Akash Ambani: ರಿಲಯನ್ಸ್ ಜಿಯೋಗೆ ನೂತನ ಸಾರಥಿ, ಮುಖೇಶ್ ಅಂಬಾನಿ ಪುತ್ರ ಆಕಾಶ್‌ ನೂತನ ಚೇರ್ಮನ್

ಮುಖೇಶ್ ಅಂಬಾನಿ ಜೊತೆ ಪುತ್ರ ಆಕಾಶ್ ಅಂಬಾನಿ

ಮುಖೇಶ್ ಅಂಬಾನಿ ಜೊತೆ ಪುತ್ರ ಆಕಾಶ್ ಅಂಬಾನಿ

ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ ರಿಲಯನ್ಸ್ ಜಿಯೋ ಸಂಸ್ಥೆಯ ಚೇರ್ಮನ್‌ ಆಗಿ ನೇಮಕಗೊಂಡಿದ್ದಾರೆ. ಮುಖೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ರಿಲಯನ್ಸ್ ಜಿಯೋ ಇನ್ಫೋಕಾಮ್ ಸೇರಿದಂತೆ ಎಲ್ಲಾ ಜಿಯೋ ಡಿಜಿಟಲ್ ಸೇವೆಗಳ ಬ್ರಾಂಡ್‌ಗಳ ಮೂಲ ಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತಾರೆ.

ಮುಂದೆ ಓದಿ ...
  • Share this:

ದೇಶದ ಅತೀದೊಡ್ಡ ಟೆಲಿಕಾಂ ಕಂಪನಿ (Telecom Company) ರಿಲಯನ್ಸ್‌ ಜಿಯೋಗೆ (Reliance Jio) ನೂತನ ಸಾರಥಿ ನೇಮಕವಾಗಿದೆ. ರಿಲಯನ್ಸ್ ಜಿಯೋ ಅಧ್ಯಕ್ಷ ಸ್ಥಾನಕ್ಕೆ ಉದ್ಯಮಿ ಮುಖೇಶ್ ಅಂಬಾನಿ (Mukhesh Ambani) ರಾಜೀನಾಮೆ ನೀಡಿದ್ದಾರೆ. ಇದೀಗ ಅವರ ಪುತ್ರ (Son) ಆಕಾಶ್ ಅಂಬಾನಿ (Akash Ambani) ರಿಲಯನ್ಸ್ ಜಿಯೋ ಸಂಸ್ಥೆಯ  ನೂತನ ಚೇರ್ಮನ್‌ (Chairman) ಆಗಿ ನೇಮಕಗೊಂಡಿದ್ದಾರೆ. ಮುಕೇಶ್ ಅಂಬಾನಿ ಅವರು ಕಂಪನಿಯ ನಿರ್ದೇಶಕ (Director) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. "ಕಾರ್ಯನಿರ್ವಾಹಕೇತರ ನಿರ್ದೇಶಕರಾದ ಆಕಾಶ್ ಎಂ. ಅಂಬಾನಿ ಅವರನ್ನು ಕಂಪನಿಯ ನಿರ್ದೇಶಕರ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲು ಅನುಮೋದನೆ ನೀಡಿದೆ" ಎಂದು ರಿಲಯನ್ಸ್ ಜಿಯೋ ಇನ್ಫೋಕಾಮ್ ಹೇಳಿದೆ. ಜೊತೆಗೆ ಕೆವಿ ಚೌಧರಿ ಮತ್ತು ರಮೀಂದರ್ ಸಿಂಗ್ ಗುಜ್ರಾಲ್ ಅವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.


 ಜಿಯೋಗೆ ನೂತನ ಸಾರಥಿ


ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್ ಅಂಬಾನಿ ಜೂನ್ 27ರಿಂದ ಜಾರಿಗೆ ಬರುವಂತೆ ರಿಲಯನ್ಸ್‌ ಜಿಯೋ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೂನ್ 27, 2022ರಂದು ಸೋಮವಾರ ನಡೆದ ರಿಲಯನ್ಸ್‌ ಜಿಯೋದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಪ್ರಕಾರ ಪಂಕಜ್ ಮೋಹನ್ ಪವಾರ್ ಅವರು ಜೂನ್ 27ರಿಂದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇನ್ನು ಮುಖೇಶ್ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ ರಿಲಯನ್ಸ್ ಜಿಯೋ ಸಂಸ್ಥೆಯ ಚೇರ್ಮನ್‌ ಆಗಿ ನೇಮಕಗೊಂಡಿದ್ದಾರೆ.


ಇದನ್ನೂ ಓದಿ: Reliance Jio: ಜಿಯೋ ಬೆಳವಣಿಗೆಗೆ ಆಕಾಶ್ ಅಂಬಾನಿ ಕೊಡುಗೆ; ಜಾಗತಿಕವಾಗಿ ಇನ್ನಷ್ಟು ಬೆಳವಣಿಗೆ


ಮುಖೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ರಿಲಯನ್ಸ್ ಜಿಯೋ ಇನ್ಫೋಕಾಮ್ ಸೇರಿದಂತೆ ಎಲ್ಲಾ ಜಿಯೋ ಡಿಜಿಟಲ್ ಸೇವೆಗಳ ಬ್ರಾಂಡ್‌ಗಳ ಮೂಲ ಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತಾರೆ.


ಆಕಾಶ್ ಅಂಬಾನಿ ಹೆಜ್ಜೆ ಗುರುತು


ಬ್ರೌನ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಮೇಜರ್ ಪದವಿ ಪಡೆದಿರುವ ಆಕಾಶ್ ಅಂಬಾನಿ ಅವರು ಕಳೆದ ಕೆಲವು ವರ್ಷಗಳಲ್ಲಿ 'ಡಿಜಿಟಲ್ ಪ್ರಪಂಚದಲ್ಲಿ' ಜಿಯೋ ಮಾಡಿದ ಪ್ರಮುಖ ಸ್ವಾಧೀನಗಳನ್ನು ವೈಯಕ್ತಿಕವಾಗಿ ಮುನ್ನಡೆಸಿದ್ದಾರೆ. ಜಿಯೋ 4G ಫೀಚರ್ ಮತ್ತು ಸ್ಮಾರ್ಟ್‌ಫೋನ್, AI-ML ಮತ್ತು ಬ್ಲಾಕ್‌ಚೈನ್ ಸೇರಿದಂತೆ ಹೊಸ ತಂತ್ರಜ್ಞಾನಗಳು ಮತ್ತು ಸಾಮರ್ಥ್ಯಗಳ ಅಭಿವೃದ್ಧಿಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ ಎಂಬುದು ಇಲ್ಲಿ ಗಮನಾರ್ಹ


ನಿರ್ದಿಷ್ಟ ಕೊಡುಗೆಗಳನ್ನು ಗುರುತಿಸಿ ಹುದ್ದೆ


ಡಿಜಿಟಲ್ ಸೇವೆಗಳ ಪ್ರಯಾಣಕ್ಕೆ ಆಕಾಶ್ ಅಂಬಾನಿ ಅವರು ನೀಡಿರುವ ನಿರ್ದಿಷ್ಟ ಕೊಡುಗೆಗಳನ್ನು ಗುರುತಿಸಿ ರಿಲಯನ್ಸ್ ಜಿಯೋ ಇನ್ಫೋಕಾಮ್‌ನ ಅಧ್ಯಕ್ಷರಾಗಿ ಜವಾಬ್ದಾರಿ ನೀಡಲಾಗಿದೆ.  ಈ ಉನ್ನತ ಮಟ್ಟದ ಜವಾಬ್ದಾರಿಯೂ ಸೇರಿ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಜವಾಬ್ದಾರಿಗಳಿಗೆ ಭಾಜನರಾಗಲಿದ್ದಾರೆ.


ಇದನ್ನೂ ಓದಿ: Assam flood relief: ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ 25 ಕೋಟಿ ದೇಣಿಗೆ ನೀಡಿದ ಮುಖೇಶ್ ಅಂಬಾನಿ!


ಜಿಯೋದ 4G ನೆಟ್​ವರ್ಕ್ ಸುತ್ತ ಡಿಜಿಟಲ್ ಪರಿಸರ ವ್ಯವಸ್ಥೆಯ ರಚನೆಯಲ್ಲಿ ಆಕಾಶ್ ಅಂಬಾನಿಯವರು ನಿಕಟವಾಗಿ ತೊಡಗಿಸಿಕೊಂಡಿದ್ದಾರೆ. ಅವರು 2017 ರಲ್ಲಿ ಭಾರತ-ಸ್ಪೆಕ್ಸ್ ಫೋಕಸ್ಡ್ ಜಿಯೋಫೋನ್ ಅನ್ನು ಆವಿಷ್ಕರಿಸುವ ಮತ್ತು ಬಿಡುಗಡೆ ಮಾಡುವಲ್ಲಿ ಇಂಜಿನಿಯರ್‌ಗಳ ತಂಡದೊಂದಿಗೆ ನಿಕಟವಾಗಿ ತೊಡಗಿಸಿಕೊಂಡಿದ್ದರು. ಈ ಬೆಳವಣಿಗೆಯು ಭಾರತೀಯರನ್ನು 2G ನಿಂದ 4G ಗೆ ಕರೆದೊಯ್ಯಲು ಸಾಕಷ್ಟು ಕ್ರಾಂತಿಕಾರಿ ಸಾಧನವಾಯಿತು. 2020 ರಲ್ಲಿ ಟೆಕ್ ಮೇಜರ್‌ಗಳು ಮತ್ತು ಹೂಡಿಕೆದಾರರಿಂದ ಜಾಗತಿಕ ಹೂಡಿಕೆಯ ಜಾಡು ಹಿಡಿಯುವಲ್ಲಿ ಆಕಾಶ್ ಅಂಬಾನಿಯವರು ನಿರಂತರವಾಗಿ ತೊಡಗಿಸಿಕೊಂಡಿದ್ದರು. ಇದು ಜಿಯೋವನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಬೆಳವಣಿಗೆಗೆ ಕಾರಣವಾಯಿತು.

Published by:Annappa Achari
First published: