Forbes India ಶ್ರೀಮಂತ ಬಿಲಿಯನೇರ್‌ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ನಂಬರ್ 1; ಇನ್ನೂ ಯಾರೆಲ್ಲ ಇದ್ದಾರೆ?

ಫೋರ್ಬ್ಸ್‌ನ 2022 ರ ಭಾರತದ 10 ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅಗ್ರ ಮೂರು ಶ್ರೇಯಾಂಕಗಳು ಹಿಂದಿನ ವರ್ಷದಂತೆಯೇ ಇದ್ದು ಬದಲಾಗದೆ ಉಳಿದಿವೆ.

ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ

  • Share this:
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ( (Reliance Industries Ltd )ಮುಖ್ಯಸ್ಥ ಮುಖೇಶ್ ಅಂಬಾನಿ (Mukesh Ambani)) ಅವರು ಫೋರ್ಬ್ಸ್‌ನ ಭಾರತದ 10 ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿಯಲ್ಲಿ   (Forbes 2022) ಅಗ್ರ ಸ್ಥಾನವನ್ನು ಹಿಂದಿನಂತೆಯೇ ಉಳಿಸಿಕೊಂಡಿದ್ದಾರೆ. ಭಾರತದ 10 ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿಯಲ್ಲಿ (India's 10 richest billionaires)  ಅವರ ನಂತರದ ಸ್ಥಾನದಲ್ಲಿ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ (Gautam Adani) ಇದ್ದಾರೆ. ಎಚ್‌ಸಿಎಲ್ ಟೆಕ್ನಾಲಜೀಸ್ ಅಧ್ಯಕ್ಷ ಎಮೆರಿಟಸ್ ಶಿವ ನಾಡಾರ್ (Shiv Nadar) ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಏಷ್ಯಾದ ಶ್ರೀಮಂತರ ಸಂಪೂರ್ಣ ಪಟ್ಟಿಯಲ್ಲಿ ಇನ್ನೂ ಯಾರೆಲ್ಲ ಇದ್ದಾರೆ? ಓದಿ. 

ಫೋರ್ಬ್ಸ್‌ನ 2022 ರ ಭಾರತದ 10 ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅಗ್ರ ಮೂರು ಶ್ರೇಯಾಂಕಗಳು ಹಿಂದಿನ ವರ್ಷದಂತೆಯೇ ಇದ್ದು ಬದಲಾಗದೆ ಉಳಿದಿವೆ. ವರದಿಯ ಪ್ರಕಾರ ಮುಖೇಶ್  ಅಂಬಾನಿ ಅವರ ಒಟ್ಟು ಸಂಪತ್ತು $90.7 ಬಿಲಿಯನ್ ಆಗಿದೆ. ಅವರ ಸಂಪತ್ತು ಕಳೆದ ಆರ್ಥಿಕ ವರ್ಷಕ್ಕಿಂತ 7 ಪ್ರತಿಶತದಷ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಮುಖೇಶ್ ಅಂಬಾನಿ ಅವರು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ ಹತ್ತನೇ ಶ್ರೀಮಂತ ವ್ಯಕ್ತಿ ಎಂಬ ಹಿರಿಮೆಗೂ ಪ್ರಾಪ್ತವಾಗಿದ್ದಾರೆ.

ನಂತರದ ಸ್ಥಾನದಲ್ಲಿ ಯಾರೆಲ್ಲ ಇದ್ದಾರೆ?
ಫೋರ್ಬ್ಸ್ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಅವರ ನಂತರದ ಸ್ಥಾನದಲ್ಲಿರುವ ಗೌತಮ್ ಅದಾನಿ, ಒಟ್ಟು $ 90 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿ ಹೊಂದಿದ್ದಾರೆ.

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ನಾಲ್ಕನೇ ಸ್ಥಾನದಲ್ಲಿ!
ಭಾರತದ ಕೊವಿಡ್ 19 ಲಸಿಕೆ ಪ್ರವರ್ತಕ ಸೈರಸ್ ಪೂನಾವಾಲ್ಲಾ ಅವರ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) COVID-19 ವಿರುದ್ಧ  ಲಸಿಕೆ  ಉತ್ಪಾದಿಸುವಲ್ಲಿ ಮುಂಚೂಣಿಯಲ್ಲಿದೆ. ಅಂದಾಜು $ 24.3 ಶತಕೋಟಿ ನಿವ್ವಳ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಕಳೆದ ವರ್ಷ ವಿಶ್ವದ 100 ಶ್ರೀಮಂತ ವ್ಯಕ್ತಿಗಳ ಪಟ್ಟಿಗೆ ಪ್ರವೇಶಿಸಿದ್ದ ಡಿ-ಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿ ಅವರು $ 20 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಐದನೇ ಸ್ಥಾನದಲ್ಲಿದ್ದರು.

ಇದನ್ನೂ ಓದಿ: Virushka Net Worth: ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿ ಎಷ್ಟು ಶ್ರೀಮಂತರು ಗೊತ್ತೇ?

ಆರ್ಸೆಲರ್ ಮಿತ್ತಲ್ ಕಾರ್ಯಕಾರಿ ಅಧ್ಯಕ್ಷೆ ಲಕ್ಷ್ಮಿ ಮಿತ್ತಲ್ ಅವರು 17.9 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದು ಆರನೇ ಸ್ಥಾನದಲ್ಲಿದ್ದಾರೆ. OP ಜಿಂದಾಲ್ ಗ್ರೂಪ್​ನ ಸಾವಿತ್ರಿ ಜಿಂದಾಲ್ $17.7 ಬಿಲಿಯನ್ ಸಂಪತ್ತಿನೊಂದಿಗೆ  ಏಳನೇ  ಸ್ಥಾನದಲ್ಲಿದ್ದಾರೆ.  ಆದಿತ್ಯ ಬಿರ್ಲಾ ಗ್ರೂಪ್ ಮುಖ್ಯಸ್ಥ ಕುಮಾರ್ ಬಿರ್ಲಾ ($16.5 ಶತಕೋಟಿ) ಎಂಟನೇ ಸ್ಥಾನ,  ಸನ್ ಫಾರ್ಮಾಸ್ಯುಟಿಕಲ್ಸ್ ಮುಖ್ಯಸ್ಥ ದಿಲೀಪ್ ಶಾಂಘ್ವಿ ($15.6 ಶತಕೋಟಿ) ಒಂಬತ್ತನೇ ಸ್ಥಾನ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಎಂಡಿ ಉದಯ್ ಕೋಟಾಕ್ ($14) ಹತ್ತನೇ ಸ್ಥಾನದಲ್ಲಿದ್ದಾರೆ.

ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ ಕಳೆದ ವರ್ಷ 140 ರಿಂದ 166 ಕ್ಕೆ ಏರಿಕೆಯಾಗಿದೆ ಎಂದು ಫೋರ್ಬ್ಸ್ ವರದಿ ತಿಳಿಸಿದೆ.

ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ ಏನು ಹೇಳಿತ್ತು?
ಅದಾನಿ ಗ್ರೂಪ್‌ನ ಅಧ್ಯಕ್ಷ ಮತ್ತು ಸಂಸ್ಥಾಪಕ ಭಾರತೀಯ ಬಿಲಿಯನೇರ್ ಗೌತಮ್ ಅದಾನಿ ಅವರು (Gautam Adani) ಪ್ರಸಕ್ತ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಟೆಸ್ಲಾದ ಎಲೋನ್ ಮಸ್ಕ್ (Tesla’s Elon Musk) ಅಮೆಜಾನ್ ಇಂಕ್‌ನ ಜೆಫ್ ಬೆಜೋಸ್ (Amazon Inc’s Jeff Bezos) ಬಿಲ್ ಗೇಟ್ಸ್ (Bill Gates) ಮತ್ತು ವಾರೆನ್ ಬಫೆಟ್‌ರನ್ನು (Warren Buffett) ಹಿಂದಿಕ್ಕಿ ಹೆಚ್ಚಿನ ಹಣವನ್ನು ಗಳಿಸಿದ್ದಾರೆ.

ಇದನ್ನೂ ಓದಿ: Gautam Adani: ಎಲಾನ್ ಮಸ್ಕ್​ಗಿಂತಲೂ ಹೆಚ್ಚು ಆದಾಯ ಗಳಿಸಿದ ಭಾರತೀಯ! ಯಾರು ಈ ಕುಬೇರ?

ಈ ಬಗ್ಗೆ ಇತ್ತೀಚಿನ ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಅದೇ ಸಮಯದಲ್ಲಿ ಭಾರತದ ಸಹೋದ್ಯೋಗಿ ಉದ್ಯಮಿ ಮುಖೇಶ್ ಅಂಬಾನಿ $8.24 ಶತಕೋಟಿ ಗಳಿಸಿದ್ದಾರೆ. ಅಂಬಾನಿ ಮತ್ತು ಅದಾನಿ ಕೂಡ ಏಷ್ಯಾದ ಇಬ್ಬರು ಶ್ರೀಮಂತ ವ್ಯಕ್ತಿಗಳಾಗಿದ್ದಾರೆ.
Published by:guruganesh bhat
First published: