ತಾಯಿ ಡಿಸೈನ್ ಮಾಡಿದ ಬಟ್ಟೆಗಳಿಗೆ ಮಕ್ಕಳೇ ಮಾಡೆಲ್ಸ್: Fashion Brand ಮೂಲಕ ಕೋಟಿ ಕೋಟಿ ಸಂಪಾದನೆ..!

Trend News: ಕೆಲವು ವರ್ಷಗಳಿಂದ ದಿ ಇಂಡಿಯನ್ ಎಥ್ನಿಕ್ ಕಂಪನಿಯ ಗ್ರಾಹಕರಾಗಿರುವ ಅನುಷಾ ಹೇಳುವ ಪ್ರಕಾರ, “ಉತ್ತಮ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗೆ ಒತ್ತು ನೀಡುವುದು ನಾನು ಅವರೊಂದಿಗೆ ಶಾಪಿಂಗ್ ಮಾಡಲು ಎರಡು ಪ್ರಮುಖ ಕಾರಣಗಳಾಗಿವೆ. ಇದಲ್ಲದೆ, ಅವರು ಫ್ಯಾಬ್ರಿಕ್ ಮತ್ತು ಹೊಲಿದ ಬಟ್ಟೆಗಳಲ್ಲಿ ವ್ಯಾಪಕವಾದ ಆಯ್ಕೆಗಳನ್ನು ಹೊಂದಿದ್ದಾರೆ'' ಎಂದಿದ್ದಾರೆ.

 ಹೇತಲ್ ದೇಸಾಯಿ ಮತ್ತು ಮಕ್ಕಳು

ಹೇತಲ್ ದೇಸಾಯಿ ಮತ್ತು ಮಕ್ಕಳು

  • Share this:
ಫ್ಯಾಶನ್ ಡಿಸೈನಿಂಗ್,(Fashion Design)  ಡಿಸೈನರ್ ವೇರ್, ಕಾಸ್ಟ್ಯೂಮ್  (Costume) ತಯಾರಿಕೆ ಪ್ರಸ್ತುತ ಹೆಚ್ಚು ಜನಪ್ರಿಯ ಮತ್ತು ಲಾಭದಾಯಕ ಉದ್ಯಮ. ಮಹಿಳೆಯರು ಅಂಗಡಿಯ ಬದಲಿಗೆ ಕೇವಲ ಸೋಶಿಯಲ್ ಮೀಡಿಯಾಗಳನ್ನು (Social Media)  ವೇದಿಕೆ ಮಾಡಿಕೊಂಡು ಕೋಟಿಗಟ್ಟಲೇ ಹಣ ಸಂಪಾದಿಸುತ್ತಿದ್ದಾರೆ. ಇದಕ್ಕೆ ಉತ್ತಮ ನಿದರ್ಶನ ಎಂದರೆ ಇಂಡಿಯನ್ ಎಥ್ನಿಕ್ ಕೋ (The Indian Ethnic Co) ಸಂಸ್ಥಾಪಕಿ ಹೇತಲ್ ದೇಸಾಯಿ. ಇಂಡಿಯನ್ ಎಥ್ನಿಕ್ ಎಂಬ ಕಂಪನಿ ಕಟ್ಟಿಕೊಂಡು, ದೇಶದಾದ್ಯಂತ ಭಾರತೀಯ ನೇಕಾರರು ಮತ್ತು ಕುಶಲಕರ್ಮಿಗಳನ್ನು ಬಳಸಿಕೊಂಡು ತಮ್ಮ ಬ್ರ್ಯಾಂಡನ್ನು ದೇಶದಾದ್ಯಂತ ಜನಪ್ರಿಯಗೊಳಿಸಿದ್ದಾರೆ.

50,000 ರೂ. ಹೂಡಿಕೆಯೊಂದಿಗೆ ತಾವೇ ವಿನ್ಯಾಸಗೊಳಿಸಿ ರೆಡಿ ಮಾಡಿದ ಬಟ್ಟೆಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಸೇಲ್ ಮಾಡುತ್ತಿರುವ ಹೇತಲ್ ವಾರ್ಷಿಕ 15 ಕೋಟಿ ರೂ.ಗೂ ಅಧಿಕ ಆದಾಯ ಗಳಿಸುತ್ತಿದ್ದಾರೆ. ಹೇತಲ್ ದೇಸಾಯಿ ಡಿಸೈನ್ ಮಾಡಿದ ಬಟ್ಟೆಗಳಿಗೆ ಅವರ ಹೆಣ್ಣು ಮಕ್ಕಳಾದ ಲೇಖಿನೀ ಮತ್ತು ತ್ವರಾ ಮಾಡೆಲ್ ಆಗಿರುವುದು ಈ ಕಂಪನಿಯ ಮತ್ತೊಂದು ವಿಶೇಷ.

“ನಾನು ಚಿಕ್ಕವಳಿದ್ದಾಗಿನಿಂದಲೂ ನನ್ನ ಹೆಚ್ಚಿನ ಬಟ್ಟೆಗಳನ್ನು ನನ್ನ ತಾಯಿ ವಿನ್ಯಾಸಗೊಳಿಸಿದ್ದಾರೆ. ನಾವು ಎಂದಿಗೂ ಅಂಗಡಿಯಿಂದ ರೆಡಿಮೇಡ್ ಬಟ್ಟೆ ಖರೀದಿಸಿಲ್ಲ” ಎಂದು ಮುಂಬೈ ಮೂಲದ ದಿ ಇಂಡಿಯನ್ ಎಥ್ನಿಕ್ ಕಂ ಸಹ-ಸಂಸ್ಥಾಪಕಿ ಲೇಖಿನೀ ದೇಸಾಯಿ ಹೇಳುತ್ತಾರೆ.

ಪ್ಯಾಶನ್ ಪ್ರಾಜೆಕ್ಟ್
2016 ರಲ್ಲಿ ತಾಯಿ-ಮಗಳು ಒಟ್ಟಿಗೆ ಕೆಲಸ ಮಾಡಲು ಪ್ರಾರಂಭಿಸಿದಾಗ, ಇದು ಕೇವಲ ಪ್ಯಾಶನ್ ಯೋಜನೆಯಾಗಿತ್ತು. ಆದರೆ ಇದರಲ್ಲಿ ನಮಗೆ ಹೆಚ್ಚು ಆಸಕ್ತಿ ಇದ್ದರಿಂದ ಕಾಲಕ್ರಮೇಣ ಇದೇ ನಮಗೆ ಕೆಲಸವಾಯಿತು ಎನ್ನುತ್ತಾರೆ ಲೇಖಿನೀ ದೇಸಾಯಿ.

“ಇಂದಿಗೂ, ನನ್ನ ಸಹೋದರಿ ಮತ್ತು ನಾನು ನಮ್ಮ ಹಳೆಯ ಫೋಟೋಗಳನ್ನು ನೋಡಿದಾಗ, ನಮ್ಮ ಗಮನವನ್ನು ಸೆಳೆಯುವ ಮೊದಲ ವಿಷಯವೆಂದರೆ ನಮ್ಮ ಬಟ್ಟೆಗಳು. ನಾವು ಯಾವಾಗಲೂ ಉತ್ತಮ ಬಟ್ಟೆ ಧರಿಸುತ್ತಿದ್ದೆವು. ಇದಕ್ಕಾಗಿ ನಮ್ಮ ತಾಯಿಗೆ ಧನ್ಯವಾದಗಳು ಎನ್ನುತ್ತಾರೆ ಹೇತಲ್ ಮಕ್ಕಳು.

ಹೇತಲ್ ಮಕ್ಕಳು ಹುಟ್ಟುವ ಮುನ್ನ ಫ್ಯಾಶನ್ ಡಿಸೈನ್ ಮಾಡುತ್ತಿದ್ದರು ಮತ್ತು ಬಾಲಿವುಡ್‌ನಲ್ಲಿ ಪ್ರಸಿದ್ಧ ಸಂಗೀತಗಾರ್ತಿ ಕವಿತಾ ಕೃಷ್ಣಮೂರ್ತಿ ಅವರಂತಹ ಗ್ರಾಹಕರನ್ನು ಹೊಂದಿದ್ದರು. ಆದರೆ ತಮ್ಮ ಇಬ್ಬರು ಹೆಣ್ಣುಮಕ್ಕಳ ಆಗಮನದ ನಂತರ ತಮ್ಮ ಕೆಲಸ ಬಿಟ್ಟು ಬಿಟ್ಟರು. ಇಬ್ಬರು ಹೆಣ್ಣು ಮಕ್ಕಳು ಬೆಳೆದ ಮೇಲೆ ತಾಯಿಯನ್ನು ಮತ್ತೆ ಬಟ್ಟೆ ವಿನ್ಯಾಸಗೊಳಿಸಲು ಪ್ರೋತ್ಸಾಹಿಸಿದರು.

ಇದನ್ನೂ ಓದಿ: ಬೇಸಿಗೆಯಲ್ಲಿ ದೇಹ ತಂಪಿರಲು ಈ ಟಿಪ್ಸ್ ಫಾಲೋ ಮಾಡಿ

ಮಕ್ಕಳೇ ರೂಪದರ್ಶಿಯರು
ಹೇತಲ್ ವಿನ್ಯಾಸಗೊಳಿಸಿದ ಬಟ್ಟೆಗಳಿಗೆ ಅವರ ಮಕ್ಕಳಾದ ಲೇಖಿನೀ ಮತ್ತು ತ್ವರಾ ಇಬ್ಬರೇ ಮಾಡೆಲ್ಸ್. ನಮ್ಮ ಪೋರ್ಟ್ರೇಟ್ ಫೋಟೋಗಳನ್ನು ಐಫೋನ್ 10 ಅನ್ನು ಬಳಸಿ ತೆಗೆಯುತ್ತಿದ್ದೆವು ಎಂದು ಲೇಖಿನೀ ಹೇಳುತ್ತಾರೆ. ಜೊತೆಗೆ ವೆಬ್‌ಸೈಟ್ ಅನ್ನು ಪ್ರಾರಂಭಿಸಿದ ಕೆಲವೇ ತಿಂಗಳುಗಳಲ್ಲಿ ನಾವು ವರ್ಷಕ್ಕೆ 20 ಲಕ್ಷ ಗಳಿಸುವ ಮೂಲಕ 1 ಕೋಟಿ ರೂ. ಸಂಪಾದಿಸಿದೆವು ಎನ್ನತ್ತಾರೆ ಯಶಸ್ವಿ ಮಹಿಳೆಯರು.

ಗೇಮ್ ಚೇಂಜರ್‌ ಆದ ಸೋಶಿಯಲ್ ಮೀಡಿಯಾ

ನಗರದಲ್ಲಿನ ವಿವಿಧ ವಸ್ತು ಪ್ರದರ್ಶನಗಳಿಗೆ ತಾಯಿ-ಮಗಳು ಭೇಟಿ ನೀಡಿ ಬಳಸಿದ ಕೆಲವು ಬಟ್ಟೆಗಳನ್ನು ಪರಿಶೀಲಿಸಿದರು. ಅಂತಹ ಒಂದು ಪ್ರದರ್ಶನದಲ್ಲಿ, ಅವರು ಕೆಲವು ಅಜ್ರಾಕ್ ಮೆಟೀರಿಯಲ್‌ಗಳನ್ನು ಎತ್ತಿಕೊಂಡರು ಮತ್ತು ಹೇತಲ್ ಅದರೊಂದಿಗೆ ಕೆಲವು ಸಿಲೂಯೆಟ್‌ಗಳನ್ನು ಮಾಡಿದರು. "ನೀವು ನಮ್ಮ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳಿಗೆ ಹಿಂತಿರುಗಿ ಮತ್ತು ಕೆಲವು ಹಳೆಯ ಚಿತ್ರಗಳನ್ನು ನೋಡಿದರೆ ನಾವು ಎಷ್ಟು ಕಚ್ಚಾ ಇದ್ದೇವೆ ಎಂದು ನೀವು ನೋಡುತ್ತೀರಿ" ಎಂದು ಲೇಖಿನೀ ಹೇಳುತ್ತಾರೆ.

ಮೊದಲು ಫೇಸ್ಬುಕ್ ಪೇಜನ್ನು ತೆರೆದು ಅಲ್ಲಿ ಕೆಲವು ಫೋಟೋಗಳನ್ನು ಹಾಕಲಾಯಿತು. ನಮಗೆ ಮೊದಲು ಆರ್ಡರ್ ಗೋವಾದಿಂದ ಬಂದಿದ್ದು, ಇದು ನಮಗೆ ಹೆಚ್ಚು ಆತ್ಮವಿಶ್ವಾಸ ನೀಡಿತು. ಮೊದಲ ಕೆಲವು ಕುರ್ತಾಗಳನ್ನು ಲೇಖಿನೀ, ತ್ವರಾ ಮತ್ತು ನನ್ನ ಗಾತ್ರಕ್ಕೆ ತಯಾರಿಸಿ ಸೇಲ್ ಮಾಡಿದೆವು. ನಂತರ ಇನ್ಸ್ಟಾಗ್ರಾಮ್‌ನಲ್ಲಿ ಬಹುದೊಡ್ಡದಾಗಿ ವಿನ್ಯಾಸಗೊಳಿಸಿದ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದು ಬಹುದೊಡ್ಡ ಸಂಖ್ಯೆಯ ಗ್ರಾಹಕರನ್ನು ಹೊಂದಿದ್ದೇವೆ ಎಂದು ಹೇತಲ್ ಖುಷಿ ವ್ಯಕ್ತಪಡಿಸಿದ್ದಾರೆ. ನಮ್ಮ ಫ್ಯಾಷನ್ ಡಿಸೈನಿಂಗ್ ಆಸಕ್ತಿಗೆ ಸೋಶಿಯಲ್ ಮೀಡಿಯಾ ಗೇಮ್ ಚೇಂಜರ್ ಎನ್ನುತ್ತಾರೆ ಹೇತಲ್, ಲೇಖಿನೀ, ತ್ವರಾ. ದಿ ಇಂಡಿಯನ್ ಎಥಿಕ್ಸ್ ಕಂಪನಿ ಇನ್ಸ್ಟಾಗ್ರಾಮ್‌ನಲ್ಲಿ 6 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ.

ಇಂಡಿಯನ್ ಎಥಿಕ್ಸ್ ಕಂಪನಿ ಮುಂಬೈನಲ್ಲಿದ್ದು, 25 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದಾರೆ ಮತ್ತು ಮೂರು ಕಚೇರಿಗಳನ್ನು ಹೊಂದಿದ್ದಾರೆ. ಇಂಡಿಯನ್ ಎಥಿಕ್ಸ್ ಕಂಪನಿಯಲ್ಲಿ 1,699 ರೂ. ನಿಂದ ಪ್ರಾರಂಭವಾಗುತ್ತವೆ ಮತ್ತು ಅವರ ಕುರ್ತಾಗಳು 1,880 ರೂ. ನಿಂದ ಪ್ರಾರಂಭವಾಗುತ್ತವೆ.

ಇದನ್ನೂ ಓದಿ: ನಾವು ಬೆಂಗಳೂರಿಗೆ ಹೋಗುತ್ತಿದ್ದೇವೆ, ಮತ್ತೆ ನೀವು?" ಸೋಶಿಯಲ್ ಮೀಡಿಯಾಗಳಲ್ಲಿ ಈಗ ಇದೇ ಟ್ರೆಂಡ್‌!

ಕೆಲವು ವರ್ಷಗಳಿಂದ ದಿ ಇಂಡಿಯನ್ ಎಥ್ನಿಕ್ ಕಂಪನಿಯ ಗ್ರಾಹಕರಾಗಿರುವ ಅನುಷಾ ಹೇಳುವ ಪ್ರಕಾರ, “ಉತ್ತಮ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗೆ ಒತ್ತು ನೀಡುವುದು ನಾನು ಅವರೊಂದಿಗೆ ಶಾಪಿಂಗ್ ಮಾಡಲು ಎರಡು ಪ್ರಮುಖ ಕಾರಣಗಳಾಗಿವೆ. ಇದಲ್ಲದೆ, ಅವರು ಫ್ಯಾಬ್ರಿಕ್ ಮತ್ತು ಹೊಲಿದ ಬಟ್ಟೆಗಳಲ್ಲಿ ವ್ಯಾಪಕವಾದ ಆಯ್ಕೆಗಳನ್ನು ಹೊಂದಿದ್ದಾರೆ'' ಎಂದಿದ್ದಾರೆ.
Published by:Sandhya M
First published: