರ್ಟ್ ಟೋಕನ್ ನೋಡಿಕೊಳ್ಳುತ್ತದೆ. ವಿಶ್ವಾಸಾಧಾರಿತವಾದ ವಹಿವಾಟುಗಳಿಗೆ ಮತ್ತು ವಿಶ್ವಾಸಾಧಾರಿತ ಸಮಾಜಕ್ಕೆ ಇಂಥದ್ದೊಂದು ಚೌಕಟ್ಟು ಬಹಳ ಮುಖ್ಯ. ನಮಗೆಲ್ಲರಿಗೂ ಇದು ಅತ್ಯಗತ್ಯ” ಎಂದು ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.


  “ಹಂಚಿಕೆಯಾದ ಲೆಡ್ಜರ್​ಗಳು ಮತ್ತು ಬ್ಲಾಕ್​ಚೈನ್ ತಂತ್ರಜ್ಞಾನಗಳ ಸಂಯೋಗ, ಸ್ಮಾರ್ಟ್ ಟೋಕನ್​ಗಳು, IoT ಮೂಲಕ ಭೌತಿಕ ಮತ್ತು ಡಿಜಿಟಿಲ್​ನ ಸಂಯೋಗ, ಈ ಅಂಶಗಳು ನಾನು ಊಹಿಸಲೂ ಸಾಧ್ಯವಿಲ್ಲದ ರೀತಿಯಲ್ಲಿ ಹಣಕಾಸು ವಲಯದ ವಿಕೇಂದ್ರೀಕರಣಕ್ಕೆ ನಾಂದಿ ಹಾಡಬಲ್ಲುವು” ಎಂದು ಅವರು ತಿಳಿಸಿದ್ದಾರೆ.


  ಮುಂದಿನ 10 ವರ್ಷಗಳಲ್ಲಿ ಈ ಮಹತ್ವದ ಸಂಚಲನಗಳು ಆಗಲಿವೆ. ಅಗಾಧ ಆರ್ಥಿಕ ಪ್ರಗತಿಗೆ ಇದು ಬಹಳ ಅಗತ್ಯವಾಗಿದೆ. ಭಾರತದಲ್ಲಿ ಸ್ಟಾರ್ಟಪ್​ಗಳಿಗೆ ಫಂಡಿಂಗ್ ಸಿಗಬಹುದು ಎಂದು ನಾವು ಹಿಂದೆ ಅಂದಾಜು ಕೂಡ ಮಾಡಲು ಸಾಧ್ಯವಿರಲಿಲ್ಲ. ಅಂಥದ್ದು ಸಾಧ್ಯವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈಗ ಮುಂದಿನ 10 ವರ್ಷಗಳಲ್ಲಿ ನಮ್ಮ ಊಹೆಗೂ ಮೀರಿ ಬೆಳವಣಿಗೆಗಳಾಗುತ್ತವೆ ಎಂದು ಮುಕೇಶ್ ಅಂಬಾನಿ ಆಶಯ ವ್ಯಕ್ತಪಡಿಸಿದ್ದಾರೆ.


  ಇದನ್ನೂ ಓದಿ: ಡಿಜಿಟಲ್ ಕ್ರಾಂತಿಯಿಂದ ಹೊಸ ವಿಶ್ವ; ಭಾರತ ಮುಂಚೂಣಿಯಲ್ಲಿ ಇರಲಿದೆ: ಮುಕೇಶ್ ಅಂಬಾನಿ


  ಬ್ಯಾಕ್​ಚೈನ್ ತಂತ್ರಜ್ಞಾನಗಳು ಲಕ್ಷಾಂತರ ವರ್ತಕರಿಗೆ ಹೇಗೆ ಲಾಭದಾಯಕ ಆಗಬಲ್ಲವು ಎಂದು ಅಂಬಾನಿ ಇದೇ ವೇಳೆ ವಿಶ್ಲೇಷಿಸಿದ್ಧಾರೆ. ವರ್ತಕರ ಬಂಡವಾಳ ಅಗತ್ಯತೆಗಳಿಗೆ ಸ್ಪಂದಿಸಬಲ್ಲ, ಹಾಗೂ ರಿಯಲ್ ಟೈಮ್​ನಲ್ಲಿ ವರ್ತಕರ ಕ್ರೆಡಿಟ್ ಸ್ಕೋರ್ ಅನ್ನು ನಿಭಾಯಿಸಬಲ್ಲ ವಿಶೇಷ ಪರಿಹಾರ ಮಾರ್ಗಗಳ ಶೋಧಕ್ಕೆ ಬ್ಲಾಕ್ ಚೈನ್ ತಂತ್ರಜ್ಞಾನಗಳು ಪುಷ್ಟಿ ಕೊಡಬಲ್ಲವು ಎಂದವರು ಹೇಳಿದ್ಧಾರೆ.


  ಡಾಟಾ ನಮಗೆ ಹೊಸ ತೈಲ:


  “ಮುಂದಿನ ದಿನಗಳಲ್ಲಿ ಜಗತ್ತು ನಡೆಯುವುದು ಡಾಟಾ ಮೇಲೆ. ಈಗ ತೈಲ ಎಂಥ ಪಾತ್ರ ವಹಿಸಿದೆಯೋ, ಮುಂದೆ ಡಾಟಾ ಪಾತ್ರ ಮಹತ್ವದ್ದಿದೆ. ಇವೆರಡಕ್ಕೂ ವ್ಯತ್ಯಾಸ ಇದೆ. ತೈಲ ಕೆಲವೇ ಸ್ಥಳದಲ್ಲಿ ಮಾತ್ರ ಲಭ್ಯ ಇರುತ್ತದೆ. ಕೆಲವೇ ದೇಶಗಳಿಗೆ ಮಾತ್ರ ಆದಾಯ ಕೊಟ್ಟಿದೆ. ಆದರೆ, ತೈಲ ನಾನು ಹೇಳಿದ ಹೊಸ ತೈಲ ಆಗಿದೆ. ಎಲ್ಲಾ ವಲಯದಲ್ಲೂ ಎಲ್ಲಾ ಪ್ರದೇಶಗಳಲ್ಲೂ ಮತ್ತು ಎಲ್ಲಾ ಆರ್ಥಿಕ ಗುಂಪುಗಳಲ್ಲೂ ಈ ಡಾಟಾ ಸಮಾನ ಬೆಲೆ ಹೊಂದಿದೆ. ಪ್ರತಿಯೊಬ್ಬ ವ್ಯಕ್ತಿಯೂ ಡೇಟಾದ ತಯಾರಕ, ಮಾಲಿಕ ಮತ್ತು ಬಳಕೆದಾರ ಆಗಬಲ್ಲ.


  ಇದನ್ನೂ ಓದಿ: Credit Card: ಟ್ರಿಪ್ ಹೋಗೋಕೆ ಈ ಕ್ರೆಡಿಟ್ ಕಾರ್ಡ್ ಬಳಸಿದ್ರೆ ಭಾರೀ ಆಫರ್​ಗಳಿವೆ


  “ಭಾರತದಲ್ಲಿ 135 ಕೋಟಿ ಜನರು ಇದ್ದಾರೆ… ಇಲ್ಲಿ ವಿಶ್ವದರ್ಜೆಯ ಡಿಜಿಟಲ್ ಸೌಕರ್ಯ ನಿರ್ಮಾಣವಾಗಿದೆ. ಬಹುತೇಕ ಎಲ್ಲಾ 6 ಲಕ್ಷ ಗ್ರಾಮಗಳು, ನಗರಗಳು ಮತ್ತು ಪಟ್ಟಣಗಳನ್ನ ಡಿಜಿಟಲ್ ಸೌಕರ್ಯಗಳು ತಲುಪಿವೆ” ಎಂದು ಅಂಬಾನಿ ತಿಳಿಸಿದರು.


  ಬ್ಲಾಕ್ ಚೈನ್ ಟೆಕ್ನಾಲಜಿ ಬಗ್ಗೆ:


  ವಿಶ್ವಾದ್ಯಂತ ಹೊಸ ಟ್ರೆಂಡ್ ಸೃಷ್ಟಿಸಿರುವ ಬಿಟ್ ಕಾಯಿನ್ ಇತ್ಯಾದಿ ಕ್ರಿಪ್ಟೋಕರೆನ್ಸಿ ಅಥವಾ ಡಿಜಿಟಲ್ ನಾಣ್ಯಗಳಿಗೆ ಆಧಾರವಾಗಿರುವುದು ಬ್ಲಾಕ್​ಚೈನ್ ತಂತ್ರಜ್ಞಾನ. ಇದು ಬಹಳ ಸರಳವಾಗಿ ವಿವರಿಸುವುದಾದರೆ ವಿಶ್ವದ ಯಾವುದೇ ಮೂಲೆಯಲ್ಲಾದರೂ ಅಪ್​ಡೇಟ್ ಮಾಡಿದರೆ ಎಲ್ಲಾ ಲೆಡ್ಜರ್​ಗಳಲ್ಲೂ ಏಕಕಾಲದಲ್ಲಿ (ರಿಯಲ್ ಟೈಮ್) ಅಪ್​ಡೇಟ್ ಆಗುತ್ತದೆ. ತೀರಾ ಸರಳೀಕರಿಸಿ ಹೇಳುವುದಾದರೆ ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಗೂಗಲ್​ನ ಸ್ಪ್ರೆಡ್ ಶೀಟ್​ಗಳಿಗೆ ಹೋಲಿಸಬಹುದು. ಸ್ಪ್ರೆಡ್ ಶೀಟ್​ನಲ್ಲಿ ಯಾರು ಬೇಕಾದರೂ ಅಪ್​ಡೇಟ್ ಮಾಡಬಹುದು. ಅದೂ ರಿಯಲ್ ಟೈಮ್​ನಲ್ಲಿ. ಅದೇ ರೀತಿಯದ್ದು ಬ್ಲಾಕ್ ಚೈನ್ ಟೆಕ್ನಾಲಜಿ.

  Published by:Vijayasarthy SN
  First published: