Reliance: ಭಾರತದಲ್ಲಿ ಟಾಡ್ಸ್ ಎಸ್.ಪಿ.ಎ ಫ್ರಾಂಚೈಸಿಗಾಗಿ ರಿಲಯನ್ಸ್ ಒಪ್ಪಂದ

Tods: ಟಾಡ್ಸ್ 2008 ರಿಂದಲೂ ಭಾರತದಲ್ಲಿ ತನ್ನ ಅಸ್ತಿತ್ವ ಹೊಂದಿದೆ. ನವದೆಹಲಿಯ ಡಿಎಲ್ಎಫ್ ಎಂಪೋರಿಯೋ, ಮುಂಬೈನ ಪಲ್ಲಾಡಿಯಂ ಮತ್ತು ಮಲ್ಟಿಬ್ರ್ಯಾಂಡ್ ಇಕಾಮರ್ಸ್ ಪ್ಲಾಟ್​ಫಾರ್ಮ್​  ಅಜಿಯೋ ಲಕ್ಸ್​ನಲ್ಲಿ ಸಕ್ರಿಯವಾಗಿದೆ.

ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ

 • Share this:
  ಮುಂಬೈ: ಇಟಲಿ ಮೂಲದ ಲಕ್ಷುರಿ ಲೈಫ್​ಸ್ಟೈ ಲ್ ಬ್ರ್ಯಾಂಡ್ ಟಾಡ್ಸ್ ಎಸ್.ಪಿ.ಎ (Tads S.p.A) ಜೊತೆಗೆ ರಿಲಯನ್ಸ್ ಬ್ರ್ಯಾಂಡ್ಸ್ ಲಿಮಿಟೆಡ್ (RBL) ಹೊಸ ಒಪ್ಪಂದ ಮಾಡಿಕೊಂಡಿದ್ದು, ಫ್ರಾಂಚೈಸಿಯನ್ನು ರಿಲಯನ್ಸ್ (Reliance) ತೆರೆಯಲಿದೆ. ಪಾದರಕ್ಷೆ, ಹ್ಯಾಂಡ್ಸ್​​ಬ್ಯಾಗ್​ಗಳು (HandBags) ಮತ್ತು ಇತರ ಸಾಮಗ್ರಿಗಳ ಮಾರಾಟಕ್ಕೆ ರಿಲಯನ್ಸ್ ಅಧಿಕೃತ ರಿಟೇಲ್ ವಹಿವಾಟುದಾರನಾಗಿರಲಿದೆ. ಟಾಡ್ಸ್ 2008 ರಿಂದಲೂ ಭಾರತದಲ್ಲಿ ತನ್ನ ಅಸ್ತಿತ್ವ ಹೊಂದಿದೆ. ನವದೆಹಲಿಯ ಡಿಎಲ್ಎಫ್ ಎಂಪೋರಿಯೋ, ಮುಂಬೈನ ಪಲ್ಲಾಡಿಯಂ (Mumbai Palladium) ಮತ್ತು ಮಲ್ಟಿಬ್ರ್ಯಾಂಡ್ ಇಕಾಮರ್ಸ್ ಪ್ಲಾಟ್​ಫಾರ್ಮ್​ ಅಜಿಯೋ ಲಕ್ಸ್​ನಲ್ಲಿ ಸಕ್ರಿಯವಾಗಿದೆ.

  ಈಗಾಗಲೇ ಚಾಲ್ತಿಯಲ್ಲಿರುವ ಚಾನೆಲ್​ಗಳ ಆಡಳಿತವನ್ನು ರಿಲಯನ್ಸ್ ಬ್ರ್ಯಾಂಡ್ಸ್ ಲಿಮಿಟೆಡ್ ವಹಿಸಿಕೊಳ್ಳಲಿದೆ ಮತ್ತು ಬ್ರ್ಯಾಂಡ್​ನ ವಹಿವಾಟನ್ನು ಮಾರ್ಕೆಟ್​ನಲ್ಲಿ ಹೆಚ್ಚಳ ಮಾಡುವುದು ಮತ್ತು ಡಿಜಿಟಲ್ ಪ್ರಸ್ತುತಿಯನ್ನು ಹೆಚ್ಚಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

  ಇದನ್ನೂ ಓದಿ: Smartphone: ಭಾರತೀಯರಿಗೆ ಸ್ಯಾಮ್​ಸಂಗ್ ಎಂದರೆ ಪಂಚಪ್ರಾಣ! ಸೌತ್ ಕೊರಿಯನ್ ಕಂಪನಿಯ ಮುಂದೆ ಶಿಯೋಮಿ ಮೂಲೆಗುಂಪಾಯಿತೇ?

  ಹೊಸ ಗ್ರಾಹಕರಿಗೆ ಹೊಸತನವನ್ನು ನೀಡುವ ಉದ್ದೇಶದಿಂದ ಜಾಗತಿಕ ಲಕ್ಷುರಿ ಮಾರುಕಟ್ಟೆಯಲ್ಲಿ ಟಾಡ್ಸ್ ತನ್ನದೇ ವಿಶೇಷ ಸ್ಥಾನವನ್ನು ರೂಪಿಸಿಕೊಂಡಿದೆ. ಲಕ್ಷುರಿ ಲೆದರ್ ಹಾಗೂ ಸುಂದರ ಸಾಮಗ್ರಿಗಳಿಗೆ ಹೆಸರಾಗಿರುವ ಬ್ರ್ಯಾಂಡ್​ನ  ಜೊತೆಗೆ ಪಾಲುದಾರಿಕೆ ವಹಿಸುತ್ತಿರುವುದು ನಮಗೆ ಖುಷಿ ನೀಡಿದೆ ಎಂದು ರಿಲಯನ್ಸ್ ಬ್ರ್ಯಾಂಡ್ಸ್ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕ ದರ್ಶನ್ ಮೆಹ್ತಾ ಹೇಳಿದ್ದಾರೆ.

  ಇದನ್ನೂ ಓದಿ: Facebook Features: ಮೇ 31ರ ನಂತರ ಈ 2 ವೈಶಿಷ್ಟ್ಯಗಳನ್ನು ರದ್ದು ಪಡಿಸುತ್ತಿದೆಯಂತೆ ಫೇಸ್‌ಬುಕ್!

  ದೇಶದ ಪ್ರಮುಖ ಲಕ್ಷುರಿ ರಿಟೇಲರ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದು ನಮಗೆ ಖುಷಿಯ ಸಂಗತಿಯಾಗಿದೆ. ಗುಣಮಟ್ಟ ಮತ್ತು ಆಧುನಿಕತೆ ಮತ್ತು ಜೀವನಶೈಲಿ ಬಗ್ಗೆ ಎರಡೂ ಬ್ರ್ಯಾಂಡ್​ಗಳು ಒಂದೇ ಧ್ಯೇಯವನ್ನು ಹೊಂದಿದೆ” ಎಂದು ಟಾಡ್ಸ್ ಪ್ರಧಾನ ಬ್ರ್ಯಾಂಡ್ ಮ್ಯಾನೇಜರ್ ಕಾರ್ಲೋ ಅರ್ಲಬರ್ಟೋ ಬೆರೆಟ್ಟಾ ಹೇಳಿದ್ದಾರೆ.
  Published by:Harshith AS
  First published: