Soap Chemistry: ಕೋವಿಡ್ ಅವಧಿಯಲ್ಲಿ ಹುಟ್ಟಿದ ತಾಯಿ-ಮಗಳ ಉದ್ಯಮ ಪಯಣ; ಈಗ ಹೇಗೆ ಬೆಳೆದಿದೆ ನೋಡಿ

ಕೋವಿಡ್ ಸಾಂಕ್ರಾಮಿಕ ತಂದೊಡ್ಡಿದ ಸಂಕಟ ಮತ್ತು ಲಾಕ್‍ಡೌನ್ ಅವಧಿ , ಬಹಳಷ್ಟು ಮಹಿಳೆಯರು ಉದ್ಯಮಗಳನ್ನು ಆರಂಭಿಸಿ, ಸ್ವಾವಲಂಬನೆಯ ದಾರಿಯಲ್ಲಿ ಹೆಜ್ಜೆ ಹಾಕುವಂತೆ ಪ್ರೇರೇಪಿಸಿದೆ. ನಮ್ಮ ದೇಶದ ಹಲವೆಡೆ ಅಂತಹ ಮಹಿಳೆಯ ಸ್ಪೂರ್ತಿದಾಯಕ ಕಥೆಗಳು ಕೇಳಲು, ನೋಡಲು ಸಿಗುತ್ತವೆ. ಅಂತದ್ದೇ ಒಂದು ತಾಯಿ – ಮಗಳ ಉದ್ಯಮ ಪಯಣದ ಸಾಧನೆ ಕುರಿತ ಮಾಹಿತಿ ಇಲ್ಲಿದೆ.

ಪ್ರತೀಕ್ಷಾ ಮತ್ತು ವಮ ಸಂಗೋಯಿ

ಪ್ರತೀಕ್ಷಾ ಮತ್ತು ವಮ ಸಂಗೋಯಿ

  • Share this:
ಕೋವಿಡ್ -19 (Covide-19) ಸಾಂಕ್ರಾಮಿಕ ಕಾರಣದಿಂದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಂದಲ್ಲ ಒಂದು ಬದಲಾವಣೆಯನ್ನು ಕಾಣುವಂತಾಯಿತು. ಜೀವ ಮತ್ತು ಜೀವಿಸುವ ಮಾರ್ಗವನ್ನು ಕಳೆದುಕೊಂಡವರು ಒಂದೆಡೆಯಾದರೆ, ಕಳೆದುಕೊಂಡ ಜೀವನವನ್ನು (Life) ಕಟ್ಟಿಕೊಂಡವರು ಇನ್ನೊಂದೆಡೆ. ಕೋವಿಡ್ ಸಾಂಕ್ರಾಮಿಕ ತಂದೊಡ್ಡಿದ ಸಂಕಟ ಮತ್ತು ಲಾಕ್‍ಡೌನ್ ಅವಧಿ (Lockdown Period) , ಬಹಳಷ್ಟು ಮಹಿಳೆಯರು ಉದ್ಯಮಗಳನ್ನು ಆರಂಭಿಸಿ, ಸ್ವಾವಲಂಬನೆಯ ದಾರಿಯಲ್ಲಿ ಹೆಜ್ಜೆ ಹಾಕುವಂತೆ ಪ್ರೇರೇಪಿಸಿದೆ. ನಮ್ಮ ದೇಶದ ಹಲವೆಡೆ ಅಂತಹ ಮಹಿಳೆಯ (Women) ಸ್ಪೂರ್ತಿದಾಯಕ ಕಥೆಗಳು ಕೇಳಲು, ನೋಡಲು ಸಿಗುತ್ತವೆ. ಅಂತದ್ದೇ ಒಂದು ತಾಯಿ – ಮಗಳ (Mother- Daughter) ಉದ್ಯಮ ಪಯಣದ ಸಾಧನೆ ಕುರಿತ ಮಾಹಿತಿ ಇಲ್ಲಿದೆ.

ಕೋವಿಡ್ -19 ಸಾಂಕ್ರಾಮಿಕದ ನಡುವೆ ಮನೆಯಲ್ಲೇ ಸಾಬೂನು ಉದ್ಯಮವನ್ನು ಪ್ರಾರಂಭಿಸಿ, ಇದೀಗ ಜಾಗತಿಕ ಮಟ್ಟದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಪ್ರತೀಕ್ಷಾ ಮತ್ತು ವಮ ಸಂಗೋಯಿ ಅವರ ಕಥೆ ಇದು.

ಸೋಪ್ ಕೆಮೆಸ್ಟ್ರಿ ಸಾಬೂನು ಉದ್ಯಮ
ಅವರಿಬ್ಬರು, ಮುಂಬೈನ ದಾದರ್‍ನ ಮನೆಯಿಂದಲೇ ತಾವು ಆರಂಭಿಸಿದ ಸೋಪ್ ಕೆಮೆಸ್ಟ್ರಿ ಸಾಬೂನು ಉದ್ಯಮದ ಬಗ್ಗೆ ಇಲ್ಲಿ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಕೇವಲ ಒಂದು ವರ್ಷದ ಅವಧಿಯಲ್ಲಿ ಸಾಬೂನುಗಳು, ಬಾಡಿ ವಾಶ್, ಬಾಡಿ ಸ್ಕ್ರಬ್, ವಿಪ್ಡ್ ಕ್ರೀಂ ಸಾಬೂನು, ಬಾಡಿ ಸಾಲ್ಟ್, ಹೇರ್ ರಿಮೂವಲ್ ಪೌಡರ್, ಮಾಯಿಸ್ಚರೈಸರ್ ಸೇರಿದಂತೆ 60 ವಿಭಿನ್ನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಹೆಗ್ಗಳಿಕೆ ಇವರದ್ದು. ಅವರ ಉತ್ಪನ್ನಗಳು ದೇಶದಾದ್ಯಂತ ಮಾತ್ರವಲ್ಲ, ಯೂಎಸ್‍ನಲ್ಲೂ ಗ್ರಾಹಕರಿಗೆ ಲಭ್ಯ ಇವೆ.

ಸಣ್ಣ ಆರಂಭ, ದೊಡ್ಡ ಅವಕಾಶ
2020 ರಲ್ಲಿ , ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದ ಇಡೀ ಜಗತ್ತೇ ನಿಂತು ಹೋದಂತಾಗಿತ್ತು. ಎಲ್ಲರೂ ಮನೆಯಲ್ಲೇ ಬಂಧಿಗಳಾಗಿ ಜೀವ ಭಯ ಮತ್ತು ಭವಿಷ್ಯದ ಚಿಂತೆಯಲ್ಲಿ ಒದ್ದಾಡುತ್ತಿದ್ದರೆ, ಗೃಹಿಣಿಯರಿಗಂತೂ ಮನೆಯ ಕೆಲಸ ಮತ್ತು ಇತರ ಜವಾಬ್ದಾರಿಗಳ ನಡುವೆ ಒದ್ದಾಡಿದ , ಕಷ್ಟಕರ ಅವಧಿ ಅದಾಗಿತ್ತು. ಆದರೆ, ಸಮಯ ಕಳೆದಂತೆ, ಹಲವಾರು ಗೃಹಿಣಿಯರು ತಮಗಾಗಿ ಸಮಯ ಹೊಂದಿಸಿಕೊಳ್ಳಲು ಮತ್ತು ಕಳೆದು ಹೋದ ತಮ್ಮ ಪ್ಯಾಶನ್ ಅನ್ನು ಮತ್ತೆ ಮುಂದುವರೆಸಲು, ಹೊಸ ಉತ್ಸಾಹದೊಂದಿಗೆ ಎದ್ದು ನಿಂತರು. ಅವರಲ್ಲಿ ಬಹಳಷ್ಟು ಮಂದಿಗೆ ಸಾಧನೆಯ ಮೆಟ್ಟಿಲು ಏರಲು, ಅವರ ಮಕ್ಕಳು ಕೂಡ ಸಹಾಯಕ್ಕೆ ಬಂದರು. 50 ವರ್ಷದ ಪ್ರತೀಕ್ಷಾ ಕೂಡ ಅಂತಹ ಮಹಿಳೆಯರಲ್ಲಿ ಒಬ್ಬರು.

ತನ್ನ ಮನೆ ಮತ್ತು ಮಕ್ಕಳ ಜವಾಬ್ದಾರಿಯಲ್ಲಿ ಇಷ್ಟು ವರ್ಷಗಳನ್ನು ಕಳೆದಿದ್ದ ಪ್ರತೀಕ್ಷಾ, ಕೋವಿಡ್ ಸಮಯದಲ್ಲಿ ಉದ್ಯಮಶೀಲತೆಯ ಕಡೆಗೆ ಮುಖ ಮಾಡಿದರು. ಮಕ್ಕಳು ಮತ್ತು ಮನೆಯ ಜವಾಬ್ಧಾರಿಯನ್ನು ನೋಡಿಕೊಳ್ಳುವುದರ ಜೊತೆಗೆ, ತನಗಾಗಿ ಬೇರೆ ಏನನ್ನಾದರೂ ಮಾಡಬೇಕು ಎಂಬ ಹಂಬಲ ಮೊದಲಿನಿಂಲೂ ಇತ್ತು. ಆದರೆ ಸಮಯದ ಕೊರತೆಯಿಂದಾಗಿ ಅದರ ಬಗ್ಗೆ ಯೋಚಿಸಲು ಸಾಧ್ಯವೇ ಆಗಲಿಲ್ಲ ಎಂದು ಹೇಳುತ್ತಾರೆ ಪ್ರತೀಕ್ಷಾ.

ಹ್ಯಾಂಡ್‍ಮೇಡ್ ಚಾಕಲೇಟ್ ಉದ್ಯಮ
“ನಾನು ಮೊದಲು, ಸಣ್ಣ ಮಟ್ಟಿನ ಹ್ಯಾಂಡ್‍ಮೇಡ್ ಚಾಕಲೇಟ್ ಉದ್ಯಮವನ್ನು ಮಾಡಲು ಪ್ರಯತ್ನಿಸಿದೆ, ಆದರೆ ಕುಟುಂಬದಲ್ಲಿ ಯಾರೂ ಅದನ್ನು ಪ್ರೋತ್ಸಾಹಿಸಲಿಲ್ಲ. ಆದರೆ, ಸಾಂಕ್ರಾಮಿಕದ ಸಂದರ್ಭದಲ್ಲಿ ನನ್ನ ಮಗಳು ವಮಾ ಉದ್ಯಮವೊಂದನ್ನು ಆರಂಭಿಸುವ ಬಗ್ಗೆ ಆಸಕ್ತಿ ತೋರಿಸಿದಾಗ, ನಾನು ಮತ್ತು ಅವಳು ಜೊತೆಯಾಗಿ ಸೋಪ್ ಕೆಮೆಸ್ಟ್ರಿಯನ್ನು ಆರಂಭಿಸಿದೆವು” ಎಂದು ತಮ್ಮ ಉದ್ಯಮ ಹುಟ್ಟಿಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ ಪ್ರತೀಕ್ಷಾ.

ಸಾಬೂನು ಉದ್ಯಮ ಶುರುವಾಗಿದ್ದು ಹೀಗೆ
ಪ್ರತೀಕ್ಷಾ ಅವರು ಮುಂಬೈಯಲ್ಲಿ ಸಾಬೂನು ತಯಾರಿಸುವ ಬಗ್ಗೆ ಒಂದು ಕೋರ್ಸ್ ಅನ್ನು ಮಾಡಿಕೊಂಡಿದ್ದರು. ಲಾಕ್‍ಡೌನ್ ಸಮಯದ ಬಿಡುವಿನ ವೇಳೆಯಲ್ಲಿ, ಯ್ಯೂಟ್ಯೂಬ್ ಟುಟ್ಯೋರಿಯಲ್‍ಗಳನ್ನು ವೀಕ್ಷಿಸುವ ಮೂಲಕ ಹೊಸ ಸಂಯೋಜನೆಗಳನ್ನು ಆಕೆ ಪ್ರಯತ್ನಿಸುತ್ತಿದ್ದರು. ಆ ಪ್ರಯತ್ನಗಳು ಬೇರೆಯವರಿಗೂ ಉಪಯೋಗ ಆಗುವಂತಹ ಕ್ಷಣವೊಂದು ಬಂತು; ಮೊಡವೆಯ ಸಮಸ್ಯೆಯಿಂದ ಬಳಲುತ್ತಿದ್ದ ನೆರೆಮನೆಯವರೊಬ್ಬರ ಬೇಡಿಕೆಯ ಮೇರೆಗೆ ಪ್ರತೀಕ್ಷಾ ಬೇವಿನ ಸಾಮೂನು ತಯಾರಿಸಿ ಕೊಟ್ಟರು. ಆ ಸಾಬೂನು ಮೊಡವೆಗಳನ್ನು ಗುಣ ಪಡಿಸಲು ಪರಿಣಾಮಕಾರಿ ಆಗಿದ್ದೇ ತಡ, ಪ್ರತೀಕ್ಷಾ ಮತ್ತು ಅವರ ಮಗಳಿಗೆ ವ್ಯಾಪಾರದ ಅವಕಾಶದ ಬಾಗಿಲು ತೆರೆದುಕೊಂಡಿತು.

ಇದನ್ನೂ ಓದಿ: Success Story: ಕಷ್ಟಗಳನ್ನೇ ಎದುರಿಸಿ ಸ್ವಂತ ಬ್ರಾಂಡ್ ಕಟ್ಟಿದ ಕರ್ನಾಟಕದ ಮಹಿಳೆ!

ಆರಂಭದಲ್ಲಿ 2 ಲಕ್ಷ ರೂ.ಗಳನ್ನು ಹೂಡಿಕೆ ಮಾಡುವ ಮೂಲಕ ತಾವು ಸೋಪುಗಳನ್ನು ತಯಾರಿಸಿ, ತಮ್ಮ ಸೊಸೈಟಿಯಲ್ಲಿ ಮಾರಲು ಆರಂಭಿಸಿದೆವು ಎನ್ನುತ್ತಾರೆ ವಮಾ. ಸ್ನೇಹಿತರು ಮತ್ತು ಕುಟುಂಬದವರ ಮೂಲಕ ಆ ಸೋಪುಗಳ ಗುಣಮಟ್ಟದ ಸಂಗತಿ ಬಾಯಿಯಿಂದ ಬಾಯಿಗೆ ಹರಡಿ, ಇನ್ನಷು ಗ್ರಾಹಕರು ಸಿಗುವಂತಾಯಿತು.

ಸಾಬೂನು ತಯಾರಿಕೆಗೆ ಸಾಮಾಗ್ರಿಗಳ ಆಮದು
“ನಾವು ಅತ್ಯಂತ ಧನಾತ್ಮಕವಾದ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದೆವು ಮತ್ತು ಜನರು ತಾವು ಬಳಲುತ್ತಿರುವ ವಿಭಿನ್ನ ಚರ್ಮದ ಕಾಯಿಲೆಗಳ ಕುರಿತು ನಮ್ಮನ್ನು ಸಂಪರ್ಕಿಸುತ್ತಿದ್ದರು. ಅದು ಖುಷಿ ನೀಡುವ ಸಂಗತಿಯಾಗಿತ್ತು ಮತ್ತು ನಮ್ಮನ್ನು ಮುಂದೆ ಸಾಗುತ್ತಿರುವಂತೆ ಪ್ರೇರಣೆ ನೀಡಿತು” ಎನ್ನುತ್ತಾರೆ ಅವರು.

ಸೋಪ್ ಕೆಮೆಸ್ಟ್ರಿಯ ಎಲ್ಲಾ ಉತ್ಪನ್ನಗಳನ್ನು ಮುಂಬೈಯಲ್ಲಿ ಇರುವ ಲ್ಯಾಬೊರೇಟರಿ ಒಂದರಲ್ಲಿ ಪರೀಕ್ಷೆ ಮಾಡಲಾಗುತ್ತದೆ. ತಾವು ತಯಾರಿಸುವ ಉತ್ಪನ್ನಗಳ ಕಚ್ಚಾ ವಸ್ತುಗಳಲ್ಲಿ ಹೆಚ್ಚಿನವು ಸ್ಥಳೀಯವಾಗಿಯೇ ದೊರೆಯುವಂತವುಗಳು, ಆದರೆ ಫ್ರೆಂಚ್ ಕ್ಲೇಯಂತಹ ಕೆಲವು ಕಚ್ಚಾ ವಸ್ತುಗಳು ಮತ್ತು ಇತರ ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ ವಮಾ.

ಬ್ರಾಂಡ್ ಪ್ರಚಾರ
ಮಾರುಕಟ್ಟೆಯಲ್ಲಿ ಇರುವ ದೊಡ್ಡ ಉದ್ಯಮಗಳ ನಡುವೆ ಸಣ್ಣ ಉದ್ಯಮಗಳು ತಮ್ಮ ಅಸ್ಥಿತ್ವ ಸ್ಥಾಪಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಈ ವಿಷಯದಲ್ಲಿ ಪ್ರತೀಕ್ಷಾ ಮತ್ತು ವಮಾ ಅವರ ಸೋಪ್ ಕೆಮೆಸ್ಟ್ರಿ ಕೂಡ ಹೊರತಾಗಿರಲಿಲ್ಲ. ಅದಕ್ಕಾಗಿ ಅವರು ತುಂಬಾ ಕಠಿಣ ಪರಿಶ್ರಮ ಪಡಬೇಕಾಯಿತು ಮತ್ತು 2021 ರಲ್ಲಿ ಅವರು ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮೇಳಗಳಲ್ಲಿ ಪ್ರದರ್ಶಿಸಲು ಆರಂಭಿಸಿದರು. ಜೊತೆ ಜೊತೆಗೆ, ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂನಲ್ಲೂ ತಮ್ಮ ಡಿಜಿಟಲ್ ಅಸ್ಥಿತ್ವವನ್ನು ಸ್ಥಾಪಿಸಿಕೊಂಡರು.

ಇದನ್ನೂ ಓದಿ: Jaatre Ice cream: ತೆಂಗಿನ ಚಿಪ್ಪಿನಲ್ಲಿ 'ಜಾತ್ರೆ’ ಐಸ್‍ಕ್ರೀಮ್! ಅಸಲಿ ರುಚಿಯಿಂದ ಗೆದ್ದ ದೆಹಲಿಯ ದಂಪತಿ

“ನಾವು ಸಣ್ಣ ಉದ್ಯಮಿಗಳಾಗಿದ್ದೆವು ಮತ್ತು ಮಾರುಕಟ್ಟೆ ಕೈಯಿಂದ ತಯಾರಿಸಿದ ಉತ್ಪನ್ನಗಳ ವಿಭಾಗದಲ್ಲೂ ದೊಡ್ಡ ಉದ್ಯಮಿಗಳಿಂದ ತುಂಬಿ ಹೋಗಿತ್ತು. ಅವರ ನಡುವೆ ಎದ್ದು ಕಾಣಲು, ನಾವು ಒಂದು ಹೆಸರನ್ನು ಸ್ಥಾಪಿಸಬೇಕಿತ್ತು. ನಾವು ಡಿಜಿಟಲ್‍ನಲ್ಲಿಯೂ ಬೆಳೆಯುತ್ತಿದ್ದೇವೆ , ಆದರೆ ಗ್ರಾಹಕರನ್ನು ವೈಯುಕ್ತಿಕವಾಗಿ ಭೇಟಿ ಆಗುವುದು ನಮಗೆ ಅಪಾರ ಸ್ಫೂರ್ತಿ ನೀಡುತ್ತದೆ” ಎನ್ನುತ್ತಾರೆ ವಮಾ.

ಒಂದು ವರ್ಷದ ಅವಧಿಯಲ್ಲಿ ಸೋಪ್ ಕೆಮೆಸ್ಟ್ರಿ 20 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ತನ್ನ ಉತ್ಪನ್ನಗಳನ್ನು ಪ್ರದರ್ಶಿಸಿದೆ. ಕಳೆದ ವರ್ಷ ಈ ತಾಯಿ ಮಗಳ ಜೋಡಿ, ಗೋವಾದಲ್ಲಿ ನಡೆದ ಪ್ರದರ್ಶನ ಒಂದರಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದರು ಮತ್ತು ಅಲ್ಲಿ ಅವರಿಗೆ ಗ್ರಾಹಕರಿಂದ ಅತ್ಯಂತ ಅದ್ಭುತವಾದ ಪ್ರತಿಕ್ರಿಯೆ ದೊರಕಿತ್ತು.

ಸವಾಲುಗಳು ಮತ್ತು ಸ್ಪರ್ಧೆ
ಪರ್ಸನಲ್ ವಾಶ್ ಉತ್ಪನ್ನಗಳ ಉದ್ಯಮದಲ್ಲಿ, ಹೆಚ್ಚಿನ ಬೇಡಿಕೆ ಇರುವುದು ಸೋಪುಗಳಿಗೆ, ಮುಖ್ಯವಾಗಿ ಉದ್ಯಮ ನಡೆಯಲ್ಪಡುತ್ತಿರುವುದು ಅವುಗಳಿಂದಲೇ. ಆದರೆ, ಭಾರತ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶವರ್ ಜೆಲ್ ಉತ್ಪನ್ನಗಳು ಕೂಡ ವೇಗವಾಗಿ ವಿಸ್ತರಿಸುತ್ತಿವೆ. ಈ ವಿಭಾಗದಲ್ಲಿಯೂ ಕೂಡ ಸಾಕಷ್ಟು ಅವಕಾಶಗಳನ್ನು ಪಡೆಯಲು ಸಾಧ್ಯವಿದೆ ಎನ್ನುತ್ತಾರೆ ವಮಾ. ಹಾಗಾಗಿ, ವಮಾ ಮತ್ತು ಅವರ ತಾಯಿ, ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದ ತಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಸಂಯೋಜನೆಗಳನ್ನು ಪ್ರಯೋಗಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ಸೋಪ್ ಕೆಮೆಸ್ಟ್ರಿ ಉತ್ಪನ್ನವು, ಖಾದಿ, ಅವೀಮಿ ಹರ್ಬಲ್ ಮತ್ತು ಘರ್ ಸೋಪ್ ಉತ್ಪನ್ನಗಳ ಜೊತೆ ಸ್ಪರ್ಧಿಸುತ್ತಿದೆ. ವಮಾ ಹೇಳುವ ಪ್ರಕಾರ, ಸೋಪ್ ಕೆಮೆಸ್ಟ್ರಿಯಲ್ಲಿ, ಪಾರದರ್ಶಕತೆ ಮತ್ತು ನೈತಿಕ ಮೂಲ ಎದ್ದು ಕಾಣುತ್ತದೆ. “ ನಮ್ಮ ಉತ್ಪನ್ನಗಳು ಗಡಸು –ಮುಕ್ತ , ಎಸ್‍ಎಲ್‍ಎಸ್ ಮತ್ತು ಪ್ಯಾರಮಿನ್ ಮುಕ್ತ ಹಾಗೂ ಕಠಿಣ ರಾಸಾಯನಿಕ- ಮುಕ್ತವಾಗಿವೆ” ಎನ್ನುತ್ತಾರೆ ವಮಾ. ಸೋಪ್ ಕೆಮೆಸ್ಟ್ರಿ ಉತ್ಪನ್ನಗಳ ಬೆಲೆ 200 ರೂ. ಗಳಿಂದ 845 ರೂ.ಗಳ ವರೆಗೆ ಇದೆ.

ಭವಿಷ್ಯದ ಯೋಜನೆ
ತಮ್ಮ ಸೋಪ್ ಕೆಮೆಸ್ಟ್ರಿ ಉದ್ಯಮದ ಭವಿಷ್ಯದ ಬಗ್ಗೆ ವಮಾ ಮತ್ತು ಪ್ರತೀಕ್ಷಾ ಅವರು ಸಾಕಷ್ಟು ಯೋಜನೆಗಳನ್ನು ಹೊಂದಿದ್ದಾರೆ. ಅವರು ಸದ್ಯದಲ್ಲಿಯೇ ಹೊಸ ವಿಭಾಗಗಳನ್ನು ಕೂಡ ಪ್ರವೇಶಿಸಲಿದ್ದಾರೆ ಮತ್ತು ಈ ವರ್ಷ ಹೊಸ ಮಾರುಕಟ್ಟೆಗಳಿಗೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲಿದ್ದಾರೆ.

ಇದನ್ನೂ ಓದಿ: Business Startup: ಅಮೆರಿಕದಲ್ಲಿ ವಾರಾಣಸಿ ಸಹೋದರರ ಜೋಡಿಯ ಸ್ಟಾರ್ಟಪ್! ಈ ಸಂಸ್ಥೆಯ ಫೋಕಸ್ ಏನು ಗೊತ್ತೆ?

ತಾವು ಸೋಪ್ ಕೆಮೆಸ್ಟ್ರಿ ವೆಬ್‍ಸೈಟ್ ರಚನೆಯ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ ಮತ್ತು ನೈಕಾ ಹಾಗೂ ಇತರ ಇ-ಕಾಮರ್ಸ್ ಪೋರ್ಟಲ್‍ಗಳ ಜೊತೆ ತಮ್ಮ ಬ್ರಾಂಡ್ ಲಿಸ್ಟಿಂಗ್ ಕುರಿತ ಮಾತುಕತೆ ನಡೆಯುತ್ತಿದೆ ಎನ್ನುತ್ತಾರೆ ವಮಾ. ಈ ವರ್ಷ ತಮ್ಮ ಉದ್ಯಮ ಇನ್ನಷ್ಟು ದೊಡ್ಡದಾಗಿ ಬೆಳೆಯುತ್ತದೆ ಎಂಬ ನಿರೀಕ್ಷೆ ವಮಾ ಮತ್ತು ಪ್ರತೀಕ್ಷಾ ಅವರದ್ದು.
Published by:Ashwini Prabhu
First published: