• Home
  • »
  • News
  • »
  • business
  • »
  • Business Idea: ಸಾಂಪ್ರದಾಯಿಕ ವಿಧಾನದಲ್ಲಿ ತೆಂಗಿನ ಎಣ್ಣೆ ತಯಾರಿಕೆ, ಕೇರಳದ ತಾಯಿ-ಮಗಳ ಯಶಸ್ಸಿನ ಕಥೆ ಇದು!

Business Idea: ಸಾಂಪ್ರದಾಯಿಕ ವಿಧಾನದಲ್ಲಿ ತೆಂಗಿನ ಎಣ್ಣೆ ತಯಾರಿಕೆ, ಕೇರಳದ ತಾಯಿ-ಮಗಳ ಯಶಸ್ಸಿನ ಕಥೆ ಇದು!

ಪಾರ್ವತಿ ಆನಂದ್, ಜಯಾ

ಪಾರ್ವತಿ ಆನಂದ್, ಜಯಾ

ಚಿಕ್ಕ ಮಕ್ಕಳಿಗೆ ಅಥವಾ ಶಿಶುಗಳಿಗೆ ಹಚ್ಚುವ ವರ್ಜಿನ್ ತೆಂಗಿನ ಎಣ್ಣೆಯ (Virgin Coconut Oil) ಬಗ್ಗೆ ನೀವು ಕೇಳಿರಬಹುದು. ಸಾಮಾನ್ಯ ತೆಂಗಿನೆಣ್ಣೆಗಿಂತ ಭಿನ್ನವಾಗಿರುವ ವರ್ಜಿನ್‌ ತೆಂಗಿನ ಎಣ್ಣೆಯು ಸಾಕಷ್ಟು ಪ್ರಯೋಜನಗಳನ್ನೂ ಹೊಂದಿದೆ.

  • Share this:

ಚಿಕ್ಕ ಮಕ್ಕಳಿಗೆ ಅಥವಾ ಶಿಶುಗಳಿಗೆ ಹಚ್ಚುವ ವರ್ಜಿನ್ ತೆಂಗಿನ ಎಣ್ಣೆಯ (Virgin Coconut Oil) ಬಗ್ಗೆ ನೀವು ಕೇಳಿರಬಹುದು. ಸಾಮಾನ್ಯ ತೆಂಗಿನೆಣ್ಣೆಗಿಂತ ಭಿನ್ನವಾಗಿರುವ ವರ್ಜಿನ್‌ ತೆಂಗಿನ ಎಣ್ಣೆಯು ಸಾಕಷ್ಟು ಪ್ರಯೋಜನಗಳನ್ನೂ ಹೊಂದಿದೆ. ಇದನ್ನು ಸಾಂಪ್ರದಾಯಿಕ ವಿಧಾನ (Traditional Method) ದಲ್ಲಿ ತಯಾರಿಸುವ ಮೂಲಕ ಇಂಥದ್ದೊಂದು ಉದ್ದಿಮೆಯನ್ನು ಕೇರಳ (Kerala) ದ ಈ ತಾಯಿ – ಮಗಳು ಸೇರಿ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅಂದಹಾಗೆ ಕೇರಳದ ಜಯಾ (Jaya) ಹಾಗೂ ಅವರ ಮಗಳು ಪಾರ್ವತಿ ಅವನೂರ್‌ (Parvati)  ಸಾಂಕ್ರಾಮಿಕ ಕೋವಿಡ್‌ (Covid) ಸಮಯದಲ್ಲಿ ಈ ಕಲ್ಪನೆಯನ್ನು ರೂಪಿಸಿದರು. ಸ್ವತಃ ಡಿಜಿಟಲ್‌ ಮಾರ್ಕೆಟರ್‌ ಆಗಿ ಕೆಲಸ ಮಾಡುತ್ತಿದ್ದ ಪಾರ್ವತಿ, ಪೂರ್ವಿನಾ ಅನ್ನೋ ಬ್ರಾಂಡ್‌ ಹೆಸರಿನಲ್ಲಿ ಕಂಪನಿಯನ್ನು ಸ್ಥಾಪಿಸಿದರು.


ತೈಲವನ್ನು ತಯಾರಿಸುವ ಸಂಕೀರ್ಣ ವಿಧಾನ


“ಈ ತೈಲ ತಯಾರಿಕೆ ಪ್ರಕ್ರಿಯೆಯು ಸುಲಭವಲ್ಲ. ಸುಮಾರು 250 ತೆಂಗಿನಕಾಯಿಗಳಿಂದ ಕೇವಲ 10 ಲೀಟರ್ ಎಣ್ಣೆಯನ್ನು ತೆಗೆಯಬಹುದು. ಆದರೆ ನಾವು ಪ್ರಕ್ರಿಯೆಯಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ.


ಅಮ್ಮ-ಮಗಳ ಬ್ಯುಸಿನೆಸ್​ಗೆ ಭಾರೀ ಡಿಮ್ಯಾಂಡ್​!


ತೆಂಗಿನಕಾಯಿಯನ್ನು ಕತ್ತರಿಸುವುದು, ಚೂರು ಮಾಡುವುದು, ಹಾಲನ್ನಾಗಿ ಪರಿವರ್ತಿಸುವುದು ಮತ್ತು ಕುದಿಸುವುದರ ಜೊತೆಗೆ ನಮ್ಮ ಬಳಿ ಇರುವ ಬೃಹತ್‌ ಸಾಂಪ್ರದಾಯಿಕ ಉರುಳಿ (ಬೌಲ್)‌ ಯಲ್ಲಿ ಈ ಎಣ್ಣೆ ತಯಾರಿಸುತ್ತೇವೆ ಎಂದು ಜಯಾ ವಿವರಿಸುತ್ತಾರೆ.ಅಲ್ಲದೇ, ಪ್ರಕ್ರಿಯೆಗೆ ಅಗತ್ಯವಾದ ತೆಂಗಿನಕಾಯಿಗಳನ್ನು ಅವರ ಸ್ವಂತ ಜಮೀನಿನಲ್ಲಿ ಬೆಳೆಯಲಾಗುತ್ತದೆ. ಮತ್ತೆ ಕೆಲವಷ್ಟನ್ನು ಹತ್ತಿರದ ಹೊಲಗಳಿಂದ ಸಂಗ್ರಹಿಸಲಾಗುತ್ತದೆ.


"ಖರೀದಿಸುವ ಮೊದಲು ಅವರೆಲ್ಲರೂ ಸಾವಯವ ಬೆಳೆಯುವ ವಿಧಾನಗಳನ್ನು ಅನುಸರಿಸುತ್ತಾರೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ" ಎಂಬುದಾಗಿ ಜಯಾ ಹೇಳುತ್ತಾರೆ.


ಇದನ್ನೂ ಓದಿ: ಊಟಕ್ಕೆ ಇದು ಬೇಕೇ ಬೇಕು! ಮನೆಯಲ್ಲೇ ತಯಾರಿಸಿ, ಕೈ ತುಂಬಾ ಹಣ ಗಳಿಸಿ!


ವರ್ಜಿನ್‌ ತೆಂಗಿನ ಎಣ್ಣೆಯ ಪ್ರಯೋಜನ ಹಲವು


ಈ ಎಣ್ಣೆಯ ವಿವಿಧ ಪ್ರಯೋಜನಗಳ ಬಗ್ಗೆ ಮಾತನಾಡುತ್ತಾ ಪಾರ್ವತಿ ಹೇಳುತ್ತಾರೆ, “ನನ್ನ ಅಜ್ಜನಿಗೆ ಆಲ್ಝೈಮರ್ನ ಕಾಯಿಲೆ ಇತ್ತು. ಆಯುರ್ವೇದ ವೈದ್ಯರು ಅದರ ತೀವ್ರತೆಯನ್ನು ಕಡಿಮೆ ಮಾಡಲು ಸಾಂಪ್ರದಾಯಿಕವಾಗಿ ತಯಾರಿಸಿದ ವರ್ಜಿನ್‌ ಕೊಕೊನಟ್‌ ಆಯಿಲ್‌ ದಿನಕ್ಕೆ ಎರಡು ಬಾರಿ ನೀಡುವಂತೆ ಹೇಳಿದ್ದರು. ಅಲ್ದೇ ಆ ರೋಗ ಆನುವಂಶಿಕವಾಗಿರುವುದರಿಂದ ನಾನು ಹಾಗೂ ನನ್ನ ತಂದೆ ಪ್ರತಿ ದಿನ 15 ಮಿಲಿ ಸೇವಿಸಲು ಪ್ರಾರಂಭಿಸಿದೆವು" ಎನ್ನುತ್ತಾರೆ.


"ಉತ್ಪನ್ನವು 100 ಪ್ರತಿಶತ ಖಾದ್ಯವಾಗಿದೆ. ನಾನು ಇದನ್ನು ನನ್ನ ಮಗುವಿಗೆ ಅವಳು ಹುಟ್ಟಿದ ಎಂಟನೇ ದಿನದಿಂದ ನೀಡುತ್ತಿದ್ದೇನೆ. ಅಲ್ದೇ ಇದನ್ನು ಸಲಾಡ್ ಡ್ರೆಸ್ಸಿಂಗ್ ಆಗಿಯೂ ಬಳಸಬಹುದು.


ಜೀರ್ಣಕ್ರಿಯೆ ಸಮಸ್ಯೆಗೆ ರಾಮಬಾಣ!


ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಹೋಗಲಾಡಿಸಲು ಹಾಗೂ ಬಾಯಲ್ಲಿ ಹುಣ್ಣುಗಳಾದರೆ ನೀವು ಅದನ್ನು ಹಾಗೆಯೇ ಸೇವಿಸಬಹುದು" ಎಂದು ಪಾರ್ವತಿ ಹೇಳಿಕೊಳ್ಳುತ್ತಾರೆ. ಅಲ್ದೇ ಇದನ್ನು ಮಾಯಿಶ್ಚರೈಸರ್, ಮೇಕ್ಅಪ್ ರಿಮೂವರ್‌ ಮತ್ತು ಸುಕ್ಕುಗಳನ್ನು ತಡೆಯಲು ಬಳಸಬಹುದು.


ಅಂದಹಾಗೆ ಈ ಬ್ರಾಂಡ್‌ನ ಉತ್ಪಾದನಾ ಘಟಕವು ಮಲಪ್ಪುರಂನ ಅಣಮಂಗಾಡ್‌ನಲ್ಲಿ ಅವರ ಮನೆಯ ಸಮೀಪದಲ್ಲಿದೆ.“ನಮ್ಮ ಉದ್ಯೋಗಿಗಳಲ್ಲಿ ಸುಮಾರು 90 ಪ್ರತಿಶತ ಮಹಿಳೆಯರಿದ್ದಾರೆ. ಕೆಲವು ಶ್ರಮದಾಯಕ ಕೆಲಸಗಳಿರುತ್ತವೆ. ಅದಕ್ಕಾಗಿ ಕೆಲವು ಪುರುಷರು ಕೆಲಸ ಮಾಡುತ್ತಾರೆ ಎಂದು ಜಯಾ ವಿವರಿಸುತ್ತಾರೆ.


ಇದನ್ನೂ ಓದಿ: ಹವ್ಯಾಸದಿಂದ ಸಣ್ಣ ಉದ್ಯಮವಾಗಿ ಬೆಳೆದ ಬಬಲ್‌ ಟ್ರೋವ್​, ಈ ಹ್ಯಾಂಡ್‌ಮೇಡ್‌ ಸೋಪ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್!


ತಿಂಗಳಿಗೆ 250 ಲೀ. ಮಾರಾಟ!


ಅಮೆಜಾನ್‌ನಂತಹ ಎಲ್ಲಾ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಾಗೂ ಬೇಬಿಕೇರ್, ಬೇಬಿಬಟನ್‌ಗಳಂತಹ ಬೇಬಿ ಉತ್ಪನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಉತ್ಪನ್ನಗಳು ಲಭ್ಯವಿದೆ.ಜಮ್ಮು ಮತ್ತು ಕಾಶ್ಮೀರ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಈಶಾನ್ಯದ ಕೆಲವು ಭಾಗಗಳ ಗ್ರಾಹಕರಿಗೆ ಸೇವೆ ಸಲ್ಲಿಸಿದ್ದಾರೆ. ಇಂದು, ತಿಂಗಳಿಗೆ 250 ಲೀಟರ್ ತೈಲ ಮಾರಾಟವಾಗುತ್ತದೆ.


"ಜನರಿಗೆ ಈ ಉತ್ಪನ್ನಗಳ ಬೆಲೆ ಸ್ವಲ್ಪ ಹೆಚ್ಚು ಅನ್ನಿಸಬಹುದು. ಆದರೆ ಇದು ಹಲವಾರು ಪ್ರಕ್ರಿಯೆಗಳಿಗೆ ಒಳಗಾಗುವುದರಿಂದ ಸ್ವಲ್ಪ ದುಬಾರಿಯಾಗುತ್ತದೆ ಎನ್ನುತ್ತಾರೆ ಪಾರ್ವತಿ. ಅಲ್ದೇ, “ಉತ್ಪನ್ನವನ್ನು ಸರಳವಾಗಿ ಮಾರಾಟ ಮಾಡುವುದರ ಹೊರತಾಗಿ, ವರ್ಜಿನ್‌ ತೆಂಗಿನ ಎಣ್ಣೆ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸುವುದು ನಮ್ಮ ಕನಸು" ಎಂಬುದಾಗಿ ಪಾರ್ವತಿ ಹೇಳುತ್ತಾರೆ.

Published by:ವಾಸುದೇವ್ ಎಂ
First published: