• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Inspiring: ಬೇಬಿ ಫುಡ್​ ಸಾಮ್ರಾಜ್ಯ ಸ್ಥಾಪಿಸಿ 1 ಕೋಟಿ ಸಂಪಾದಿಸಿದ ದಿಟ್ಟ ಮಹಿಳೆ, ತಾಯಿಗಿಂತ ದೊಡ್ಡ ಯೋಧ ಮತ್ತೊಬ್ಬರಿಲ್ಲ!

Inspiring: ಬೇಬಿ ಫುಡ್​ ಸಾಮ್ರಾಜ್ಯ ಸ್ಥಾಪಿಸಿ 1 ಕೋಟಿ ಸಂಪಾದಿಸಿದ ದಿಟ್ಟ ಮಹಿಳೆ, ತಾಯಿಗಿಂತ ದೊಡ್ಡ ಯೋಧ ಮತ್ತೊಬ್ಬರಿಲ್ಲ!

ಜ್ಯೋತಿ ಶ್ರೀವಾಸ್ತವ್‌

ಜ್ಯೋತಿ ಶ್ರೀವಾಸ್ತವ್‌

30 ವರ್ಷ ವಯಸ್ಸಿನ ನಂತರ ಸುಮಾರು 50% ನಷ್ಟು ಮಹಿಳೆಯರು ಮಕ್ಕಳನ್ನು ನೋಡಿಕೊಳ್ಳಲು ತಮ್ಮ ಉದ್ಯೋಗವನ್ನು ತೊರೆಯುತ್ತಾರೆ. ಆನಂತರದಲ್ಲಿ ಕೇವಲ 27% ರಷ್ಟು ಮಹಿಳೆಯರು ಮಾತ್ರ ವೃತ್ತಿಗೆ ಹಿಂದಿರುಗುತ್ತಾರೆ.

  • Share this:

ನಮ್ಮಲ್ಲಿ ಅನೇಕರ ಮಹಿಳೆಯರಿಗೆ (Women) ಮಕ್ಕಳು ಹುಟ್ಟಿದ ಬಳಿಕ ಅಥವಾ ಕುಟುಂಬಕ್ಕಾಗಿ ಇಷ್ಟವಿರಲಿ ಅಥವಾ ಇಲ್ಲದಿರಲಿ ಕೆಲಸ ಬಿಟ್ಟುಬಿಡುವುದು ಅನಿವಾರ್ಯವಾಗುತ್ತದೆ. ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲವೆಂದೋ ಅಥವಾ ಕುಟುಂಬಕ್ಕೆ (Family) ತೊಂದರೆಯಾಗುತ್ತದೆಂದೋ ಅನೇಕ ಮಹಿಳೆಯರ ವೃತ್ತಿ ಜೀವನ ಅರ್ಧದಲ್ಲೇ ಮೊಟಕಾಗುತ್ತದೆ. ಹೌದು, ಭಾರತದಲ್ಲಿ (India) ಇದು ಸಾಮಾನ್ಯ. ಮಾತೃತ್ವವು ಸಾಮಾನ್ಯವಾಗಿ ಮಹಿಳೆಯರನ್ನು ಉದ್ಯೋಗಿಗಳನ್ನು (Job) ತೊರೆಯುವಂತೆ ಮಾಡುತ್ತದೆ. 30 ವರ್ಷ ವಯಸ್ಸಿನ ನಂತರ ಸುಮಾರು 50% ನಷ್ಟು ಮಹಿಳೆಯರು ಮಕ್ಕಳನ್ನು ನೋಡಿಕೊಳ್ಳಲು ತಮ್ಮ ಉದ್ಯೋಗವನ್ನು ತೊರೆಯುತ್ತಾರೆ. ಆನಂತರದಲ್ಲಿ ಕೇವಲ 27% ರಷ್ಟು ಮಹಿಳೆಯರು ಮಾತ್ರ ವೃತ್ತಿಗೆ (Proffesion) ಹಿಂದಿರುಗುತ್ತಾರೆ.


ಉದ್ಯಮಿಯನ್ನು ಹುಟ್ಟುಹಾಕಿದ ತಾಯ್ತನ


ವೃತ್ತಿಯಲ್ಲಿ ಕೆಮಿಕಲ್ ಇಂಜಿನಿಯರ್ ಆಗಿದ್ದ 32ರ ಹರೆಯದ ಜ್ಯೋತಿ ಶ್ರೀವಾಸ್ತವ್‌ ಉತ್ತರ ಪ್ರದೇಶದ ಮೀರತ್‌ನ ನಿವಾಸಿ. ಅವರಿಗೆ ಕುಟುಂಬದ ಕಾರಣದಿಂದ ಮತ್ತೆ ಕೆಲಸಕ್ಕೆ ಹೋಗಲು ತೊಂದರೆಯಾಯಿತು. ಆದರೆ ಅವರಿಗೆ ತಾಯ್ತನ ಅವರ ಸಾಧನೆಗೆ ಅಡ್ಡಿಯಾಗಲಿಲ್ಲ. ಬದಲಾಗಿ, ಅದು ಆಕೆಯಲ್ಲಿ ಒಬ್ಬ ಉದ್ಯಮಿಯನ್ನು ಹುಟ್ಟುಹಾಕಿತು.


ಸಿರಿಧಾನ್ಯಗಳ ಹಿಟ್ಟು, ತ್ವರಿತ ದೋಸೆ ಮಿಶ್ರಣಗಳು, ಸಕ್ಕರೆ ಮತ್ತು ಬೆಲ್ಲ ಮುಕ್ತ ಸಿಹಿ ಲಡ್ಡುಗಳು, ಆರೋಗ್ಯಕರ ತಿಂಡಿಗಳಾದ ಖಕ್ರಾಸ್ (ತೆಳುವಾದ ಕ್ರ್ಯಾಕರ್ಸ್), A2 ಬಿಲೋನಾ ಹಸುವಿನ ತುಪ್ಪ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಒದಗಿಸುವ ಮಿಲ್ಲೆಟ್‌ ಆಧಾರಿತ ಬೇಬಿ ಫುಡ್ ವ್ಯಾಪಾರವನ್ನು ಜ್ಯೋತಿ ನಡೆಸುತ್ತಿದ್ದಾರೆ.


ಆಮ್ಲಾ ಪ್ರಾಶ್ ಕೂಡ ತಯಾರಿಸಿ ಮಾರಾಟ


ಅಲ್ಲದೇ ನೆಲ್ಲಿಕಾಯಿಯಿಂದ ಮಾಡಿದ ರೋಗನಿರೋಧಕ ಶಕ್ತಿ ವರ್ಧಕ ಆಮ್ಲಾ ಪ್ರಾಶ್ ಕೂಡ ತಯಾರಿಸಿ ಮಾರಾಟ ಮಾಡುತ್ತಾರೆ. 2022 ರಲ್ಲಿ ಪ್ರಾರಂಭವಾದ ಈ ಕಂಪನಿಯು 12,000 ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಿದೆ. ಇದರೊಂದಿಗೆ ಜ್ಯೋತಿ ಸುಮಾರು 1 ಕೋಟಿ ಆದಾಯ ಗಳಿಸಲು ಸಾಧ್ಯವಾಗಿದೆ.


ರಾಕೆಟ್‌ ವಿನ್ಯಾಸದಿಂದ ಹಿಡಿದು ಪಾಕವಿಧಾನಗಳವರೆಗೆ


ನ್ಯಾನೊ ತಂತ್ರಜ್ಞಾನ ಮತ್ತು ರಾಕೆಟ್ ಪ್ರೊಪೆಲ್ಲಂಟ್‌ಗಳಲ್ಲಿ ಪರಿಣತಿ ಹೊಂದಿದ್ದ ಈ ಇಂಜಿನಿಯರ್ ಭಾರತೀಯ ಸೇನೆಯಲ್ಲಿ ರಾಕೆಟ್‌ಗಳನ್ನು ವಿನ್ಯಾಸಗೊಳಿಸುವ ಕೆಲಸದಲ್ಲಿದ್ದರು. ತನ್ನ ಕೆಲಸವನ್ನು ತುಂಬಾ ಪ್ರೀತಿಸುತ್ತಿದ್ದ ಜ್ಯೋತಿ ಸುಮಾರು ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದರು. ನಂತರದಲ್ಲಿ ಕೆಲ ಕಾರಣಗಳಿಂದ ಅವರು ಏರ್‌ಫೋರ್ಸ್ ಯೋಜನೆಗಳಿಗೆ ಸ್ವತಂತ್ರವಾಗಿ ಕೆಲಸ ಮಾಡಲು 2018 ರಲ್ಲಿ ಆ ಕೆಲಸವನ್ನು ತೊರೆದರು.


ಇದನ್ನೂ ಓದಿ: ಬ್ಯೂಟಿಷಿಯನ್ ತರಬೇತಿ ನೀಡಿ 5000 ಹೆಣ್ಮಕ್ಕಳನ್ನು ವೇಶ್ಯಾವಾಟಿಕೆಯಿಂದ ರಕ್ಷಿಸಿದ ಧೀರೆ!


ನಂತರದಲ್ಲಿ 2019 ರಲ್ಲಿ ಗರ್ಭಿಣಿಯಾದ ನಂತರದಲ್ಲಿ ಆಕೆ ಸಾಕಷ್ಟು ಸಮಸ್ಯೆ ಎದುರಿದರು. ಹೆರಿಗೆಯ ನಂತರ, ತನ್ನ ಮಗುವಿಗೆ ಹಾಲುಣಿಸುವಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದರು. ತಾಯಿಯಾಗಿ, ಮಗುವಿಗೆ ಘನ ಆಹಾರ ನೀಡುವ ವಿಚಾರದಲ್ಲಿ ಯಾವುದೇ ತಪ್ಪುಗಳನ್ನು ಮಾಡಲು ಆಕೆ ಸಿದ್ಧಳಿರಲಿಲ್ಲ.


10 ಪಟ್ಟು ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿದೆ!


“ಸಾಮಾನ್ಯವಾಗಿ ರಾಜ್‌ಗಿರಾ ಎಂದು ಕರೆಯಲ್ಪಡುವ ಅಮರಂಥ್ ಒಂದು ಪ್ರೋಟೀನ್ ಪವರ್‌ಹೌಸ್ ಆಗಿದೆ. ಮೊಳಕೆಯೊಡೆದ ಸಿರಿಧಾನ್ಯಗಳು ಇತರ ಧಾನ್ಯಗಳಿಗಿಂತ (ಗೋಧಿ/ಅಕ್ಕಿ) 10 ಪಟ್ಟು ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಹಾಲುಣಿಸುವ ತಾಯಂದಿರ ಹಾರ್ಮೋನ್ ಮತ್ತು ಮೂಳೆ ಸಂಬಂಧಿತ ಸಮಸ್ಯೆಗಳಿಂದ ರಕ್ಷಣೆ ಪಡೆಯಲು ಮಕ್ಕಳಿಗೆ ಇದು ಸಹಾಯ ಮಾಡುತ್ತದೆ” ಎಂದು ಅವರು ಹೇಳುತ್ತಾರೆ.


ಅಲ್ಲದೇ ಮಿಲ್ಲೆಟ್‌ ಅಥವಾ ಸಿರಿಧಾನ್ಯಗಳು ಮಗುವಿನ ಬೆಳವಣಿಗೆಯನ್ನು 50 ಪ್ರತಿಶತದಷ್ಟು ಹೆಚ್ಚಿಸುತ್ತವೆ. ಅವು ಅಪೌಷ್ಠಿಕತೆಯನ್ನು ನಿವಾರಿಸಲು ಗಮನಾರ್ಹವಾಗಿ ಕೊಡುಗೆ ನೀಡುತ್ತವೆ ಎಂದು ವೈಜ್ಞಾನಿಕ ಪುರಾವೆಗಳು ತೋರಿಸುತ್ತದೆ.


ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದು ಮುಖ್ಯ


ಈ ಮಧ್ಯೆ ರಾಷ್ಟ್ರೀಯ ಆರೋಗ್ಯ ಮಿಷನ್, ಮಕ್ಕಳ ಮೊದಲ 1,000 ದಿನಗಳು, ಅದರಲ್ಲೂ ವಿಶೇಷವಾಗಿ 6-24 ತಿಂಗಳುಗಳು, ಶಿಶುಗಳ ಬೆಳವಣಿಗೆಗೆ ನಿರ್ಣಾಯಕ ಕಾಲ ಎಂಬುದಾಗಿ ಹೇಳಲಾಗುತ್ತದೆ.


ಪೂರಕ ಆಹಾರವು ಆರು ತಿಂಗಳ ವಯಸ್ಸಿನ ನಂತರ ಈ ಅಂತರವನ್ನು ತುಂಬಲು ಸಹಾಯ ಮಾಡುತ್ತದೆ. ಎದೆ ಹಾಲಿನ ಜೊತೆಗೆ ಪೌಷ್ಠಿಕವಾದ ಪೂರಕ ಆಹಾರಗಳನ್ನು ಪರಿಚಯಿಸಲು ವಿಫಲವಾದರೆ ದೈಹಿಕ ಮತ್ತು ಮೆದುಳಿನ ಬೆಳವಣಿಗೆ ಕುಂಠಿತವಾಗುವುದು, ಸೂಕ್ಷ್ಮ ಪೋಷಕಾಂಶಗಳ ಕೊರತೆ, ಅಪೌಷ್ಟಿಕತೆ ಮತ್ತು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.


ಇದು ಹಸಿವು ಮತ್ತು ಜ್ಞಾಪಕ ಶಕ್ತಿಯ ನಷ್ಟಕ್ಕೆ ಕಾರಣವಾಗುತ್ತದೆ. ಸುಸ್ಥಿರ ಆರೋಗ್ಯಕರ ಜೀವನವನ್ನು ನಡೆಸಲು ನಿಮ್ಮ ಮಕ್ಕಳು ಉತ್ತಮ ಆಹಾರವನ್ನು ಸೇವಿಸಬೇಕು ಎಂದು ಜ್ಯೋತಿ ಸಲಹೆ ನೀಡುತ್ತಾರೆ. ಅಲ್ಲದೇ “ಆಹಾರ ಕಂಪನಿಗಳು ನೈಸರ್ಗಿಕವಾಗಿ ನೀಡಬಹುದಾದ ಕಿಣ್ವಗಳನ್ನು ಕೃತಕವಾಗಿ ತುಂಬಿಸುತ್ತಿವೆ” ಎಂಬುದಾಗಿ ಜ್ಯೋತಿ ಅಭಿಪ್ರಾಯ ಪಡುತ್ತಾರೆ.  ಈ ಅನ್ವೇಷಣೆಯ ಫಲವಾಗಿ 2022 ರಲ್ಲಿ ಲಿಟಲ್ ಚೆರ್ರಿ ಮಾಮ್ ಪ್ರಾರಂಭವಾಯಿತು. ಜ್ಯೋತಿ ತನ್ನ ಪತಿ ಗೌರವ್ ಗೋಯೆಲ್ ಜೊತೆಗೆ ಈ ಕಂಪನಿ ಪ್ರಾರಂಭಿಸಿದರು.


ಅಣಕಿಸಿದವರ ಮುಂದೆಯೇ ಸಾಧನೆ ಮಾಡಿದ ಜ್ಯೋತಿ


ಉತ್ತಮ ಉದ್ಯೋಗದಲ್ಲಿದ್ದ ಜ್ಯೋತಿ ಕೆಲಸ ತೊರೆದು ಮಿಲ್ಲೆಟ್‌ ಮತ್ತು ಹಾಲುಣಿಸುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲು ಆರಂಭಿಸಿದರು. ಈ ಕುರಿತಾದ ಸೋಷಿಯಲ್‌ ಮೀಡಿಯಾ ಪೇಜ್‌ ಪ್ರಾರಂಭಿಸಿದಾಗ ಸಂಬಂಧಿಕರು ಅಪಹಾಸ್ಯ ಮಾಡಿದ್ದರು.


"ಪರಿವರ್ತನೆಯು ಸುಲಭವಾಗಿರಲಿಲ್ಲ. ನಾನು ಬ್ಲಾಗಿಂಗ್ ಮತ್ತು ರೀಲ್‌ಗಳನ್ನು ಮಾಡಲು ಪ್ರಾರಂಭಿಸಿದಾಗ, ಜನರು ನನ್ನನ್ನು ಗೇಲಿ ಮಾಡುತ್ತಿದ್ದರು. ಜನರು ಅಣಕವಾಡುತ್ತಿದ್ದರೆ ಅದನ್ನು ಎದುರಿಸುವುದು ಕಷ್ಟವಾಗುತ್ತಿತ್ತು. ನನಗೆ ‘ಮಮ್ಮಿ ಬ್ಲಾಗರ್’ ಎಂದು ಹಣೆಪಟ್ಟಿ ಕಟ್ಟಲಾಯಿತು” ಎಂದು ನೆನಪಿಸಿಕೊಳ್ಳುತ್ತಾರೆ ಜ್ಯೋತಿ.


“ಇದೀಗ ಎಲ್ಲರೂ ಸಿರಿಧಾನ್ಯಗಳ ಮಹತ್ವವನ್ನು ಗುರುತಿಸುತ್ತಿದ್ದಾರೆ. ನಮ್ಮ ಸ್ಟಾರ್ಟಪ್ ರಾಜ್ಯ ಸರ್ಕಾರದಿಂದ ಗುರುತಿಸಲ್ಪಟ್ಟಿದೆ. ಈಗ ನಮ್ಮ ಕೆಲಸ ನೋಡಿ ನಮ್ಮ ಸಂಬಂಧಿಗಳು ಅಣಕಿಸುವುದಿಲ್ಲ” ಎಂದೂ ಜ್ಯೋತಿ ನಗುತ್ತಾರೆ.


ಆರಂಭದಲ್ಲಿ ಸವಾಲುಗಳು ಹಲವಾರಿದ್ದವು!


ಸ್ಟಾರ್ಟ್ಅಪ್ ಅನ್ನು ಪ್ರಾರಂಭಿಸುವುದು ಅಷ್ಟು ಸುಲಭವಾಗಿರಲಿಲ್ಲ ಎನ್ನುವ ಜ್ಯೋತಿ ಅದು ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಯ್ತು ಎನ್ನುತ್ತಾರೆ. ಫಂಡ್‌ಗಳ ಹೊರತಾಗಿ, ಬೂಟ್‌ಸ್ಟ್ರಾಪ್ ಮಾಡಿದ ಕಂಪನಿಯು ಮಾರುಕಟ್ಟೆಯೊಂದಿಗೆ ಸ್ಪರ್ಧಿಸುವ ಸವಾಲನ್ನು ಹೊಂದಿತ್ತು ಎನ್ನುತ್ತಾರೆ."ಮಕ್ಕಳಿಗೆ ಪೌಷ್ಠಿಕ ಆಹಾರ ತಯಾರಿಸುವ ತೃಪ್ತಿ "


“ಇತರ ಬ್ರಾಂಡ್‌ಗಳಿಗೆ ಹೋಲಿಸಿದರೆ, ನಮ್ಮ ಉತ್ಪನ್ನಗಳು ಉತ್ತಮವಾಗಿ ಸಂಶೋಧಿಸಲ್ಪಟ್ಟಿವೆ. ಉದಾಹರಣೆಗೆ, ಹೆಚ್ಚು ಪ್ರೋಟೀನ್‌ ಅಂಶಗಳನ್ನು ಹೊಂದಿರುವ ಸಿರಿಧಾನ್ಯ ಜೀರ್ಣಕ್ರಿಯೆಯನ್ನೂ ಸುಲಭಗೊಳಿಸುತ್ತದೆ. ಅಲ್ಲದೇ ನಮ್ಮ ಹಾಲಿನ ಮಿಶ್ರಣವು ಉಸಿರಾಟದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿರ್ದಿಷ್ಟ ಶೇಕಡಾವಾರು ಪ್ರಮಾಣದಲ್ಲಿ ಮಸಾಲೆಗಳ ಮಿಶ್ರಣವಾಗಿದೆ" ಎಂಬುದಾಗಿ ಜ್ಯೋತಿ ಹೇಳುತ್ತಾರೆ.

Published by:ವಾಸುದೇವ್ ಎಂ
First published: