• Home
  • »
  • News
  • »
  • business
  • »
  • Reliance Family Day: ಮುಕೇಶ್​ ಅಂಬಾನಿ ಮಕ್ಕಳಿಗೆ ವಹಿಸಿರುವ ಜವಾಬ್ದಾರಿಗಳೇನು? ಮೆಸ್ಸಿಯ ಉದಾಹರಣೆ ನೀಡಿದ ಖ್ಯಾತ ಉದ್ಯಮಿ!

Reliance Family Day: ಮುಕೇಶ್​ ಅಂಬಾನಿ ಮಕ್ಕಳಿಗೆ ವಹಿಸಿರುವ ಜವಾಬ್ದಾರಿಗಳೇನು? ಮೆಸ್ಸಿಯ ಉದಾಹರಣೆ ನೀಡಿದ ಖ್ಯಾತ ಉದ್ಯಮಿ!

ರಿಲಯನ್ಸ್​​ ಫ್ಯಾಮಿಲಿ ಡೇ

ರಿಲಯನ್ಸ್​​ ಫ್ಯಾಮಿಲಿ ಡೇ

ತೈಲ ಉದ್ಯಮದಿಂದ ಆರಂಭಿಸಿ ಟೆಲಿಕಾಮ್ ಹಾಗೂ ರಿಟೇಲ್ ಸಂಘಟನೆಯಾಗಿ ಹೆಸರುವಾಸಿಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸ್ವಯಂ ಪರಿವರ್ತನೆಯ ತನ್ನ ಪ್ರಯಾಣವನ್ನು ಆರಂಭಿಸಿದೆ ಎಂದು ಸೂಚಿಸಿದ್ದಾರೆ.

  • Share this:

ಬಿಲಿಯಾಧಿಪತಿ ಮುಕೇಶ್​  ಅಂಬಾನಿ (Mukesh Aambani)  2023 ರ ಹೊಸ ವರ್ಷದಲ್ಲಿ ದೇಶದ ಜನತೆಗೆ ಇನ್ನಷ್ಟು ಕೊಡುಗೆಗಳನ್ನು ನೀಡುವ ಉತ್ಸಾಹದಲ್ಲಿರುವುದು ಖಚಿತವಾಗಿದೆ. ಹೊಸ ವರ್ಷ (New Year) ದ ಕೊನೆಯಲ್ಲಿ ದೇಶಾದ್ಯಂತ ಸಂಪೂರ್ಣವಾಗಿ ತಡೆರಹಿತ 5ಜಿ ಸೇವೆಯನ್ನು ಒದಗಿಸುವ ಆಸೆಯನ್ನು ಅಂಬಾನಿ ಹೊಂದಿದ್ದು ಜೊತೆಗೆ ಚಿಲ್ಲರೆ ವ್ಯಾಪಾರದಲ್ಲಿ ಮಹತ್ವಾಕಾಂಕ್ಷೆಯ ಗುರಿಗಳನ್ನು ಸಫಲಗೊಳಿಸುವ ನಿಟ್ಟಿನಲ್ಲಿದ್ದಾರೆ.


ಮೆಸ್ಸಿಯ ಉದಾಹರಣೆ ನೀಡಿದ ಮುಖೇಶ್ ಅಂಬಾನಿ


ಗ್ರೀನ್ ಕಾರ್ಪೋರೇಟ್ ಉದ್ದೇಶವನ್ನು ತಮ್ಮ ಮೂವರು ಮಕ್ಕಳ ಸಹಾಯದೊಂದಿಗೆ ನೆರವೇರಿಸುವ ಅಭಿಲಾಷೆ ಬಿಲಿಯಾಧಿಪತಿಗಿದ್ದು ನಾಯಕತ್ವ ಹಾಗೂ ಒಂದು ತಂಡವಾಗಿ ಕೆಲಸ ಮಾಡುವುದು ಹೇಗೆ ಎಂಬುದಕ್ಕೆ ಫುಟ್ಬಾಲ್ ಆಟಗಾರ ಲಿಯೋನಲ್ ಮೆಸ್ಸಿ ಹಾಗೂ ಅರ್ಜೆಂಟೀನಾ ತಂಡ ಉತ್ತಮ ಉದಾಹರಣೆ ಎಂದು ತಿಳಿಸಿದ್ದಾರೆ.


ರಿಲಯನ್ಸ್ ಫ್ಯಾಮಿಲಿ ಡೇಯಲ್ಲಿ ಮುಖೇಶ್ ಸಂವಾದ


ತಮ್ಮ ತಂದೆ ಧೀರೂಭಾಯಿ ಅಂಬಾನಿಯವರ ಹುಟ್ಟುಹಬ್ಬವನ್ನು ಆಚರಿಸುವ ಸಮಯದಲ್ಲಿ ರಿಯಲನ್ಸ್ ಫ್ಯಾಮಿಲಿ ಡೇಯನ್ನು ಅಂಬಾನಿ ಕುಟುಂಬ ಆಚರಿಸುತ್ತಿದ್ದು ಈ ಸಂದರ್ಭದಲ್ಲಿ ಅಂಬಾನಿ ತಮ್ಮ ಸಂಸ್ಥೆಯ ಉದ್ಯೋಗಿಗಳೊಂದಿಗೆ ಸಂವಹನ ನಡೆಸಿದ್ದಾರೆ.


ತೈಲ ಉದ್ಯಮದಿಂದ ಆರಂಭಿಸಿ ಟೆಲಿಕಾಮ್ ಹಾಗೂ ರಿಟೇಲ್ ಸಂಘಟನೆಯಾಗಿ ಹೆಸರುವಾಸಿಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸ್ವಯಂ ಪರಿವರ್ತನೆಯ ತನ್ನ ಪ್ರಯಾಣವನ್ನು ಆರಂಭಿಸಿದೆ ಎಂದು ಸೂಚಿಸಿದ್ದಾರೆ.


ಮಕ್ಕಳಿಗೆ ಜವಾಬ್ದಾರಿ ವಹಿಸಿರುವ ಬಿಲಿಯಾಧಿಪತಿ


2021 ರ ರಿಲಯನ್ಸ್ ಫ್ಯಾಮಿಲಿ ಡೇಯಲ್ಲಿ ಭಾರತದ ಅತ್ಯಮೂಲ್ಯ ಕಂಪನಿಯ ಉತ್ತರಾಧಿಕಾರದ ಯೋಜನೆಯ ಕುರಿತು ಮಾತನಾಡಿದ ಅಂಬಾನಿ ತಮ್ಮ ಮೂವರು ಮಕ್ಕಳಿಗೆ ಮೂರು ವಲಯಗಳ ಜವಬ್ದಾರಿಯನ್ನು ವಹಿಸುವುದಾಗಿ ತಿಳಿಸಿದ್ದಾರೆ.


ಹಿರಿಯ ಮಗ ಆಕಾಶ್‌ಗೆ ಟೆಲಿಕಾಂ ಮತ್ತು ಡಿಜಿಟಲ್ ವ್ಯವಹಾರ ಹಾಗೂ ಅವಳಿ ಸಹೋದರಿ ಇಶಾಗೆ ರಿಟೇಲ್ ಹಾಗೂ ಕಿರಿಯ ಪುತ್ರ ಅನಂತ್‌ಗೆ ಹೊಸ ಇಂಧನ ವ್ಯವಹಾರವನ್ನು ವಹಿಸಲಿದ್ದಾರೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.


ರಿಲಯನ್ಸ್ ಸಂಸ್ಥೆಯ ಮುಂದಿನ ಗುರಿ ಏನು?


ರಿಲಯನ್ಸ್ ಫ್ಯಾಮಿಲಿ ದಿನದಂದು, $104 ಬಿಲಿಯನ್ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ಮೂವರು ಮಕ್ಕಳು ಸಾಧಿಸಬೇಕಾದ ಗುರಿಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಅನಂತ್ ಅಂಬಾನಿ ಯಾರು? ಯುವ ಉದ್ಯಮಿಯ ಬಗ್ಗೆ ಆಸಕ್ತಿಕರ ವಿಚಾರ ಇಲ್ಲಿದೆ ನೋಡಿ


ವರ್ಷಗಳು ಉರುಳುತ್ತಿದ್ದು ದಶಕಗಳು ಕಳೆದು ಹೋಗುತ್ತಿವೆ. ರಿಲಯನ್ಸ್ ದೊಡ್ಡದಾಗಿ ಬೆಳೆಯುತ್ತಿದ್ದು ಇನ್ನಷ್ಟು ವಿಸ್ತಾರ ಹಾಗೂ ಸದೃಢವಾಗಿ ರೂಪುಗೊಳ್ಳುತ್ತಿದೆ.ಭಾರತ ಹಾಗೂ ಭಾರತೀಯರಿಗಾಗಿ ಸಂಸ್ಥೆಯು ಪರಿಶ್ರಮಿಸುತ್ತಿದ್ದು ಪ್ರತಿಯೊಬ್ಬ ಭಾರತೀಯನನ್ನು ಸಬಲೀಕರಣಗೊಳಿಸುವುದು, ಪೋಷಿಸುವುದು ಹಾಗೂ ಅವರ ಬಗ್ಗೆ ಕಾಳಜಿ ವಹಿಸುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ರಿಲಯನ್ಸ್ ತನ್ನ 50 ವರ್ಷಗಳನ್ನು ಪೂರೈಸಲಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ


5ಜಿ ನಿಯೋಜನೆ 2023 ರಲ್ಲಿ ಪೂರ್ಣ


ಆಕಾಶ್ ಅವರ ಅಧ್ಯಕ್ಷತೆಯಲ್ಲಿ, ಜಿಯೋ ವಿಶ್ವದ ಅತ್ಯುತ್ತಮ 5G ನೆಟ್‌ವರ್ಕ್ ಅನ್ನು ಭಾರತದಾದ್ಯಂತ ಹೊರತರುತ್ತಿದೆ, 5ಜಿ ನೆಟ್‌ವರ್ಕ್ ವಿಶ್ವದಲ್ಲೇ ಎಲ್ಲಕ್ಕಿಂತ ಹೆಚ್ಚು ವೇಗವಾದ ನೆಟ್‌ವರ್ಕ್ ಎಂದೆನಿಸಿದೆ.


ಜಿಯೋದ 5G ನಿಯೋಜನೆಯು 2023 ರಲ್ಲಿ ಪೂರ್ಣಗೊಳ್ಳುತ್ತದೆ ಎಂದು ಮುಖೇಶ್ ಅಂಬಾನಿ ಸಭೆಯಲ್ಲಿ ತಿಳಿಸಿದ್ದಾರೆ. ಜಿಯೋ ಪ್ಲ್ಯಾಟ್‌ಫಾರ್ಮ್ ಭಾರತದ ಮುಂದಿನ ಅವಕಾಶ ವೇದಿಕೆಯಾಗಿ ಇದೀಗ ರೂಪುಗೊಳ್ಳಬೇಕಾಗಿದೆ ಎಂದು ತಿಳಿಸಿರುವ ಅಂಬಾನಿ, ಮಹತ್ವಪೂರ್ಣ ಡಿಜಿಟಲ್ ಉತ್ಪನ್ನಗಳು ಹಾಗೂ ದೇಶೀಯ, ಅಂತಾರಾಷ್ಟ್ರೀಯ ಪರಿಹಾರಗಳನ್ನು ಒದಗಿಸುವ ತಾಣವಾಗಿ ಮಾರ್ಪಡಬೇಕು ಎಂದು ಕರೆ ನೀಡಿದ್ದಾರೆ.


ಹಳ್ಳಿಗಳ ಸಂಪೂರ್ಣ ಅಭಿವೃದ್ಧಿ


ಪ್ರತಿಯೊಂದು ಗ್ರಾಮೀಣ ಭಾಗವು ಇನ್ನು 5ಜಿ ಸಂಪರ್ಕವನ್ನು ಪಡೆದುಕೊಳ್ಳುವುದರಿಂದ ಹಳ್ಳಿಗಳಲ್ಲೂ ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ ಸೌಲಭ್ಯಗಳು ಹಾಗೂ ಹೆಚ್ಚು ಉತ್ಪಾದಕತೆಗೆ ಮತ್ತು ಆರ್ಥಿಕ ಚಟುವಟಿಕೆಗೆ ನಗರದಂತೆಯೇ ಸಮಾನ ಅವಕಾಶ ದೊರೆಯಲಿದೆ ಎಂದು ತಿಳಿಸಿದ್ದಾರೆ. ಭಾರತದ ಆಂತರಿಕ ಅಭಿವೃದ್ಧಿಯನ್ನು ಪೂರ್ಣಗೊಳಿಸುವ ಉದ್ದೇಶವನ್ನು ಜಿಯೋ ಹೊಂದಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ರಿಷಭ್​ ಪಂತ್​ ಕುರಿತು ಮಹತ್ವದ ಹೇಳಿಕೆ ನೀಡಿದ ಬಿಸಿಸಿಐ


ನಾಯಕತ್ವ ಹಾಗೂ ಟೀಮ್‌ವರ್ಕ್ ಪಾಠ


ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಟ್ರೋಫಿ ಗೆದ್ದಿರುವುದಕ್ಕೆ ಕಾರಣ ನಾಯಕತ್ವ ಹಾಗೂ ತಂಡದ ಸದಸ್ಯರುಗಳು ಒಗ್ಗಟ್ಟಿನಿಂದ ಎಂದು ಹೇಳಿದ ಅಂಬಾನಿಯವರು, ಮೆಸ್ಸಿ ಒಬ್ಬರೇ ಕಪ್ ಗೆಲ್ಲುವುದಕ್ಕೆ ಸಾಧ್ಯವಿರಲಿಲ್ಲ ಅಂತೆಯೇ ಮೆಸ್ಸಿಯ ನಾಯಕತ್ವ ಹಾಗೂ ಮಾರ್ಗದರ್ಶನವಿಲ್ಲದೆ ಅರ್ಜೆಂಟೀನಾ ಕೂಡ ಕಪ್ ಗೆಲ್ಲುವುದಕ್ಕೆ ಸಾಧ್ಯವಿರಲಿಲ್ಲ ಎಂದು ತಿಳಿಸಿದ್ದಾರೆ.

Published by:ವಾಸುದೇವ್ ಎಂ
First published: