• Home
  • »
  • News
  • »
  • business
  • »
  • Mukesh Ambani: ನಿನ್ನೆ-ಮೊನ್ನೆ ಬಂದವ್ರೆಲ್ಲ ನಂಬರ್​ 1 ಅಂತಾರೋ, ಇವ್ರಿಗೆ ನಂಬರ್​ಗಳೇ ಲೆಕ್ಕ ಇಲ್ಲ! ಆಲ್​ವೇಸ್​ ಟಾಪ್​

Mukesh Ambani: ನಿನ್ನೆ-ಮೊನ್ನೆ ಬಂದವ್ರೆಲ್ಲ ನಂಬರ್​ 1 ಅಂತಾರೋ, ಇವ್ರಿಗೆ ನಂಬರ್​ಗಳೇ ಲೆಕ್ಕ ಇಲ್ಲ! ಆಲ್​ವೇಸ್​ ಟಾಪ್​

ಮುಖೇಶ್​ ಅಂಬಾನಿ

ಮುಖೇಶ್​ ಅಂಬಾನಿ

ಇದೀಗ  ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅಧ್ಯಕ್ಷ ಮುಕೇಶ್ ಅಂಬಾನಿ, ಗೌತಮ್‌ ಅದಾನಿ (Gautam Adani) ಯಿಂದ ಮತ್ತೆ ಈ ಪಟ್ಟವನ್ನು ಕಸಿದುಕೊಂಡಿದ್ದಾರೆ. ಮತ್ತೆ ನಂಬರ್​ ಒನ್​ ಪಟ್ಟವನ್ನು ರಿಲಯನ್ಸ್​ ದಿಗ್ಗಜ ಪಡೆದುಕೊಂಡಿದ್ದಾರೆ.

  • Share this:

ರಿಲಯನ್ಸ್ (Reliance)​ ಈ ಹೆಸರು ಕೇಳಿದರೆ ಸಾಕು ಎಲ್ಲರಿಗೂ ಥಟ್​ ಅಂತ ಮುಖೇಶ್​ ಅಂಬಾನಿ (Mukesh Ambani) ನೆನಪಾಗುತ್ತಾರೆ. ಅಷ್ಟರ ಮಟ್ಟಿಗೆ ಮುಖೇಶ್​ ಅಂಬಾನಿ ಈ ಸಂಸ್ಥೆಗಾಗಿ ಶ್ರಮ ಪಟ್ಟಿದ್ದಾರೆ. ಏಷ್ಯಾ (Asia) ದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್​ ಅಂಬಾನಿ ನಂಬರ್​ ಒನ್​ ಸ್ಥಾನದಲ್ಲಿದ್ದಾರೆ. ಈ ವರ್ಷವೂ ರಿಲಯನ್ಸ್ ಇಂಡಸ್ಟ್ರೀಸ್ (Reliance Industry) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿ (Asia's Richest Person) ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಮರಳಿ ಪಡೆದಿದ್ದಾರೆ. ಅಂಬಾನಿ ಅಬ್ಬರಕ್ಕೆ ಉಳಿದ ಬ್ಯುಸಿನೆಸ್ (Business) ಮ್ಯಾನ್​ಗಳು ಸೈಲೆಂಟ್ (Silent)​ ಆಗಿದ್ದಾರೆ. ಕಳೆದ ಬಾರಿ ಭಾರತ ಹಾಗೂ ಏಷ್ಯಾದ ನಂ. 1 ಶ್ರೀಮಂತನ ಸ್ಥಾನವನ್ನು ಗೌತಮ್​ ಅದಾನಿ ಪಡೆದುಕೊಂಡಿದ್ದರು. ಇದೀಗ  ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅಧ್ಯಕ್ಷ ಮುಕೇಶ್ ಅಂಬಾನಿ, ಗೌತಮ್‌ ಅದಾನಿ (Gautam Adani) ಯಿಂದ ಮತ್ತೆ ಈ ಪಟ್ಟವನ್ನು ಕಸಿದುಕೊಂಡಿದ್ದಾರೆ. ಮತ್ತೆ ನಂಬರ್​ ಒನ್​ ಪಟ್ಟವನ್ನು ರಿಲಯನ್ಸ್​ ದಿಗ್ಗಜ ಪಡೆದುಕೊಂಡಿದ್ದಾರೆ.


ಮತ್ತೆ ನಂಬರ್​ ಒನ್​ ಪಟ್ಟಕ್ಕೇರಿದ ರಿಲಯನ್ಸ್​ ದಿಗ್ಗಜ!


ಕಳೆದ ಕೆಲವು ತಿಂಗಳುಗಳಿಂದ ಅದಾನಿ ಸಮೂಹದ ಷೇರುಗಳ ಭಾರೀ ಏರಿಕೆ ಕಂಡಿತ್ತು. ಹೀಗಾಗಿ ಗೌತಮ್​ ಅದಾನಿ ಮೊದಲ ಸ್ಥಾನಕ್ಕೇರಿದ್ದರು. ಆದರೆ ಇದೀಗ ಎಂಎಸ್‌ಸಿಐ (ಮಾರ್ಗನ್ ಸ್ಟಾನ್ಲಿ ಕ್ಯಾಪಿಟಲ್ ಇಂಟರ್ನ್ಯಾಷನಲ್) ಇಂಡಿಯಾ ಇಂಡೆಕ್ಸ್‌ ಅದಾನಿ ಷೇರುಗಳ ಬಗೆಗಿನ ನಿಲುವು ಬದಲಿಸುತ್ತಿದ್ದಂತೆ ಕಂಪನಿಯ ಷೇರುಗಳು ಒಂದೇ ಸಮನೆ ನೆಲಕಚ್ಚುತ್ತಿವೆ. ಹೀಗಾಗಿ ಅವರು ಏಷ್ಯಾ ಹಾಗೂ ಭಾರತದ ನಂ.1 ಶ್ರೀಮಂತನ ಪಟ್ಟದಿಂದ ಕೆಳಗಿಳಿದಿದ್ದಾರೆ. ನಂಬರ್​ ಒನ್​ ಸ್ಥಾನವನ್ನು ಮತ್ತೆ ಮುಖೇಶ್​ ಅಂಬಾನಿ ಅಲಂಕರಿಸಿದ್ದಾರೆ.


$99.7 ಬಿಲಿಯನ್ ನಿವ್ವಳ ಮೌಲ್ಯ ಹೊಂದಿರುವ ಅಂಬಾನಿ!


ವಿಶ್ವದ ಶ್ರೀಮಂತರಲ್ಲಿ 8ನೇ ಸ್ಥಾನದಿಂದ ಭಾರತೀಯ ಕೈಗಾರಿಕೋದ್ಯಮಿ ಗೌತಮ್ ಅದಾನಿಯನ್ನು ಕೆಳಗಿಳಿಸಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ ಅಂಬಾನಿ $99.7 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
$98.7-ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ, ಅದಾನಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಳೆದ 24 ಗಂಟೆಗಳಲ್ಲಿ ಬ್ಲೂಮ್‌ಬರ್ಗ್‌ನ ಬಿಲಿಯನೇರ್ಸ್ ಇಂಡೆಕ್ಸ್ ಪ್ರತಿ ಬಿಲಿಯನೇರ್‌ನ ನಿವ್ವಳ ಮೌಲ್ಯವನ್ನು ನೋಡುತ್ತದೆ.


ಇದನ್ನೂ ಓದಿ: ಈ ಕ್ಷೇತ್ರಕ್ಕೂ ಕಾಲಿಟ್ಟ ರಿಲಯನ್ಸ್​! ನಿಮ್ಗೆ ಬೇಕಿರೋದೆಲ್ಲಾ ಜಿಯೋ ಮಾರ್ಟ್​ನಲ್ಲೇ ಸಿಗುತ್ತೆ


$ 3.59 ಶತಕೋಟಿ ಹೆಚ್ಚಳವನ್ನು ಕಂಡ ಅಂಬಾನಿ!


ಗೌತಮ್​ ಅದಾನಿ ಕಂಪನಿಯ ಷೇರುಗಳು ಕೆಲ ದಿನಗಳ ಕಾಲ ಸಖತ್​ ಸೌಂಡ್ ಮಾಡಿತ್ತು.  ಹೀಗಾಗಿ ಅವರು ನಂಬರ್​ ಒನ್​ ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ಮುಖೇಶ್​​ ಅಂಬಾನಿ ತಮ್ಮ ಸಂಪತ್ತಿನಲ್ಲಿ $ 3.59 ಶತಕೋಟಿ ಹೆಚ್ಚಳವನ್ನು ಕಂಡಿದ್ದಾರೆ. ಅದಾನಿ ತಮ್ಮ ಸಂಪತ್ತಿಗೆ ನಿವ್ವಳ ಮೌಲ್ಯಕ್ಕೆ $ 2.96 ಶತಕೋಟಿಯನ್ನು ಸೇರಿದ್ದಾರೆ ಎಂದು ವರದಿ ಹೇಳಿದೆ.


ವಹಿವಾಟಿನಲ್ಲಿ ಆರ್‌ಐಎಲ್‌ನ ಷೇರುಗಳು ಬಿಎಸ್‌ಇಯಲ್ಲಿ ಶೇಕಡ ಮೂರು ಏರಿಕೆಯಾಗಿ ₹ 2,816.35ಕ್ಕೆ ತಲುಪಿದೆ, ಕಳೆದ ಎರಡು ವಹಿವಾಟಿನ ದಿನಗಳಲ್ಲಿ ಭಾರೀ ಪ್ರಮಾಣದ ವಹಿವಾಟಿನ ನಡುವೆ ಏಳು ಶೇಕಡಾ ಏರಿಕೆಯಾಗಿದೆ. ಒಂದು ವಾರದಲ್ಲಿ ರಿಲಯನ್ಸ್ ಷೇರು ಶೇ. 6.79ರಷ್ಟು ಏರಿಕೆ ಕಂಡಿದೆ.


ಇದನ್ನೂ ಓದಿ: Home Loan ತಗೋಳ್ಬೇಕು ಅಂದುಕೊಂಡಿದ್ದೀರಾ? ಹಾಗಿದ್ರೆ ಈ ಬ್ಯಾಂಕ್​ಗಳಲ್ಲಿ ಕಡಿಮೆ ಬಡ್ಡಿ ಇದೆ ನೋಡಿ


ಜಗತ್ತಿನ 8ನೇ ಶ್ರೀಮಂತ ಮುಖೇಶ್​ ಅಂಬಾನಿ!


ಬ್ಲೂಮ್‌ಬರ್ಗ್ ಪ್ರಕಟಿಸಿದ ವರದಿಯ ಪ್ರಕಾರ 99.7 ಬಿಲಿಯನ್‌ ಡಾಲರ್‌ (7.73 ಲಕ್ಷ ಕೋಟಿ ರೂ.) ಮೌಲ್ಯದೊಂದಿಗೆ ಮುಕೇಶ್‌ ಅಂಬಾನಿ ಏಷ್ಯಾದ ಹಾಗೂ ಭಾರತದ ನಂ. 1 ಶ್ರೀಮಂತನ ಪಟ್ಟ ಅಲಂಕರಿಸಿದ್ದಾರೆ. ಜಗತ್ತಿನಲ್ಲೇ ಸಿರಿವಂತರ ಪಟ್ಟಿಯಲ್ಲಿ 8ನೇ ಸ್ಥಾನ ಅಲಂಕರಿಸಿದ್ದಾರೆ.

Published by:Vasudeva M
First published: