Nuska Kitchen: ಗರ್ಭಿಣಿಯರು, ಬಾಣಂತಿಯರಿಗೆ ಇಲ್ಲಿ ಸಿಗುತ್ತೆ ಪೌಷ್ಠಿಕಾಂಶದ ಆಹಾರ; ಉದ್ಯಮ ಶುರು ಮಾಡಿ ಗೆದ್ದ ತಾಯಿ-ಮಗ

ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಠಿಕಾಂಶದ ಆಹಾರವನ್ನು ನೀಡುವ ಅಗತ್ಯ ಹೆಚ್ಚಾಗಿದೆ. ಅಲ್ಪನಾ ತಿವಾರಿ ಅವರು ನುಸ್ಕಾ ಕಿಚನ್​ ತೆರೆದಿದ್ದಾರೆ. ಓಟ್ಸ್ ಲಡ್ಡು, ಶತಾವರಿ ಪೌಡರ್, ತೆಂಗಿನಕಾಯಿ ಲಡ್ಡು, ರಾಗಿ ಲಡ್ಡು ಮತ್ತು ಅಜ್ವಾಯಿನ್ ಮತ್ತು ಸೋಂತ್ ಲಡ್ಡು ಮತ್ತಿತರ ತಿನಿಸುಗಳು ಇಲ್ಲಿ ಲಭ್ಯವಿದೆ.

ನುಸ್ಕಾ ಕಿಚನ್ ಫುಲ್​ ಫೇಮಸ್​

ನುಸ್ಕಾ ಕಿಚನ್ ಫುಲ್​ ಫೇಮಸ್​

  • Share this:
ಗರ್ಭಿಣಿಯರು (Pregnant) ಮತ್ತು ಬಾಣಂತಿಯರಿಗೆ ಹಿಂದೆಲ್ಲಾ ಅಮ್ಮಂದಿರು, ಅಜ್ಜಿಯಂದಿರು ವಿಶೇಷ ಪೌಷ್ಟಿಕಾಂಶಯುಕ್ತ (Nutritional) ತಿನಿಸುಗಳನ್ನು ನೀಡಿ ಆರೈಕೆ (Care) ಮಾಡುತ್ತಿದ್ದರು. ಈಗೆಲ್ಲಾ ಅವು ಕಣ್ಮರೆಯಾಗುತ್ತಿವೆ, ಬಹಳಷ್ಟು ಮಂದಿಗೆ ಅವುಗಳನ್ನು ತಿನ್ನುವ ಆಸೆ ಇದ್ದರೂ, ಮಾಡಲು ಗೊತ್ತಿಲ್ಲ ಅಥವಾ ಯಾರು ಮಾಡಬಲ್ಲರು, ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ಇರುವುದಿಲ್ಲ. ಅಂತವರಿಗೆ ಸಹಾಯ ಮಾಡಲೆಂದೇ ಹುಟ್ಟಿಕೊಂಡ ಉದ್ಯಮ ನುಸ್ಕಾ ಕಿಚನ್ (Nuska Kitchen).

2019 ರಲ್ಲಿ ಅಲ್ಪನಾ ತಿವಾರಿ, ಈ ಉದ್ಯಮವನ್ನು ಕೇವಲ 20,000 ಗಳ ಬಂಡವಾಳದಲ್ಲಿ ಆರಂಭಿಸಿದರು. ಇಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಅಗತ್ಯವಿರುವ ಪೌಷ್ಟಿಕಾಂಶಯುಕ್ತ ಸಾಂಪ್ರದಾಯಿಕ ತಿನಿಸುಗಳು ಲಭ್ಯ. 100 ಗರ್ಭಿಣಿಯರಿಗೆ ಆಹಾರ ತಯಾರಿಸಿಕೊಂಡಲೆಂದು ಆರಂಭಗೊಂಡ ಈ ಕ್ಯಾಟರಿಂಗ್ ಕಿಚನ್, ತಿಂಗಳು ಕಳೆದಂತೆ 1000 ಮತ್ತು ಅದಕ್ಕೂ ಹೆಚ್ಚಿನ ಗ್ರಾಹಕರನ್ನು ಪಡೆಯುತ್ತಾ ಅಭಿವೃದ್ಧಿ ಹೊಂದತೊಡಗಿತು.

ಅಲ್ಪನಾ, ಆರ್ಯುವೇದ ವೈದ್ಯರ ಕುಟುಂಬದಲ್ಲಿ ಹುಟ್ಟಿ ಬೆಳೆದವರು, ಅವರ ತಂದೆ ಕೂಡ ಆಯುರ್ವೇದ ವೈದ್ಯರಾಗಿದ್ದರು. ಕೋಟಾದ ಮೋದಕ್ ಎಂಬ ಪಟ್ಟಣದಲ್ಲಿ ಹುಟ್ಟಿದರು, ಸರಕಾರಿ ವೈದ್ಯರಾಗಿದ್ದ ತಮ್ಮ ತಂದೆಯ ಉದ್ಯೋಗದ ಕಾರಣದಿಂದ ಅಲ್ಪನಾ, ರಾಜಸ್ಥಾನದ ಚೋಮು ಜಿಲ್ಲೆಯಲ್ಲಿ ಬೆಳೆದರು. “ ಆಯುರ್ವೇದ ತಮ್ಮ ರಕ್ತದಲ್ಲಿಯೇ ಇದೆ” ಎನ್ನುತ್ತಾರೆ ಅಲ್ಪನಾ.

ಇಲ್ಲಿ ಸಾಂಪ್ರದಾಯಿಕ ತಿನಿಸುಗಳು ಲಭ್ಯ

“ನಾನು ಕೂಡ ವೈದ್ಯಳಾಗಬೇಕು ಎಂಬ ಯೋಜನೆ ಇತ್ತು. ಅದೇ ಕಾರಣಕ್ಕಾಗಿ ನಾನು ಸಂಸ್ಕೃತವನ್ನು ಸಬ್ಜೆಕ್ಟ್ ಆಗಿ ಆರಿಸಿಕೊಂಡಿದ್ದೆ. ಅದೇನೇ ಇದ್ದರೂ, ನಾನು ಹದಿಹರೆಯಕ್ಕೆ ಬಂದ ಮೇಲೆ, ಬೇರೆ ಅವಕಾಶಗಳನ್ನು ಹುಡುಕಲು ಬಯಸುತ್ತೇನೆ ಎಂದೆನಿಸಿತು” ಎನ್ನುತ್ತಾರೆ ಅವರು. ಮತ್ತೊಂದು ಹಳ್ಳಿಗೆ ಪೋಸ್ಟಿಂಗ್ ಆಗುತ್ತದೆ ಎಂಬ ಕಾರಣ ಕೂಡ ಆಕೆ ವೈದ್ಯಳಾಗಲು ಬಯಸದೇ ಇರುವ ಕಾರಣಗಳಲ್ಲಿ ಒಂದಂತೆ. ಅವರ ಎಲ್ಲಾ ಸಂಬಂಧಿಗಳು ನಗರದಲ್ಲಿ ಬೇರೆ ವಿಭಿನ್ನ ರೀತಿಯ ಜೀವನವನ್ನು ಅನುಭವಿಸುತ್ತಾ ಖುಷಿಯಾಗಿದ್ದರು. ಅಲ್ಪನಾಗೂ ಅಂತದ್ದೇ ಜೀವನದ ಆಸೆ ಇತ್ತಂತೆ. ಅದಕ್ಕಾಗಿ ಅವರು ಉದ್ಯಮಿಯನ್ನು ಮದುವೆಯಾಗಿ, ನಗರದಲ್ಲಿ ನೆಲೆಸಿದರು.

ಎರಡು ಹೆರಿಗೆಗಗಳ ಬಳಿಕ, ಅಲ್ಪನಾ ತನ್ನ ಮನೆಯ ಆಸುಪಾಸಿನ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಸಹಾಯ ಮಾಡಲು ಆರಂಭಿಸಿದರು. “ನಾವು ಯಾವ ರೀತಿಯ ಸಾಂಪ್ರದಾಯಿಕ ಆಹಾರವನ್ನು ಸೇವಿಸುತ್ತಿದ್ದೆವು ಎಂಬುವುದು ಅವರಲ್ಲಿ ಬಹಳಷ್ಟು ಮಂದಿಗೆ ಗೊತ್ತೇ ಇರಲಿಲ್ಲ ಎಂಬುವುದು ನನಗೆ ತಿಳಿಯಿತು. ಅವರಿಗೆ ಗೊತ್ತಿದ್ದರೂ ಕೂಡ, ಅದನ್ನು ತಾವೇ ತಯಾರಿಸಲು ಅವರಲ್ಲಿ ಯಾರಿಗೂ ಸಮಯ ಮತ್ತು ಇಷ್ಟ ಇರಲಿಲ್ಲ. ನಾನು ನನ್ನ ಅಡುಗೆ ಮನೆಯಲ್ಲಿ ಈ ಮಹಿಳೆಯರಿಗಾಗಿ ಪೌಷ್ಟಿಕಾಂಶಯುಕ್ತ ಆಹಾರ ಮತ್ತು ಸರಳ ಆಹಾರಗಳನ್ನು ತಯಾರಿಸಲು ಆರಂಭಿಸಿದೆ” ಎನ್ನುತ್ತಾರೆ ಅವರು.

ಇದನ್ನೂ ಓದಿ: Health Care: ಭಾರತೀಯ ಥಾಲಿಯನ್ನು ಹೇಗೆ, ಯಾವಾಗ ತಿನ್ಬೇಕು? ಆರೋಗ್ಯ ತಜ್ಞರ ಸಲಹೆ

ಗರ್ಭಿಣಿ, ಬಾಣಂತಿಯರಿಗೆಗಾಗಿ ಪೌಷ್ಠಿಕಾಂಶದ ಆಹಾರ

ಅಲ್ಪನಾ ಅವರು , ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಆಹಾರ ತಿನಿಸುಗಳನ್ನು ತಯಾರಿಸುವುದರಲ್ಲಿ ತೊಡಗಿಕೊಳ್ಳುವುದಕ್ಕೆ, ತಮಗೆ ಹೆರಿಗೆ ಮಾಡಿಸಿದ್ದ ಸ್ತ್ರೀರೋಗ ತಜ್ಞೆ, ಡಾ. ಸಂತೋಷ್ ಯಾದವ್ ಅವರ ಸಲಹೆಯೇ ಕಾರಣವಂತೆ. “ಬೇರೆಯವರಿಗೆ ಸಹಾಯ ಮಾಡುವ ನನ್ನ ಆಸೆಯನ್ನು ಪೂರೈಸಿಕೊಳ್ಳಲು ಆಕೆ ನನಗೆ ಒತ್ತಾಯಿಸಿದಳು” ಎನ್ನುತ್ತಾರೆ ಅಲ್ಪನಾ. ಆರಂಭದಲ್ಲಿ, ಲಡ್ಡುಗಳು ಬೇಕೆಂದು ಬಯಸಿದವರು ಸಾಮಾಗ್ರಿಗಳನ್ನು ತಂದು ಕೊಡುತ್ತಿದ್ದರು, ಅಲ್ಪನಾ ಲಡ್ಡುಗಳನ್ನು ಮಾಡಿ ಅವರಿಗೆ ಕೊಡುತ್ತಿದ್ದರು.

ಈ ವಿಷಯ ಬಾಯಿಂದ ಬಾಯಿಗೆ ಹರಡುತ್ತಿದ್ದಂತೆ, ಆ ಪ್ರದೇಶದಲ್ಲಿನ ಬೇರೆ ವೈದ್ಯರು ಕೂಡ, ತಮ್ಮ ರೋಗಿಗಳ ಪೌಷ್ಟಿಕಾಂಶದ ಅಗತ್ಯಗಳಿಗಾಗಿ, ಇವರ ಬಳಿಗೆ ಕಳುಹಿಸಿ ಕೊಡತೊಡಗಿದರಂತೆ. ಇದೆಲ್ಲಾ ನಡೆದ್ದದ್ದು 2009 ರಲ್ಲಿ. ಅಲ್ಪನಾ ಅವರ ಪತಿಗೂ ಕೂಡ ಪತ್ನಿ ತಮ್ಮ ಮನೆಯಲ್ಲಿ ಈ ಕೆಲಸ ಮಾಡುತ್ತಿದ್ದರು ಎಂದು ತಿಳಿದಿರಲಿಲ್ಲವಂತೆ. ಮನೆಯಿಂದ ಎಲ್ಲರೂ ಹೊರಡುವುದನ್ನೇ ಕಾದು, ಈ ಕೆಲಸ ಶುರು ಮಾಡುತ್ತಿದ್ದರಂತೆ ಅಲ್ಪನಾ.

ಸುಮಾರು 3 ಅಥವಾ 4 ವರ್ಷಗಳ ಬಳಿಕ ಈ ಸಂಗತಿಯನ್ನು ಅವರು ಮನೆಯಲ್ಲಿ ಬಾಯಿ ಬಿಟ್ಟರು. “ನನ್ನ ಕೆಲಸದ ಬಗ್ಗೆ ಹಂಚಿಕೊಳ್ಳಲು ಯಾವತ್ತೂ ಭಯ ಇರಲಿಲ್ಲ. ಅಡುಗೆ ಮನೆಯಲ್ಲಿ ಲಡ್ಡುಗಳನ್ನು ಮಾಡುತ್ತಾ ಏಕೆ ಕಷ್ಟ ಪಡುತ್ತೀಯಾ ಎಂದು ಗಂಡ ಯಾವಾಗಲೂ ಹೇಳುತ್ತಿದ್ದರು. ಆದರೆ ನನ್ನ ಪಾಲಿಗೆ ಅದು ಕಷ್ಟವಾಗಿರಲಿಲ್ಲ, ನನಗೆ ಅದರಿಂದ ಖುಷಿ ಸಿಗುತ್ತಿತ್ತು” ಎನ್ನುತ್ತಾರೆ ಅಲ್ಪನಾ.

“ಅದು , ಯಾವತ್ತೂ ನಾನು ಮಾಡಿದ ಕೆಲಸದಿಂದ ಗಳಿಸಬಹುದಾದ ಹಣದ ಬಗ್ಗೆ ಆಗಿರಲಿಲ್ಲ. ಬದಲಿಗೆ ಗರ್ಭಿಣಿ ಮತ್ತು ಬಾಣಂತಿಯರಿಗೆ ಸೇವೆ ಮಾಡುವ ಪ್ಯಾಶನ್ ಆಗಿತ್ತು. ಅದು ನನಗೆ ಹುಮ್ಮಸ್ಸು ನೀಡಿತು. ನಾನು ಕೆಲಸ ಮಾಡುವಾಗ ಶಾಂತಿ ಸಿಗುತ್ತದೆ. ಇಂದಿಗೂ ಕೂಡ, ಲಡ್ಡುಗಳನ್ನು ಮಾಡಿ ಕೊಡುವಾಗ ನನಗೆ ಒಂದು ನೆಮ್ಮದಿಯ ಅನುಭವ ಆಗುತ್ತದೆ. ಆ ರಾತ್ರಿಗಳಲ್ಲಿ ನಾನು, ಯಾರದೋ ಜೀವನದಲ್ಲಿ ಸಣ್ಣ ಬದಲಾವಣೆಯನ್ನು ಮಾಡಿದೆ ಎಂಬ ಭಾವನೆಯಲ್ಲಿ ಸುಖವಾದ ನಿದ್ರೆಯನ್ನು ಮಾಡುತ್ತೇನೆ” ಎನ್ನುತ್ತಾರೆ ಅವರು.

ನುಸ್ಕಾ ಕಿಚನ್ ಗ್ರಾಹಕರನ್ನು ಸೆಳೆದಿದೆ

“ನಿಮ್ಮ ಅಗತ್ಯಗಳಿಗೆ ತಕ್ಕಂತೆ ಆರ್ಡರ್ ಕಸ್ಟಮೈಸ್ ಮಾಡಿಕೊಡುವ ಅದ್ಭುತವಾದ ಸ್ಥಳ ನುಸ್ಕಾ ಕಿಚನ್. ವೇಗನ್ ಆಗಿರುವ ನನ್ನ ಸೊಸೆಯೆ ಲಡ್ಡುಗಳನ್ನು ಮಾಡಿಸಿಕೊಂಡಿದ್ದೆ ಮತ್ತು ಅಲ್ಪನಾ ಸ್ವತಃ ತಾವೇ ಬಾದಾಮಿ ಎಣ್ಣೆಯಲ್ಲಿ ಎಲ್ಲವನ್ನು ಮಾಡಿಕೊಟ್ಟರು. ಅವರು ನಮ್ಮ ಎಲ್ಲಾ ಅಗತ್ಯಗಳ ಕಾಳಜಿ ವಹಿಸಿದರು” ಎನ್ನುತ್ತಾರೆ ನುಸ್ಕಾ ಕಿಚನ್ ಗ್ರಾಹಕ ಸುಭಾಷ್ ನಾಯರ್.

ಅಲ್ಪನಾ ಅವರು ತಮ್ಮ ಉದ್ಯಮದ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದ ಸಮಯದಲ್ಲೇ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅವರ ಮಗ, ತಮ್ಮ ಐಟಿ ಕೆಲಸ ತೊರೆದು ಮನೆಗೆ ವಾಪಾಸ್ಸಾದರು. 2019 ರ ಮೇಯಲ್ಲಿ ಮಗ ವಿರಲ್ ತಮ್ಮ ತಾಯಿಯ ಉದ್ಯಮಕ್ಕೆ ಕೈ ಜೋಡಿಸಲು ನಿರ್ಧರಿಸಿದರು.

“ಈ ನಿರ್ಧಾರ ಕುಟುಂಬದ ಸದಸ್ಯರಿಗೆ ಅಷ್ಟೊಂದು ಇಷ್ಟವಾಗಿರಲಿಲ್ಲ. ನನ್ನ ಐಟಿ ಕೆಲಸವನ್ನು ಬಿಟ್ಟು, ಲಡ್ಡುಗಳನ್ನು ಮಾಡಿ, ಮಾರುವ ತಾಯಿಯ ಉದ್ಯಮಕ್ಕೆ ಏಕೆ ಸೇರುತ್ತಿದ್ದೇನೆ ಎಂಬುವುದು ಅವರಲ್ಲಿ ಬಹಳಷ್ಟು ಮಂದಿಗೆ ಅರ್ಥ ಮಾಡಿಕೊಡಿಕೊಳ್ಳಲು ಆಗಲಿಲ್ಲ” ಎನ್ನುತ್ತಾರೆ ವಿರಲ್. ಈ ಉದ್ಯಮದಲ್ಲಿ ಬೆಳವಣಿಗೆಗೆ ಅವಕಾಶ ಇದೆ ಎಂದು ಅವರು ಎಲ್ಲರನ್ನು ಒಪ್ಪಿಸಿದ್ದರಂತೆ.

“ಈ ಉದ್ಯಮವನ್ನು ಆರಂಭಿಸುವಾಗ, ಬಹಳಷ್ಟು ಮಂದಿ ನಾನು ಏಕೆ ಈ ರೀತಿ ಹಣ ಪೋಲು ಮಾಡುತ್ತಿದ್ದೇನೆ ಎಂದು ಪ್ರಶ್ನಿಸಿದ್ದರು. ಕೆಲವು ತಿಂಗಳುಗಳ ವರೆಗೆ ಮಾತ್ರ ಇದು ನಡೆಯಬಹುದು ಮತ್ತು ಜನರು ಇದರಿಂದ ಸುಸ್ತಾಗುತ್ತಾರೆ ಎಂಬುವುದು ಅವರಿಗೆ ಖಚಿತವಿತ್ತು. ಅವರಲ್ಲಿ ಯಾರ ಮಾತುಗಳನ್ನು ಕೂಡ ಕೇಳುವವಳು ನಾನಾಗಿರಲಿಲ್ಲ. ನಾನು ನನ್ನ ತಲೆ ಬಗ್ಗಿಸಿಕೊಂಡು ಕೆಲಸ ಮುಂದುವರೆಸಿದೆ” ಎನ್ನುತ್ತಾರೆ ಅಲ್ಪನಾ.

ಇದನ್ನೂ ಓದಿ: BreakFast Recipe: ಬೆಳಗಿನ ಉಪಹಾರಕ್ಕೆ 2 ಬಗೆಯ ಸಲಾಡ್ ಮಾಡಿ ತಿನ್ನಿ

ತಾಯಿ – ಮಗನ ಜೋಡಿ

ವಿರಲ್ ಉದ್ಯವನ್ನು ಸೇರಿಕೊಂಡ ಬಳಿಕ ಅಲ್ಪನಾಗೆ ಇನ್ನಷ್ಟು ಹುಮ್ಮಸ್ಸು ಬಂತು. ಮಗ, ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗವನ್ನು ನೋಡಿಕೊಂಡರೆ, ಅಲ್ಪನಾ ಅವರು ಹಲವಾರು ಸಾಮಾಗ್ರಿಗಳನ್ನು ಬಳಸಿಕೊಂಡು ಹೊಸ ಹೊಸ ರೆಸಿಪಿಗಳನ್ನು ಮತ್ತು ಪ್ರಯೋಗಗಳನ್ನು ಮಾಡುವುದರಲ್ಲಿ ತೊಡಗಿಕೊಂಡರು. 2019 ರಿಂದ ನುಸ್ಕಾ ಕಿಚನ್ 1000 ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡಿದೆ. ನುಸ್ಕಾ ಕಿಚನ್‍ನಲ್ಲಿ ಮೂರು ತಿಂಗಳ ಗರ್ಭಿಣಿಯರಿಗೆ ಅಗತ್ಯ ಇರುವ ತಿನಿಸುಗಳಿಂದ ಹಿಡಿದು, ಹೆರಿಗೆಯ ನಂತರದ ಮಹಿಳೆಯರಿಗೆ ಬೇಕಿರುವ ಆಹಾರಗಳ ವರೆಗೆ ಎಲ್ಲವೂ ಲಭ್ಯವಿದೆ.

“ಗರ್ಭಿಣಿಯರು ಎದುರಿಸುವ ಸಮಸ್ಯೆಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಮತ್ತು ಅದಕ್ಕಾಗಿ ಓಟ್ಸ್ ಲಡ್ಡು, ಶತಾವರಿ ಪೌಡರ್, ತೆಂಗಿನಕಾಯಿ ಲಡ್ಡು, ರಾಗಿ ಲಡ್ಡು ಮತ್ತು ಅಜ್ವಾಯಿನ್ ಮತ್ತು ಸೋಂತ್ ಲಡ್ಡು ಮತ್ತಿತರ ತಿನಿಸುಗಳನ್ನು ಒಳಗೊಂಡ ಪ್ರಸವದ ಬಳಿಕ ಪ್ಯಾಕೇಜನ್ನು ಕೂಡ ನಾವು ನೀಡುತ್ತೇವೆ” ಎನ್ನುತ್ತಾರೆ ಅವರು.

ಅಲ್ಪನಾ ಅವರ ನುಸ್ಕಾ ಕಿಚನ್‍ಗೆ ಬರುವ ಕೆಲವು ಗ್ರಾಹಕರಿಗೆ ಈ ಉತ್ಪನ್ನಗಳ ಪ್ರಯೋಜನಗಳ ಬಗ್ಗೆ ತಿಳಿದಿರುತ್ತದೆ, ಆದರೆ ಇನ್ನು ಕೆಲವರಿಗೆ ಅಲ್ಪನಾ ಅವರೇ ಮನವಿಕೆ ಮಾಡಿಕೊಡಬೇಕಾಗುತ್ತದಂತೆ. ಕೆಲಸವನ್ನು ತೊರೆದ ಆರಂಭದಲ್ಲಿ ವಿರಲ್‍ಗೆ , ತಾಯಿಯ ಉದ್ಯಮಕ್ಕೆ ಕೈ ಜೋಡಿಸುವ ಉದ್ದೇಶ ಇರಲಿಲ್ಲವಂತೆ. “ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಐಟಿ ಕೆಲಸವನ್ನು ತೊರೆದ ಬಳಿಕ ನಾನು ಇದನ್ನು ಸ್ಟಾಪ್ – ಗ್ಯಾಪ್ ಕೆಲಸವಾಗಿ ಪರಿಗಣಿಸಿದ್ದೆ. ನಾನು ಹೆಚ್ಚಿನ ಕೊಡುಗೆ ನೀಡಬಹುದು ಮತ್ತು ಮೌಲ್ಯವನ್ನು ಸೇರಿಸಬಹುದು ಅಂದುಕೊಂಡಿರಲಿಲ್ಲ. ಆದರೆ, ಈ ಉತ್ಪನ್ನ ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬುದನ್ನು ನೋಡಿದಾಗಲೇ ನಾನು ನಿರ್ಧರಿಸಿದ್ದು.

ಇದು ಮೌಖಿಕ ಕೆಲಸವಲ್ಲ, ಪ್ರತಿ ದಿನವೂ ಹೊಸ ಸವಾಲುಗಳು ಇರುತ್ತವೆ ಮತ್ತು ಹೊಸ ಮೈಲಿಗಲ್ಲನ್ನು ಸಾಧಿಸುತ್ತವೆ” ಎನ್ನುತ್ತಾರೆ ವಿರಲ್. ಈ ವರ್ಷ ನುಸ್ಕಾ ಕಿಚನ್ 2 ಕೋಟಿಯ ಗುರಿ ತಲುಪುವ ಪ್ರಯತ್ನಿದಲ್ಲಿದೆ. ಆದರೆ, ಕಂಪೆನಿಯ ಆದಾಯಕ್ಕಿಂತಲೂ, ತನ್ನ ಕೆಲಸ ಹೆಚ್ಚು ತೃಪ್ತಿ ನೀಡುತ್ತಿದೆ ಎನ್ನುತ್ತಾರೆ ಅಲ್ಪನಾ ತಿವಾರಿ.
Published by:Pavana HS
First published: