ಇಡ್ಲಿ-ದೋಸೆ ವಾರ್: ಮಾರುಕಟ್ಟೆಯಲ್ಲಿ iD ಭದ್ರಕೋಟೆಗೆ MTR ತಾಜಾ ಪ್ರಬಲ ಪೈಪೋಟಿ!

ಸದ್ಯ MTRಗೆ ಪ್ರತಿಸ್ಪರ್ಧಿಯಾಗಿ ಐಡಿ ಫ್ರೆಶ್ ಫುಡ್(iD Fresh Food) (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ ಪ್ರಬಲ ಪೈಪೋಟಿ ನೀಡುತ್ತಿದ್ದು, ಮಾರುಕಟ್ಟೆ ಪಾಲನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಈ ಬೆಳವಣಿಗೆ ಮಾರುಕಟ್ಟೆಯಲ್ಲಿ ಇಡ್ಲಿ ಮತ್ತು ದೋಸೆ ಹಿಟ್ಟು ಕಂಪನಿಗಳ ಸಂಘರ್ಷಕ್ಕೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಎಂಟಿಆರ್ ಫುಡ್ಸ್ ಪ್ರೈವೇಟ್ ಲಿಮಿಟೆಡ್(MTR Foods Pvt Ltd), ಭಾರತದ ಅತಿ ದೊಡ್ಡ ರೆಡಿ-ಟು-ಕುಕ್(Ready To Cook) ಆಹಾರದ ಬ್ರ್ಯಾಂಡ್‌. ಸದ್ಯ MTRಗೆ ಪ್ರತಿಸ್ಪರ್ಧಿಯಾಗಿ ಐಡಿ ಫ್ರೆಶ್ ಫುಡ್(iD Fresh Food) (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ ಪ್ರಬಲ ಪೈಪೋಟಿ ನೀಡುತ್ತಿದ್ದು, ಮಾರುಕಟ್ಟೆ ಪಾಲನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಈ ಬೆಳವಣಿಗೆ ಮಾರುಕಟ್ಟೆಯಲ್ಲಿ ಇಡ್ಲಿ ಮತ್ತು ದೋಸೆ ಹಿಟ್ಟು ಕಂಪನಿಗಳ ಸಂಘರ್ಷಕ್ಕೆ ಕಾರಣವಾಗಿದೆ.  2021ರಲ್ಲಿ, MTR ಮಿನಿಟ್ ಫ್ರೆಶ್ ಅನ್ನು ಬಿಡುಗಡೆ ಮಾಡಿತು, ಇದು ಇಡ್ಲಿ ಹಿಟ್ಟು, ದೋಸೆ ಹಿಟ್ಟು ಮತ್ತು ಕೆಂಪು ಅಕ್ಕಿ ದೋಸೆ ಹಿಟ್ಟನ್ನು ಒಳಗೊಂಡಿತ್ತು. MTR ಮಿನಿಟ್ ಫ್ರೆಶ್ ಬಿಡುಗಡೆಯು ತನ್ನ ಪ್ರತಿಸ್ಪರ್ಧಿ ಕಂಪನಿಗಳನ್ನು ಗುರಿಯಾಗಿಸಿಕೊಂಡು ಜಾಹೀರಾತು ಪ್ರಚಾರ ಮಾಡಿತು. iD ಫ್ರೆಶ್ ಫುಡ್‌ಗೆ ಟಾಂಗ್ ಕೊಡುವ ಸಲುವಾಗಿ ಎಂಟಿಆರ್ "ಇಡ್ಲಿ(Idly) ಮತ್ತು ದೋಸೆ(Dose) ಒಂದೇ ಅಲ್ಲ, ಹಾಗಾದರೆ ನಿಮ್ಮ ಹಿಟ್ಟು ಯಾಕೆ ಒಂದೇ?" ಎಂಬ ಜಾಹೀರಾತನ್ನು ಹೊರ ತಂದಿತು.

ಪರಾಠಾ ಮತ್ತು ಮೊಸರು ಉತ್ಪನ್ನಗಳು ಬಿಡುಗಡೆ!

2005ರಲ್ಲಿ ಪಿ.ಸಿ ಮುಸ್ತಫಾ ಐಡಿ ಫ್ರೆಶ್ ಫುಡ್, ಹಸಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಪರಿಚಯಿಸಿದರು. ಇತ್ತೀಚೆಗೆ ಸ್ಟಾರ್ಟ್-ಅಪ್ ಯೋಜನೆಯು ತನ್ನ ಕೊಡುಗೆಗಳನ್ನು ವಿಸ್ತರಿಸಿದೆ. ಇದರ ಭಾಗವಾಗಿ ಪರಾಠಾ ಮತ್ತು ಮೊಸರಿನಂತಹ ಇತರ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ತಾಜಾ ಇಡ್ಲಿ ಮತ್ತು ದೋಸೆ ಹಿಟ್ಟು ಕಂಪನಿಯ ಅತ್ಯಧಿಕ ಆದಾಯ-ಉತ್ಪಾದಕ ಮತ್ತು ಅದರ ಅತ್ಯಂತ ಜನಪ್ರಿಯ ಉತ್ಪನ್ನವಾಗಿ ಉಳಿದಿದೆ.

ಇದನ್ನೂ ಓದಿ: Future Group's ಮಳಿಗೆಯನ್ನು ಸ್ವಾಧೀನ ಪಡಿಸಿಕೊಂಡ Reliance; ನಿಟ್ಟುಸಿರು ಬಿಟ್ಟ ಮಾಲೀಕರು ಮತ್ತು ಉದ್ಯೋಗಿಗಳು

ಉದ್ಯಮದ ಅಂದಾಜಿನ ಪ್ರಕಾರ, MTR ಫುಡ್ಸ್, ಗಿಟ್ಸ್ ಫುಡ್ ಫ್ರಾಡಕ್ಟ್ ಪ್ರೈ.ಲಿ ಜೊತೆಗೆ, ಭಾರತದಲ್ಲಿನ ಸಿದ್ಧ ಆಹಾರ ಮಾರುಕಟ್ಟೆಯಲ್ಲಿ ಸುಮಾರು 25 ಪ್ರತಿಶತವನ್ನು ಹೊಂದಿದೆ. ಮೆಕೇನ್ ಫುಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಫ್ರೋಜನ್‌ ಆಹಾರಗಳನ್ನು ಗ್ರಾಹಕರಿಗೆ ಪೂರೈಸುತ್ತದೆ. ಇದು 25 ಪ್ರತಿಶತ ಮಾರುಕಟ್ಟೆ ಪಾಲನ್ನು ಹೊಂದಿರುವ ಮತ್ತೊಂದು ಪ್ರಮುಖ ಬ್ರ್ಯಾಂಡ್‌.

MTR ಪ್ರಾಡೆಕ್ಟ್​ ಕಂಡ್ರೆ ಎಲ್ಲರಿಗೂ ಅಚ್ಚು-ಮೆಚ್ಚು!

MTR ಫುಡ್ಸ್, ತನ್ನ ಸಿದ್ಧ-ತಯಾರಿಕೆಯ ದಕ್ಷಿಣ ಭಾರತೀಯ ಆಹಾರ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಇದು ಒಣ ದೋಸೆ ಮತ್ತು ಇಡ್ಲಿ ಹಿಟ್ಟನ್ನು ಮಾರಾಟ ಮಾಡುತ್ತಿದೆ. ಎಂಟಿಆರ್ ಪ್ಯಾಕೇಜ್ ಮಾಡಿದ ಆಹಾರಗಳ ವ್ಯಾಪಾರವನ್ನು ನಾರ್ವೇಜಿಯನ್ ಕಂಪನಿ ಓರ್ಕ್ಲಾಗೆ 2007ರಲ್ಲಿ ಮಾರಾಟ ಮಾಡಿತು. ಮತ್ತು ಅದರ ರೆಸ್ಟೋರೆಂಟ್‌ಗಳು ಪ್ರತ್ಯೇಕ ಘಟಕವಾಗಿ ಕಾರ್ಯನಿರ್ವಹಿಸುತ್ತಿವೆ.

ರೆಡಿ-ಟು-ಕುಕ್ ಪ್ರಾಡೆಕ್ಟ್​​ ಪರಿಚಯಿಸಿದ ಎಂಟಿಆರ್!

ಎಂಟಿಆರ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ರೆಡಿ-ಟು-ಕುಕ್ ವರ್ಗವನ್ನು ಪರಿಚಯಿಸಿದೆ. ಆದರೆ ಒಣ ದೋಸೆ-ಇಡ್ಲಿ ಬ್ಯಾಟರ್‌ಗಳ ವಿಷಯದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ. ‘ಒಣ ಇಡ್ಲಿ-ದೋಸಾ ಹಿಟ್ಟಿನ ಮಾರುಕಟ್ಟೆ ತುಂಬಾ ಚಿಕ್ಕದಾಗಿದೆ" ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಆನಂದ್ ರಾಮನಾಥನ್ ಹೇಳಿದರು. ಒದ್ದೆಯಾದ ಇಡ್ಲಿ-ದೋಸಾ ಹಿಟ್ಟಿನ ಮಾರುಕಟ್ಟೆಯು ರೂ. 1,500-4,000 ಕೋಟಿ. ಉದ್ಯಮದ ಅಂದಾಜಿನ ಪ್ರಕಾರ, ಕೇವಲ 5-10 ಪ್ರತಿಶತದಷ್ಟು ದೊಡ್ಡ ಬ್ರ್ಯಾಂಡ್‌ಗಳು ಪ್ರಾಬಲ್ಯ ಹೊಂದಿವೆ ಎಂದಿದ್ದಾರೆ.

300 ಕೋಟಿ ಆದಾಯ ಗಳಿಸಿದ iD ಫ್ರೆಶ್​ ಫುಡ್ ಟ್ರೆಂಡ್!

iD ಫ್ರೆಶ್ ಫುಡ್ ಟ್ರೆಂಡ್ ಪ್ರವೃತ್ತಿಯನ್ನು ಬಂಡವಾಳ ಮಾಡಿಕೊಂಡಿದೆ ಮತ್ತು ಇತ್ತೀಚಿನ ವರ್ಷಗಳಲ್ಲಿ 50-60% ವಾರ್ಷಿಕ ಬೆಳವಣಿಗೆ ದರಗಳನ್ನು ದಾಖಲಿಸಿದೆ. 2021ರ ಹಣಕಾಸು ವರ್ಷದಲ್ಲಿ, ಐಡಿ ಫ್ರೆಶ್ ಫುಡ್ 300 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ ಮತ್ತು ಮುಂದಿನ ವರ್ಷದಲ್ಲಿ 400 ಕೋಟಿ ರೂಪಾಯಿಗಳ ಮಾರಾಟವನ್ನು ಸಾಧಿಸುವ ಹಾದಿಯಲ್ಲಿದೆ ಎಂದು ಕಂಪನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ ರಾಹುಲ್ ಗಾಂಧಿ ಹೇಳಿದ್ದಾರೆ.

ಸ್ಟ್ರಾಟಜಿ ಮಾಡುತ್ತಿರುವ ಕಂಪನಿಗಳು

MTR ಫುಡ್ಸ್ ವಿಭಿನ್ನತೆಯೊಂದಿಗೆ MTR ಮಿನಿಟ್ ಫ್ರೆಶ್ ಅನ್ನು ಪ್ರಾರಂಭಿಸಿತು. ಎಂಟಿಆರ್ ಅನುಕೂಲಕರ ಮತ್ತು ಬಳಸಲು ಸುಲಭವಾದ ಪ್ಯಾಕೇಜಿಂಗ್ 750 ಗ್ರಾಂ ಮತ್ತು 850 ಗ್ರಾಂಗಳ ಸಣ್ಣ ಪ್ಯಾಕ್‌ಗಳನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸ್ಟ್ರಾಟಜಿ ಮಾಡುತ್ತಿದೆ. iD ಫ್ರೆಶ್ ಫುಡ್ 1 ಕೆಜಿ ಪ್ಯಾಕ್‌ಗಳನ್ನು ಮಾರಾಟ ಮಾಡುತ್ತದೆ.

ಇದನ್ನೂ ಓದಿ: ಟರ್ಕಿಶ್ ಪ್ರಜೆಯ ನೇಮಕಕ್ಕೆ ವಿರೋಧ, ಏರ್ ಇಂಡಿಯಾ CEO ಹುದ್ದೆ ನಿರಾಕರಿಸಿದ ಇಲ್ಕರ್ ಐಸಿ

"ನಮ್ಮ ಪ್ಯಾಕ್‌ಗಳು ಶೆಲ್ಫ್‌ನಿಂದ ಜಾರಿಕೊಳ್ಳುವುದನ್ನು ನಾವು ಬಯಸುವುದಿಲ್ಲ. ಅಲ್ಲದೆ, ದಿನಕ್ಕೆ 25-30 ದೋಸೆಗಳನ್ನು ಯಾರು ತಿನ್ನುತ್ತಾರೆ. ಆದ್ದರಿಂದ ನಾವು ಸಣ್ಣ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಎಂಟಿಆರ್ ಕಂಪನಿ ಸಿಬ್ಬಂದಿ ಶರ್ಮಾ ಹೇಳಿದರು. ಐಡಿ ಫ್ರೆಶ್ ಫುಡ್‌ನ ದೋಸೆ-ಇಡ್ಲಿ ಬ್ಯಾಟರ್‌ನ 1 ಕೆಜಿ ರೂ. 85ಕ್ಕೆ ಮಾರಾಟವಾದರೆ, 750 ಗ್ರಾಂ ಎಂಟಿಆರ್ ಇಡ್ಲಿ ಬ್ಯಾಟರ್ 75 ರೂ.ಗಳಿಗೆ ಲಭ್ಯವಿದೆ. ಎಂಟಿಆರ್ ಕಂಪನಿಯು ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಮಾತ್ರ ದೋಸೆ, ಇಡ್ಲಿ ಹಿಟ್ಟು ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಆದರೆ iD ಫ್ರೆಶ್ ಫುಡ್ಸ್ ದೇಶದ 45 ನಗರಗಳಲ್ಲಿ ಮತ್ತು 40,000 ಕ್ಕೂ ಹೆಚ್ಚು ಔಟ್‌ಲೆಟ್‌ಗಳಲ್ಲಿ ಲಭ್ಯವಿದೆ. ಐಡಿ ಫ್ರೆಶ್ ಫುಡ್‌ನ ಅತಿದೊಡ್ಡ ಮಾರುಕಟ್ಟೆ ಬೆಂಗಳೂರು, ಆದರೆ ಕಂಪನಿಯು ಇತರ ಪ್ರದೇಶಗಳಲ್ಲಿಯೂ ತ್ವರಿತವಾಗಿ ಬೆಳೆಯುತ್ತಿದೆ.
Published by:Vasudeva M
First published: